ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಕರೋನಾ ಎರಡನೇ ಅಲೆಯಿಂದ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟ ಭಾರೀ ಇಳಿಕೆಯನ್ನು ಕಂಡಿದೆ. ಇದರಿಂದ ಗ್ರಾಹಕರನ್ನು ಸೆಳೆಯಲು ಹಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೇಲೆ ಆಕರ್ಷಕ ಆಫರ್ ಗಳನ್ನು ನೀಡುತ್ತಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಇದೀಗ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ನೋ ಕಾಸ್ಟ್ ಇಎಂಐ ಕೊಡುಗೆಯನ್ನು ಘೋಷಿಸಿದೆ. ಗ್ರಾಹಕರು 3 ಅಥವಾ 6 ತಿಂಗಳ ಇಎಂಐ ಅಧಿಕಾರಾವಧಿಯನ್ನು ಆರಿಕೊಳ್ಳಬಹುದಾಗಿದೆ. ಈ ಕೂಡುಗೆ 2021ರ ಜುಲೈ 15ರ ವರೆಗೂ ಲಭ್ಯವಿರುತ್ತದೆ. ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಲಭ್ಯವಿರುತ್ತದೆ. ಆಸಕ್ತ ಗ್ರಾಹಕರು ರೂ.5,000 ಟೋಕನ್ ಮೊತ್ತವನ್ನು ಪಾವತಿಸಿ ಟಿವಿಎಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಈ ಬೈಕನ್ನು ಬುಕ್ಕಿಂಗ್ ಮಾಡಬಹುದು.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 159.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,250 ಆರ್‌ಪಿಎಂನಲ್ಲಿ 17.39 ಬಿಹೆಚ್‌ಪಿ ಮತ್ತು 7,250 ಆರ್‌ಪಿಎಂನಲ್ಲಿ 14.73 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಡಿಸ್ಕ್ ಬ್ರೇಕ್ ರೂಪಾಂತರವು 147 ಕೆಜಿ ತೂಕವಿದ್ದರೆ, ಡ್ರಮ್ ಬ್ರೇಕ್ ರೂಪಾಂತರವು 145 ಕೆಜಿ ತೂಕವನ್ನು ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ವಿನ್ಯಾಸ ಮತ್ತು ಸ್ಟೈಲಿಂಗ್ ವಿಷಯದಲ್ಲಿ, ಈ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು 2019ಅಪ್ ಫ್ರಂಟ್ ಬೂಮರಾಂಗ್ ಆಕಾರದ ಎಲ್ಇಡಿ ಪೊಸಿಷನ್ ಲೈಟ್ಸ್‌ನೊಂದಿಗೆ ಲೋ ಬೀಮ್ ಹೆಡ್‌ಲ್ಯಾಂಪ್ ಮಾದರಿಗಳೇ ಡೇ ಲೈಟ್ ರನ್ನಿಂಗ್ ಲೈಟ್ ಮಾದರಿಯಾಗಿ ಬದಲಾಯಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಈ ಬೈಕಿನಲ್ಲಿ ಡಬಲ್-ಬ್ಯಾರೆಲ್ ಎಕ್ಸಾಸ್ಟ್ ಜೋಡಣೆ ಮಾಡಿದ್ದು, ಇದು ಬೈಕ್ ವಿನ್ಯಾಸದ ಅಂಶವನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಕೆಳಭಾಗದಲ್ಲಿ ಟೈಲ್ ಹಗ್ಗರ್ ಸರಳ ವಿನ್ಯಾಸವನ್ನು ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನಲ್ಲಿ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು, ಇದು ಡಿಸ್ ಪ್ಲೇಯಲ್ಲಿ ಟ್ಯಾಕೋಮೀಟರ್, ಸ್ಪೀಡೋಮೀಟರ್, ಫ್ಯೂಲ್ ಗೇಜ್, ಗೇರ್ ಪೊಸಿಷನ್, ಟೈಮ್ ಇಂಡಿಕೇಟರ್‌ಗಳನ್ನು ಪ್ರದರ್ಶಿಸುತ್ತದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಇನ್ನು ಈ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಶೋವಾ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಮೇಲೆ ಆಕರ್ಷಕ ಆಫರ್

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 270 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 200 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಮಾದರಿಯಾಗಿದೆ.

Most Read Articles

Kannada
English summary
TVS Apache RTR 160 4V Avialable With No Cost EMI Offer. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X