ಬಿಡುಗಡೆಯಾಗಲಿದೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗುತ್ತಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸಾಂಪ್ರಾದಾಯಿಕ ವಾಹನ ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳ ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳೇ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಚೀನಿ ಮೂಲದ ಸೂಪರ್ ಸೊಕೊ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹಲವು ಪ್ರೀಮಿಯಂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆಗೆ ಸಿದ್ದವಾಗಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ 'ಸೂಪರ್ ಸೊಕೊ' ತನ್ನ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಸೂಪರ್ ಸೊಕೊ ಪಿಸಿಎಕ್ಸ್ ಮಾದರಿಯು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಸೂಪರ್ ಸೊಕೊ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್-ಬ್ಯಾಟರಿ ರೂಪಾಂತರದ ಬೆಲೆಯು ಸರಿಸುಮಾರು ರೂ.3.53 ಲಕ್ಷಗಳಾಗಿದೆ. ಹೆಚ್ಚಿನ ಡ್ಯುಯಲ್ ಬ್ಯಾಟರಿ ರೂಪಾಂತರದ ಬೆಲೆಯು ರೂ.4.61 ಲಕ್ಷಗಳಾಗಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಸೂಪರ್ ಸೊಕೊ ಪಿಸಿಎಕ್ಸ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿದ್ದು, ಸೂಪರ್ ಸೊಕೊ ಬ್ರಿಟನ್ ನಲ್ಲಿ ಅತ್ಯಂತ ಯಶಸ್ವಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಳ್ಳುತ್ತಿದೆ. ಸೂಪರ್ ಸೊಕೊ ಕಂಪನಿಯು ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ನಂತರ ಮತ್ತೊಂದು ಸಿಯು ಮಿನಿ ಎನ್ನುವ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಸ್ಕೂಟರ್ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಸಿದ್ದಪಡಿಸಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಭಾರತದಲ್ಲಿ ಬರ್ಡ್ ಗ್ರೂಪ್ ಜೊತೆಗೂಡಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಲಿರುವ ಕಂಪನಿಯು ಆಸ್ಟ್ರೇಲಿಯಾ ಮೂಲದ ಸ್ಕೂಟರ್ ಕಂಪನಿಯೊಂದರ ಸಹಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಬರ್ಡ್ ಗ್ರೂಪ್ ಜೊತೆ ಆಸ್ಟ್ರೇಲಿಯಾ ವಾಹನ ಮಾದರಿಯಾಗಿ ಭಾರತಕ್ಕೆ ಪ್ರವೇಶ ಪಡೆಯುತ್ತಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಸಿಯು ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬಜೆಟ್ ಬೆಲೆಯಲ್ಲಿ ಖರೀದಿ ಲಭ್ಯವಾಗುವ ಸಾಧ್ಯತೆಗಳಿದ್ದು, ಸಾಮಾನ್ಯ ಇವಿ ಸ್ಕೂಟರ್ ಸರಿಸಮನಾದ ಫೀಚರ್ಸ್‌ಗಳೊಂದಿಗೆ ತೆಗೆದುಹಾಕಬಹುದಾದ ಬ್ಯಾಟರಿ ಪ್ಯಾಕ್ ಮತ್ತು ಕನೆಕ್ಟೆಡ್ ಫೀಚರ್ಸ್ ಹೊಂದಿರಲಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ಹೊಸ್ ಇವಿ ಸ್ಕೂಟರ್‌ನಲ್ಲಿ ಎಲ್ಇಡಿ ಟೈಲ್ ಲೈಟ್ಸ್, ಎಲ್ಇಡಿ ರಿಯರ್ ಟರ್ನ್ ಸಿಗ್ನಲ್ಸ್, ರಿಮೋಟ್ ಕೀಲೆಸ್ ಸ್ಟಾರ್ಟ್, ಮೊನೊಕ್ರೋಮ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 12 ಇಂಚಿನ ಚಕ್ರ ಪಡೆದುಕೊಂಡಿದ್ದು, ಪ್ರತಿ ಚಾರ್ಜ್‌ಗೆ ವಿವಿಧ ರೈಡಿಂಗ್ ಮೋಡ್‌ಗಳೊಂದಿಗೆ 60 ರಿಂದ 70 ಕಿ.ಮೀ ಮೈಲೇಜ್ ಹೊಂದಿರಲಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್, ಅತ್ಯುತ್ತಮ ಫೀಚರ್ಸ್ ಒಳಗೊಂಡ ಸೂಪರ್ ಸೊಕೊ ಇವಿ ಸ್ಕೂಟರ್

ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಸಿದ್ದಗೊಂಡಿರುವ ಹೊಸ ಸ್ಕೂಟರ್ ಮಾದರಿಯು ರೂ. 60 ಸಾವಿರದಿಂದ ರೂ. 70 ಸಾವಿರ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಪ್ರತಿ ಗಂಟೆಗೆ 45 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ನಗರಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತವಾಗಿದೆ.

Most Read Articles

Kannada
English summary
Super Soco Confirmed To Launch CUmini Electric Scooter In India. Read in Kannada.
Story first published: Saturday, March 20, 2021, 23:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X