Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇವಿ ಸ್ಕೂಟರ್ ಖರೀದಿಗಾಗಿ ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಸುಲಭ ಸಾಲಸೌಲಭ್ಯ ಪರಿಚಯಿಸಿದ ಹೀರೋ ಎಲೆಕ್ಟ್ರಿಕ್
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ನಗರಗಳಲ್ಲಿ ತನ್ನ ಮಾರಾಟ ಸೌಲಭ್ಯವನ್ನು ವಿಸ್ತರಣೆ ಮಾಡುತ್ತಿದ್ದು, ಮಾರಾಟ ಸೌಲಭ್ಯ ವಿಸ್ತರಣೆಯೊಂದಿಗೆ ಸುಲಭ ಸಾಲ ಸೌಲಭ್ಯವನ್ನು ಸಹ ಘೋಷಿಸಿದೆ.

ಇವಿ ಸ್ಕೂಟರ್‌ಗಳ ಖರೀದಿಗೆ ಮೇಲೆ ಈಗಾಗಲೇ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಸುಲಭ ಸೌಲಭ್ಯಗಳನ್ನು ಪರಿಚಯಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದೀಗ ಸುಲಭ ಇಎಂಐ ದರಗಳೊಂದಿಗೆ ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಗರಿಷ್ಠ ಮಟ್ಟದ ಸಾಲ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಗ್ರಾಹಕರ ಆದ್ಯತೆಗೆ ತಕ್ಕಂತೆ ವಿವಿಧ ದರಗಳನ್ನು ಒಳಗೊಂಡಿರುವ ಇಎಂಐ ಆಯ್ಕೆಗಳನ್ನು ಪರಿಚಯಿಸಿದೆ.

ಹೀರೋ ಎಲೆಕ್ಟ್ರಿಕ್ ಕಂಪನಿಯು ಇವಿ ವಾಹನ ಖರೀದಿದಾರರಿಗೆ ಕನಿಷ್ಠ ದಾಖಲೆಗಳೊಂದಿಗೆ ಹೆಚ್ಚಿನ ಮಟ್ಟದ ಸಾಲ ಒದಗಿಸುವ ಭರವಸೆ ನೀಡಿದ್ದು, ಹೊಸ ಪಾಲುದಾರಿಕೆಯ ಜೊತೆಗೆ ನಿಗದಿತ ಅವಧಿಗಾಗಿ ಹಲವು ಹೊಸ ಆಫರ್‌ಗಳನ್ನು ನೀಡುತ್ತಿದೆ.

ಹೊಸ ಹಣಕಾಸು ಸೌಲಭ್ಯಕ್ಕಾಗಿ ಆಕ್ಸಿಸ್ ಜೊತೆ ಕೈಜೋಡಿಸುವ ಕುರಿತಂತೆ ಮಾತನಾಡಿದ ಹೀರೋ ಎಲೆಕ್ಟ್ರಿಕ್ ಸಿಇಒ ಸೊಹಿಂದರ್ ಗಿಲ್ ಅವರು ದ್ವಿಚಕ್ರ ವಾಹನ ಮಾಲೀಕತ್ವವನ್ನು ಸರಳಗೊಳಿಸುವ ಮೂಲಕ ನಾವು ನಮ್ಮ ವೈಯಕ್ತಿಕಗೊಳಿಸಿದ ಹಣಕಾಸು ಆಯ್ಕೆಗಳನ್ನು ವಿಸ್ತರಿಸಿದ್ದು, ಅನುಕೂಲಕರ ಖರೀದಿ ನಿರ್ಧಾರಗಳನ್ನು ಸುಗಮಗೊಳಿಸುತ್ತಿದ್ದೇವೆ' ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳು ದುಬಾರಿ ಇಂಧನ ಪರಿಣಾಮ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕೂಡಾ ಕಳೆದ ವರ್ಷದಿಂದಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದೆ.

ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳ ವಿಚಾರಣೆಯೂ ಕೂಡಾ ಹೆಚ್ಚಿದ್ದು, ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ಇವಿ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಇವಿ ಸ್ಕೂಟರ್ ಉತ್ಪಾದನೆಯನ್ನು ಆರಂಭಿಸಿ ಸುಮಾರು 13 ವರ್ಷಗಳನ್ನು ಪೂರೈಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದುವರೆಗೆ 4 ಲಕ್ಷ ಯುನಿಟ್‌ಗಳಿಗೂ ಹೆಚ್ಚು ಇವಿ ವಾಹನಗಳನ್ನು ಮಾರಾಟ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಇವಿ ಉತ್ಪನ್ನಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ಹಿಂದಿನ ಹತ್ತು ವರ್ಷಗಳಲ್ಲಿ ವಾಹನ ಮಾರಾಟ ಪ್ರಮಾಣವು ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ಈ ಮೂಲಕ ಕಂಪನಿಯು ಇವಿ ದ್ವಿಚಕ್ರ ವಾಹನ ಮಾರಾಟ ವಿಭಾಗದಲ್ಲಿ ಶೇ.36 ಪಾಲು ತನ್ನದಾಗಿಸಿಕೊಳ್ಳುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇವಿ ಸ್ಕೂಟರ್ ಮಾರಾಟವನ್ನು ಪ್ರಸಕ್ತ ವರ್ಷದಲ್ಲಿ ಶೇಕಡಾ 15ರಷ್ಟು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ಇದಕ್ಕಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಗರಗಳಲ್ಲಿ ಹಲವು ಹೊಸ ಮಾರಾಟ ಮಳಿಗೆಗಳನ್ನು ತೆರೆದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ 2.5 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಸದ್ಯ ದೇಶಾದ್ಯಂತ 500 ನಗರಗಳಲ್ಲಿ 750ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಅಗತ್ಯತೆಯ ಆಧಾರದ ಮೇಲೆ ಕಳೆದ ವರ್ಷ ಸುಮಾರು 1,500 ಹೊಸ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗಿದೆ.

2022 ಆರ್ಥಿಕ ವರ್ಷದ ಕೊನೆಯಲ್ಲಿ ದೇಶಾದ್ಯಂತ ಒಟ್ಟು ಒಂದು ಸಾವಿರ ಟಚ್ ಪಾಯಿಂಟ್(ಮಾರಾಟ ಮಳಿಗೆಗಳನ್ನು) ಹೊಂದುವ ಗುರಿಹೊಂದಿದ್ದು, ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆಯ ಆಧಾರದ ಮೇಲೆ ಹೊಸ ಟಚ್ ಪಾಯಿಂಟ್ ತೆರೆಯಲಾಗುತ್ತಿದೆ.

ಇದಲ್ಲದೆ ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಮುಂದಿನ ಮೂರು ವರ್ಷದಲ್ಲಿ ಒಟ್ಟು 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಮೊದಲ ವರ್ಷದಲ್ಲಿ ದೇಶದ ಪ್ರಮುಖ 30 ನಗರಗಳಲ್ಲಿ 10 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಯೋಜನೆಯಲ್ಲಿದೆ.

ಚಾರ್ಜರ್ ಕಂಪನಿಯು ಈಗಾಗಲೇ ದೇಶಾದ್ಯಂತ 20 ಪ್ರಮುಖ ನಗರಗಳಲ್ಲಿ ಆರಂಭಿಕ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಇವಿ ವಾಹನ ಮಾಲೀಕರಿಗೆ ಚಾರ್ಜಿಂಗ್ ನಿಲ್ದಾಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ನೆರವಾಗುವಂತೆ ಪ್ರತ್ಯೇಕ ಆ್ಯಪ್ ಕೂಡಾ ಅಭಿವೃದ್ದಿಪಡಿಸಿದೆ.

ಆ್ಯಪ್ ಮೂಲಕ ಹತ್ತಿರದಲ್ಲಿರುವ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಮತ್ತು ಚಾರ್ಜಿಂಗ್ ನಿಲ್ದಾಣದಲ್ಲಿ ಚಾರ್ಜಿಂಗ್‌ಗಾಗಿ ಸರತಿ ಸಾಲಿನಲ್ಲಿರುವ ವಾಹನಗಳ ಸಂಖ್ಯೆ ಮತ್ತು ಯಾವ ನಿಲ್ದಾಣದಲ್ಲಿ ಕಡಿಮೆ ವಾಹನಗಳಿವೆ ಎನ್ನುವುದರ ಜೊತೆ ಚಾರ್ಜಿಂಗ್‌ಗಾಗಿ ತೆಗೆದುಕೊಳ್ಳುವ ನಿಖರವಾದ ಸಮಯದ ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ.

ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಶಾಂಪಿಂಗ್ ಕಾಂಪ್ಲೆಕ್ಸ್, ಅಂಪಾರ್ಟ್‌ಮೆಂಟ್‌ಗಳು ಮತ್ತು ಮಾಲ್‌ಗಳಲ್ಲೂ ನಿರ್ದಿಷ್ಟ ವಾಹನ ಮಾಲೀಕರಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.