ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಇವಿ ಸ್ಟಾರ್ಟಅಪ್ ಕಂಪನಿಗಳು ಹೊಸ ಇವಿ ವಾಹನಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿವೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಪುಣೆ ಮೂಲದ ಐಯೊಮಿ ಎನರ್ಜಿ ಕೂಡಾ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಜೀಟ್ಎಕ್ಸ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಐಯೊಮಿ ಎನರ್ಜಿ ನಿರ್ಮಾಣದ ಜೀಟ್ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬ್ಯಾಟರಿ ಪ್ಯಾಕ್ ಮತ್ತು ವಿವಿಧ ಫೀಚರ್ಸ್‌ಗಳಿಗೆ ಅನುಗುಣವಾಗಿ ಜೀಟ್ಎಕ್ಸ್‌ ಸ್ಟ್ಯಾಂಡರ್ಡ್ ಮತ್ತು ಜೀಟ್ಎಕ್ಸ್ 180 ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಜೀಟ್ಎಕ್ಸ್ ಸ್ಟ್ಯಾಂಡರ್ಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದ್ದರೆ ಜೀಟ್ಎಕ್ಸ್180 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.40 ಲಕ್ಷ ಬೆಲೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿ ಜೀಟ್ಎಕ್ಸ್ ಸ್ಟ್ಯಾಂಡರ್ಡ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 100 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಜೀಟ್ಎಕ್ಸ್180 ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 200 ಕಿ.ಮೀ ಮೈಲೇಜ್ ನೀಡಲಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಜೀಟ್ಎಕ್ಸ್ ಮಾದರಿಯು ರೈಡರ್ ಮತ್ತು ಇಕೋ ಮೋಡ್ ಹೊಂದಿದ್ದು, ಇದರಲ್ಲಿ ರೈಡರ್ ಮೋಡ್‌ನಲ್ಲಿ 90 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಇಕೋ ಮೋಡ್‌ನಲ್ಲಿ 100 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಜೀಟ್ಎಕ್ಸ್ ಮಾದರಿಯು ಸ್ಪೋರ್ಟ್ಸ್ ಮೋಡ್‌ನಲ್ಲಿ 180 ಕಿ.ಮೀ ಮತ್ತು ಇಕೋ ಮೋಡ್‌ನಲ್ಲಿ 200 ಕಿ.ಮೀ ಗಿಂತಲೂ ಹೆಚ್ಚಿನ ಮೈಲೇಜ್ ಹಿಂದಿರುಗಿಸಲಿವೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಜೀಟಿಎಕ್ಸ್ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಕಂಪನಿಯು ಸಿಂಗಲ್ ಬ್ಯಾಟರಿ ಜೋಡಿಸಲಾಗಿದ್ದರೆ ಜೀಟ್ಎಕ್ಸ್180 ಮಾದರಿಯಲ್ಲಿ ಡ್ಯುಯಲ್ ಬ್ಯಾಟರಿ ಪ್ಯಾಕ್ ಜೋಡಿಸಲಾಗಿದ್ದು, ತೆಗೆದುಹಾಕಬಹುದಾದ ವೈಶಿಷ್ಟ್ಯತೆಯನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಸದ್ಯ ಹೊಸ ಜೀಟ್ಎಕ್ಸ್ ಇವಿ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗಪಡಿಸಿರುವ ಐಯೊಮಿ ಕಂಪನಿಯು ಸೆಪ್ಟೆಂಬರ್ 1ರಿಂದ ಬುಕಿಂಗ್ ಆರಂಭಿಸಲಿದ್ದು, ಬುಕಿಂಗ್ ಮಾಡುವ ಗ್ರಾಹಕರಿಗೆ ಸೆಪ್ಟೆಂಬರ್ ಅಂತ್ಯಕ್ಕೆ ಹೊಸ ಸ್ಕೂಟರ್ ವಿತರಣೆಯಾಗಲಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಸೆಪ್ಟೆಂಬರ್ 10ರ ಒಳಗಾಗಿ ಹೊಸ ಇವಿ ಸ್ಕೂಟರ್ ಬುಕಿಂಗ್ ಮಾಡುವ ಗ್ರಾಹಕರಿಗೆ ಕಂಪನಿಯು ಹೊಸ ಆಫರ್ ಘೋಷಣೆ ಮಾಡಿದ್ದು, ನಿಗದಿತ ಅವಧಿಯಲ್ಲಿ ಬುಕಿಂಗ್ ಮಾಡುವ ಪ್ರತಿ ಗ್ರಾಹಕರಿಗೂ ರೂ.3 ಸಾವಿರ ಮೌಲ್ಯದ ಆಕ್ಸೆಸರಿಸ್ ಪ್ಯಾಕೇಜ್ ನೀಡುವ ಭರವಸೆ ನೀಡಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಹೊಸ ಇವಿ ಸ್ಕೂಟರ್ ಉತ್ಪಾದನೆಗಾಗಿ ಐಯೊಮಿ ಎನರ್ಜಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ವಾರ್ಷಿಕವಾಗಿ 2.40 ಲಕ್ಷ ಸ್ಕೂಟರ್ ಉತ್ಪಾದನೆ ಮಾಡುವ ಘಟಕವನ್ನು ತೆರೆಯುತ್ತಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಹೊಸ ವಾಹನ ಉತ್ಪಾದನಾ ಘಟಕದಲ್ಲಿಯೇ ಈಗಾಗಲೇ ಉತ್ಪಾದನೆಯನ್ನು ಆರಂಭಿಸಿರುವ ಐಯೊಮಿ ಕಂಪನಿಯು 2023ರಿಂದ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಲಿದ್ದು, ಹೊಸ ಯೋಜನೆಯಾಗಿ ಕಂಪನಿಯು ಒಟ್ಟು ರೂ. 200 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಹೊಸ ವಾಹನ ಉತ್ಪಾದನಾ ಘಟಕಗಳ ಮೇಲೆ ನಿರಂತವಾಗಿ ಹೂಡಿಕೆ ಮಾಡುತ್ತಿರುವ ಐಯೊಮಿ ಎನರ್ಜಿ ಕಂಪನಿಯು ಉತ್ತಮ ಬಂಡವಾಳ ಹೂಡಿಕೆ ಆಕರ್ಷಿಸುತ್ತಿದ್ದು, ಹೊಸ ಇವಿ ಸ್ಕೂಟರ್ ಮಾದರಿಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳಲಿವೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಇವಿ ವಾಹನಗಳ ಮಾರಾಟವು ತಿಂಗಳಿನಿಂದ ತಿಂಗಳಿಗೆ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಕಳೆದ ತಿಂಗಳು ಪ್ರಮುಖ ಇವಿ ವಾಹನ ಉತ್ಪಾದನಾ ಕಂಪನಿಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿವೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ದುಬಾರಿ ಇಂಧನಗಳ ಪರಿಣಾಮ ಸಾಂಪ್ರದಾಯಿಕ ವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗುತ್ತಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಪ್ರಮುಖ ಇವಿ ಮಾದರಿಗಳ ಮಾರಾಟವು ಸಾಕಷ್ಟು ಏರಿಕೆಯಾಗಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಪ್ರೇರಿತ ಐಯೊಮಿ ಎನರ್ಜಿಯ ಜೀಟ್ಎಕ್ಸ್ ಇವಿ ಸ್ಕೂಟರ್‌ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

Most Read Articles

Kannada
English summary
Ivoomi lanched jeetx electric scooter prices start at rs 99 999
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X