10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಇತ್ತೀಚೆಗೆ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಮೂಲಕ 10 ಕೋಟಿ(100 ಮಿಲಿಯನ್) ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸಿದ್ದು, ಹೊಸ ಮೈಲಿಗಲ್ಲು ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ.

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸ್ಪೆಷಲ್ ಎಡಿಷನ್ ಪರಿಚಯಿಸಿದೆ.

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಪ್ರೀಮಿಯಂ ಮಾದರಿಯಾದ ಎಕ್ಸ್‌ಟ್ರಿಮ್ 160ಆರ್ ಮಾದರಿಯಲ್ಲಿ ಈಗಾಗಲೇ 100 ಮಿಲಿಯನ್ ಎಡಿಷನ್ ಬಿಡುಗಡೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಇದೀಗ ಸ್ಪ್ಲೆಂಡರ್ ಪ್ಲಸ್ ಮತ್ತು ಪ್ಯಾಶನ್ ಪ್ರೊ ಮಾದರಿಗಳಲ್ಲೂ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಸ್ಪ್ಲೆಂಡರ್ ಪ್ಲಸ್ ಮತ್ತು ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಆಕರ್ಷಕ ಗ್ರಾಫಿಕ್‌ನೊಂದಿಗೆ ಹೊಸ ಮೈಲಿಗಲ್ಲು ಸಾಧನೆಯ 100 ಮಿಲಿಯನ್ ಬ್ಯಾಡ್ಜ್ ಪಡೆದುಕೊಂಡಿದ್ದು, ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಪ್ಲೆಂಡರ್ ಪ್ಲಸ್ ಮಾದರಿಗೆ ರೂ. 67,095 ಮತ್ತು ಪ್ಯಾಶನ್ ಪ್ರೊ ಮಾದರಿಗೆ ರೂ. 69,200 ಬೆಲೆ ನಿಗದಿ ಮಾಡಲಾಗಿದೆ.

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ಸ್ಪ್ಲೆಂಡರ್ ಪ್ಲಸ್ ಮಾದರಿಯನ್ನು ಸದ್ಯ ಮಾರುಕಟ್ಟೆಯಲ್ಲಿ ಡ್ರಮ್ ಬ್ರೇಕ್ ಮಾದರಿಯೊಂದಿಗೆ ಮಾತ್ರ ಮಾರಾಟ ಮಾಡುತ್ತಿದ್ದು, ಪ್ಯಾಶನ್ ಪ್ರೊ ಮಾದರಿಯನ್ನು ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದೆ. ಡ್ರಮ್ ಬ್ರೇಕ್ ಹೊಂದಿರುವ ಪ್ಯಾಶನ್ ಪ್ರೊ ಬೈಕ್ ಬೆಲೆಯು ಮೇಲೆ ತಿಳಿಸಿದಂತೆ ಆರಂಭಿಕವಾಗಿ ರೂ. 69,200ಕ್ಕೆ ಮತ್ತು ಡಿಸ್ಕ್ ಮಾದರಿಯ ಬೆಲೆಯು ರೂ. 71,400 ಕ್ಕೆ ನಿಗದಿಪಡಿಸಲಾಗಿದೆ.

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಸ್ಪ್ಲೆಂಡರ್ ಪ್ಲಸ್ ಮಾದರಿಯಲ್ಲಿ 97.3 ಸಿಸಿ ಎಂಜಿನ್ ಸೌಲಭ್ಯ ಹೊಂದಿದ್ದರೆ ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಮಾದರಿಯು 113 ಸಿಸಿ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲೂ 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್ ನೀಡಲಾಗುತ್ತಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮದಲ್ಲಿ ಭಾಗಿಯಾಗಿದ್ದ ಬ್ರಾಂಡ್ ಅಂಬಾಸಿಡರ್ ಬಾಲಿವುಡ್ ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಸ್ಪೆಷಲ್ ಎಡಿಷನ್‌ ಬೈಕ್ ಮಾದರಿಗಳು ಸೆಲೆಬ್ರಿಟಿ ಎಡಿಷನ್‌ಗಳಾಗಿ ಮಾರಾಟವಾಗಲಿದ್ದು, ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾದ ಪೇಟಿಂಗ್ ಆಯ್ಕೆ ಮತ್ತು ಸ್ಪೆಷಲ್ ಎಡಿಷನ್ ಬ್ಯಾಡ್ಜ್ ಪಡೆದುಕೊಳ್ಳಲಿವೆ.

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಹೊಸ ಪೇಟಿಂಗ್ ಮತ್ತು ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಬ್ಯಾಡ್ಜ್ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯಯಿರುವ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯೆಂತೆ ಬೆಲೆ ಪಡೆದುಕೊಂಡಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

10 ಕೋಟಿ ಬೈಕ್ ಉತ್ಪಾದನೆ ಸಂಭ್ರಮ: ಸ್ಪ್ಲೆಂಡರ್ ಪ್ಲಸ್, ಪ್ಯಾಶನ್ ಪ್ರೊ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಇದುವರೆಗೆ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, ಪ್ರತಿ 4.5 ಸೇಕೆಂಡುಗಳಲ್ಲಿ 1 ಬೈಕ್ ಮಾದರಿಯನ್ನು ನಿರ್ಮಾಣ ಮಾಡುವಷ್ಟು ಅತಿ ದೊಡ್ಡ ಬೈಕ್ ಕಂಪನಿಯಾಗಿ ಗುರುತಿಸಿಕೊಂಡಿದೆ.

Most Read Articles

Kannada
English summary
Hero Splendor Plus & Passion Pro ‘100 Million Edition’ Launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X