Just In
- 8 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 11 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 1 hr ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Sports
ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Movies
ಹೊಸ ಬಿಗ್ಬಾಸ್ಗೆ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಇಷ್ಟೋಂದಾ?
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- News
ಕೃಷ್ಣ ಜನ್ಮಾಷ್ಟಮಿ: ಮುಂಬೈನಲ್ಲಿ ವಿಶ್ವ ದಾಖಲೆ ಬರೆದ ಅತಿ ಎತ್ತರದ ಮಾನವ ಪಿರಮಿಡ್
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಪ್ರತಿಸ್ಪರ್ಧಿಯಾಗಿ ಬಿಡುಗಡೆಗೊಂಡ ಕೀವೇ ಕೆ-ಲೈಟ್ 250ವಿ ಕ್ರೂಸರ್ ವಿಶೇಷತೆಗಳು
ಕೀವೇ ಹಂಗೇರಿಯನ್ ಮೋಟಾರ್‌ಸೈಕಲ್ ತಯಾರಕರಾಗಿದ್ದು, ಇದು ಪ್ರಸ್ತುತ ಚೀನಾದ ಮೋಟಾರ್‌ಸೈಕಲ್ ತಯಾರಕರಾದ ಕ್ಯೂಜೆ ಮೋಟಾರ್ಸ್ ಜೊತೆಗೆ ಬೆನೆಲ್ಲಿಯ ಒಡೆತನದಲ್ಲಿದೆ. ಕೀವೇ ಬ್ರ್ಯಾಂಡ್ ಜಾಗತಿಕ ಅಸ್ತಿತ್ವವನ್ನು ಹೊಂದಿರುವ ಬ್ರ್ಯಾಂಡ್ ಆಗಿದೆ. ಅದರ ಸ್ಕೂಟರ್‌ಗಳು ಯುರೋಪ್ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಗಿದೆ.

ಮೂರು ಹೊಸ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಇತ್ತೀಚೆಗೆ ಕೀವೇ ಕಂಪನಿಯು ಭಾರತದಲ್ಲಿ ಕೆ-ಲೈಟ್ 250ವಿ ಕ್ರೂಸರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.89 ಲಕ್ಷಗಳಾಗಿದೆ. ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ ಮ್ಯಾಟ್ ಬ್ಲೂ, ಮ್ಯಾಟ್ ಡಾರ್ಕ್ ಗ್ರೇ, ಮ್ಯಾಟ್ ಬ್ಲ್ಯಾಕ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲಿದೆ.

ಬೆಲೆ
ಕೀವೇ ಕೆ-ಲೈಟ್ 250ವಿ ಕ್ರೂಸರ್ ಮ್ಯಾಟ್ ಬ್ಲೂ ಶೇಡ್ ಆವೃತ್ತಿಯ ಬೆಲೆ ರೂ.2.89 ಲಕ್ಷಗಳಾಗಿದ್ದು, ಮ್ಯಾಟ್ ಡಾರ್ಕ್ ಗ್ರೇ ಆವೃತ್ತಿಯ ಬೆಲೆಯು ರೂ,2.99 ಲಕ್ಷಗಳಾದರೆ, ಮ್ಯಾಟ್ ಬ್ಲಾಕ್ ಆವೃತ್ತಿಯ ಬೆಲೆಯು ರೂ,3.09 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ 2 ವರ್ಷಗಳ, ಅನಿಯಮಿತ ಕಿಲೋಮೀಟರ್ ವಾರಂಟಿ ನೀಡುತ್ತದೆ.

ಎಂಜಿನ್
ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ 249ಸಿಸಿ, ಏರ್ ಕೂಲ್ಡ್ ವಿ-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಪ್ರತಿ ಸಿಲಿಂಡರ್‌ಗೆ 4 ವಾಲ್ವ್‌ಗಳನ್ನು ಹೊಂದಿದೆ. ಇದು ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ 8,500 ಆರ್‌ಪಿಎಂನಲ್ಲಿ 18.4 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 19 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಅದು ಬೆಲ್ಟ್ ಡ್ರೈವ್ ಮೂಲಕ ಹಿಂದಿನ ವ್ಹೀಲ್ ಪವರ್ ಅನ್ನು ಕಳುಹಿಸುತ್ತದೆ. ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ 2,230 ಎಂಎಂ ಉದ್ದ, 920 ಎಂಎಂ ಅಗಲ ಮತ್ತು 1,090 ಎಂಎಂ ಎತ್ತರವನ್ನು ಹೊಂದಿದೆ. ಈ ಕ್ರೂಸರ್ 1,530 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಈ ಹೊಸ ಕೀವೇ ಕೆ-ಲೈಟ್ 250ವಿ ಕ್ರೂಸರ್ ಫುಲ್ ಟ್ಯಾಂಕ್ 20 ಲೀಟರ್ ಪೆಟ್ರೋಲ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ 179 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ.

ಸಸ್ಪೆಂಕ್ಷನ್ ಸೆಟಪ್
ಹೊಸ ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಇನ್ನು ಕ್ರೂಸರ್ ಮೋಟಾರ್‌ಸೈಕಲ್ 120/80-16 (ಮುಂಭಾಗ) ಮತ್ತು 140/70-16 (ಹಿಂಭಾಗ) ಟೈರ್‌ಗಳೊಂದಿಗೆ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಇನ್ನು ಇದರೊಂದಿಗೆ ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ, ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ವಿನ್ಯಾಸ
ಕೀವೇ ಕೆ-ಲೈಟ್ 250ವಿ ಮಾನ್ಯ ಕ್ರೂಸರ್ ಮೋಟಾರ್‌ಸೈಕಲ್ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ DRL ಜೊತೆಗೆ ವೃತ್ತಾಕಾರದ ಎಲ್ಇಡಿ ಹೆಡ್‌ಲೈಟ್ ಅನ್ನು ಹೊಂದಿದೆ. ಸ್ಟೆಪ್ಡ್ ಸೀಟ್ ಪಿಲಿಯನ್ ರೈಡರ್‌ಗೆ ಬ್ಯಾಕ್ ರೆಸ್ಟ್ ಅನ್ನು ಹೊಂದಿದೆ ಮತ್ತು ಟೈಲ್‌ಲೈಟ್ ಸಹ ಎಲ್‌ಇಡಿ ಯುನಿಟ್ ಅನ್ನು ಹೊಂದಿದೆ.

ಫೀಚರ್ಸ್
ಕೀವೇ ಕೆ-ಲೈಟ್ 250ವಿ ಇ-ಸಿಮ್ ಅನ್ನು ಹೊಂದಿದೆ ಮತ್ತು ಮಾರ್ಕ್‌ನ ಸ್ಮಾರ್ಟ್-ಟೆಕ್ ಪರಿಹಾರ - ಕೀವೇ ಕನೆಕ್ಟ್ - ಇದು ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಎಂಜಿನ್ ಕಟ್-ಆಫ್, ಜಿಯೋ-ಫೆನ್ಸಿಂಗ್ ಮತ್ತು ಪ್ಯಾನಿಕ್ ಬಟನ್‌ನಂತಹ ವೈಶಿಷ್ಟ್ಯಗಳನ್ನು ಸೇರಿಸುತ್ತದೆ.

ಈ ಬೈಕ್ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಜಬಾಖ್ ಅವರು ಮಾತನಾಡಿ, ಮಾರುಕಟ್ಟೆಯನ್ನು ಪರಿಗಣಿಸಿ ಆಕರ್ಷಕ ಬೆಲೆಯಲ್ಲಿ ಸ್ನಾಯು ಮತ್ತು ಒರಟಾದ ವಿ-ಟ್ವಿನ್ ಕೆ-ಲೈಟ್ 250ವಿ ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಡೈನಾಮಿಕ್ಸ್ ಮತ್ತು ಗ್ರಾಹಕರ ಆದ್ಯತೆಗಳು. ಕೆ-ಲೈಟ್ 250ವಿ ಸಾಟಿಯಿಲ್ಲದ ದಕ್ಷತಾಶಾಸ್ತ್ರ, ಉನ್ನತ ಕಾರ್ಯನಿರ್ವಹಣೆ, ನವೀನ ತಂತ್ರಜ್ಞಾನ ಮತ್ತು ರಾಜಿಯಾಗದ ಗುಣಮಟ್ಟದೊಂದಿಗೆ ಬರುತ್ತದೆ ಮತ್ತು ಇದು ನಮ್ಮ ಭಾರತೀಯ ಮೋಟಾರಿಂಗ್ ಉತ್ಸಾಹಿಗಳೊಂದಿಗೆ ಕೀವೇ ಅನನ್ಯ ಗುರುತನ್ನು ಸ್ಥಾಪಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಮೂರು ಹೊಸ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ, ಹಂಗೇರಿಯನ್ ತಯಾರಕ ಕೀವೇ ಸಿಕ್ಸ್ಟೀಸ್ 300ಐ ಮತ್ತು ವಿಯೆಸ್ಟೆ 300 ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಸಿಕ್ಸ್ಟೀಸ್ 300ಐ ಸ್ಕೂಟರ್ ಬಗ್ಗೆ ಹೇಳುವುದಾದರೆ, 1960 ರ ದಶಕದ ಅಬ್ಬರದ ಯುರೋಪಿಯನ್ ಸ್ಕೂಟರ್‌ಗಳಿಂದ ಸ್ಫೂರ್ತಿ ಪಡೆದಿದೆ. ಇದು ಅದರ ಸುತ್ತಿನ ಹೆಡ್‌ಲ್ಯಾಂಪ್‌ಗಳು, ರೌಂಡ್ ಮಿರರ್‌ಗಳು, ಕ್ಲಾಸಿಕ್ ಲುಕಿಂಗ್ ಬ್ಯಾಡ್ಜಿಂಗ್, ರೆಟ್ರೊ ಗ್ರಾಬ್ ಹ್ಯಾಂಡಲ್‌ಗಳು ಮತ್ತು 1960 ರ ಫ್ಲೇರ್‌ನೊಂದಿಗೆ ದೊಡ್ಡ ಸ್ಪ್ಲಿಟ್ ಸೀಟ್‌ಗಳೊಂದಿಗೆ ಕ್ಲಾಸಿಕ್ ವಿನ್ಯಾಸ ಭಾಷೆಯನ್ನು ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಕೀವೇ ಕೆ-ಲೈಟ್ 250ವಿ ಬೈಕ್ ಹಲವಾರು ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಆಗಿದ್ದು, ಇದು ರಾಯಲ್ ಎನ್‌ಫೀಲ್ಡ್ ಅನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ. ಕೀವೇ ಕೆ-ಲೈಟ್ 250ವಿ ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.