ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ತನ್ನ ಝಡ್125 ಪ್ರೊ ಮಿನಿ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2022ರ ಕವಾಸಕಿ ಝಡ್125 ಪ್ರೊ ಮಿನಿ ಬೈಕ್ ಆಕರ್ಷಕ ವಿನ್ಯಾಸ ಮತ್ತು ಹೊಸ ನವೀಕರಣಗಳೊಂದಿಗೆ ಬರುತ್ತಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಹೊಸ ಕವಾಸಕಿ ಝಡ್125 ಪ್ರೊ ಮಿನಿ ಬೈಕ್ ಹೊಸ ಬಣ್ಣಗಳ ಆಯ್ಕೆಗಳು ಮತ್ತು ತಾಂತ್ರಿಕ ನವೀಕರಣಗಳನ್ನು ಕೂಡ ಪಡೆದುಕೊಂಡಿದೆ. ಯುಎಸ್ ಮಾರುಕಟ್ಟೆಯಲ್ಲಿ ಈ ಬೈಕಿನಲ್ಲಿ ಬೆಲೆಯು ಯುಎಸ್ಡಿ 3,299 ಗಳಾಗಿದೆ. ಇದು ಭಾರತೀಯ ಕರೆನ್ಸಿ ಪ್ರಕಾರ ಸುಮಾರು ರೂ.2.45 ಲಕ್ಷಗಳಾಗಿದೆ. ಆದರೆ ಈ ಆಕರ್ಷಕ ಕವಾಸಕಿ ಝಡ್125 ಪ್ರೊ ಮಿನಿ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

2022ರ ಕವಾಸಕಿ ಝಡ್125 ಪ್ರೊ ಮಿನಿ ಬೈಕಿನಲ್ಲಿ 125 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಸ್‌ಒಹೆಚ್‌ಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 9.62 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಮಿನಿ ಬೈಕ್‌ನಲ್ಲಿ 12-ತಿಂಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ನೀಡುತ್ತಿದೆ. ಇದನ್ನು ಯೋಜನೆಯನ್ನು ಆರಿಸುವುದರ ಮೂಲಕ 48 ತಿಂಗಳವರೆಗೆ ವಿಸ್ತರಿಸಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಹೊಸ ಕವಾಸಕಿ ಝಡ್125 ಪ್ರೊ ಮಿನಿ ಅಗ್ರೇಸಿವ್ ಆಗಿ ಕಾಣುವ ನೇಕೆಡ್ ಬೈಕ್ ಆಗಿದೆ. ಈ ಮಿನಿ ಬೈಕಿನಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್, ಎರಡೂ ಬದಿಗಳಲ್ಲಿ ಗ್ರಾಫಿಕ್ಸ್‌ನೊಂದಿಗೆ ಶಾರ್ಪ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಇದು 7.57-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಆಗಿದೆ. ಇನ್ನು ಈ ಮಿನಿ ಬೈಕ್ ಅಂಡರ್‌ಬೆಲ್ಲಿ ಪ್ಯಾನ್, ಅಂಡರ್‌ಬೆಲ್ಲಿ ಎಕ್ಸಾಸ್ಟ್, ಗೋಲ್ಡನ್ ಕಲರ್ ಫೋರ್ಕ್ಸ್, ಗ್ರ್ಯಾಬ್ ಹ್ಯಾಂಡಲ್ ಸ್ಟ್ರಾಪ್ ಮತ್ತು ಟೇಲ್ ಹೊಂದಿರುವ ಸಿಂಗಲ್ ಫೀಸ್ ಸೀಟ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಇನ್ನು ಈ ಹೊಸ ಕವಾಸಕಿ ಝಡ್125 ಪ್ರೊ ಮಿನಿ ಬೈಕ್ ಪರ್ಲ್ ಶೈನಿಂಗ್ ಯೆಲ್ಲೋ, ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಪರ್ಲ್ ರೊಬೊಟಿಕ್ ವೈಟ್/ಕ್ಯಾಂಡಿ ಪ್ಲಾಸ್ಮಾ ಬ್ಲೂ ಎಂಬ ಬಣ್ನಗಳ ಆಯ್ಕೆಯಲ್ಲಿ ಲಭ್ಯವಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಈ ಮಿನಿ ನೇಕೆಡ್ ಬೈಕ್ ಎಂಟ್ರಿ ಲೆವೆಲ್ ಮಾದರಿಯಾಗಿದ್ದು, ಇದರಲ್ಲಿ ಹ್ಯಾಲೊಜೆನ್ ಹೆಡ್‌ಲೈಟ್, ಎಲ್‌ಇಡಿ ಟೈಲ್ ಲೈಟ್, ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಅನಲಾಗ್ ಟ್ಯಾಕೋಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್ಮ್ ಸ್ಮಾರ್ಟ್ ರೆಗ್ಯುಲೇಟರ್ ಮತ್ತಿ ಇತರ ಪೀಚರ್ಸ್ ಗಳನ್ನು ಹೊಂದಿವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಈ ಹೊಸ ಕವಾಸಕಿ ಝಡ್125 ಪ್ರೊ ಮಿನಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಸ್ವಿಂಗಾರ್ಮ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಕವಾಸಕಿ ಝಡ್125 ಪ್ರೊ ಮಿನಿ ಬೈಕ್

ಇನ್ನು ಈ ಮಿನಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಒಂದೇ 200 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 184 ಎಂಎಂ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ನೇಕೆಡ್ ವಿನ್ಯಾಸ ಹೊಂದಿರುವ ಈ ಬೈಕಿನಲ್ಲಿ 12 ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

Most Read Articles

Kannada
English summary
New Kawasaki Z125 Pro Launched. Read In Kannada.
Story first published: Wednesday, June 30, 2021, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X