ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಹೀರೊ ಎಲೆಕ್ಟ್ರಿಕ್, ಒಕಿನಾವಾ ಆಟೋಟೆಕ್, ಈಥರ್ ಎನರ್ಜಿ, ಆಂಪಿಯರ್ ವೆಹಿಕಲ್ಸ್‌ ಮತ್ತು ಪವರ್ ಇವಿಗಳ ಬಲವಾದ ಉಪಸ್ಥಿತಿಯಿಂದಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳತ್ತ ಗ್ರಾಹಕರ ವಲಸೆ ಹೆಚ್ಚಾಗುತ್ತಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಇಂಧನ ಬೆಲೆಗಳ ನಿರಂತರ ಏರಿಕೆಯಿಂದ ಪೆಟ್ರೋಲ್ ಬೆಲೆ 100ರೂ. ದಾಟಿರುವುದು ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗಲು ಕಾರಣವಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಇದರ ಪರಿಣಾಮ ಹೆಚ್ಚಾಗಿದ್ದು, ಪ್ರತಿ ತಿಂಗಳ ಮಾರಾಟ ಪಟ್ಟಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯೆ ಇದಕ್ಕೆ ಉದಾಹರಣೆಯಾಗಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಇದೇ ಸಮಯವನ್ನು ಬಳಸಿಕೊಳ್ಳುತ್ತಿರುವ ಹಲವು ಇವಿ ಕಂಪನಿಗಳು ತಮ್ಮ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈ ಹೆಚ್ಚಿದ ಬೇಡಿಕೆಯ ಹಿನ್ನೆಲೆಯಲ್ಲಿ ಹೀರೋ ಕಂಪನಿ ಕೂಡ ತನ್ನ ಎಲೆಕ್ಟ್ರಿಕ್ ಮಾದರಿಯಾದ ಎಡ್ಡಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಇವಿ ಹಳದಿ ಮತ್ತು ತಿಳಿ ನೀಲಿ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಈ ಹೀರೊ ಎಲೆಕ್ಟ್ರಿಕ್ ಎಡ್ಡಿ ಕಡಿಮೆ ದೂರದ ಪ್ರಯಾಣಗಳಿಗೆ ಸೂಕ್ತವಾದ ಸ್ಟೈಲಿಶ್ ಸ್ಕೂಟರ್ ಎಂದೇ ಹೇಳಬಹುದು. ಹೊಸ ಇವಿ ಮಾದರಿಯು ವಿವಿಧ ವೈಶಿಷ್ಟ್ಯಗಳು, ತಂತ್ರಜ್ಞಾನ ಮತ್ತು ಸೌಲಭ್ಯಗಳೊಂದಿಗೆ ಬರುತ್ತಿದೆ. ಇದನ್ನು ಬಳಸಲು ಯಾವುದೇ ನೋಂದಣಿ ಅಥವಾ ಪರವಾನಗಿ ಕೂಡ ಅಗತ್ಯವಿಲ್ಲ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಜೊತೆಗೆ ಹೀರೊ ಎಲೆಕ್ಟ್ರಿಕ್ ಎಡ್ಡಿ ಇ-ಸ್ಕೂಟರ್ ಫೈಂಡ್-ಮೈ-ಬೈಕ್, ಇ-ಲಾಕ್, ರಿವರ್ಸ್ ಮೋಡ್, ಫಾಲೋ ಮಿ ಹೆಡ್ ಲ್ಯಾಂಪ್‌ಗಳು ಮತ್ತು ದೊಡ್ಡ ಬೂಟ್ ಎಂಬ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಡ್ಡಿ ಮಾಲೀನ್ಯ ಮುಕ್ತ ಪರಿಸರಕ್ಕೆ ಹೇಳಿಮಾಡಿಸಿದ ಸ್ಕೂಟರ್‌. ಸಾರ್ವಜನಿಕರು ಇಂಧನಕ್ಕಾಗುವ ಖರ್ಚು ಮತ್ತು ಪರಿಸರವನ್ನು ರಕ್ಷಿಸಲು ಈ ಮಾದರಿಯನ್ನು ಪ್ರಸ್ತುತ ಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಎಡ್ಡಿ ಇ-ಸ್ಕೂಟರ್ ಕಾಫಿ ಶಾಪ್‌ಗಳು, ಜಿಮ್ ಮತ್ತು ಹತ್ತಿರದ ಅಂಗಡಿಗಳಿಗೆ ಬಳಸಲು ಸೂಕ್ತವಾಗಿದೆ. ಇದು ಸವಾರನ ಆರಾಮ ಮತ್ತು ಸುರಕ್ಷತೆ, ನಿರಂತರ ರೈಡ್ ಅನುಭವವನ್ನು ನೀಡುತ್ತದೆ. ಹೀರೊ ಎಡ್ಡಿ ಉತ್ತಮ ಆನ್-ರೋಡ್ ಉಪಸ್ಥಿತಿಯನ್ನು ಹೊಂದಿದೆ, ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ಸ್ಟೈಲಿಶ್ ನೋಟವನ್ನು ಹೊಂದಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ನಿರಂತರ ಪ್ರಯಾಣದ ಅನುಭವದ ಜೊತೆಗೆ ಮಾಲಿನ್ಯ ಮುಕ್ತ ಭವಿಷ್ಯಕ್ಕೆ ಕೊಡುಗೆ ನೀಡಲು ವ್ಯಕ್ತಿಯ ಪ್ರಜ್ಞಾಪೂರ್ವಕ ಪ್ರಯತ್ನಗಳ ಹಿನ್ನೆಲೆಯಲ್ಲಿ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಎಡ್ಡಿ ಆರಾಮ ಮತ್ತು ಚಾಲಕನ ಅಗತ್ಯವನ್ನು ಪೂರೈಸುವ ಉತ್ತಮ ಪರ್ಯಾಯ ಚಲನಶೀಲತೆಯ ಆಯ್ಕೆ ಎಂದು ಹೀರೊ ಎಲೆಕ್ಟ್ರಿಕ್ ಎಂಡಿ ನವೀನ್ ಮುಂಜಾಲ್ ಹೇಳಿದರು.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಇವಿಎಸ್‌ನ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಹೀರೊ ಎಲೆಕ್ಟ್ರಿಕ್ ಇತ್ತೀಚೆಗೆ ಲುಧಿಯಾನದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೆಚ್ಚಿಸಿದೆ. ಕಂಪನಿಯು ಭಾರತದಲ್ಲಿ ಶೇಕಡಾ 35ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಹೀರೊ ಎಲೆಕ್ಟ್ರಿಕ್ ಪ್ರಸ್ತುತ 325 ನಗರಗಳಲ್ಲಿ 600ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

2021ರಲ್ಲಿ ಹೀರೊ ಎಲೆಕ್ಟ್ರಿಕ್ 46,260 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಗುರುಗ್ರಾಮ್ ಮೂಲದ ಸ್ಟಾರ್ಟ್ ಅಪ್ ಬಟ್ ವೀಲ್ಟ್‌ ಮೊಬಿಲಿಟಿಯೊಂದಿಗೆ ಕಂಪನಿ ಮೈತ್ರಿ ಮಾಡಿಕೊಂಡಿದ್ದು, 2022-23ರ ವೇಳೆಗೆ 4,000 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪೂರೈಸಲು ಯೋಜಿಸಿದೆ. ಇದಕ್ಕಾಗಿ ತಂತ್ರಜ್ಞಾನ ಆಧಾರಿತ ಸುಧಾರಣೆಗಳಿಗೆ ಹಚ್ಚು ಆಧ್ಯತೆ ನೀಡುತ್ತಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಹೀರೊ ಎಲೆಕ್ಟ್ರಿಕ್ ಇತ್ತೀಚೆಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸೇವೆ ಮತ್ತು ದುರಸ್ತಿ ಮಾಡಲು 20,000 ಮೆಕ್ಯಾನಿಕ್‌ಗಳಿಗೆ ತರಬೇತಿ ನೀಡಿ ಪರಿಣತಿ ಪಡೆಯಲು ರೆಡಿ ಅಸಿಸ್ಟ್‌ನೊಂದಿಗೆ ಕೈ ಜೋಡಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿದಾರರಿಗೆ ಸ್ಥಾಪನಾ ಸೌಲಭ್ಯವನ್ನು ಒದಗಿಸಲು ಹೀರೊ ಎಲೆಕ್ಟ್ರಿಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಮೈತ್ರಿ ಕೂಡ ಮಾಡಿಕೊಂಡಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಇನ್ನು ಇಎಂಐ ಆಯ್ಕೆಗಳಾಗಿ ರೂ. 251 ರಿಂದ ಪ್ರಾರಂಭಿಸಿ ಡೌನ್ ಪೇಮೆಂಟ್ ಅನ್ನು 10,000ಕ್ಕೆ ನಿಗಧಿಪಡಿಸಲಾಗದೆ. ಈ ಆಯ್ಕೆಯನ್ನು 4 ವರ್ಷಗಳವರೆಗೆ ಹೊಂದಿಸಲಾಗಿದೆ. ಕಂಪನಿಯು ಎಸ್‌ಬಿಐ ಈಸಿ ರೈಡ್ ಲೋನ್ ಅಡಿಯಲ್ಲಿ ಕೊಡುಗೆಗಳನ್ನು ಸಹ ನೀಡುತ್ತಿದೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಆರಂಭದಲ್ಲಿ ಹೀರೊ ಮಹೀಂದ್ರಾ ಗ್ರೂಪ್‌ನೊಂದಿಗೆ ಜಂಟಿ ಪಾಲುದಾರಿಕೆಯನ್ನು ಮತ್ತು ಆಪ್ಟಿಮಾ ಸ್ಕೂಟರ್‌ನ ನವೀಕರಿಸಿದ ಆವೃತ್ತಿಯನ್ನು ತಮ್ಮ ಮೊದಲ ಜಂಟಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದೊಂದಿಗೆ ಪ್ರಾರಂಭಿಸಿತ್ತು. ಎರಡೂ ಕಂಪನಿಗಳು ಜಂಟಿಯಾಗಿ ಪೂರೈಕೆ ಮತ್ತು ಹಂಚಿಕೆಯ ವೇದಿಕೆಯನ್ನು ಅಭಿವೃದ್ಧಿಪಡಿಸಲಿವೆ.

ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಹೀರೊ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ !

ಮಹೀಂದ್ರಾ ಗ್ರೂಪ್ ತನ್ನ ಪಿಟಾಂಬುರಾ ಘಟಕದಲ್ಲಿ ಆಪ್ಟಿಮಾ ಮತ್ತು ಎನ್‌ವೈಎಕ್ಸ್‌ ಇ-ಸ್ಕೂಟರ್‌ಗಳನ್ನು ನಿರ್ಮಿಸಲಿದೆ. ಇದಲ್ಲದೆ ಎರಡೂ ಕಂಪನಿಗಳು ಮಹೀಂದ್ರಾದ ಪೂಝೌ ಮೋಟಾರ್ ಸೈಕಲ್ ಮಾರ್ಗದ ವಿದ್ಯುದ್ದೀಕರಣಕ್ಕಾಗಿ ಕೆಲಸ ಮಾಡುತ್ತಿವೆ.

Most Read Articles

Kannada
English summary
Hero electric introduced new eddy scooter in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X