Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹುನಿರೀಕ್ಷಿತ 2021ರ ಜಾವಾ 42 ಬೈಕ್ ಟೀಸರ್ ಬಿಡುಗಡೆ
ಜನಪ್ರಿಯ ದ್ವಿಚಕ ವಾಹನ ತಯಾರಕ ಕಂಪನಿಯಾದ ಕ್ಲಾಸಿಕ್ ಲೆಜೆಂಡ್ಸ್ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾವಾ 42 ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಕಂಪನಿಯು 2021ರ ಜಾವಾ 42 ಬೈಕಿನ್ ಅಧಿಕೃತ ಟೀಸರ್ ವೀಡಿಯೋ ಬಿಡುಗಡೆಗೊಂಡಿದೆ.

1929ರಲ್ಲಿ ಸ್ಥಾಪಿಸಲಾದ ಜೆಕೊಸ್ಲೊವಾಕಿಯನ್ ಬ್ರಾಂಡ್ ಆದ ಜಾವಾ, ಜಾವಾಗೆ ಭಾರತದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದೆ. ಇದರಿಂದ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು 2018ರ ಕೊನೆಯಲ್ಲಿ ಜಾವಾ 42 ಮತ್ತು ಪೆರಾಕ್ ಬಾಬ್ಬರ್ ಬೈಕುಗಳೊಂದಿಗೆ ಜಾವ ಬ್ರ್ಯಾಂಡ್ ಅನ್ನು ಪುನರುಜ್ಜೀವನಗೊಳಿಸಿತು. ಇನ್ನು ಜಾವಾ 42 ಕ್ಲಾಸಿಕ್ ವಿಂಟೇಜ್ ಲುಕ್ ನೊಂದಿಗೆ ಕಡಿಮೆ ಕ್ರೋಮ್ ಮುಖ್ಯಾಂಶಗಳನ್ನು ಹೊಂದಿರುವ ಮಾರ್ಡನ್ ಲುಕ್ ನಲ್ಲಿ ಕಾಣುವ ರೆಟ್ರೊ ಕ್ರೂಸರ್ ಆಗಿದೆ.

ಬಿಡುಗಡೆಗೊಂಡ 10 ಸೆಕೆಂಡುಗಳ ಟೀಸರ್ ವೀಡಿಯೋದಲ್ಲಿ ಜಾವಾ 42 ಸರನ್ನು ಹೊರತುಪಡಿಸಿ ಹೆಚ್ಚಿನದನ್ನು ಬಹಿರಂಗಪಡಿಸಿಲ್ಲ. "ದಿ ಸೆಡಕ್ಷನ್ ಬಿಗಿನ್ಸ್" ಮತ್ತು ಶೀಘ್ರದಲ್ಲೇ ಬರಲಿದೆ ಎಂದು ಟೀಸರ್ ನಲ್ಲಿ ಹೇಳಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಜಾವಾ 42 ಬೈಕನ್ನು ದೊಡ್ಡ ಬದಲಾವನೆಗಳೊಂದಿಗೆ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಹೊಸ ಜಾವಾ 42 ಬೈಕ್ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಸ್ಪೈ ಚಿತ್ರಗಳಲ್ಲಿ ಕಂಡುಬಂದಂತೆ ಹೊಸ ಜಾವಾ 42 ಬೈಕ್ ಕೆಲವು ನವೀಕರಣಗಳನ್ನು ಒಳಗೊಂಡಿದೆ.

ಇದರಲ್ಲಿ ಹೊಸ ಬ್ಲ್ಯಾಕ್-ಔಟ್ ಅಲಾಯ್ ವ್ಹೀಲ್ ಈ ಎಂಟ್ರಿ ಲೆವೆಲ್ ಜಾವಾ 42 ಬೈಕಿನಲ್ಲಿ ಕಂಡುಬಂದಿದೆ. ಈ ಹೊಸ ವ್ಹೀಲ್ ಗಳನ್ನು ಟ್ಯೂಬ್‌ಲೆಸ್ ಟೈರ್‌ಗಳಿಂದ ಸುತ್ತುವರಿಯಬಹುದು. ಇನ್ನು ಇದರ ಬದಲಾವಣೆಗಳು ಕೇವಲ ವ್ಹಿಲ್ ಗಳಿಗೆ ಮಾತ್ರ ಸೀಮಿತಗೊಂಡಿಲ್ಲ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಜಾವಾ 42 ಬೈಕಿನ ಎಕ್ಸಾಸ್ಟ್ ಪೈಪ್, ಮುಂಭಾಗ ಮತ್ತು ಹಿಂಭಾಗದ ಸಸ್ಪೆಂಕ್ಷನ್ ಸೆಟಪ್, ಬ್ಲ್ಯಾಕ್ ಹೆಡ್‌ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್ ಹೌಸಿಂಗ್‌ಗಳಂತಹ ಯುನಿಟ್ ಗಳ ಜೊತೆಗೆ ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿವೆ.

ಸಾಂಪ್ರದಾಯಿಕ ಕ್ರೋಮ್ ಸೆಟಪ್ ಬದಲಿಗೆ ಎಂಜಿನ್ ಮತ್ತು ಗೇರ್ ಬಾಕ್ಸ್ ಸೆಟಪ್ ಅನ್ನು ಸಹ ಬ್ಲ್ಯಾಕ್-ಔಟ್ ಬಣ್ಣದಿಂದ ಕೂಡಿದ್ದು, ಜಾವಾ 42 ಆಲ್-ಬ್ಲ್ಯಾಕ್ ಥೀಮ್ ರೆಟ್ರೊ ಬೈಕಿನಂತೆ ಕಂಡು ಬರುತ್ತಿದೆ. ಹೊಸ ಜಾವಾ 42 ಬೈಕಿನಲ್ಲಿ ವಿಶೇಷವಾಗಿ ಪಿಲಿಯನ್‌ಗೆ ಸೀಟಿನ ಕೆಳಗಿರುವ ಫೋಮ್‌ನ ಗುಣಮಟ್ಟವನ್ನು ಸುಧಾರಿಸಲು ಜಾವಾ ಮುಂದಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಜಾವಾ 42 ಬೈಕಿನಲ್ಲಿ ಪ್ರಸುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಯಲ್ಲಿರುವ ಅದೇ 293 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 26.2 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.
ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 42 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಹಿಂದಿನ ಮಾದರಿಯಲ್ಲಿರುವಂತೆಯೇ ಮುಂಭಾಗಕ್ಕೆ 18-ಇಂಚು ಮತ್ತು ಹಿಂಭಾಗಕ್ಕೆ 17-ಇಂಚಿನ ಅಲಾಯ್ ವ್ಹೀಲ್ ಗಳು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ಜಾವಾ 42 ಬೈಕ್ ಆರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ, ಇನ್ನು ಹೊಸ ಜಾವಾ 42 ಬೈಕ್ ಹೆಚ್ಚಾಗಿ ಕಾಸ್ಮೆಟಿಕ್ ಅಪ್ಡೇಟ್ ಗಳಿಗೆ ಸೀಮಿತವಾಗಿರಬಹುದು. ಜಾವಾ 42 ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡುತ್ತದೆ.