ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಭಾರತದಲ್ಲಿ ಕಾರುಗಳಿಗಿಂತ ದ್ವಿಚಕ್ರ ವಾಹನಗಳನ್ನು ಹೆಚ್ಚು ಬಳಸುತ್ತಾರೆ. ಕಳೆದ ಏಪ್ರಿಲ್ ನಲ್ಲಿ ಭಾರತದಲ್ಲಿ ಮಾರಾಟವಾದ ಟಾಪ್ 10 ದ್ವಿಚಕ್ರ ವಾಹನಗಳ ವರದಿ ಇದೀಗ ಬಿಡುಗಡೆಯಾಗಿದೆ. ಈ ಸುದ್ದಿಯಲ್ಲಿ ಕಳೆದ ತಿಂಗಳು ಯಾವ ಬೈಕ್ ಹೆಚ್ಚು ಮಾರಾಟವಾಗಿದೆ. ಯಾವ ಕಂಪನಿ ಮಾರಾಟದಲ್ಲಿ ಕುಸಿತ ಕಂಡಿದೆ? ಎಂಬುದನ್ನು ವಿವರವಾಗಿ ನೋಡೋಣ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಕಳೆದ ಏಪ್ರಿಲ್ ನಲ್ಲಿ ಭಾರತದಲ್ಲಿ ಒಟ್ಟು 8,54,056 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಇದು ಏಪ್ರಿಲ್ 2021 ರಲ್ಲಿ ಮಾರಾಟವಾದ ಒಟ್ಟು 6,84,079 ವಾಹನಗಳಿಗಿಂತ ಹೆಚ್ಚಾಗಿದ್ದು, ಈ ವರ್ಷ ಹೆಚ್ಚುವರಿಯಾಗಿ 1,69,977 ವಾಹನಗಳು ಮಾರಾಟವಾಗಿವೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಕಳೆದ ವರ್ಷಕ್ಕಿಂತ ಈ ವರ್ಷ ಬೈಕ್‌ಗಳ ಮಾರಾಟ ಹೆಚ್ಚಾಗಿದೆ. ದ್ವಿಚಕ್ರ ವಾಹನಗಳಾದ ಬಜಾಜ್ ಪಲ್ಸರ್ ಮತ್ತು ಸುಜುಕಿ ಆಕ್ಸೆಸ್ ಮಾತ್ರ ಮಾರಾಟದಲ್ಲಿ ಕುಸಿತ ಕಂಡಿವೆ. ಈ ಪಟ್ಟಿಯ ಪ್ರಕಾರ ಬೈಕ್ ಮತ್ತು ಸ್ಕೂಟರ್ ಎರಡನ್ನೂ ಪರಿಗಣಿಸಲಾಗಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಕಳೆದ ತಿಂಗಳು ಹೀರೋ ಸ್ಪ್ಲೆಂಡರ್ ಬೈಕ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿತ್ತು. ಕಳೆದ ತಿಂಗಳೊಂದರಲ್ಲೇ ಒಟ್ಟು 2,34,084 ಬೈಕ್‌ಗಳು ಮಾರಾಟವಾಗಿವೆ. ಇದು ಏಪ್ರಿಲ್ 2021 ರಲ್ಲಿ ಮಾರಾಟವಾದ 1,93,508 ಅಂಕಿ ಅಂಶಗಳಿಗಿಂತ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ 40,577 ಬೈಕ್‌ಗಳ ಮಾರಾಟ ಗುರಿ ತಲುಪಿದೆ. ಒಟ್ಟಾರೆ ಬೈಕ್ ಮಾರುಕಟ್ಟೆಯಲ್ಲಿ ಈ ಬೈಕ್ 27.41 ಮಾರುಕಟ್ಟೆ ಪಾಲನ್ನು ಹೊಂದಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಈ ಪಟ್ಟಿಯಲ್ಲಿ ಹೋಂಡಾ ಆಕ್ಟಿವಾ ಎರಡನೇ ಸ್ಥಾನದಲ್ಲಿದೆ. ಒಟ್ಟು 1,63,357 ಸ್ಕೂಟರ್‌ಗಳು ಮಾರಾಟವಾಗಿವೆ. ಇದು 2021 ರಲ್ಲಿ ಮಾರಾಟವಾದ 1,09,678 ಸ್ಕೂಟರ್‌ಗಳಿಂದ ಹೆಚ್ಚಾಗಿದೆ. ಅದೇ ವರ್ಷದಲ್ಲಿ, ಮಾರಾಟವು ಶೇ 48.94 ರಷ್ಟು ಹೆಚ್ಚಾಗಿದೆ. ಈ ಸ್ಕೂಟರ್ ಮಾರುಕಟ್ಟೆಯಲ್ಲಿ ಶೇಕಡಾ 19.13 ಪಾಲನ್ನು ಹೊಂದಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಮೂರನೇ ಸ್ಥಾನದಲ್ಲಿ ಹೋಂಡಾದ ಸಿಬಿ ಶೈನ್ ಬೈಕ್ ಇದೆ. ಒಟ್ಟು 1,05,413 ಬೈಕ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಕೇವಲ 79,416 ಬೈಕ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಶೇ 32.74 ರಷ್ಟು ಬೆಳವಣಿಗೆ ಕಂಡಿದೆ. ನಂತರದ ಸ್ಥಾನದಲ್ಲಿ Hero ನ HF ಡಿಲಕ್ಸ್ ಇದ್ದು, ಒಟ್ಟು 1,00,601 ಬೈಕ್‌ಗಳನ್ನು ಮಾರಾಟ ಮಾಡಿದೆ. ಈ ಬೈಕ್ ಕಳೆದ ವರ್ಷದ ಏಪ್ರಿಲ್ ಮಾರಾಟಕ್ಕಿಂತ ಶೇಕಡಾ 41.11 ಬೆಳವಣಿಗೆಯನ್ನು ಕಂಡಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಟಿವಿಎಸ್ ಜೂಪಿಟರ್ ಸ್ಕೂಟರ್ ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಒಟ್ಟು 60,957 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಕೇವಲ 35,387 ಸ್ಕೂಟರ್‌ಗಳು ಮಾರಾಟವಾಗಿತ್ತು. ಅದೇ ವರ್ಷದಲ್ಲಿ ಮಾರಾಟವು ಶೇಕಡಾ 138.39 ಬೆಳವಣಿಗೆಯಾಗಿದೆ. ಇದು ಟಾಪ್ 10 ಪಟ್ಟಿಯಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ಸ್ಕೂಟರ್ ಆಗಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಮುಂದೆ ಬಜಾಜ್ ನ ಪಲ್ಸರ್ ಬೈಕ್. ಕಳೆದ ಏಪ್ರಿಲ್ ನಲ್ಲಿ ಒಟ್ಟು 46,040 ಬೈಕ್ ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಒಟ್ಟು 66,586 ಬೈಕ್ ಗಳು ಮಾರಾಟವಾಗಿದ್ದವು. ಪ್ರಸ್ತುತ ಮಾರಾಟವು ಶೇಕಡಾ 30.86 ಕಡಿಮೆಯಾಗಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಅದೇ ಸಮಯದಲ್ಲಿ ಮುಂದಿನ ಸಾಲಿನಲ್ಲಿ ಕಂಪನಿಯ ಪ್ಲಾಟಿನಂ ಬೈಕ್ ಇದೆ. ಇದು ಕಳೆದ ತಿಂಗಳು ಒಟ್ಟು 39,316 ಬೈಕ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 35,467 ಬೈಕ್‌ಗಳು ಮಾರಾಟವಾಗಿದ್ದವು. ಈ ಮೂಲಕ ಶೇ10.85 ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

TVS XL ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ. ಏಪ್ರಿಲ್‌ನಲ್ಲಿ ಒಟ್ಟು 38,780 ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿದ್ದು, ಕಳೆದ ವರ್ಷ ಏಪ್ರಿಲ್ ನಲ್ಲಿ 25,977 ವಾಹನಗಳ ಮಾರಾಟಕ್ಕೆ ಹೋಲಿಸಿಕೊಂಡರೆ ಶೇ.49.29ರಷ್ಟು ಹೆಚ್ಚಳವಾಗಿದೆ. ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ಸುಜುಕಿ ಆಕ್ಸಸ್ ಸ್ಕೂಟರ್ ಏಪ್ರಿಲ್‌ನಲ್ಲಿ 32,932 ಸ್ಕೂಟರ್‌ಗಳನ್ನು ಮಾತ್ರ ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ 53,285 ಮಾರಾಟ ಮಾಡಿತ್ತು. ಈ ಮೂಲಕ ಶೇ 38.20 ರಷ್ಟು ಇಳಿಕೆ ಕಂಡಿದೆ.

ಏಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ ವರದಿ: ಅಗ್ರ ಸ್ಥಾನದಲ್ಲಿದೆ ಹೀರೋ ಸ್ಪ್ಲೆಂಡರ್

ಪಟ್ಟಿಯ ಕೆಳಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಬೈಕ್ ಇದೆ. ಕಳೆದ ಏಪ್ರಿಲ್ ನಲ್ಲಿ ಒಟ್ಟು 32,575 ಬೈಕ್ ಗಳು ಮಾರಾಟವಾಗಿವೆ. ಇದು ಏಪ್ರಿಲ್ 2021 ರಲ್ಲಿ 23,298 ಮಾರಾಟವಾಗಿತ್ತು. ಸದ್ಯ ಶೇ.39.82ರಷ್ಟು ಬೆಳವಣಿಗೆಯಾಗಿದೆ. ಒಟ್ಟಿನಲ್ಲಿ ಕಳೆದ ಏಪ್ರಿಲ್ ನಲ್ಲಿ ವಾಹನ ತಯಾರಕರಿಗೆ ಜಾಕ್ ಪಾಟ್ ಆಗಿತ್ತು.

Most Read Articles

Kannada
English summary
2022 april two wheeler sales report over all sale hiked know full details
Story first published: Wednesday, May 18, 2022, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X