ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮೋಟೋ ಗುಜಿ ತನ್ನ ಹೊಸ ವಿ9 ರೋಮರ್ ಮತ್ತು ವಿ9 ಬಾಬರ್ ಎಂಬ ಎರಡು ಬೈಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ 2021ರ ವಿ9 ರೋಮರ್ ಮತ್ತು ವಿ9 ಬಾಬರ್ ಮಾದರಿಗಳು ಕೆಲವು ಗಮನಾರ್ಹ ಬದಲಾವಣೆಗಳನ್ನು ಪಡೆದಿವೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಮೋಟೋ ಗುಜಿ ವಿ9 ಬೈಕುಗಳು ತಮ್ಮ ವಿಶಿಷ್ಟ ಮತ್ತು ಕಸ್ಟಮ್ ತರಹದ ಲುಕ್ ಗಾಗಿ ಹೆಚ್ಚು ಹೆಸರುವಾಸಿಯಾಗಿದೆ. ಮೋಟೋ ಗುಜಿ ಪ್ರಕಾರ, ಹೊಸ ವಿ9 ರೋಮರ್ ಬೈಕ್ ಗಮನಾರ್ಹ ಬದಲಾವಣೆಗಳೊಂದಿಗೆ ಬರುತ್ತದೆ. ಇದರಲ್ಲಿ ಪ್ರಮುಖವಾಗಿ ಟಿಯರ್ ಡ್ರಾಪ್ ಆಕಾರಾದ ಟ್ಯಾಂಕ್, ರಿಬ್ಬಡ್ ಸೀಟ್ ಮತ್ತು ವೈಡ್ ರಿಯರ್ ಫೆಂಡರ್ ಸೇರಿವೆ. ಮೋಟೋ ಗುಜಿ ವಿ9 ರೋಮರ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಮೋಟೋ ಗುಜಿ ವಿ9 ಬೈಕುಗಳು ತಮ್ಮ ವಿಶಿಷ್ಟ ಮತ್ತು ಕಸ್ಟಮ್ ತರಹದ ಲುಕ್ ಗಾಗಿ ಹೆಚ್ಚು ಹೆಸರುವಾಸಿಯಾಗಿದೆ. ಮೋಟೋ ಗುಜಿ ಪ್ರಕಾರ, ಹೊಸ ವಿ9 ರೋಮರ್ ಬೈಕ್ ಗಮನಾರ್ಹ ಬದಲಾವಣೆಗಳೊಂದಿಗೆ ಬರುತ್ತದೆ. ಇದರಲ್ಲಿ ಪ್ರಮುಖವಾಗಿ ಟಿಯರ್ ಡ್ರಾಪ್ ಆಕಾರಾದ ಟ್ಯಾಂಕ್, ರಿಬ್ಬಡ್ ಸೀಟ್ ಮತ್ತು ವೈಡ್ ರಿಯರ್ ಫೆಂಡರ್ ಸೇರಿವೆ. ಮೋಟೋ ಗುಜಿ ವಿ9 ರೋಮರ್ ಬೈಕ್ ಆಕರ್ಷಕ ಲುಕ್ ಅನ್ನ್ ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

2021ರ ಮೋಟೋ ಗುಜಿ ವಿ9 ಬಾಬರ್ ಬೈಕಿನಲ್ಲಿ ಅಲ್ಯೂಮಿನಿಯಂ ಸೈಡ್ ಪ್ಯಾನೆಲ್‌ಗಳು ಮತ್ತು ಮಡ್ ಗಾರ್ಡ್‌ಗಳು ಹೊಸದಾಗಿವೆ. ಇದರೊಂದಿಗೆ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಫುಲ್-ಎಲ್ಇಡಿ ಲೈಟ್ ಸೆಟಪ್ ಅನ್ನು ನೀಡಲಾಗಿದೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಇನ್ನು ಬೈಕುಗಳ ಹೃದಯ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, 2021ರ ವಿ9 ರೋಮರ್ ಮತ್ತು ವಿ9 ಬಾಬರ್ ಬೈಕುಗಳಲ್ಲಿ ಹೊಸ 850ಸಿಸಿ, 90-ಡಿಗ್ರಿ, ವಿ-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಈ ಎಂಜಿನ್ ಅನ್ನು ಮೋಟೋ ಗುಜಿ 85 ಟಿಟಿ ಆಲ್-ಟೆರೈನ್ ಬೈಕಿನಿಂದ ಎರವಲು ಪಡೆಯಲಾಗಿದೆ. ಇನ್ನು ಈ ಎಂಜಿನ್ 65 ಬಿಹೆಚ್‍ಪಿ ಪವರ್ 73 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನು ಹೊಂದಿದೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಇನ್ನು 2021ರ ವಿ9 ರೋಮರ್ ಮತ್ತು ವಿ9 ಬಾಬರ್ ಬೈಕುಗಳಲ್ಲಿ ಫ್ರೇಮ್ ಯುನಿಟ್‌ ಅನ್ನು ನವೀಕರಿಸಲಾಗಿದೆ ಎಂದು ಕಂಪನಿ ಹೇಳಿದೆ. ಉತ್ತಮ ಸ್ಥಿರತೆಗಾಗಿ ಹೆಡ್ ಸ್ಟಾಕ್ ಪ್ರದೇಶದಲ್ಲಿ ಫ್ರೇಮ್ ಅನ್ನು ಬಲಪಡಿಸಿದ್ದಾರೆ. ಫುಟ್‌ಪೆಗ್‌ಗಳು, ಕಂಪನಗಳನ್ನು ತಗ್ಗಿಸಲು ಮತ್ತು ಸೌಕರ್ಯವನ್ನು ಸುಧಾರಿಸಲು ರಬ್ಬರ್ ಪ್ಯಾಡ್‌ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಇತ್ತೀಚೆಗೆ ಮೋಟೋ ಗುಜಿ ತನ್ನ ಹೊಸ ವಿ7 ಬೈಕನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಿತ್ತು. 2021ರ ಮೋಟೋ ಗುಜಿ ವಿ7 ಬೈಕ್ ವಿ7 ಸ್ಟೋನ್ ಮತ್ತು ವಿ7 ಸ್ಪೆಷಲ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ವಿ7 ಸ್ಟೋನ್ ರೂಪಾಂತರವು ಹೆಚ್ಚು ಮಾರ್ಡನ್ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು

ಇನ್ನು ಈ ಹೊಸ ಮೋಟೋ ಗುಜಿ ವಿ9 ಬೈಕುಗಳಲ್ಲಿ ಎಲೆಕ್ಟ್ರಾನಿಕ್ಸ್ ಕಿಟ್ ಎಬಿಎಸ್ ಮತ್ತು ಬದಲಾಯಿಸಬಹುದಾದ ಎಂಜಿಸಿಟಿ ಟ್ರ್ಯಾಕ್ಷನ್ ಕಂಟ್ರೋಲ್ ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರುತ್ತದೆ. ಶೀಘ್ರದಲ್ಲೇ ಈ 2021ರ ಮೋಟೋ ಗುಜಿ ವಿ9 ರೋಮರ್ ಮತ್ತು ವಿ9 ಬಾಬರ್ ಬೈಕುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ.

Most Read Articles

Kannada
English summary
2021 Moto Guzzi V9 Roamer and V9 Bobber Unveiled. Read In Kannada.
Story first published: Saturday, January 16, 2021, 17:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X