Just In
Don't Miss!
- News
ಏಪ್ರಿಲ್ 22ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Movies
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್
ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಕಂಪನಿಯು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ತನ್ನ ಬೈಕುಗಳನ್ನು ಮಾರಾಟ ಮಾಡುತ್ತದೆ.

ಈಗ ಹಲವು ಕಂಪನಿಗಳು ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಬೈಕುಗಳನ್ನು ಬಿಡುಗಡೆಗೊಳಿಸಿವೆ.

ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳು ತಮ್ಮ ವಿಂಟೇಜ್ ಸ್ಟೈಲಿಂಗ್‌ಗೆ ಹೆಸರುವಾಸಿಯಾಗಿವೆ. ಇದರ ಜೊತೆಗೆ ಈ ಬೈಕುಗಳಲ್ಲಿರುವ ಮೆಕಾನಿಕಲ್ ಅಂಶಗಳು ಸಹ ಈ ಬೈಕುಗಳ ಜನಪ್ರಿಯತೆಗೆ ಕಾರಣವಾಗಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸವಾರರಿಗೆ ವಿಶಿಷ್ಟ ಅನುಭವವನ್ನು ನೀಡುತ್ತವೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬೈಕ್ ಉತ್ಸಾಹಿಗಳ ನೆಚ್ಚಿನ ಬೈಕ್'ಗಳಾಗಿವೆ.ಆದರೂ ಜನರು ಈ ಬೈಕ್'ಗಳನ್ನು ಮಾಡಿಫೈಗೊಳಿಸಲು ಆದ್ಯತೆ ನೀಡುತ್ತಾರೆ.

ಈ ಹಿಂದೆಯೂ ಹಲವು ರಾಯಲ್ ಎನ್‌ಫೀಲ್ಡ್ ಬೈಕುಗಳನ್ನು ಮಾಡಿಫೈಗೊಳಿಸಲಾಗಿತ್ತು. ಈಗ ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕಿನ ಕುರಿತು ಈ ಲೇಖನದಲ್ಲಿ ನೋಡೋಣ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಬೈಕ್ ಅನ್ನು ದೆಹಲಿ ಮೂಲದ ಎಕ್ಸ್‌ಎಲ್‌ಎನ್‌ಸಿ ಕಸ್ಟಮೈಸ್ ಮಾಡಿದೆ. ಈ ಕಂಪನಿಯನ್ನು ಇಕ್ವಿಂದರ್ ದೇವಗನ್ ಹಾಗೂ ಅಮರಿಕ್ ಸಿಂಗ್ ದೇವಗನ್ ಎಂಬ ಇಬ್ಬರು ಸಹೋದರರು ನಡೆಸುತ್ತಾರೆ.

ಈ ಬೈಕಿನ ಮಾಡಿಫೈ ಮಾಡಿರುವ ಬಗ್ಗೆ ಮಾತನಾಡಿರುವ ಅವರು, ನಾವು ಲೋ ರೈಡ್ ಬೈಕ್ ನಿರ್ಮಿಸಿದ್ದೇವೆ. ವಿಶಿಷ್ಟವಾದ ಬೈಕ್ ತಯಾರಿಸುವ ಕಾರಣದಿಂದಾಗಿಈ ಬೈಕ್ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಾಡಿಫೈ ಮಾಡಲಾದ ಈ ಬೈಕಿನಲ್ಲಿ ಕಸ್ಟಮ್ ಫ್ಯೂಯಲ್ ಟ್ಯಾಂಕ್, ಕಸ್ಟಮ್ ಬ್ರೇಕ್, ಗೇರ್ ಲಿವರ್, ಕಸ್ಟಮ್ ಫುಟ್ ರೆಸ್ಟ್, ಕಸ್ಟಮ್ ಫ್ರಂಟ್ ಫಾಸೆಟ್, ಬಾರ್-ಎಂಡ್ ಮಿರರ್, ಹ್ಯಾಂಡಲ್‌ಬಾರ್ ರೇಸರ್'ಗಳು, ಹೆಡ್‌ಲೈಟ್, ಎಲ್ಇಡಿ ಟೇಲ್‌ಲೈಟ್ ಹೊಂದಿರುವ ಸೈಡ್-ಮೌಂಟೆಡ್ ನಂಬರ್ ಪ್ಲೇಟ್ ಹಾಗೂ ಹೆಚ್ಚು ಪರ್ಫಾಮೆನ್ಸ್'ಗಾಗಿ ಕೆ ಅಂಡ್ ಎನ್ ಏರ್ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ.

ಇದರ ಜೊತೆಗೆ ಈ ಬೈಕಿನಲ್ಲಿ ಡಯಾಬ್ಲೊ ಟಿಎಂ ರೋಸೊ 2 ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಬೈಕ್ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದರೆ, ಕೆಲವು ಭಾಗಗಳು ಮೆಟಲ್ ಕ್ರೋಮ್ ಬಣ್ಣವನ್ನು ಹೊಂದಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಬೈಕಿನಲ್ಲಿರುವ ಬಹುತೇಕ ಎಲ್ಲಾ ಕೆಲಸಗಳನ್ನು ಕೈಯಿಂದ ಮಾಡಲಾಗಿದೆ. ಮಾಡಿಫೈಗೊಂಡಿರುವ ಈ ಬೈಕಿನಲ್ಲಿ ಉದ್ದವಾದ ಸ್ವಿಂಗಾರ್ಮ್ ಅನ್ನು ಸಹ ಅಳವಡಿಸಲಾಗಿದೆ.

ಇದರಿಂದಾಗಿ ಈ ಬೈಕಿನ ವ್ಹೀಲ್‌ಬೇಸ್ ಹೆಚ್ಚಾಗಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಸಾಕಷ್ಟು ಅಗಲವಿರುವ ವಿಶಾಲವಾದ ಹಿಂಭಾಗದ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಬೈಕಿನ ಎಲ್ಲಾ ಬಾಡಿ ಪ್ಯಾನೆಲ್‌ಗಳನ್ನು ಶಾರ್ಪ್ ಆದ ಬಾಡಿ ಪ್ಯಾನೆಲ್‌ಗಳೊಂದಿಗೆ ಬದಲಿಸಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಟ್ಟಾರೆಯಾಗಿ ಮಾಡಿಫೈಗೊಂಡ ನಂತರ ಈ ರಾಯಲ್ ಎನ್‌ಫೀಲ್ಡ್ ಬೈಕ್ ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ಬೈಕಿನ ಮಾಡಿಫಿಕೇಶನ್ ಭಾರತದಲ್ಲಿಕಾನೂನುಬದ್ಧವಾಗಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.