ಸಿಂಗಲ್ ಚಾರ್ಜ್‌ನಲ್ಲಿ 240 ಕಿ.ಮೀ ಮೈಲೇಜ್: ಕೈಗೆಟುಕುವ ಬೆಲೆಗೆ ಹೊಸ ಇವಿ ಸ್ಕೂಟರ್ ಬಿಡುಗಡೆ

'iVOOMi ಎನರ್ಜಿ' ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ 'S1' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈಗ ಇದೇ ಕಂಪನಿ ಇನ್ನೂ ಮೂರು ನವೀಕರಿಸಿದ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ 'ಐವೋಮಿ ಎನರ್ಜಿ' ಬಿಡುಗಡೆ ಮಾಡಿರುವ ಹೊಸ 'ಎಸ್1' ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ. 69,999 ಇದ್ದರೇ, ಟಾಪ್ ಎಂಡ್ ಮಾಡೆಲ್ ಬೆಲೆ ರೂ. 1.12 ಲಕ್ಷವಿದೆ (ಎರಡು ಎಕ್ಸ್ ಶೋ ರೂಂ ಬೆಲೆಗಳ).

ಸಿಂಗಲ್ ಚಾರ್ಜ್‌ನಲ್ಲಿ 240 ಕಿ.ಮೀ ಮೈಲೇಜ್: ಕೈಗೆಟುಕುವ ಬೆಲೆಗೆ ಹೊಸ ಇವಿ ಸ್ಕೂಟರ್ ಬಿಡುಗಡೆ

ಹೊಸ Ivomi S1 ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ S1 80, S1 200 ಮತ್ತು S1 240 ರೂಪಾಂತರಗಳಾಗಿವೆ. Ivomi S1 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಂಪನಿಯ ಎಲ್ಲಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಡಿಸೆಂಬರ್ 01, 2022 ರಿಂದ ಗ್ರಾಹಕರಿಗೆ ಲಭ್ಯವಿರುತ್ತವೆ. ಆದ್ದರಿಂದ ಆಸಕ್ತ ಖರೀದಿದಾರರು ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸುಲಭವಾಗಿ ಖರೀದಿಸಬಹುದ್ದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಬಹುದು.

Ivomi S1 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದೇ ಚಾರ್ಜ್‌ನಲ್ಲಿ ಗರಿಷ್ಠ 240 ಕಿಲೋಮೀಟರ್ (S1 240 ರೂಪಾಂತರ) ವ್ಯಾಪ್ತಿಯನ್ನು ನೀಡುತ್ತವೆ ಎಂದು ಕಂಪನಿಯು ದೃಢಪಡಿಸಿದೆ. ಈ ಮಟ್ಟದ ಮೈಲೇಜ್ ನೀಡಲು ಇದು 4.2 kW ಟ್ವಿನ್ ಬ್ಯಾಟರಿ ಪ್ಯಾಕ್ ಮತ್ತು 2.5 kW ಮೋಟಾರ್ ಹೊಂದಿದೆ. ಜೊತೆಗೆ S1 80 ರೂಪಾಂತರವು ಒಂದೇ ಚಾರ್ಜ್‌ನಲ್ಲಿ ಗರಿಷ್ಠ 80 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. S1 80 ರೂಪಾಂತರವು 1.5 kW ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಇದು ಗಂಟೆಗೆ ಗರಿಷ್ಠ 55 ಕಿಲೋಮೀಟರ್ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮೂರು ರೈಡಿಂಗ್ ಮೋಡ್‌ಗಳನ್ನು ಪ್ರಮಾಣಿತವಾಗಿ ಹೊಂದಿವೆ. ಅವುಗಳೆಂದರೆ ಇಕೋ ಮೋಡ್, ರೈಡರ್ ಮೋಡ್ ಮತ್ತು ಸ್ಪೋರ್ಟ್ ಮೋಡ್. ಕಂಪನಿಯ ಈ ಹಿಂದಿನ S1 ಮಾದರಿಯು ಸಹ ರೂ. 85,000 (ಎಕ್ಸ್ ಶೋ ರೂಂ) ಲಭ್ಯವಿದೆ. ಇದು ಕೂಡ ಉತ್ತಮ ಬೇಡಿಕೆಯೊಂದಿಗೆ ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ.

Ivomi S1 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿವೆ. ಅವು ಪೀಕಲ್ ಬ್ಲೂ, ನೈಟ್ ಮರೂನ್ ಮತ್ತು ಈವ್‌ನಿಂಗ್ ಬ್ಲಾಕ್ ಬಣ್ಣಗಳು. ಇವೆಲ್ಲವೂ ಸಹ ಬಹಳ ಆಕರ್ಷಕ ಬಣ್ಣಗಳಾಗಿದ್ದು, ಸ್ಕೂಟರ್‌ನ ಸ್ಟೈಲ್ ಹೆಚ್ಚಿಸಲು ಸಹಕರಿಸುತ್ತವೆ. ಅದೇ ಸಮಯದಲ್ಲಿ ಈ ಎಲೆಕ್ಟ್ರಿಕ್ 'iVOOMi ಸ್ಕೂಟರ್‌ಗಳು ಜಿಪಿಎಸ್ ಟ್ರ್ಯಾಕರ್ ಮತ್ತು ಮಾನಿಟರಿಂಗ್ ಸಿಸ್ಟಮ್‌ನೊಂದಿಗೆ 'ಫೈಂಡ್ ಮೈ ರೈಡ್' ಎಂಬ ಇತ್ತೀಚಿನ ವೈಶಿಷ್ಟ್ಯದೊಂದಿಗೆ ಬರುತ್ತವೆ.

Ivomi S1 ಸರಣಿಯ ಸ್ಕೂಟರ್‌ಗಳು ಆಧುನಿಕ ವೈಶಿಷ್ಟ್ಯಗಳೊಂದಿಗೆ ಸರಳ ವಿನ್ಯಾಸವನ್ನು ಹೊಂದಿವೆ. ಆದ್ದರಿಂದ ಅವು ನೋಡುಗರಿಗೆ ಹೆಚ್ಚು ಆಕರ್ಷಕವಾಗಿವೆ. ಅಲ್ಲದೆ, ಉನ್ನತ-ಮಟ್ಟದ ರೂಪಾಂತರವು ಒಂದೇ ಚಾರ್ಜ್‌ನಲ್ಲಿ 240 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ, ಆದ್ದರಿಂದ ಹೆಚ್ಚಿನ ಖರೀದಿದಾರರು ಈ ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವ ಸಾಧ್ಯತೆಯಿದೆ. ಈ ಸ್ಕೂಟರ್‌ಗಳ ಖರೀದಿಯಲ್ಲಿ ಫೈನಾನ್ಸ್ ಆಪ್ಷನ್ ಸಹ ಲಭ್ಯವಿದ್ದು, ಗ್ರಾಹಕರಿಗೆ ಉತ್ತಮ ಸೌಲಭ್ಯಗಳು ಇದರಡಿ ಸಿಗಲಿವೆ ಎಂದು ಕಂಪನಿ ತಿಳಿಸಿದೆ.

ಐವೊಮಿ ಎನರ್ಜಿ ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇದರ ಭಾಗವಾಗಿ ದೇಶೀಯ ಮಾರುಕಟ್ಟೆಯಲ್ಲಿ ಕಾಲಕಾಲಕ್ಕೆ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಹೊಸ Ivomi ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮ ಮಾರಾಟವನ್ನು ಪಡೆಯುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಕಂಪನಿಯು ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸುವ ಸಾಧ್ಯತೆಯಿದೆ.

Most Read Articles

Kannada
English summary
New ivoomi ev scooter launched at an affordable price in india
Story first published: Wednesday, November 23, 2022, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X