ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, ದೇಶೀಯ ಮಾರುಕಟ್ಟೆಯಲ್ಲಿ ತನ್ನ ಹೆಚ್ಚು ಮಾರಾಟವನ್ನು ದಾಖಲಿಸುವ ಸುಜುಕಿ ಆಕ್ಸೆಸ್ 125 ಮಾದರಿಗೆ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಹೊಸ ಸುಜುಕಿ ಆಕ್ಸೆಸ್ 125 ಸ್ಕೂಟರ್ ಈಗ ಆಕರ್ಷಣೀಯ ಲುಕ್‌ನಲ್ಲಿ ಡ್ಯುಯಲ್ ಟೋನ್ ಬಣ್ಣ ಆಯ್ಕೆಯೊಂದಿಗೆ ಲಭ್ಯವಿದೆ. ಹೊಸದಾಗಿ ಬಿಡುಗಡೆಯಾದ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನಲ್ಲಿನ ಹೊಸ ಡ್ಯುಯಲ್-ಟೋನ್ ಬಣ್ಣದ ಯೋಜನೆಯು ಸಾಲಿಡ್ ಐಸ್ ಗ್ರೀನ್ / ಪರ್ಲ್ ಮಿರಾಜ್ ಬಣ್ಣ ಸಂಯೋಜನೆಯನ್ನು ಹೊಂದಿದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಈ ಡ್ಯುಯಲ್-ಟೋನ್ ಬಣ್ಣ ಸಂಯೋಜನೆಯು ರೈಡ್ ಕನೆಕ್ಟ್ ಎಡಿಷನ್ (ಡಿಸ್ಕ್), ರೈಡ್ ಕನೆಕ್ಟ್ ಎಡಿಷನ್ (ಡ್ರಮ್) ಮತ್ತು ಸ್ಪೆಷಲ್ ಎಡಿಷನ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಡ್ಯುಯಲ್-ಟೋನ್ ಮಾಡೆಲ್ ಆಕ್ಸೆಸ್ 125 ಸ್ಕೂಟರ್ ಮಾರುಕಟ್ಟೆಯಲ್ಲಿ ರೂ. 83,000 (ಎಕ್ಸ್-ಶೋರೂಂ, ಭಾರತ) ರೂ.ನಿಂದ ಪ್ರಾರಂಭವಾಗುತ್ತದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಇವುಗಳಲ್ಲಿ ಅತ್ಯಂತ ದುಬಾರಿಯಾದ ಸುಜುಕಿ ಆಕ್ಸೆಸ್ 125 ರೈಡ್ ಕನೆಕ್ಟ್ ಎಡಿಷನ್ (ಡಿಸ್ಕ್) ವೇರಿಯೆಂಟ್ ಬೆಲೆಯು ರೂ. 87,200 (ಎಕ್ಸ್ ಶೋ ರೂಂ, ಭಾರತ)ಇದೆ. ಸುಜುಕಿ ಆಕ್ಸೆಸ್ 125 ರೈಡ್ ಕನೆಕ್ಟ್ ಎಡಿಷನ್ (ಡ್ರಮ್) ರೂಪಾಂತರವು ರೂ. 85,200 ಬೆಲೆಯೊಂದಿಗೆ (ಎಕ್ಸ್ ಶೋ ರೂಂ, ಭಾರತ) ಬರುತ್ತದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಪ್ರಸ್ತುತ ಹಬ್ಬದ ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಹೊಸ ಗ್ರಾಹಕರನ್ನು ಆಕರ್ಷಿಸಲು ಈ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ. ಹೊಸ ಬಣ್ಣದ ಆಯ್ಕೆಯ ಹೊರತಾಗಿ, ಈ ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಯಾವುದೇ ಕಾಸ್ಮೆಟಿಕ್ ಮತ್ತು ಮೆಕ್ಯಾನಿಕಲ್ ನವೀಕರಣಗಳನ್ನು ಪಡೆದಿಲ್ಲ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಆಕ್ಸೆಸ್ 125 ಸ್ಕೂಟರ್ ಅದೇ 124 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 6,750 rpm ನಲ್ಲಿ 8.6 bhp ಮತ್ತು 5,500 rpm ನಲ್ಲಿ 10 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು CVT ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಒಟ್ಟಾರೆಯಾಗಿ ಹೊಸ ಸುಜುಕಿ ಆಕ್ಸೆಸ್ 125 ಡ್ಯುಯಲ್-ಟೋನ್ ರೂಪಾಂತರವು ಸಾಕಷ್ಟು ರಿಫ್ರೆಶ್ ಆಗಿ ಕಾಣುತ್ತಿದ್ದು, ಈ ಹಬ್ಬದ ಸೀಸನ್‌ನಲ್ಲಿ ಉತ್ತಮ ಮಾರಾಟವನ್ನು ಕಂಪನಿಯು ನಿರೀಕ್ಷಿಸುತ್ತದೆ. ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ರೈಡ್ ಕನೆಕ್ಟ್ ಆವೃತ್ತಿಯು ಸಂಪೂರ್ಣ ಲೋಡ್ ಮಾಡಲಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಇದು ಸ್ಮಾರ್ಟ್‌ಫೋನ್ ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇನ್‌ಕಮಿಂಗ್ ಕಾಲ್ಸ್, SMS ಮತ್ತು WhatsApp ನೋಟಿಫಿಕೇಷನ್ ಡಿಸ್ಪ್ಲೇ, ಮಿಸ್ಡ್ ಕಾಲ್‌ಗಳು ಮತ್ತು ಓದದ SMS ನೋಟಿಫಿಕೇಷನ್‌ಗಳಂತಹ ಇತರ ಉಪಯುಕ್ತ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಅಲ್ಲದೆ, ಇದು ಸವಾರರಿಗೆ ಸಹಾಯ ಮಾಡಲು ಇತರ ಎಚ್ಚರಿಕೆಗಳಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಫೋನ್ ಬ್ಯಾಟರಿ ಮಟ್ಟದ ಪ್ರದರ್ಶನ, ಎಸ್ಟಿಮೇಟೆಡ್ ಅರೈವಲ್ ಟೈಮ್ ಮತ್ತು USB ಚಾರ್ಜಿಂಗ್ ಪಾಯಿಂಟ್ ಅನ್ನು ಸಹ ಇದರಲ್ಲಿ ನೀಡಲಾಗಿದೆ. ಸುಜುಕಿ ಆಕ್ಸೆಸ್ 125 ರೈಡ್ ಕನೆಕ್ಟ್ ಎಡಿಷನ್ ಸ್ಕೂಟರ್‌ನಲ್ಲಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಳಕೆದಾರರು ತಮ್ಮ ಮೊಬೈಲ್ ಅನ್ನು ಸ್ಕೂಟರ್‌ನೊಂದಿಗೆ ಸಿಂಕ್ ಮಾಡಲು ಅನುಮತಿಸುತ್ತದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಜೊತೆಗೆ ಸುಜುಕಿ ಆಕ್ಸೆಸ್ 125 ರೈಡ್ ಕನೆಕ್ಟ್ ಆವೃತ್ತಿಯು ಎಲ್ಇಡಿ ಹೆಡ್‌ಲ್ಯಾಂಪ್, ಬಾಹ್ಯ ಇಂಧನ ತುಂಬುವ ಮುಚ್ಚಳ, ಎಲ್‌ಇಡಿ ಪೊಸಿಷನ್ ಲೈಟ್‌ಗಳಂತಹ ಇತರ ವೈಶಿಷ್ಟ್ಯಗಳನ್ನು ಸಹ ಪಡೆದಿದೆ. ಇದು ಬ್ಲೂಟೂತ್ ಆಧಾರಿತ ಸಂಪರ್ಕ ವೇದಿಕೆಯೊಂದಿಗೆ ಬರುತ್ತದೆ. ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್ ಮೂಲಕ, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಸಹಾಯದಿಂದ ವಿವಿಧ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಪ್ರವೇಶಿಸಬಹುದು.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಹೊಸ ವೇರಿಯೆಂಟ್ ಕುರಿತು ಮಾತನಾಡಿದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸತೋಶಿ ಉಚಿಡಾ, "ನಾವು ಹಬ್ಬದ ತಿಂಗಳನ್ನು ಪ್ರವೇಶಿಸುತ್ತಿರು ಹಿನ್ನೆಲೆ ಹಬ್ಬಗಳಿಗೆ ಇನ್ನಷ್ಟು ಉತ್ಸಾಹವನ್ನು ಸೇರಿಸಲು ಸುಜುಕಿ ಆಕ್ಸೆಸ್ 125 ಗಾಗಿ ಅತ್ಯಾಕರ್ಷಕ ಹೊಸ ಬಣ್ಣದ ರೂಪಾಂತರವನ್ನು ನೀಡುತ್ತಿರುವುದಕ್ಕೆ ಸಂತೋಷಪಡುತ್ತೇವೆ. ವಾಹನವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಮತ್ತು ದೇಶದಾದ್ಯಂತ ಜನರ ಹೃದಯವನ್ನು ಗೆದ್ದಿದೆ ಎಂದರು."

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಇದು ಹೀಗಿದ್ದರೇ ಸುಜುಕಿ ತನ್ನ ಇತ್ತೀಚಿನ ರೆಟ್ರೊ ಶೈಲಿಯ ಐಷಾರಾಮಿ ಮೋಟಾರ್‌ಸೈಕಲ್ ಸುಜುಕಿ ಕಟಾನಾವನ್ನು ಕೆಲವು ತಿಂಗಳ ಹಿಂದೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಕಟಾನಾ ಬೈಕ್ ಬೆಲೆ ರೂ. 13.61 ಲಕ್ಷ (ಎಕ್ಸ್ ಶೋ ರೂಂ, ದೆಹಲಿ)ಯಂತೆ ನಿಗಧಿ ಪಡಿಸಲಾಗಿದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಹೊಸ 2022 ಸುಜುಕಿ ಕಟಾನಾ ಬೈಕ್ 999 ಸಿಸಿ ಫ್ಯೂಲ್-ಇಂಜೆಕ್ಟೆಡ್, ಫೋರ್-ಸ್ಟ್ರೋಕ್, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ, ಇನ್‌ಲೈನ್ ಫೋರ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 11,000 rpm ನಲ್ಲಿ 150.1 bhp ಪವರ್ ಮತ್ತು 9,250 rpm ನಲ್ಲಿ 106 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ: ಬೆಲೆಯಲ್ಲಿ ಬದಲಾವಣೆ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಹೋಂಡಾ ಆ್ಯಕ್ಟೀವಾ ನಂತರ ಮಾರಟದಲ್ಲಿ ಎರಡನೇ ಸ್ಥಾನದಲ್ಲಿರುವ ಸುಜುಕಿ ಆಕ್ಸಿಸ್ 125, ಸ್ಕೂಟರ್ ವಿಭಾದಲ್ಲಿ ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ. ಇದೀಗ ಹಬ್ಬದ ಸೀಸನ್‌ನಲ್ಲಿ ಪರಿಚಯಿಸಿರುವ ಹೊಸ ಬಣ್ಣಗಳ ಆಯ್ಕೆಯು ಮಾರಾಟವನ್ನು ಮತ್ತಷ್ಟು ಹೆಚ್ಚಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಈ ಹೊಸ ಬಣ್ಣದ ಆಯ್ಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ತಿಳಿಸಿ.

Most Read Articles

Kannada
Read more on ಸುಜುಕಿ suzuki
English summary
New Dual Tone Suzuki Axis 125 Scooter Launch
Story first published: Tuesday, October 4, 2022, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X