Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳು
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ಮುಂದಿನ ತಲೆಮಾರಿನ ಪಲ್ಸರ್ ಸರಣಿಯ ಮಾದರಿಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲೇ ಮುಂದಿನ ತಲೆಮಾರಿನ ಪಲ್ಸರ್ ಬೈಕುಗಳು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿವೆ.

ಬಜಾಜ್ ಪಲ್ಸರ್ ಎನ್ಎಸ್200 ಮತ್ತು ಆರ್‍ಎಸ್200 ಮಾರಾಟದಲ್ಲಿರುವ ಪ್ರೀಮಿಯಂ ಬೈಕುಗಳಾಗಿದೆ. ಈ ಪ್ರೀಮಿಯಂ ಬೈಕುಗಳನ್ನು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಗಲಾಗಿತ್ತು. ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲೇ ಬಿಡುಗಡೆಯಾಗಲಿದೆ.

ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳು ಶೀಘ್ರದಲ್ಲೇ ರೋಡ್ ಟೆಸ್ಟ್ ಅನ್ನು ಪ್ರಾರಂಭಿಸಲಿದೆ. ಇನ್ನು ಈ ಹೊಸ ಬೈಕುಗಳು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳುಗಳ ನಡುವೆ ಹಬ್ಬದ ಸೀಸನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಇನ್ನು ಹೊಸ ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳು ಡೊಮಿನಾರ್ 250 ಮಾದರಿಯೊಂದಿಗೆ ಸಾಕಷ್ಟು ಸಾಮಾನ್ಯತೆಯನ್ನು ಹೊಂದಿರುತ್ತವೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಎನ್ಎಸ್200 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.1.32 ಲಕ್ಷಗಳಾಗಿದ್ದರೆ, ಆರ್‍ಎಸ್200 ಬೈಕಿನ ಬೆಲೆಯು ರೂ.1.52 ಲಕ್ಷಗಳಾಗಿದೆ.

ಆದರೆ ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳು ಬೆಲೆ ತುಸು ದುಬಾರಿಯಾಗಿರುತ್ತದೆ. ಆದರೆ ಇದರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವುದಕ್ಕಾಗಿ ಆ ವಿಭಾಗದಲ್ಲಿ ಕೈಗೆಟಕುವ ಬೆಲೆಯಲ್ಲಿ ಪರಿಚಯಿಸಬಹುದು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಪಲ್ಸರ್ ಆರ್‍ಎಸ್250 ಉತ್ತಮ ಟೋರರ್ ಗುಣಲಕ್ಷಣಗಳೊಂದಿಗೆ ಕೆಟಿಎಂ ಆರ್ಸಿ 200 ಮತ್ತು ಕೆಟಿಎಂ ಡ್ಯೂಕ್ 250ಗೆ ಪರ್ಯಾಯವಾಗುವ ಅದೇ ರೀತಿ ಅಭಿವೃದ್ದಿಪಡಿಸಿ ಬಿಡುಗಡೆಗೊಳಿಸಬಹುದು. ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳು ಡೊಮಿನಾರ್ 250 ಮಾದರಿಯಂತೆ ಪರ್ಮಿಟರ್ ಫ್ರೇಮ್ ಅನ್ನು ಆಧರಿಸಿವೆ ಎಂದು ನಿರೀಕ್ಷಿಸುತ್ತೇವೆ.

ಡೊಮಿನಾರ್ 250 ಗಿಂತ ಭಿನ್ನವಾಗಿ, ಅವು ವೆಚ್ಚದ ಕಾರಣಗಳಿಗಾಗಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮಾತ್ರ ಒಳಗೊಂಡಿರಬಹುದು. ಹಿಂಭಾಗದಲ್ಲಿ ಡಿ250 37 ಎಂಎಂ ಯುಎಸ್ಡಿ ಬಳಸುತ್ತದೆ ಮತ್ತು ಪ್ರಿ-ಲೋಡ್ ಹೊಂದಾಣಿಕೆ ಹೊಂದಿರುವ ಹಿಂಭಾಗದ ಮೊನೊಶಾಕ್ ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳಲ್ಲಿ ಹೆಚ್ಚಿನ ಸಾಧ್ಯತೆಗಳಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಹೊಸ ಬಜಾಜ್ ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳು ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಎಲ್ಇಡಿ ಇಂಡೀಕೆಟರ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇಸ್ನ್ ಟ್ರೂಮೆಂಟ್ ಕನ್ಸೋಲ್ ಅನ್ನು ಒಳಗೊಂಡಿರುತ್ತದೆ.

ಪಲ್ಸರ್ ಎನ್ಎಸ್250 ಬೈಕಿನ ಮುಂಭಾಗದಲ್ಲಿ 300ಎಂಎಂ ಡಿಸ್ಕ್ ಬ್ರೇಕ್ ನೀಡಿದರೆ, ಆರ್‍ಎಸ್250 ಬೈಕಿನಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿರುತ್ತದೆ. ಇನ್ನು ಎರಡು ಬೈಕುಗಳ ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಕೂಡ ಹೊಂದಿರುತ್ತದೆ.

ಇನ್ನು ಪಲ್ಸರ್ ಎನ್ಎಸ್250 ಮತ್ತು ಆರ್‍ಎಸ್250 ಬೈಕುಗಳಲ್ಲಿ 248.8 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 23.5 ಬಿಹೆಚ್‌ಪಿ ಪವರ್ ಮತ್ತು 27 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.