ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ ತನ್ನ ಹೊಸ ಟೈಗರ್ 1200 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಟ್ರಯಂಫ್ ಕಂಪನಿಯು ಹೊಸ ಟೈಗರ್ 1200 ಬೈಕಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಟ್ರಯಂಫ್ ಟೈಗರ್ 1200(Triumph Tiger 1200) ಬೈಕ್ 2022ರ ಮೇ ತಿಂಗಳ 24 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಟ್ರಯಂಫ್ ಟೈಗರ್ 1200 ಬೈಕ್ ಕ್ಲಾಸ್ ಲೀಡಿಂಗ್ ಹ್ಯಾಂಡ್ಲಿಂಗ್‌ನೊಂದಿಗೆ ಗಮನಾರ್ಹವಾಗಿ ಹಗುರವಾದ, ಹೆಚ್ಚು ಪವರ್ ಫುಲ್ ಆಗಿದೆ. ಈ ಹೊಸ ಟೈಗರ್ 1200 ಸಂಪೂರ್ಣವಾಗಿ ಹೊಸ ಬೈಕ್ ಆಗಿದ್ದು, ಹೆಚ್ಚು ಪವರ್, ಹೊಸ ಚಾಸಿಸ್ ಮತ್ತು ಕಡಿಮೆ ತೂಕದೊಂದಿಗೆ ಹೊಸ ಟ್ರಿಪಲ್ ಎಂಜಿನ್ ಅನ್ನು ಒಳಗೊಂಡಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟೈಗರ್ 900 ನಂತೆ, 2022ರ ಟ್ರಯಂಫ್ ಟೈಗರ್ 1200 ಬೈಕ್ ಅನ್ನು ಎರಡು ಮಾದರಿಗಳಲ್ಲಿ ನೀಡಲಾಗುವುದು, ಇದರಲ್ಲಿ ಟೈಗರ್ 1200 ಜಿಟಿ ಮಾದರಿಯು ಹೆಚ್ಚು ರಸ್ತೆ-ಆಧಾರಿತವಾಗಿದೆ, ಆದರೆ ಟೈಗರ್ 1200 ರ್‍ಯಾಲಿ ಮಾದರಿಯು ಹೆಚ್ಚು ಆಫ್-ರೋಡ್ ಆಧಾರಿತವಾಗಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2022ರ ಟ್ರಯಂಫ್ ಟೈಗರ್ 1200 ಜಿಟಿ 19-ಇಂಚಿನ ಮುಂಭಾಗ ಮತ್ತು 18-ಇಂಚಿನ ಹಿಂಬದಿಯು ಅಲ್ಯೂಮಿನಿಯಂ ವ್ಹೀಲ್ ಗಳನ್ನು ಹೊಂದಿವೆ. ಆದರೆ ರ್‍ಯಾಲಿ ಮಾದರಿಯು ಎಲ್ಲಾ ರೀತಿ ಕಠಿಣ ಭೂಪ್ರದೇಶಗಳಲ್ಲಿಯು ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ, ಇದರ ಮುಂಭಾಗ 21-ಇಂಚಿನ ಮತ್ತು ಹಿಂಭಾಗ 18-ಇಂಚಿನ ಟ್ಯೂಬ್‌ಲೆಸ್ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿವೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಟ್ರಯಂಫ್ ಟೈಗರ್ 1200 ಬೈಕ್ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1,160 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಹೊಸ ಟಿ-ಪ್ಲೇನ್ ಕ್ರ್ಯಾಂಕ್, ಫೈರಿಂಗ್ ಆರ್ಡರ್‌ನೊಂದಿಗೆ, ಕಡಿಮೆ ಟ್ರಾಕ್ಟಬಿಲಿಟಿ ಮತ್ತು ರೆಸ್ಪಾನ್ಸಿವ್‌ನೆಸ್ ಅನ್ನು ವರ್ಧಿಸುತ್ತದೆ ಎಂದು ಹೇಳಲಾಗುತ್ತಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಜೊತೆಗೆ ಹೆಚ್ಚು ರೋಮಾಂಚನಕಾರಿ ಮತ್ತು ಆಕರ್ಷಕವಾಗಿದೆ ಟಾಪ್-ಎಂಡ್ ಪ್ರತಿಕ್ರಿಯೆ ಮತ್ತು ಅನುಭವಕ್ಕೆ ಮಧ್ಯಮ ಶ್ರೇಣಿಯ ಕಾರ್ಯಕ್ಷಮತೆ ಉತ್ತಮವಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 148 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 130 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಎಂಜಿನ್ ಉತ್ತಮ ವೇಗವರ್ಧಕವನ್ನು ಹೊಂದಿದೆ ಎಂದು ಹೇಳಲಾಗುತ್ತದೆ ಮತ್ತು ಹೊಸ ಹಗುರವಾದ, ಕಡಿಮೆ ನಿರ್ವಹಣೆ ಶಾಫ್ಟ್ ಡ್ರೈವ್ ಅನ್ನು ಸಹ ಒಳಗೊಂಡಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟೈಗರ್ 1200 ಜಿಟಿ ಮತ್ತು ರ್‍ಯಾಲಿ ಫ್ಯಾಮಿಲಿಗಳೆರಡೂ ಮೊದಲ ಬಾರಿಗೆ ಎರಡು ಹೊಸ 30-ಲೀಟರ್ ಟ್ಯಾಂಕ್ ಟೈಗರ್ 1200 ಜಿಟಿ ಎಕ್ಸ್‌ಪ್ಲೋರರ್ ಮತ್ತು ಟೈಗರ್ 1200 ರ್ಯಾಲಿ ಎಕ್ಸ್‌ಪ್ಲೋರರ್ ಆಯ್ಕೆಗಳನ್ನು ಹೊಂದಿವೆ. ಈ ಟೈಗರ್ 1200 ಜಿಟಿ, 1200 ಜಿಟಿ , ಹಾಗೆಯೇ 1200 ರ್‍ಯಾಲಿ ಮತ್ತು 1200 ರ್‍ಯಾಲಿ ಪ್ರೊ ಗಳು 20-ಲೀಟರ್ ಇಂಧನ ಟ್ಯಾಂಕ್‌ಗಳೊಂದಿಗೆ ಬಿಡುಗಡೆಯಾಗಲಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಪ್ರಕಾರ, ಫ್ಯೂಯಲ್ ಟ್ಯಾಂಕ್ ವಸ್ತುವು ಆಲ್-ಅಲ್ಯೂಮಿನಿಯಂ ಆಗಿದ್ದು, ಹಿಂದಿನ ತಲೆಮಾರಿನ ಟೈಗರ್ 1200 ಮಾದರಿಗಳಿಗಿಂತ ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವನ್ನು ನೀಡುತ್ತದೆ. ಒಟ್ಟಾರೆಯಾಗಿ, ಹೊಸ ಟ್ರಯಂಫ್ ಟೈಗರ್ 1200 ಹಿಂದಿನ ತಲೆಮಾರಿನ ಮಾದರಿಗಿಂತ 25 ಕೆಜಿ ಹಗುರವಾಗಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಹಗುರ ತೂಕದ ಚಾಸಿಸ್ ಬೋಲ್ಟ್-ಆನ್ ರಿಯರ್ ಅಲ್ಯೂಮಿನಿಯಂ ಸಬ್‌ಫ್ರೇಮ್ ಮತ್ತು ಪಿಲಿಯನ್ ಹ್ಯಾಂಗರ್‌ಗಳೊಂದಿಗೆ ಅಲ್ಯೂಮಿನಿಯಂ ಫ್ರೇಮ್, ಜೊತೆಗೆ ಹೊಸ ಹಗುರವಾದ ಮತ್ತು ಬಲವಾದ 'ಟ್ರೈ-ಲಿಂಕ್' ಸ್ವಿಂಗರ್ಮ್ ಅನ್ನು ಒಳಗೊಂಡಿದೆ. ಹೊಸ ಫ್ರೇಮ್ ಹಿಂದಿನ ತಲೆಮಾರಿನ ಮಾದರಿಗಿಂತ 5.4 ಕೆಜಿ ಹಗುರವಾಗಿದೆ. ಈ ಟೈಗರ್ 1200 ಬೈಕ್ ಬ್ರೆಂಬೊ ಸ್ಟೈಲ್ಮಾ ಮೊನೊಬ್ಲಾಕ್ ಬ್ರೇಕ್‌ಗಳನ್ನು ಸಹ ಒಳಗೊಂಡಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಜೊತೆಗೆ ಆಪ್ಟಿಮೈಸ್ಡ್ ಕಾರ್ನರಿಂಗ್ ಎಬಿಎಸ್, ಐಎಂಯು ಫೀಚರ್, ಸಸ್ಪೆಂಕ್ಷನ್ ಸುಧಾರಿತ ಶೋವಾ ಸೆಮಿ-ಆಕ್ಟಿವ್ ಸೆಟಪ್ ಅನ್ನು ಗರಿಷ್ಠ ರಸ್ತೆ ಮತ್ತು ಆಫ್-ರೋಡ್ ಸಾಮರ್ಥ್ಯಕ್ಕಾಗಿ ಟ್ಯೂನ್ ಮಾಡಲಾಗಿದೆ. ಹೊಸ ಟೈಗರ್ 1200 ಬೈಕ್ ಹೊಸ ಟ್ರಯಂಫ್ ಬ್ಲೈಂಡ್ ಸ್ಪಾಟ್ ರಾಡಾರ್ ಸಿಸ್ಟಂ ಅನ್ನು ಹೊಂದಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದನ್ನು ಕಾಂಟಿನೆಂಟಲ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಜಿಟಿ ಎಕ್ಸ್‌ಪ್ಲೋರರ್ ಮತ್ತು ರ್ಯಾಲಿ ಎಕ್ಸ್‌ಪ್ಲೋರರ್ ಮಾದರಿಗಳಲ್ಲಿ ಮಾತ್ರ ನೀಡಲಾಗುತ್ತದೆ. ಇದರಲ್ಲಿ ಆರು ರೈಡಿಂಗ್ ಮೋಡ್‌ಗಳು ಲಭ್ಯವಿವೆ, ಇದು ಎಲ್ಲಾ ರೈಡಿಂಗ್ ಪರಿಸ್ಥಿತಿಗಳಲ್ಲಿ ಗರಿಷ್ಠ ರೈಡರ್ ನಿಯಂತ್ರಣಕ್ಕಾಗಿ ಥ್ರೊಟಲ್ ರೆಸ್ಪಾನ್, ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಸಸ್ಪೆಂಕ್ಷನ್ ಸೆಟ್ಟಿಂಗ್‌ಗಳನ್ನು ಹೊಂದಿಸುತ್ತದೆ. ಈ ಟ್ರಯಂಫ್ ಟೈಗರ್ 1200 ಬೈಕ್ ಆಫ್-ರೋಡ್ ಪ್ರೊ ರೈಡಿಂಗ್ ಮೋಡ್, ರ್‍ಯಾಲಿ ಪ್ರೊ ಮತ್ತು ರ್‍ಯಾಲಿ ಎಕ್ಸ್‌ಪ್ಲೋರರ್ ಮಾದರಿಗಳಿಗೆ ಪ್ರತ್ಯೇಕವಾಗಿಸುತ್ತದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದು ಎಬಿಎಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಆಫ್ ಮಾಡಲಾಗಿದೆ ಮತ್ತು ಆಫ್-ರೋಡ್ ಥ್ರೊಟಲ್ ಮ್ಯಾಪ್ ನೊಂದಿಗೆ ಸುಧಾರಿತ ಆಫ್-ರೋಡ್ ಅಡ್ವೆಂಚರ್ ಗಾಗಿ ಟ್ರಯಂಫ್‌ನ ಅತ್ಯಂತ ತೀವ್ರವಾದ ಆಫ್-ರೋಡ್ ಸೆಟಪ್ ಆಗಿದೆ. ರೈನ್ ಮೋಡ್ ಅನ್ನು ಹೆಚ್ಚಿನ ಹಸ್ತಕ್ಷೇಪವನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಪರಿಸ್ಥಿತಿಗಳು ರಾಜಿಯಾದಾಗ ವರ್ಧಿತ ಸುರಕ್ಷತೆ ಮತ್ತು ನಿಯಂತ್ರಣಕ್ಕಾಗಿ 100PS ಗೆ ಸೀಮಿತವಾಗಿದೆ. ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ಸೂಟ್ ಕಾರ್ನರ್ ಎಬಿಎಸ್ ಮತ್ತು ಕಾರ್ನರ್ ಮಾಡುವ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದರೊಂದಿಗೆ ಹಿಲ್-ಹೋಲ್ಡ್ ಸಿಸ್ಟಮ್ ಮತ್ತು ಸ್ಟ್ಯಾಂಡರ್ಡ್ ಕ್ವಿಕ್‌ಶಿಫ್ಟರ್ (ಜಿಟಿಯಲ್ಲಿ ಲಭ್ಯವಿಲ್ಲ). 7-ಇಂಚಿನ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮೂಲಕ ಎಲ್ಲಾ ಪ್ರಮುಖ ಮಾಹಿತಿಯನ್ನು ಪ್ರವೇಶಿಸಬಹುದು, ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಮ್ ಅನ್ನು ಎಲ್ಲಾ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ, ಈ ಹೊಸ ಬೈಕಿನಲ್ಲಿ ಫೋನ್ ಕರೆಗಳು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು GoPro ಕಂಟ್ರೋಲ್ ಅನ್ನು ಸಕ್ರಿಯಗೊಳಿಸುತ್ತದೆ.

ಹೊಸ ಟ್ರಯಂಫ್ ಟೈಗರ್ 1200 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2022ರ ಟ್ರಯಂಫ್ ಟೈಗರ್ 1200 ಮಾದರಿಗಳು 3 ವರ್ಷಗಳು, ಅನಿಯಮಿತ ಕಿಲೋಮೀಟರ್ ಮೈಲೇಜ್ ವಾರಂಟಿ ಮತ್ತು ವಿಸ್ತರಿಸುವ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ. ಈ ಹೊಸ ಟ್ರಯಂಫ್ ಟೈಗರ್ 1200 ಬೈಕ್ ಭಾರತೀಯ ಮಾರುಕಟ್ಟೆಯನ್ನು ಇದೇ ತಿಂಗಳಿನಲ್ಲಿ ಪ್ರವೇಶಿಸಲಿದೆ.. ಇನ್ನು ಈ ಹೊಸ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಅಂದಾಜು ರೂ.15 ಲಕ್ಷವಾಗಿರಬಹುದು.

Most Read Articles

Kannada
English summary
New triumph tiger 1200 india launch date revealed details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X