ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಭಾರತದ ಬಹುತೇಕ ನಟ, ನಟಿಯರು, ಕ್ರಿಕೆಟಿಗರು ಕಾರು ಹಾಗೂ ಸೂಪರ್ ಬೈಕುಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಅವರ ಬಳಿ ಕಾರುಗಳ ಸಂಗ್ರಹವೇ ಇರುತ್ತದೆ. ಬಾಲಿವುಡ್ ತಾರೆಯರು ಸಹ ತಮ್ಮ ಗ್ಯಾರೇಜ್'ನಲ್ಲಿ ಹಲವು ಕಾರುಗಳನ್ನು ಹೊಂದಿದ್ದಾರೆ. ಸೂಪರ್ ಕಾರುಗಳ ಬಗ್ಗೆ ಕ್ರೇಜ್ ಹೊಂದಿರುವವರಲ್ಲಿ ಬಾಲಿವುಡ್ ನಟ ಜಾನ್ ಅಬ್ರಹಾಂ ಸಹ ಸೇರಿದ್ದಾರೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಜಾನ್ ಅಬ್ರಹಾಂ ಬೈಕ್ ಹಾಗೂ ಸೂಪರ್‌ಬೈಕ್‌ಗಳ ವಿಷಯದಲ್ಲಿ ಮೆಗಾ ಉತ್ಸಾಹಿ. ಅವರ ಬೈಕುಗಳ ಸಂಗ್ರಹವು ಸಾಕಷ್ಟು ವಿಸ್ತಾರವಾಗಿದೆ. ಅವರು KTM 390 Duke ನಿಂದ Ducati Panigale ವರೆಗೆ ಹಲವು ರೀತಿಯ ಬೈಕ್'ಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ಫ್ಲೈಯಿಂಗ್ ಬೀಸ್ಟ್ ಎಂಬ ಯೂಟ್ಯೂಬರ್ ವ್ಲಾಗರ್ ಒಬ್ಬರು ಜಾನ್ ಅಬ್ರಹಾಂ ಅವರೊಂದಿಗೆ ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಸವಾರಿ ಮಾಡಿದರು.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಇದಕ್ಕೂ ಮುನ್ನ ಅವರು ಜಾನ್ ಅಬ್ರಹಾಂ ರವರ ಗ್ಯಾರೇಜ್‌ನಲ್ಲಿರುವ ಬೈಕುಗಳನ್ನು ವೀಕ್ಷಿಸಿದರು. ವ್ಲಾಗರ್ ಹಾಗೂ ಜಾನ್ ಅಬ್ರಹಾಂ ಬೈಕ್‌ಗಳನ್ನು ಸಿದ್ಧಪಡಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಎರಡೂ ಬೈಕುಗಳು ಜಾನ್ ಅಬ್ರಹಾಂ ರವರಿಗೆ ಸೇರಿವೆ. ಜಾನ್ ಅಬ್ರಹಾಂ ರವರು Kawasaki Ninja ZX 14R ಬೈಕ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಸೂಪರ್‌ಸ್ಪೋರ್ಟ್ ಟೂರಿಂಗ್ ಬೈಕ್ ಆಗಿದೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಇನ್ನು ವ್ಲಾಗರ್ Kawasaki Z 800 ಬೈಕ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬೈಕ್ ಚಾಲನೆ ವೇಳೆ ಜಾನ್ ಅಬ್ರಹಾಂ ತಮ್ಮ ಬೈಕ್ ಪ್ರಪಂಚದ ಬಗ್ಗೆ ಮಾಹಿತಿ ನೀಡುತ್ತಾರೆ. ಈ ವೇಳೆ ಅವರು ತಾವು ನಡೆಯುವುದಕ್ಕಿಂತ ಉತ್ತಮವಾಗಿ ಬೈಕ್ ಚಾಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಬೈಕ್'ಗಳನ್ನು ಚಾಲನೆ ಮಾಡುವುದು ತಮ್ಮ ನೆಚ್ಚಿನ ಸಂಗತಿಯಾಗಿದೆ ಎಂದು ಅವರು ಹೇಳುತ್ತಾರೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ತಾವು ನಿಧಾನಗತಿಯಲ್ಲಿ ಬೈಕ್ ಚಾಲನೆ ಮಾಡುವುದಾಗಿ ಹೇಳಿರುವ ಅವರು ತಾವು ವೇಗವಾಗಿ ಬೈಕ್ ಚಾಲನೆ ಮಾಡಲು ಇಷ್ಟಪಡುವುದಿಲ್ಲವೆಂದು ಹೇಳುತ್ತಾರೆ. ಈ ವೇಳೆ ಜಾನ್ ಅಬ್ರಹಾಂ ತಮ್ಮ Kawasaki Ninja Z X 14R ಬೈಕ್ ಅನ್ನು ಸಾರ್ವಜನಿಕ ರಸ್ತೆಗಳಲ್ಲಿ ಚಾಲನೆ ಮಾಡಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸುವಂತೆ ಅವರು ಇದೇ ವೇಳೆ ಕೆಲವು ಬೈಕ್ ಸವಾರರಿಗೆ ಹೇಳುತ್ತಾರೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಅವರಿಬ್ಬರೂ ಬೈಕುಗಳಲ್ಲಿ ಕೆಲ ಸಮಯ ತಿರುಗಾಡುತ್ತಾರೆ. ಜಾನ್ ಅಬ್ರಹಾಂ ತಾವು ಚೆನ್ನಾಗಿ ತಿಳಿದಿರುವ ಪ್ರದೇಶದ ಸುತ್ತ ಬೈಕ್ ಚಾಲನೆ ಮಾಡುತ್ತಾರೆ. ವಿಶ್ವ ವಿಖ್ಯಾತ ಸಂಸ್ಥೆಯಾಗಿರುವ ಕ್ಯಾಲಿಫೋರ್ನಿಯಾ ಸೂಪರ್‌ಬೈಕ್ ಶಾಲೆಯಿಂದ ತಾವು ತರಬೇತಿ ಪಡೆದಿರುವುದಾಗಿ ಇದೇ ವೇಳೆ ಜಾನ್ ಅಬ್ರಹಾಂ ಮಾಹಿತಿ ನೀಡುತ್ತಾರೆ. ಜಾನ್ ಅಬ್ರಹಾಂ ರೇಸಿಂಗ್ ಟ್ರ್ಯಾಕ್‌ಗಳಲ್ಲಿ ಮಾತ್ರ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವುದಾಗಿ ಹೇಳಿದ್ದಾರೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಸಾರ್ವಜನಿಕ ರಸ್ತೆಗಳಲ್ಲಿ ವೇಗವಾಗಿ ಚಾಲನೆ ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ. ತಾವು ವೇಗವಾಗಿ ಬೈಕ್ ಚಾಲನೆ ಮಾಡಿದರೆ ಅದರಿಂದ ಬೇರೆಯವರಿಗೆ ತಪ್ಪು ಸಂದೇಶ ರವಾನೆಯಾಗಿ ಅವರು ಸಹ ವೇಗವಾಗಿ ಬೈಕ್ ಚಾಲನೆ ಮಾಡುತ್ತಾರೆ ಎಂಬ ಕಾರಣಕ್ಕೆ ತಾವು ವೇಗವಾಗಿ ಬೈಕ್ ಚಾಲನೆ ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಹಾಗೂ ಸ್ಟಂಟ್ ಮಾಡುವುದನ್ನು ಬಿಟ್ಟಿರುವುದಾಗಿ ಅವರು ಹೇಳಿದ್ದಾರೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಜಾನ್ ಅಬ್ರಹಾಂ ತಾವು ಪ್ರತಿದಿನ ಬೈಕ್ ಚಾಲನೆ ಮಾಡುವುದಾಗಿ ಹೇಳಿದ್ದಾರೆ. ಬೈಕ್ ಚಾಲನೆ ಮಾಡುವುದು ತಮಗೆ ಸಂತಸವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಜಾನ್ ಅಬ್ರಹಾಂ ಹಲವಾರು ಸೂಪರ್ ಬೈಕ್‌ಗಳನ್ನು ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿ Yamaha V MAX, Honda CBR1000RR-R, Yamaha YZF -R1, Ducati Panigale, MV Augusta F3 800 ಹಾಗೂ KTM 390 Duke ಬೈಕುಗಳಿವೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

ಇದರ ಜೊತೆಗೆ ಅವರು BMW S1000RR, Aprilia RSV4 RF, Ducati Diavel, Suzuki GSX 1000R, Suzuki Hayabusa ಸೇರಿದಂತೆ ಹಲವು ಬೈಕುಗಳನ್ನು ಹೊಂದಿದ್ದಾರೆ. ಜಾನ್ ಅಬ್ರಹಾಂ ಕೈಗೆಟುಕುವ ಬೆಲೆಯ ಸಾಮಾನ್ಯ ಬೈಕುಗಳು ಹಾಗೂ ಕಸ್ಟಮೈಸ್ ಮಾಡಿದ ಬೈಕ್‌ಗಳನ್ನು ಹೊಂದಿದ್ದಾರೆ. ಇವುಗಳಲ್ಲಿ Yamaha RD 350, KTM 390 Duke, Rajputana Customs Lightfoot, Bull City Customs Akuma, Yahama FZ V2 ಬೈಕುಗಳು ಸೇರಿವೆ.

ಜಾನ್ ಅಬ್ರಹಾಂ, Yamaha ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಅವರು ಭಾರತದ ಮೊದಲ ಸೂಪರ್ ಬೈಕ್ ಚಿತ್ರವಾದ ಧೂಮ್ ನಲ್ಲಿ ಅಭಿನಯಿಸಿದ್ದಾರೆ. Kawasaki Ninja ZX 14 R ಸೂಪರ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 19,69,966 ಗಳಾಗಿದೆ. ಈ ಬೈಕ್ 2013 ರಿಂದ ಭಾರತದಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಈ ಬೈಕಿನ ನವೀಕೃತ ಆವೃತ್ತಿಯನ್ನು 2016 ರಲ್ಲಿ ಬಿಡುಗಡೆಗೊಳಿಸಿತು.

ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿಯಿರುವ ಬೈಕುಗಳಿವು

Kawasaki Ninja ZX 14 R ಸೂಪರ್ ಬೈಕಿನಲ್ಲಿ 1,441 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 210 ಬಿ‌ಹೆಚ್‌ಪಿ ಪವರ್ ಹಾಗೂ 158 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಿನ ವೇಗದ ಸ್ಥಿರತೆಗಾಗಿ ಈ ಬೈಕಿನಲ್ಲಿರುವ ಸಸ್ಪೆಂಷನ್ ಅನ್ನು ರಿ ಟ್ಯೂನ್ ಮಾಡಲಾಗಿದೆ ಎಂದು Kawasaki ಕಂಪನಿ ಹೇಳಿದೆ.

Most Read Articles

Kannada
English summary
John abraham s bike collection video details
Story first published: Thursday, November 4, 2021, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X