IBW 2022ರಲ್ಲಿ ಅನಾವರಣಗೊಂಡ ಹೊಸ ಬೈಕ್‌ಗಳು: 822 ಹಿಮಾಲಯನ್, KTM 890 ಅಡ್ವೆಂಚರ್ ಪ್ರದರ್ಶನ

ದೇಶ-ವಿದೇಶಗಳಿಂದ ಬರುವ ಮೋಟಾರ್‌ಸೈಕಲ್ ಅಭಿಮಾನಿಗಳಿಗಾಗಿ ನಿರ್ವಹಿಸಲಾಗುವ ಇಂಡಿಯಾ ಬೈಕ್ ವೀಕ್ 2022 ಕಳೆದ ಶನಿವಾರದಂದು ಅಂತ್ಯಗೊಂಡಿದೆ. ಈ ಐಬಿಡಬ್ಲ್ಯು ವೇದಿಕೆಯು ವಾಹನ ಬ್ರ್ಯಾಂಡ್‌ಗಳಿಗೆ ತಮ್ಮ ಹೊಸ ಮತ್ತು ಮುಂಬರುವ ಬೈಕ್‌ಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು, ಈ ಬಾರಿ ಅನಾವರಣಗೊಂಡ ಕೆಲವು ಬೈಕ್‌ಗಳನ್ನು ಈ ಲೇಖನದಲ್ಲಿ ನೋಡೋಣ.

822 ಹಿಮಾಲಯನ್
IBW 2022ರಲ್ಲಿ 822ಸಿಸಿ ಹಿಮಾಲಯನ್ ಅನ್ನು ಪ್ರದರ್ಶಿಸಲಾಗಿತ್ತು. ಇದನ್ನು ಆಟೋಲಾಗ್ ಡಿಸೈನ್ ಮತ್ತು ಆಟೋ ಎಂಜಿನಾ ಅವರು ನಿರ್ಮಿಸಿದ ಕಸ್ಟಮ್ ಬೈಕ್ ಆಗಿದ್ದು, ಇವರು 822cc ಎಂಜಿನ್‌ಗಾಗಿ ಸಮಾನಾಂತರವಾದ 411cc ಅವಳಿ ಹಿಮಾಲಯನ್ ಎಂಜಿನ್‌ಗಳನ್ನು ಒಟ್ಟಿಗೆ ಅಳವಡಿಸಿದ್ದಾರೆ. ಅಂದರೆ ಈ 822 ಸಿಸಿ ಹಿಮಾಲಯನ್ ಬೈಕ್‌ನಲ್ಲಿ ಎರಡು 411cc ಸಿಂಗಲ್- ಸಿಲಿಂಡರ್ ಎಂಜಿನ್‌ಗಳೊಂದಿಗೆ ನಿರ್ಮಿಸಲಾದ ಕಸ್ಟಮ್ ಎಂಜಿನ್ ಅನ್ನು ಬಳಸಲಾಗಿದೆ.

IBW 2022ರಲ್ಲಿ ಅನಾವರಣಗೊಂಡ ಹೊಸ ಬೈಕ್‌ಗಳು: 822 ಹಿಮಾಲಯನ್, KTM 890 ಅಡ್ವೆಂಚರ್ ಪ್ರದರ್ಶನ

ಇದು ಸುಮಾರು 45 hp ಪವರ್ ಮತ್ತು 55 Nm ಟಾರ್ಕ್ ಅನ್ನು ನೀಡುತ್ತದೆ. ಎರಡರಿಂದ ಒಂದು ಎಕ್ಸಾಸ್ಟ್, ಸ್ವಿಂಗರ್ಮ್ ಮತ್ತು ಫ್ರೇಮ್‌ನ ಕೆಳಗಿನ ಅರ್ಧದಷ್ಟು ಇತರ ಭಾಗಗಳು ಮತ್ತು ಘಟಕಗಳನ್ನು ಕಸ್ಟಮ್ ಮಾಡಲಾಗಿದೆ. ನಿರ್ಮಾಣದ ಒಟ್ಟು ವೆಚ್ಚ ಸುಮಾರು 12-13 ಲಕ್ಷ ರೂಪಾಯಿ ಎಂದು ಆಟೋಲಾಗ್ ಹೇಳಿದೆ. ಆದರೆ ತಂಡವು ವೆಚ್ಚವನ್ನು ಸುಗಮಗೊಳಿಸುವ ಮತ್ತು ಫ್ರೇಮ್ ಅನ್ನು ಇನ್ನಷ್ಟು ಸ್ಲಿಮ್ಮಿಂಗ್ ಮಾಡುವಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.

2023 BMW S1000RR
ಹೊಸ 2023 S1000RR ಅನ್ನು ಕಳೆದ ವಾರ IBW ನಲ್ಲಿ ಹೆಚ್ಚಿನ ಅಭಿಮಾನಿಗಳ ನಡುವೆ ಬಹಿರಂಗಪಡಿಸಲಾಯಿತು. ಹೊಸ ಮಾದರಿಯನ್ನು ಹೆಚ್ಚಿನ ಪವರ್‌ನೊಂದಿಗೆ ಪ್ಯಾಕ್ ಮಾಡಲಾಗಿದೆ. ಈಗ ಕೇವಲ 197 ಕೆ.ಜಿ (ಸಂಪೂರ್ಣ ಇಂಧನದೊಂದಿಗೆ) ತೂಕದ ಮೇಲೆ 210 ಎಚ್‌ಪಿ ಪವರ್ ನೀಡುತ್ತದೆ. ಜೊತೆಗೆ ಡ್ಯಾಷ್ ಬೋರ್ಡ್‌ನಲ್ಲಿ M-ಶೈಲಿಯ ವೈಶಿಷ್ಟ್ಯಗಳೊಂದಿಗೆ ಉತ್ತಮ ಅಪ್‌ಗ್ರೇಡ್ ಅನ್ನು ನೀಡಲಾಗಿದೆ. ಮುಖ್ಯವಾಗಿ ವಿಂಗ್ಲೆಟ್‌ಗಳ ಸೇರ್ಪಡೆಗಳನ್ನು ನೀಡಲಾಗಿದೆ. 2023 S1000RR ನ ಅಧಿಕೃತ ಬಿಡುಗಡೆಯು ಡಿಸೆಂಬರ್ 10 ರಂದು ನಡೆಯಲಿದೆ.

ಕ್ಯೂಜೆ ಮೋಟಾರ್
Motovault ಅಡಿಯಲ್ಲಿ ಹೊಸ ಬ್ರ್ಯಾಂಡ್ QJ ಮೋಟಾರ್ಸ್ ಈಗ ಸೇರ್ಪಡೆಯಾಗಿದೆ. ಈ ಬ್ರ್ಯಾಂಡ್ SRK 400, SRV 300, ಮತ್ತು SRC 500 ಎಂಬ ಮೂರು ಮೋಟಾರ್‌ಸೈಕಲ್‌ಗಳನ್ನು ಈವೆಂಟ್‌ನಲ್ಲಿ ಪ್ರದರ್ಶಿಸಿತು. SRC 500 ಕ್ಲಾಸಿಕ್ ರೋಡ್‌ಸ್ಟರ್ ಆಗಿದ್ದರೆ, SRV 300 ಕ್ರೂಸರ್-ಡಿಸೈನ್ ಪಡೆದಿದೆ. ಇನ್ನು SRK 400 ಸ್ಟ್ರೀಟ್‌ ಫೈಟರ್ ಆಗಿದೆ. 500cc SRC ಅತ್ಯಂತ ಕೈಗೆಟುಕುವ ಬೆಲೆ 2.69 ಲಕ್ಷ (ಎಕ್ಸ್-ಶೋರೂಂ) ರೂ.ಗೆ ಭಾರತದಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಚಿಕ್ಕದಾದ V-ಟ್ವಿನ್ ಆಗಿರುವ SRV 300 ರೂ. 3.59 ಲಕ್ಷ (ಎಕ್ಸ್-ಶೋರೂಂ) ಮತ್ತು SRK 400 ಬೆಲೆಯು ರೂ. 3.59 (ಎಕ್ಸ್ ಶೋ ರೂಂ) ಆಗಿದೆ.

ಹಾರ್ಲೆ-ಡೇವಿಡ್ಸನ್ ನೈಟ್ಸ್ಟರ್
ಐಬಿಡಬ್ಲ್ಯು ಈವೆಂಟ್‌ನಲ್ಲಿ ಹಾರ್ಲೆ-ಡೇವಿಡ್ಸನ್ ಬೈಕ್‌ಗಳ ಅಬ್ಬರ ಜೋರಾಗಿತ್ತು. ಕಂಪನಿಯು ಈವೆಂಟ್‌ನಲ್ಲಿ ನೈಟ್‌ಸ್ಟರ್ ಹೊಸ ಪೀಳಿಗೆಯ H-D ಮೋಟಾರ್‌ಸೈಕಲ್‌ ಅನ್ನು ಬಿಡುಗಡೆ ಮಾಡಿತು. ಇದು 975cc ರೆವಲ್ಯೂಷನ್ ಮ್ಯಾಕ್ಸ್‌ನಿಂದ 89 hp ಪವರ್ ಮತ್ತು 95 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಪ್ಪು ಬಣ್ಣದ ಹಾರ್ಲೆ-ಡೇವಿಡ್ಸನ್ ನೈಟ್ಸ್ಟರ್‌ಗೆ 14.99 ಲಕ್ಷ ರೂ. ಮತ್ತು ಇತರ ಬಣ್ಣಗಳಿಗಾದರೆ 15.13 ಲಕ್ಷ ರೂ. ಬೆಲೆಯನ್ನು ಹೊಂದಿದೆ (ಇವೆಲ್ಲವು ಎಕ್ಸ್‌ ಶೋರೂಂ ಬೆಲೆಗಳು).

IBW 2022ರಲ್ಲಿ ಅನಾವರಣಗೊಂಡ ಹೊಸ ಬೈಕ್‌ಗಳು: 822 ಹಿಮಾಲಯನ್, KTM 890 ಅಡ್ವೆಂಚರ್ ಪ್ರದರ್ಶನ

KTM 890 ಅಡ್ವೆಂಚರ್
2023 KTM 890 ಅಡ್ವೆಂಚರ್ ಇತ್ತೀಚೆಗೆ ಜಾಗತಿಕವಾಗಿ ಪಾದಾರ್ಪಣೆ ಮಾಡಿದೆ. ಗ್ರಾಹಕರ ಆಸಕ್ತಿಯನ್ನು ಅಳೆಯಲು KTM ಇಂಡಿಯಾ MY22 890 ಅಡ್ವೆಂಚರ್ R ಅನ್ನು ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶಿಸಿತು. ADV 889cc, ಸಮಾನಾಂತರ ಟ್ವಿನ್ ಎಂಜಿನ್ ಅನ್ನು ಪಡೆಯುತ್ತದೆ, ಇದು 8,000 rpm ನಲ್ಲಿ 104 bhp ಮತ್ತು 6,500 rpm ನಲ್ಲಿ 100 Nm ಗರಿಷ್ಠ ಟಾರ್ಕ್ ಹೊರ ಹಾಕಬಲ್ಲದು. ಇದನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಭಾರತದಲ್ಲಿ ಅಧಿಕೃತ ಬಿಡುಗಡೆಯ ವಿವರಗಳು ಇನ್ನೂ ತಿಳಿದುಬಂದಿಲ್ಲ.

Most Read Articles

Kannada
English summary
New bikes unveiled at ibw 2022 822 himalayan showcased
Story first published: Wednesday, December 7, 2022, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X