ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಪ್ರಿವೆಲ್ ಎಲೆಕ್ಟ್ರಿಕ್ ಕಂಪನಿಯು ಎಲೈಟ್, ಫಿನೆಸ್, ವೊಲ್ಫ್ಯೂರಿ ಎಂಬ ಮೂರು ಪ್ರೀಮಿಯಂ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗೊಂಡಿರುವ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನುಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲು ಮುಂದಾಗಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಎಲೈಟ್

ಬೆಲೆ: ರೂ.1,29,999

ಪ್ರತಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ 200 ಕೆ.ಜಿ ತೂಕವನ್ನು ಹೊರಬಲ್ಲದು. ಈ ಸ್ಕೂಟರಿನಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಹಾಗೂ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 110 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಸ್ಕೂಟರಿನಲ್ಲಿ ಅಳವಡಿಸಿರುವ ಬ್ಯಾಟರಿಯನ್ನು 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಸ್ಕೂಟರಿನಲ್ಲಿ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ (ಎಲ್‌ಸಿಡಿ) ಸೇರಿದಂತೆ ಹಲವಾರು ಫೀಚರ್‌ಗಳನ್ನು ಅಳವಡಿಸಲಾಗಿದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಫಿನೆಸ್

ಬೆಲೆ: ರೂ. 99,999

ಪ್ರತಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಫಿನೆಸ್ ಎಲೆಕ್ಟ್ರಿಕ್ ಸ್ಕೂಟರ್ 200 ಕೆ.ಜಿ ತೂಕವನ್ನು ಹೊರಬಲ್ಲದು. ಈ ಸ್ಕೂಟರಿನಲ್ಲಿ ಅಳವಡಿಸಿರುವ ಲಿಥಿಯಂ ಐಯಾನ್ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 110 ಕಿ.ಮೀಗಳವರೆಗೆ ಚಲಿಸುತ್ತದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಈ ಬ್ಯಾಟರಿಯನ್ನು 4 ಗಂಟೆಗಳಲ್ಲಿ 0 - 100%ವರೆಗೆ ಚಾರ್ಜ್ ಮಾಡಬಹುದು. ಈ ಸ್ಕೂಟರ್ 12-ಟ್ಯೂಬ್ ಬ್ರಷ್‌ಲೆಸ್ ಕಂಟ್ರೋಲರ್ ನಿಯಂತ್ರಣ ಮಾದರಿಯೊಂದಿಗೆ ಒಂದು ಕ್ಲಿಕ್ ಫಿಕ್ಸ್ ಕಾರ್ಯವನ್ನು ಹೊಂದಿದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ವೊಲ್ಫ್ಯೂರಿ

ಬೆಲೆ: ರೂ.89,999

ಪ್ರತಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ವೊಲ್ಫ್ಯೂರಿ ಎಲೆಕ್ಟ್ರಿಕ್ ಸ್ಕೂಟರ್ 200 ಕೆ.ಜಿ ತೂಕವನ್ನು ಹೊರಬಲ್ಲದು. ಈ ಸ್ಕೂಟರಿನಲ್ಲಿ ಅಳವಡಿಸಿರುವ ಲಿಥಿಯಂ ಬ್ಯಾಟರಿ ಪೂರ್ತಿಯಾಗಿ ಆದ ನಂತರ 110 ಕಿ.ಮೀಗಳವರೆಗೆ ಚಲಿಸುತ್ತದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಈ ಬ್ಯಾಟರಿಯು ನಾಲ್ಕು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 12 ಟ್ಯೂಬ್ ಬ್ರಷ್‌ಲೆಸ್ ಕಂಟ್ರೋಲರ್ ನಿಯಂತ್ರಣ ಮಾದರಿಯೊಂದಿಗೆ ಒಂದು ಕ್ಲಿಕ್ ಫಿಕ್ಸ್ ಕಾರ್ಯವನ್ನು ಹೊಂದಿದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಪ್ರಿವೈಲ್ ಎಲೆಕ್ಟ್ರಿಕ್ ಬಗ್ಗೆ

ಮಾರ್ಚ್ 2021ರಲ್ಲಿ ಹೇಮಂತ್ ಭಟ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಂಯೋಜಿಸಲ್ಪಟ್ಟ ಪ್ರಿವೈಲ್ ಎಲೆಕ್ಟ್ರಿಕ್ ಇವಿ ಸ್ಟಾರ್ಟ್ ಅಪ್ ಕಂಪನಿಯಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಆಕರ್ಷಕವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಮೂರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದ ಪ್ರಿವೆಲ್ ಎಲೆಕ್ಟ್ರಿಕ್

ಕಂಪನಿಯು ಸ್ವಚ್ಛವಾದ ಹಾಗೂ ಸುಸ್ಥಿರ ಇಂಧನ ಬಳಕೆಯನ್ನು ಪ್ರತಿಪಾದಿಸುತ್ತದೆ. ಕಂಪನಿಯು ಕ್ರಿಯಾತ್ಮಕವಾದ, ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಬದ್ಧವಾಗಿದೆ.

Most Read Articles

Kannada
English summary
Prevail electric unveils three new premium electric scooters. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X