ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ತೆರೆದ ಹೋಂಡಾ ಮೋಟಾರ್‌ಸೈಕಲ್

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಸಾಧಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ದ್ವಿಚಕ್ರಗಳ ಮಾರಾಟದ ಜೊತೆಗೆ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟವನ್ನು ಸಹ ಹೆಚ್ಚಿಸುತ್ತಿದ್ದು, ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟಕ್ಕಾಗಿ ಪ್ರತ್ಯೇಕ ಶೋರೂಂಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಎರಡು ಮಾದರಿಯ ಬೈಕ್ ಮಾರಾಟ ಮಳಿಗೆಗಳ ಸೌಲಭ್ಯ ಹೊಂದಿದ್ದು, 350 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಸಾಮಾನ್ಯ ಬೈಕ್ ಶೋರೂಂಗಳ ಮೂಲಕ ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಶೋರೂಂಗಳ ಮೂಲಕ ಮಾರಾಟಗೊಳಿಸುತ್ತಿದೆ. ಹೋಂಡಾ ಸಾಮಾನ್ಯ ಶೋರೂಂ ಈಗಾಗಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಜಾಲ ಹೊಂದಿದ್ದರೂ ಬಿಗ್‌ವಿಂಗ್ ಮಾರಾಟ ಮಳಿಗೆಗಳು ಕೇವಲ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿವೆ.

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ಹೋಂಡಾ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ ಹೈನೆಸ್ ಸಿಬಿ 350 ಬಿಡುಗಡೆಯೊಂದಿಗೆ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಶೋರೂಂಗೆ ಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ಹೊಸ ಬಿಗ್‌ವಿಂಗ್ ಶೋರೂಂ ಅನ್ನು ಇಂದಿರಾನಗರದ ಡಿಫೆನ್ಸ್ ಕಾಲೋನಿಯ ಫಸ್ಟ್ ಸ್ಟೇಜ್‌ನಲ್ಲಿ ಆರಂಭಗೊಂಡಿದ್ದು, ಮೊದಲ ಬಿಗ್‌ವಿಂಗ್ ಶೋರೂಂ ಬೆಂಗಳೂರು ಸೆಂಟ್ರಲ್ ಲಾವೆಲ್ಲೆ ರಸ್ತೆಯಲ್ಲಿ ತೆರೆಯಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲೂ ಎರಡು ಮಾದರಿಯ ಮಾರಾಟ ಸೌಲಭ್ಯಗಳನ್ನು ಪರಿಚಯಿಸಿದ್ದು, ಬಿಗ್‌ವಿಂಗ್ ಸಾಮಾನ್ಯ ಮಾರಾಟ ಮಳಿಗೆಗಳಲ್ಲಿ 350 ಸಿಸಿಯಿಂದ 500 ಸಿಸಿ ಬೈಕ್ ಮಾದರಿಗಳನ್ನು ಮತ್ತು ಬಿಗ್‌ವಿಂಗ್ ಟಾಪ್‌ಲೈನ್ ಮಾರಾಟ ಮಳಿಗೆಗಳಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ಇಂದಿರಾನಗರದ ಡಿಫೆನ್ಸ್ ಕಾಲೋನಿಯಲ್ಲಿರುವ ಬಿಗ್‌ವಿಂಗ್ ಶೋರೂಂನಲ್ಲಿ ಕಡಿಮೆ ಸಿಸಿ ಸಾಮರ್ಥ್ಯದ ಪ್ರೀಮಿಯಂ ಬೈಕ್ ಖರೀದಿಗೆ ಲಭ್ಯವಿದ್ದಲ್ಲಿ ಲಾವೆಲ್ಲೆ ರಸ್ತೆಯಲ್ಲಿರುವ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂನಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಸೂಪರ್ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ದೇಶದ ಪ್ರಮುಖ ಮಾಹಾನಗರಗಳಲ್ಲಿ ಕೆಲವೇ ಕೆಲವು ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂ ತೆರೆದಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ಪ್ರೀಮಿಯಂ ಬೈಕ್ ಮಾರಾಟ ಮಾಡುವ ಸಾಮಾನ್ಯ ಬಿಗ್‌ವಿಂಗ್ ಶೋರೂಂಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ದೇಶಾದ್ಯಂತ ಈ ವರ್ಷಾಂತ್ಯಕ್ಕೆ 50 ಹೊಸ ಬಿಗ್‌ವಿಂಗ್ ಶೋರೂಂಗಳು ಆರಂಭಗೊಳ್ಳುತ್ತಿವೆ.

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ಸಾಮಾನ್ಯ ಬಿಗ್‌ವಿಂಗ್ ಶೋರೂಂಗಳು ಟೈರ್ 1, ಟೈರ್ 2 ನಗರಗಳಲ್ಲೂ ಕೂಡಾ ಕಾರ್ಯಾಚರಣೆ ಆರಂಭಿಸುವ ಸಿದ್ದತೆಯಲ್ಲಿದ್ದು, ಹೊಸ ಶೋರೂಂಗಳ ಮೂಲಕ ಇತ್ತೀಚೆಗೆ ಬಿಡುಗಡೆಯಾದ ಹೈನೆಸ್ ಸಿಬಿ 350 ಮತ್ತು ಸಿಬಿ350 ಆರ್‌ಎಸ್ ಬೈಕ್ ಮಾದರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಯೋಜನೆಯಲ್ಲಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ನಮ್ಮ ಬೆಂಗಳೂರಿನಲ್ಲಿ ಎರಡನೇ ಬಿಗ್‌ವಿಂಗ್ ಬೈಕ್ ಶೋರೂಂ ಆರಂಭ

ಕ್ಲಾಸಿಕ್ ಬೈಕ್ ಮಾದರಿಗಳಲ್ಲಿ ಹೈನೆಸ್ ಸಿಬಿ 350 ಮತ್ತು ಸ್ಟ್ರೀಟ್ ಫೈಟರ್ ಬೈಕ್ ಮಾದರಿಗಳಲ್ಲಿ ಕೆಫೆ ರೇಸರ್ ವೈಶಿಷ್ಟ್ಯತೆಯ ಹೊಸ ಸಿಬಿ350 ಆರ್‌‌ಎಸ್ ಆವೃತ್ತಿಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಹೈನೆಸ್ ಸಿಬಿ 350 ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.87 ಲಕ್ಷ ಮತ್ತು ಸಿಬಿ350 ಆರ್‌‌ಎಸ್ ಬೈಕ್ ಮಾದರಿಯು ರೂ.1.96 ಲಕ್ಷ ಬೆಲೆ ಹೊಂದಿವೆ.

Most Read Articles

Kannada
English summary
Honda 2Wheelers India inaugurates BigWing in Bengaluru. Read in Kannada.
Story first published: Friday, March 5, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X