ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

100ಸಿಸಿಯಿಂದ 110 ಸಿಸಿಯವರೆಗಿನ ಬೈಕುಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಬೈಕುಗಳನ್ನು ಕೈಗೆಟುಕುವ ಬೆಲೆಯ ಪ್ರಯಾಣಿಕರ ಬೈಕುಗಳೆಂದು ವರ್ಗೀಕರಿಸಲಾಗಿದೆ. ಬೈಕ್ ತಯಾರಕ ಕಂಪನಿಗಳು ಕಾಲ ಕಾಲಕ್ಕೆ ಈ ಬೈಕುಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿವೆ.

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

ಈ ಬೈಕುಗಳನ್ನು ಸ್ಟೈಲಿಶ್ ಹಾಗೂ ಟ್ರೆಂಡಿಯಾಗಿಸುವುದರ ಅವುಗಳಲ್ಲಿ ಕಂಡುಬರುವ ಸುರಕ್ಷತಾ ಫೀಚರ್'ಗಳನ್ನು ಸಹ ಅಪ್ ಡೇಟ್ ಮಾಡಲಾಗಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ 110 ಸಿಸಿ ಬೈಕುಗಳು ಯಾವುವು, ಅವುಗಳಲ್ಲಿರುವ ಸುರಕ್ಷತಾ ಫೀಚರ್'ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

1. ಟಿವಿಎಸ್ ರೆಡಿಯಾನ್

ಟಿವಿಎಸ್ ರೆಡಿಯಾನ್ ಕೈಗೆಟುಕುವ ಬೆಲೆಯ 110 ಸಿಸಿ ಪ್ರಯಾಣಿಕ ಬೈಕ್ ಆಗಿದ್ದು, ಈ ಬೈಕ್ ಭಾರತದಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಬಜಾಜ್ ಸಿಟಿ 100 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ಬೈಕಿನಲ್ಲಿ ಸುರಕ್ಷತಾ ಫೀಚರ್ ಆಗಿ ಡಿಸ್ಕ್ ಬೈಕ್‌ ಅನ್ನು ಬಳಸಲಾಗಿದೆ. ಈ ಬೈಕಿನ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.68,037ಗಳಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

2. ಬಜಾಜ್ ಪ್ಲಾಟಿನಾ 110 ಹೆಚ್-ಗೇರ್

ಬಜಾಜ್ ಪ್ಲಾಟಿನಾ 110 ಕೈಗೆಟುಕುವ ಬೆಲೆಯ ಜನಪ್ರಿಯ ಪ್ರಯಾಣಿಕ ಬೈಕ್ ಆಗಿದೆ. 2019ರಲ್ಲಿ ಈ ಬೈಕ್ ಅನ್ನು ಹೆಚ್-ಗೇರ್ (ಹೆದ್ದಾರಿ-ಗೇರ್) ಮಾದರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಅಸ್ತಿತ್ವದಲ್ಲಿರುವ ನಾಲ್ಕು ಗೇರ್‌ಗಳ ಜೊತೆಗೆ ಹೆಚ್ಚುವರಿಯಾಗಿ ಹೆದ್ದಾರಿ ಗೇರ್ ಅನ್ನು ಸೇರಿಸಲಾಗಿದೆ.

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

ಈ ಬೈಕ್ 5 ಗೇರುಗಳನ್ನು ಹೊಂದಿರುವ ಮೊದಲ 110 ಸಿಸಿ ಬೈಕ್ ಆಗಿದೆ. ಈ ಗೇರ್ ಅನ್ನು ಹೆದ್ದಾರಿಯಲ್ಲಿ ಬೈಕ್ ಚಾಲನೆ ವೇಳೆಯಲ್ಲಿ ಬಳಸಲಾಗುತ್ತದೆ. ಪ್ಲಾಟಿನಾ 110 ಹೆಚ್-ಗೇರ್ ಡಿಸ್ಕ್ ಬ್ರೇಕ್‌ಗಳ ಆಯ್ಕೆಯನ್ನು ಸಹ ಪಡೆದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

3. ಹೀರೋ ಸ್ಪ್ಲೆಂಡರ್ ಐ-ಸ್ಮಾರ್ಟ್

ಹೀರೋ ಸ್ಪ್ಲೆಂಡರ್ ಐ-ಸ್ಮಾರ್ಟ್ ಹೀರೋ ಮೋಟೊಕಾರ್ಪ್ ಕಂಪನಿಯ ಮೊದಲ ಬಿಎಸ್ 6 ಬೈಕ್. ಈ ಬೈಕಿನಲ್ಲಿ ಬಿಎಸ್ 6 ಎಂಜಿನ್‌ ಜೊತೆಗೆ ಹಲವು ಅಪ್ ಡೇಟ್'ಗಳನ್ನು ಮಾಡಲಾಗಿದೆ. ಹೀರೋ ಸ್ಪ್ಲೆಂಡರ್ ಐ-ಸ್ಮಾರ್ಟ್‌ ಬೈಕಿನಲ್ಲಿ ಫ್ರಂಟ್ ಡಿಸ್ಕ್ ಬ್ರೇಕ್ ನೀಡಲಾಗಿದೆ. ಈ ಬೈಕಿನ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.68,850ಗಳಾಗಿದೆ.

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

4. ಹೀರೋ ಪ್ಯಾಶನ್ ಪ್ರೊ

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಜನಪ್ರಿಯ 110 ಸಿಸಿ ಪ್ಯಾಶನ್ ಪ್ರೊ ಬೈಕ್ ಅನ್ನು 2020ರಲ್ಲಿ ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಿತು. ಸಂಚಾರ ದಟ್ಟಣೆಯಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಈ ಬೈಕಿನಲ್ಲಿ ಆಟೊಸೆಲ್ ಹಾಗೂ ಐ 3 ಎಸ್ ನಂತಹ ಫೀಚರ್'ಗಳನ್ನು ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

ಹೀರೋ ಪ್ಯಾಶನ್ ಪ್ರೊ ಆಟೊಸೆಲ್ ಫೀಚರ್ ಹೊಂದಿರುವ ಮೊದಲ 110 ಸಿಸಿ ಬೈಕ್ ಆಗಿದೆ. ಈ ಬೈಕಿನ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.69,600ಗಳಾಗಿದೆ.

ಸುರಕ್ಷತಾ ಫೀಚರ್ ಹೊಂದಿರುವ ಟಾಪ್ 5 - 110 ಸಿಸಿ ಬೈಕುಗಳಿವು

5. ಹೋಂಡಾ ಲಿವೊ

ಹೋಂಡಾ ಲಿವೊ ಬೈಕ್ ಸ್ಟೈಲಿಶ್ ಲುಕ್ ಹಾಗೂ ನಯವಾದ ಎಂಜಿನ್ ಹೊಂದಿದೆ. ಹೋಂಡಾ ಲಿವೊ 110 ಸಿಸಿ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದ್ದು, ಈ ಬೈಕ್ ಅನ್ನು ಬಿಎಸ್ 6 ಎಂಜಿನ್'ನೊಂದಿಗೆ ಬಿಡುಗಡೆಗೊಳಿಸಲಾಗಿದೆ. ಹೋಂಡಾ ಲಿವೊ ಡಿಸ್ಕ್ ಬ್ರೇಕ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.75,748ಗಳಾಗಿದೆ.

Most Read Articles

Kannada
English summary
Top five 110cc bikes having safety features. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X