ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಹೊಸ ಪೀಳಿಗೆಯ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ವಾಹನ ಉತ್ಪಾದನಾ ಕಂಪನಿಗಳು ಸಹಭಾಗಿತ್ವ ಯೋಜನೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇದೀಗ ಹಂಗೇರಿಯನ್ ಮೂಲದ ಕೀವೇ ಕಂಪನಿಯು ಸಹ ತನ್ನ ಹೊಸ ದ್ವಿ-ಚಕ್ರ ವಾಹನಗಳೊಂದಿಗೆ ಭಾರತಕ್ಕೆ ಲಗ್ಗೆಯಿಟ್ಟಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಕೀವೇ ಕಂಪನಿಯು 1999ರಲ್ಲಿ ಸ್ಥಾಪಿತವಾದ ಹಂಗೇರಿಯನ್ ಆಟೋಮೊಬೈಲ್ ತಯಾರಕ ಕಂಪನಿಯಾಗಿ ಜನಪ್ರಿಯತೆ ಹೊಂದಿದ್ದು, ಕೀವೇ ಕಂಪನಿಯಲ್ಲಿ ಇತ್ತೀಚೆಗೆ ಚೀನಾ ಮೂಲದ ಕಿಯಾನ್‌ಜಿಯಾಂಗ್ (ಕ್ಯೂಜೆ) ಗ್ರೂಪ್‌ ಸಹಭಾಗಿತ್ವ ಯೋಜನೆಯಡಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಕ್ಯೂಜೆ ಗ್ರೂಪ್‌ ಕಂಪನಿಯು ಕೀವೇ ಕಂಪನಿಯಲ್ಲಿ ಮಾತ್ರವಲ್ಲದೆ ಅದು ಬೆನೆಲ್ಲಿ ಮೋಟಾರ್‌ಸೈಕಲ್ ಕಂಪನಿಯಲ್ಲೂ ಕೂಡಾ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಹೊಸ ಬಂಡವಾಳ ಹೂಡಿಕೆಯೊಂದಿಗೆ ವಿದೇಶಿ ವ್ಯಾಪಾರ ವಹಿವಾಟು ವಿಸ್ತರಿಸುತ್ತಿರುವ ಕ್ಯೂಜೆ ಗ್ರೂಪ್ ಕಂಪನಿಯು ಕೀವೇ ನಿರ್ಮಾಣದ ದ್ವಿಚಕ್ರ ವಾಹನಗಳನ್ನು ಇದೀಗ ಭಾರತದಲ್ಲಿ ಬೆನೆಲ್ಲಿಯೊಂದಿಗೆ ಮಾರಾಟ ಮಾಡಲು ಯೋಜನೆ ರೂಪಿಸಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಕೀವೇ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 125 ಸಿಸಿ ಯಿಂದ 1,200 ಸಿಸಿ ವರೆಗೂ ವಿವಿಧ ಎಂಜಿನ್‌ಗಳೊಂದಿಗೆ ಹಲವಾರು ಸ್ಕೂಟರ್‌, ಬೈಕ್‌ಗಳು ಮತ್ತು ಎಟಿವಿಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಭಾರತದಲ್ಲೂ ತನ್ನ ಹೊಸ ಉತ್ಪನ್ನಗಳೊಂದಿಗೆ ಗ್ರಾಹಕರ ಸೆಳೆಯವ ನೀರಿಕ್ಷೆಯಲ್ಲಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಕ್ಯೂಜೆ ಗ್ರೂಪ್ ಕಂಪನಿಯ ಅಡಿಯಲ್ಲಿರುವ ಬೆನೆಲ್ಲಿ ಕಂಪನಿಯು ಭಾರತದಲ್ಲಿ ಈಗಾಗಲೇ ಉತ್ತಮ ಮಾರಾಟ ಜಾಲವನ್ನು ಹೊಂದಿರುವುದರಿಂದ ಅದು ಕೀವೇ ಹೊಸ ದ್ವಿಚಕ್ರ ವಾಹನಗಳಿಗೂ ಉತ್ತಮ ಮಾರಾಟ ಸೌಲಭ್ಯ ಜೊತೆಗೆ ಭಾರತದಲ್ಲಿಯೇ ಉತ್ಪಾದನೆಗೆ ಸಾಕಷ್ಟು ಸಹಕಾರಿಯಾಗಲಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಕೀವೇ ಕಂಪನಿಯನ್ನು ಭಾರತದಲ್ಲಿ ಸದ್ಯ ಬೆನೆಲ್ಲಿ ಕಂಪನಿಯೇ ಸಂಪೂರ್ಣವಾಗಿ ನಿಯಂತ್ರಣ ಮಾಡಲಿದ್ದು, ಕೀವೇ ಕಂಪನಿಗಾಗಿ ಪ್ರತ್ಯೇಕ ಮಾರಾಟ ಸೌಲಭ್ಯಗಳನ್ನು ತರೆಯದೆ ಈಗಾಗಲೇ ಅಸ್ತಿತ್ವದಲ್ಲಿರುವ ಬೆನೆಲ್ಲಿ ಶೋರೂಂಗಳಲ್ಲಿಯೇ ಮಾರಾಟ ಪ್ರಕ್ರಿಯೆ ಕೈಗೊಳ್ಳಲಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಸದ್ಯ ಕೀವೇ ಕಂಪನಿಯು ಭಾರತದಲ್ಲಿ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿ ರೂ.10 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದ್ದು, ಜೂನ್ ಮಧ್ಯಂತರದಲ್ಲಿ ಅಥವಾ ಜುಲೈ ಆರಂಭದಲ್ಲಿ ಹೊಸ ದ್ವಿಚಕ್ರ ವಾಹನಗಳ ಬೆಲೆ ಮಾಹಿತಿಯು ಅಧಿಕೃತವಾಗಿ ಬಹಿರಂಗವಾಗಲಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಕೀವೇ ಕಂಪನಿಯು ಭಾರತದಲ್ಲಿ ಒಟ್ಟು ಮೂರು ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ್ದು, ಎರಡು ಸ್ಕೂಟರ್ ಮಾದರಿಗಳನ್ನು ಮತ್ತು ಒಂದು ಬೈಕ್ ಮಾದರಿಯನ್ನು ಆನಾವರಣಗೊಳಿಸಿದೆ. ಕೀವೇ ಅನಾವರಣಗೊಳಿಸಿರುವ ಕೆ-ಲೈಟ್ 250ವಿ ಕ್ರೂಸರ್ ಬೈಕ್, ವಿಸ್ಟೆ 300 ಮ್ಯಾಕ್ಸಿ-ಸ್ಕೂಟರ್ ಮತ್ತು ರೆಟ್ರೋ ಶೈಲಿಯ ಸಿಕ್ಸ್ಟಿಸ್ 300ಐ ಸ್ಕೂಟರ್ ಮಾದರಿಯು ವಿಭಿನ್ನ ಚಾಲನಾ ಅನುಭವ ನೀಡಲಿವೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಮೇ 26 ರಿಂದ ಹೊಸ ದ್ವಿಚಕ್ರ ವಾಹನಗಳು ಟೆಸ್ಟ್ ರೈಡ್‌ಗೆ ಲಭ್ಯವಾಗಲಿದ್ದು, ಕೀವೇ ಹೊಸ ದ್ವಿಚಕ್ರ ವಾಹನಗಳು 250 ಸಿಸಿಯಿಂದ 300 ಸಿಸಿ ವಿಭಾಗದಲ್ಲಿ ಪ್ರಮುಖ ಬೈಕ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿವೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಕೆ-ಲೈಟ್ 250ವಿ ಕ್ರೂಸರ್ ಬೈಕ್ ಕ್ರೂಸರ್ ಮೋಟಾರ್‌ಸೈಕಲ್ ಬಗೆಗೆ ಹೇಳುವುದಾದರೇ ಹೊಸ ಬೈಕ್ ಮಾದರಿಯಲ್ಲಿ ಆಕರ್ಷಕವಾದ ಇಂಧನ ಟ್ಯಾಂಕ್ ಜೋಡಣೆ ಮಾಡಲಾಗಿದ್ದು, ಟ್ಯಾಂಕ್‌ಗೆ ಹೊಂದಿಕೊಂಡಂತೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ. ಹಾಗೆಯೇ ರೌಂಡ್ ಹೆಡ್‌ಲೈಟ್‌, ಆರಾಮದಾಯಕವಾದ ಆಸನ ಸೌಲಭ್ಯ, ಡ್ಯುಯಲ್ ಎಕ್ಸಾಸ್ಟ್ ಪೈಪ್‌ಗಳು, ಸ್ವಿಂಗಾರ್ಮ್-ಮೌಂಟೆಡ್ ಮಡ್ ಗಾರ್ಡ್‌ಗಳು ಮತ್ತು ನಂಬರ್ ಪ್ಲೇಟ್ ಹೋಲ್ಡರ್ ಅನ್ನು ಪಡೆದುಕೊಂಡಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಬೆಲ್ಟ್ ಡ್ರೈವ್ ಸಿಸ್ಟಂ ಹೊಂದಿರುವ ಕೆ-ಲೈಟ್ 250ವಿ ಕ್ರೂಸರ್ ಬೈಕ್ ಮಾದರಿಯು 250 ಸಿಸಿ ವಿ ಟ್ವಿನ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 18.7 ಬಿಎಚ್‌ಪಿ ಮತ್ತು 19 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಹೊಸ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್, ವಿವಿಧ ಬಣ್ಣಗಳ ಆಯ್ಕೆ ಮತ್ತು 20 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ನೀಡಲಾಗಿದ್ದು, ಇದು ದೀರ್ಘ ಪ್ರಯಾಣಕ್ಕಾಗಿ ಸಾಕಷ್ಟು ಅನೂಕರವಾಗಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಇನ್ನು ಕೀವೇ ಅನಾವರಣಗೊಳಿಸಿರುವ ಹೊಸ ದ್ವಿಚಕ್ರ ವಾಹನಗಳಲ್ಲಿ ವಿಸ್ಟೆ 300 ಮ್ಯಾಕ್ಸಿ-ಸ್ಕೂಟರ್ ಕೂಡಾ ಸಾಕಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇದು ಭಾರತದ ಮೊದಲ ಮಾಧ್ಯಮ ಗಾತ್ರದ ಮ್ಯಾಕ್ಸಿ ಸ್ಕೂಟರ್ ಆಗಿ ಗುರುತಿಸಿಕೊಳ್ಳಲಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ವಿಸ್ಟೆ 300 ಮ್ಯಾಕ್ಸಿ ಸ್ಕೂಟರ್ ಮಾದರಿಯು 278.2 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 4-ವಾಲ್ವ್ ಎಂಜಿನ್ ಜೋಡಣೆ ಹೊಂದಿದ್ದು, ಇದು 18.7 ಬಿಎಚ್‌ಪಿ ಮತ್ತು 22 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ. ಹೊಸ ಮ್ಯಾಕ್ಸಿ ಸ್ಕೂಟರ್‌ನಲ್ಲಿ 12 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, 13 ಇಂಚಿನ ಡ್ಯುಯಲ್ ಕಲರ್ ಹೊಂದಿರವ ಚಕ್ರಗಳನ್ನು ಮತ್ತು ಎರಡು ಬದಿಯಲ್ಲಿ ಡಿಸ್ಕ್ ಬ್ರೇಕ್ ಜೊತೆ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರಲಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಇನ್ನು ಕೀವೇ ಅನಾವರಣಗೊಳಿಸಿರುವ ಸಿಕ್ಸ್ಟಿಸ್ 300ಐ ಮಾದರಿಯು ಸಹ ವಿನೂತನ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಸಿಕ್ಸ್ಟಿಸ್ 300ಐ ವಿಸ್ಟೆ 300 ಮ್ಯಾಕ್ಸಿ ಸ್ಕೂಟರ್ ಮಾದರಿಯಲ್ಲಿರುವ 278.2 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 4-ವಾಲ್ವ್ ಎಂಜಿನ್ ಜೋಡಣೆಯನ್ನೇ ಹೊಂದಿದೆ.

ವಿನೂತನ ದ್ವಿಚಕ್ರ ವಾಹನಗಳೊಂದಿಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಕೀವೇ ಕಂಪನಿ

ಮ್ಯಾಕ್ಸಿ-ಸ್ಕೂಟರ್‌ಗೆ ಹೋಲಿಸಿದರೆ ಸಿಕ್ಸ್ಟಿಸ್ 300ಐ ಮಾದರಿಯಲ್ಲಿ 10-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಮತ್ತು 12-ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಹೊಸ ಸ್ಕೂಟರ್ ಜರ್ಮನ್ ವಿಕ್ಟೋರಿಯಾ ಮೊಟೊರಾಡ್ ನಿಕ್ಕಿ 300 ಸ್ಕೂಟರ್ ಅನ್ನು ಹೋಲುತ್ತದೆ. ಸಿಕ್ಸ್ಟಿಸ್ 300ಐ ಮಾದರಿಯಲ್ಲಿ ಕಂಪನಿಯು ಎಲ್ಇಡಿ ಲೈಟಿಂಗ್, ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಮಲ್ಟಿ-ಫಂಕ್ಷನ್ ಇಗ್ನಿಷನ್ ಸ್ವಿಚ್ ಮತ್ತು ಮೂರು ಬಣ್ಣಗಳ ಆಯ್ಕೆ ನೀಡಲಿದೆ.

Most Read Articles

Kannada
Read more on ಕೀವೇ keeway
English summary
Keeway unveils k light 250v vieste 300 and sixties 300i in india details
Story first published: Wednesday, May 18, 2022, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X