ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಲಾಜಿಸ್ಟಿಕ್ಸ್ ಡೆಲಿವರಿ ಸ್ಟಾರ್ಟ್ಅಪ್ ಜೈಪ್ ಎಲೆಕ್ಟ್ರಿಕ್ ಕಂಪನಿಯು ಇವಿ ವಾಹನ ಬಳಕೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಮುಂಬರುವ ಕೆಲವೇ ವರ್ಷಗಳಲ್ಲಿ ಇವಿ ವಾಹನ ಉದ್ಯಮದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಜೈಪ್ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಕೊನೆಯ ಮೈಲಿ ತನಕದ ಗೂಡ್ಸ್ ವಿತರಣೆಗಾಗಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡ ಮೊದಲ ಡೆಲಿವರಿ ಕಂಪನಿಯಾಗಿದ್ದು, ಇ-ಕಾಮರ್ಸ್ ಕಂಪನಿಗಳಿಗೆ ವ್ಯಾಪಕವಾದ ವಿತರಣಾ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯು ಈಗಾಗಲೇ ಪ್ರಮುಖ ಕಂಪನಿಗಳೊಂದಿಗೆ ವಿವಿಧ ರೇಂಜ್ ಹೊಂದಿರುವ ಇವಿ ವಾಹನಗಳನ್ನು ಬಳಕೆ ಮಾಡುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಬರೋಬ್ಬರಿ 1 ಲಕ್ಷ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಯೋಜನೆಯಲ್ಲಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ದೆಹಲಿ ಮೂಲದ ಜೈಪ್ ಎಲೆಕ್ಟ್ರಿಕ್ ಸ್ಮಾರ್ಟ್ ಇವಿ ಕಂಪನಿಯು ವಿತರಣಾ ವಲಯದಲ್ಲಿನ ಸೇವೆಗಳಿಗಾಗಿ ವಿಶೇಷವಾದ ಹೊಸ ಇವಿ ವಾಹನಗಳ ಉತ್ಪಾದನೆಗೂ ಕೂಡಾ ಚಾಲನೆ ನೀಡಿದ್ದು, ಜೈಪ್ ಕಂಪನಿಯು ಇವಿ ವಾಹನ ಉದ್ಯಮ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆಯಾಗಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಬ್ಯುಸಿನೆಸ್ ಟು ಬ್ಯುಸಿನೆಸ್(ಬಿಟುಬಿ) ಉದ್ದೇಶಗಳಿಗೆ ಹೆಚ್ಚಿನ ಸಂಖ್ಯೆಯ ಇವಿ ವಾಹನಗಳನ್ನು ಒದಗಿಸುತ್ತಿರುವ ಜೈಪ್ ಕಂಪನಿಯು ಪ್ರಮುಖ ಇ-ಕಾರ್ಮಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಇದೀಗ ದೇಶಾದ್ಯಂತ ತನ್ನ ಫ್ಲೀಟ್‌ನಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಹೊರತರುವುದಾಗಿ ಘೋಷಿಸಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಪ್ರಸ್ತುತ ಜೈಪ್ ಎಲೆಕ್ಟ್ರಿಕ್ ಕಂಪನಿಯು ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು, ಜೈಪ್ ಕಂಪನಿಯ ಸೀರಿಸ್ ಎ ಬಂಡವಾಳ ಹೂಡಿಕೆಯಲ್ಲಿ ವಿವಿಧ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡಿವೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಭವಿಷ್ಯದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿರುವ ಜೈಪ್ ಎಲೆಕ್ಟ್ರಿಕ್ ಇವಿ ವಾಹನ ಮಾದರಿಗಳಿಗಾಗಿ ಹೊಸದಾಗಿ ಸುಮಾರು ರೂ. 52 ಕೋಟಿಯಷ್ಟು ಹೂಡಿಕೆಯಾಗಿದ್ದು, ಈ ಮೂಲಕ ಜೈಪ್ ಕಂಪನಿಯ ಮೇಲೆ ಇದುವರೆಗೆ ಸುಮಾರು ರೂ.94 ಕೋಟಿ ಬಂಡವಾಳ ಹೂಡಿಕೆಯಾದಂತಾಗಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಂಪನಿಯು ತನ್ನ ಉದ್ಯಮ ವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಹೊರತರುವ ಸಿದ್ದತೆಯಲ್ಲಿದ್ದು, 2022ರಲ್ಲಿ ಜೈಪ್ ಆದಾಯವು 5 ಪಟ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಇ-ಕಾಮರ್ಸ್ ಕಂಪನಿಗಳ ಸರಕಗಳನ್ನು ಗ್ರಾಹಕರಿಗೆ ತಲುಪಿಸಲು ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಕಂಪನಿಯು ಕೊನೆಯ ಹಂತದ ಮೈಲಿ ತನಕ ಸೇವೆಗಳನ್ನು ನೀಡಲಿದ್ದು, ಹೊಸ ಬಂಡವಾಳ ಹೂಡಿಕೆಯು ಉದ್ಯಮ ವಿಸ್ತರಣೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಜೈಪ್ ಕಂಪನಿಯು ಹೊಸ ಸ್ಕೂಟರ್ ಮಾದರಿಗಳನ್ನು ವಿಶೇಷವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, 2017 ರಲ್ಲಿ ಆರಂಭವಾದ ಜೈಪ್ ಕಂಪನಿಯನ್ನು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್‌ವಾಲ್ ಎಂಬುವವರು ಸ್ಥಾಪನೆ ಮಾಡಿದರು.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಆರಂಭದಲ್ಲಿ ಕಡಿಮೆ ಬಂಡವಾಳದೊಂದಿಗೆ ಆರಂಭವಾದ ಜೈಪ್ ಕಂಪನಿಯು ಇದೀಗ ಸುಮಾರು ರೂ. 94 ಕೋಟಿಯಷ್ಟು ಬಂಡವಾಳ ಪಡೆದುಕೊಂಡ ಹೊಸ ಇವಿ ಸ್ಕೂಟರ್ ಉದ್ಯಮ ಕಂಪನಿಯಾಗಿ ಹೊರಹೊಮ್ಮಿದ್ದು, ಎ ಸೀರಿಸ್‌ನಲ್ಲಿ ಮಾರ್ಕ್ಯೂ ಇಕ್ವಿಟಿ, ನಾನಾವತಿ ಫ್ಯಾಮಿಲಿ ಆಫೀಸ್, ವಿ ಫೌಂಡರ್ ಸರ್ಕಲ್, ರಿಸೋ ಕ್ಯಾಪಿಟಲ್, ಧೋಲಾಕಿಯಾ ವೆಂಚರ್ಸ್, ಐಎಎನ್ ಫಂಡ್, ವೇರ್‌ಹೌಸ್ ನೌ ಸಂಸ್ಥೆಯ ತರುಣ್ ಸರಾಫ್, ಎಡಬ್ಲ್ಯುಎಲ್ ಲಾಜಿಸ್ಟಿಕ್ಸ್‌ನ ರಾಹುಲ್ ಖೇರಾ ಮತ್ತು ಉದ್ಯಮಿಗಳಾದ ಅರ್ಜುನ್ ಸೇಠ್ ಮತ್ತು ಮಾರ್ಕ್ ಜೋಸೆಫ್ ಜೈಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಬ್ಯುಸಿನೆಸ್ ಟು ಬ್ಯುಸಿನೆಸ್ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಪೆಟ್ರೋಲ್ ಸ್ಕೂಟರ್‌ಗಳ ನಿರ್ವಹಣಾ ವೆಚ್ಚವು ಕಳೆದ ಕೆಲ ತಿಂಗಳಿನಲ್ಲಿ ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಜೈಪ್ ಇವಿ ಕಂಪನಿಯು ಉದ್ಯಮ ವ್ಯವಹಾರಗಳಿಗೆ ಪೂರಕವಾಗಿ ಹೊಸ ವಾಣಿಜ್ಯ ಬಳಕೆಯ ಇವಿ ಸ್ಕೂಟರ್ ಒಂದನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಜೈಪ್ ಕಂಪನಿಯು ವಿವಿಧ ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗೂಡ್ಸ್ ಡೆಲಿವರಿಗಾಗಿ ಸಂಪೂರ್ಣವಾಗಿ ಎಲೆಕ್ಟಿಕ್ ವಾಹನಗಳನ್ನು ಮಾತ್ರ ಬಳಕೆ ಮಾಡುತ್ತಿದೆ. ಆರಂಭದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದ ಜೈಪ್ ಕಂಪನಿಯು ಇದೀಗ ತನ್ನದೆ ಆದ ವಾಹನ ಉತ್ಪಾದನಾ ವಿಭಾಗವನ್ನು ತೆರೆದಿದ್ದು, ಡೆಲಿವರಿ ಉದ್ದೇಶಗಳು ಮತ್ತು ಬೇಡಿಕೆ ಅನುಸಾರವಾಗಿ ಹೊಸ ಇವಿ ಸ್ಕೂಟರ್ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಜೈಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸಂಪೂರ್ಣವಾಗಿ ವಾಣಿಜ್ಯ ಬಳಕೆಯ ಸ್ಕೂಟರ್ ಮಾದರಿಯಾಗಿದ್ದು, ಕೆಟರಿಂಗ್, ಸಿಲಿಂಡರ್ ಸಾಗಾಟ, ಇ-ಕಾರ್ಮಸ್ ಗೂಡ್ಸ್ ಸೇರಿದಂತೆ ವಿವಿಧ ಮಾದರಿಯ ಸಣ್ಣ ಪ್ರಮಾಣದ ಸರಕು ಸಾಗಾಣಿಕೆ ಅನುಕೂಲಕವಾಗಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

40 ಎಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಗರಿಷ್ಠ 250 ಕೆ.ಜಿ ಲೋಡಿಂಗ್ ಸಾಮರ್ಥ್ಯ ಹೊಂದಿದೆ.ಜೊತೆಗೆ ಹೊಸ ಸ್ಕೂಟರಿನಲ್ಲಿ ಕಂಪನಿಯು ಹೆಚ್ಚುವರಿ ಬ್ಯಾಟರಿ ಪ್ಯಾಕ್ ನೀಡಿದ್ದು, ಒಂದು ಬ್ಯಾಟರಿ ಕಾರ್ಯನಿರ್ವಹಣೆಯಲ್ಲಿರುವಾಗ ಮತ್ತೊಂದು ಬ್ಯಾಟರಿಯನ್ನು ಪ್ಯಾಕ್ ಬ್ಯಾಕ್ಅಪ್ ಆಗಿ ಬಳಕೆ ಮಾಡಬಹುದಾಗಿದೆ.

ಡೆಲಿವರಿ ವಿಭಾಗಕ್ಕೆ ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಇವಿ ಅಳವಡಿಸಿಕೊಳ್ಳಲಿದೆ ಜೈಪ್ ಎಲೆಕ್ಟ್ರಿಕ್

ಮೆಟಲ್ ಬಾಡಿ ಪ್ಯಾನೆಲ್ ಹೊಂದಿರುವ ಹೊಸ ಇವಿ ಸ್ಕೂಟರ್‌ನಲ್ಲಿ ಆರ್ಟಿಫಿಷಲ್ ಟೆಕ್ನಾಲಜಿ ಮತ್ತು ವೆಹಿಕಲ್ ಟ್ರ್ಯಾಕ್ ಸೌಲಭ್ಯಕ್ಕಾಗಿ ಡಿಜಿಟಲ್ ಪ್ಯಾನೆಲ್ ಜೋಡಿಸಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಲಗೇಜ್ ರಾಕ್ ಜೋಡಣೆ ಆಧಾರದ ಮೇಲೆ ಸ್ಕೂಟರ್ ಬೆಲೆಯು ಆರಂಭಿಕವಾಗಿ ರೂ.59 ಸಾವಿರ ನಿಗದಿಪಡಿಸಲಾಗಿದೆ.

Most Read Articles

Kannada
English summary
Zypp electric plans to deploy 100k evs in 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X