ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಬಹುತೇಕ ಜನರಿಗೆ ಬೈಕ್ ಖರೀದಿಸಿದ ತಕ್ಷಣ, ಅದನ್ನು ಹೇಗೆ ಮಾಡಿಫೈ ಮಾಡಬೇಕು ಎಂಬುದು ಮನಸ್ಸಿಗೆ ಬರುತ್ತದೆ. ಕೆಲವರು ಬೈಕಿನ ಲುಕ್ ಬದಲಾಯಿಸಲು ಬಯಸಿದರೆ, ಇನ್ನೂ ಕೆಲವರು ಬೈಕ್‌ಗಳಲ್ಲಿ ಕೆಲವು ಹೆಚ್ಚುವರಿ ಫೀಚರ್'ಗಳನ್ನು ಸೇರಿಸಲು ಹಾಗೂ ಬೈಕಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಯಸುತ್ತಾರೆ. ಆದರೆ ಬೈಕ್'ಗಳನ್ನು ಮಾಡಿಫೈ ಮಾಡಲು ಪ್ರಾದೇಶಿಕ ಸಾರಿಗೆ ಕಚೇರಿಯಿಂದ (ಆರ್‌ಟಿ‌ಒ) ಅನುಮೋದನೆ ಪಡೆಯುವ ಅಗತ್ಯವಿರುತ್ತದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಬೈಕುಗಳಲ್ಲಿ ಮಾಡಲಾಗುವ ಯಾವ ಮಾಡಿಫೈಗಳಿಗೆ ಅನುಮತಿ ಪಡೆಯಬೇಕು. ಈ ರೀತಿ ಮಾಡುವ ಮಾಡಿಫೈಗಳಿಗೆ ಆರ್‌ಟಿ‌ಒಗಳಿಂದ ಅನುಮತಿಪಡೆಯುವುದು ಬೇಡ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

2019ರಲ್ಲಿ ಸುಪ್ರೀಂ ಕೋರ್ಟ್ ವಾಹನಗಳನ್ನು ಮಾಡಿಫೈ ಮಾಡುವ ಬಗ್ಗೆ ತೀರ್ಪು ನೀಡಿತ್ತು. ಈ ತೀರ್ಪಿನ ಅನ್ವಯ ಎಲ್ಲಾ ರೀತಿಯ ಬೈಕ್ ಮಾಡಿಫೈಗಳಿಗೆ ಆರ್‌ಟಿ‌ಒಅನುಮತಿ ನೀಡುವುದಿಲ್ಲ. ಒಂದು ವೇಳೆ ಆರ್‌ಟಿ‌ಒ ಅನುಮತಿ ಪಡೆಯದೆ ಬೈಕಿನಲ್ಲಿ ಮಾಡಿಫೈಗಳನ್ನು ಮಾಡಿದರೆ ಆ ವಾಹನ ಸವಾರರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಕೆಲವೊಮ್ಮೆ ಬೈಕ್ ಮಾಡಿಫೈ ಮಾಡುವ ವಾಹನ ಮಾಲೀಕರಿಗೆ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ. ಇನ್ನು ಬೈಕಿನಲ್ಲಿ ಯಾವ ಮಾಡಿಫಿಕೇಶನ್ ಗಳಿಗೆ ಅನುಮತಿ ನೀಡಲಾಗಿದೆ ಎಂಬುದನ್ನು ನೋಡುವುದಾದರೆ, ಬೈಕ್‌ನಲ್ಲಿ ಎಂಜಿನ್ ಬೇಸ್ ಅನ್ನು ಸೇರಿಸುವುದು / ಬದಲಾಯಿಸುವುದು, ಹಿಂಭಾಗದ ಭಾಗವನ್ನು ಕಡಿಮೆ ಮಾಡುವುದು, ಡೆಕಾಲ್‌, ವೈಸರ್‌ ಹಾಗೂ ವಿಂಗ್‌ಲೆಟ್‌ಗಳನ್ನು ಸೇರಿಸುವಂತಹ ಸಣ್ಣ ಮಾಡಿಫೈಗಳಿಗೆ ಅನುಮತಿ ನೀಡಲಾಗಿದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಇಂತಹ ಮಾರ್ಪಾಡುಗಳು ಬೈಕಿನ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡುವುದಿಲ್ಲ. ಈ ಕಾರಣಕ್ಕೆ ಇವುಗಳಿಗೆ ಆರ್‌ಟಿ‌ಒಗಳು ಸುಲಭವಾಗಿ ಅನುಮತಿ ನೀಡುತ್ತವೆ. ಇದರ ಜೊತೆಗೆ ಬೈಕ್ ಮಾಲೀಕರು ತಮ್ಮ ಬೈಕ್‌ನ ಟೈರ್‌ಗಳನ್ನು ಬದಲಾಯಿಸಬಹುದು. ಬೈಕುಗಳ ಟೈರ್ ಬದಲಾಯಿಸಲು ಯಾರ ಅನುಮತಿಯನ್ನು ಪಡೆಯುವ ಅವಶ್ಯಕತೆಯಿಲ್ಲ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಆದರೆ ವಾಸ್ತವವಾಗಿ ಬೈಕಿನ ಟೈರ್‌ಗಳನ್ನು ಅದರ ಮೂಲ ಗಾತ್ರಕ್ಕೆ ಬದಲಾಯಿಸಬೇಕಾಗುತ್ತದೆ. ಸಾಮಾನ್ಯಕ್ಕಿಂತ ಚಿಕ್ಕದಾದ ಅಥವಾ ದೊಡ್ಡ ಗಾತ್ರದ ಟೈರ್‌ಗಳನ್ನು ಅಳವಡಿಸುವುದರಿಂದ ಅಪಘಾತಕ್ಕೆ ಕಾರಣವಾಗಬಹುದು. ಹೀಗಾಗಿ ಇಂತಹ ಟೈರ್ ಮಾರ್ಪಾಡಿಗೆ ಕಾನೂನು ಅವಕಾಶ ನೀಡುವುದಿಲ್ಲ. ಈ ರೀತಿ ಬೈಕ್ ನಲ್ಲಿ ಟೈರ್ ಅಳವಡಿಸುವುದು ಕಾನೂನು ಬಾಹಿರ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಬೈಕಿನ ಎಂಜಿನ್ ಅನ್ನು ಸಹ ಬದಲಾಯಿಸಬಹುದು. ಬೈಕಿನ ಎಂಜಿನ್ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾಗಿದ್ದರೆ, ಅದನ್ನು ಬದಲಾಯಿಸಬಹುದು. ಆದರೆ ಬದಲಾವಣೆಯ ನಂತರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುವುದು ಅವಶ್ಯಕ. ಎಂಜಿನ್ ಬದಲಾಯಿಸುವುದು ಬಹುತೇಕ ಬೈಕ್ ಅನ್ನು ಆರ್‌ಟಿಒದಲ್ಲಿ ಮರು ನೋಂದಣಿ ಮಾಡಿದಂತೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಹೊಸ ಎಂಜಿನ್ ಹೊರಸೂಸುವ ಗರಿಷ್ಠ ಎಕ್ಸಾಸ್ಟ್ ಲೆವೆಲ್ ಹಾಗೂ ಅದು ಹೊರಸೂಸುವ ವಾಯು ಮಾಲಿನ್ಯದ ಪ್ರಮಾಣವು ಮೂಲ ಎಂಜಿನ್‌ನಂತೆಯೇ ಇರಬೇಕು. ಹೀಗಾಗಿ ಅದೇ ಮಾದರಿಯ ಎಂಜಿನ್ ಅಳವಡಿಸುವುದು ಸರಿಯಾದ ಅನುಮತಿಯೊಂದಿಗೆ ಬೈಕ್ ಅನ್ನು ಮರು ಬಳಕೆ ಮಾಡುವ ಏಕೈಕ ಮಾರ್ಗವಾಗಿದೆ. ಯಾವುದೇ ವಾಹನದ ಬಣ್ಣವನ್ನು ಮಾಲೀಕರು ತಮ್ಮ ವಿವೇಚನೆಯಿಂದ ಬದಲಾಯಿಸಬಹುದು ಎಂದು ನ್ಯಾಯಾಲಯವು ಕಳೆದ ವರ್ಷ ತೀರ್ಪು ನೀಡಿತ್ತು.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಆದರೆ ನಿರ್ದಿಷ್ಟ ವ್ಯಕ್ತಿ ಅಥವಾ ನಿರ್ದಿಷ್ಟ ಸಮುದಾಯಕ್ಕೆ ಅವಮಾನ ಮಾಡುವಂತಹ ಬಣ್ಣಗಳನ್ನು ಅಳವಡಿಸುವುದು ಕಾನೂನು ಬಾಹಿರ. ಹೀಗಾಗಿ ಬೈಕಿನ ಬಣ್ಣ ಬದಲಾಯಿಸಿದರೂ ಸಂಬಂಧ ಪಟ್ಟ ಆರ್‌ಟಿ‌ಒಗಳಿಂದ ಸೂಕ್ತ ಅನುಮತಿ ಪಡೆಯುವುದು ಒಳ್ಳೆಯದು.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

2019ರ ಜನವರಿಯಲ್ಲಿ ವಾಹನಗಳನ್ನು ಮಾರ್ಪಡಿಸುವುದು ಕಾನೂನುಬಾಹಿರವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಕಾರುಗಳಲ್ಲಿ ಮಾಡುವ ಎಲ್ಲಾ ಮಾರ್ಪಾಡುಗಳು ಕಾನೂನುಬಾಹಿರವಲ್ಲ. ಕಾನೂನುಬದ್ಧವಾಗಿ ಕಾರುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಅವು ಯಾವುವು ಎಂಬುದನ್ನು ನೋಡುವುದಾದರೆ ಟಯರ್‌ಗಳನ್ನು ಕಾನೂನುಬದ್ಧವಾಗಿ ಅಪ್ ಡೇಟ್ ಮಾಡಬಹುದು. ಆದರೆ ಹೊಸ ಟಯರ್ ಗಳು ತಯಾರಕ ಕಂಪನಿಗಳ ಅವಶ್ಯಕತೆಗಳಿಗೆ ಒಳಪಟ್ಟಿರಬೇಕು. ಹೊಸ ಟಯರ್‌ಗಳು ಅದೇ ವೇಗದ ರೇಟಿಂಗ್ (ಎ) ಅಥವಾ ಸ್ಟಾಕ್ ಟಯರ್‌ಗಳಿಗಿಂತ ಹೆಚ್ಚಿನದನ್ನು ಹೊಂದಿರ ಬೇಕಾಗುತ್ತದೆ. ಹೊಸ ಟಯರ್ ಗಳು ಹೆಚ್ಚು ಅಗಲವನ್ನು ಹೊಂದಿದ್ದರೆ, ಕಾರಿನ ಸೈಡ್ವಾಲ್ ಎತ್ತರವನ್ನು ಕಡಿಮೆ ಮಾಡಬೇಕಾಗುತ್ತದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಕಾರು ಮಾಲೀಕರು ತಮ್ಮ ಇಷ್ಟದ ಬಣ್ಣವನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಬಣ್ಣದ ಮಾರ್ಪಾಡುಗಳಿಗೆ ಆರ್‌ಟಿಒ ಅನುಮೋದನೆ ಪಡೆಯಬೇಕು. ಇದರ ಬಗ್ಗೆ ಕಾರಿನ ನೋಂದಣಿ ಪ್ರಮಾಣಪತ್ರದಲ್ಲಿ ಕಾರಿನ ಬಣ್ಣವನ್ನು ಬದಲಾಯಿಸಲಾಗಿದೆ ಎಂದು ತಿಳಿಸಬೇಕು. ಆದರೆ ಆರ್ಮಿ ಗ್ರೀನ್ ಬಣ್ಣದಲ್ಲಿ ಕಾರುಗಳನ್ನು ಪೇಂಟ್ ಮಾಡುವಂತಿಲ್ಲ. ಈ ಬಣ್ಣವನ್ನು ಮಿಲಿಟರಿ ಬಳಕೆಗೆ ಮಾತ್ರ ಮೀಸಲಿಡಲಾಗಿದೆ.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಕಾರು ಮಾಲೀಕರು ತಮ್ಮ ಕಾರಿಗೆ ಅತ್ಯುತ್ತಮವಾದ ಸಸ್ಪೆಂಷನ್ ಪಡೆಯಬಹುದು. ಇದರಿಂದ ಕಾರು ಪ್ರಯಾಣದ ಅನುಭವ ಹೆಚ್ಚುತ್ತದೆ. ಆ್ಯಂಟಿ ರೋಲ್ ಬಾರ್ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತಿರುವುಗಳಲ್ಲಿ ಕಾರು ತಿರುಗಿಸುವಾಗ ಬಾಡಿ ರೋಲ್‌ನಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಇದರಿಂದ ಆರಾಮದಾಯಕ ಸವಾರಿಯನ್ನು ಪಡೆಯಬಹುದು.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ಕಾರುಗಳಲ್ಲಿ ವಿಶೇಷ ಚೇತನರಿಗೆ ನೆರವಾಗುವ ಮಾರ್ಪಾಡುಗಳನ್ನು ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ವಿಶೇಷ ಚೇತನರಿಗಾಗಿ ಕಾರುಗಳಲ್ಲಿರುವ ಒಆರ್‌ವಿ‌ಎಂ, ವ್ಹೀಲ್‌ಚೇರ್ ಲಿಫ್ಟ್‌, ಆಟೋಮ್ಯಾಟಿಕ್ ಅಥವಾ ಕೈಯಿಂದ ಚಾಲಿತವಾಗುವ ಕ್ಲಚ್, ಆಕ್ಸಲರೇಟರ್, ಬ್ರೇಕ್‌ ಸೇರಿದಂತೆ ಕೆಲವು ಭಾಗಗಳನ್ನು ಮಾರ್ಪಾಡು ಮಾಡಬಹುದು.

ಭಾರತದಲ್ಲಿ ಕಾನೂನುಬದ್ಧವಾಗಿರುವ ಬೈಕ್ ಮಾಡಿಫಿಕೇಶನ್'ಗಳಿವು

ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಕಾರುಗಳನ್ನು ಇನ್ನೂ ಹಲವು ರೀತಿಯಲ್ಲಿ ಮಾರ್ಪಡಿಸಬಹುದು. ಮಾರುತಿ ಸುಜುಕಿ ಆಲ್ಟೊ ಹಾಗೂ ಮಾರುತಿ ಸುಜುಕಿ ಸ್ವಿಫ್ಟ್‌ನಂತಹ ಯಾವುದೇ ಕಾರನ್ನು ವಿಶೇಷ ಚೇತನರಿಗೆ ಸರಿಹೊಂದುವಂತೆ ಮಾರ್ಪಡಿಸಬಹುದು.

Most Read Articles

Kannada
English summary
Things which are legal to modify bikes in india details
Story first published: Saturday, December 25, 2021, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X