Just In
- 48 min ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 1 hr ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
- 1 hr ago
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
- 2 hrs ago
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಟೊಯೊಟಾ ಹೈರೈಡರ್ ಎಸ್ಯುವಿ
Don't Miss!
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Sports
Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?
- News
ಹೆಂಡತಿಯಿಂದ ಡೈವೋರ್ಸ್ ನಿರಾಕರಣೆ, ಮಾವನಿಗೆ ಬೆಂಕಿಯಿಟ್ಟ ಭೂಪ..!
- Movies
ದಿವ್ಯಾಗೆ ಸತ್ಯ ಹೇಳಿ ಸಿಕ್ಕಿ ಬಿದ್ದ ಬಾಲ!
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಮಾರ್ಚ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್10 500cc ಪ್ಲಸ್ ಬೈಕ್‌ಗಳಿವು!
ಭಾರತವು ಆಟೋ ಉದ್ಯಮದಲ್ಲಿ ಬಹುದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ನಿತ್ಯ ಸಾವಿರಾರು ವಾಹನಗಳು ದೇಶದಲ್ಲಿ ಮಾರಾಟವಾಗುತ್ತಿರುತ್ತವೆ. ಕಡಿಮೆ ಬೆಲೆಯ ಬೈಕ್‌ಗಳಿಗೆ ದೇಶದಲ್ಲಿ ಯಾವಾಗಲೂ ಮಾರುಕಟ್ಟೆ ಇರುತ್ತದೆಯಾದರೂ, ಸೀಮಿತ ಸಂಖ್ಯೆಯ ಉನ್ನತ ಮಟ್ಟದ ಮೋಟಾರ್‌ಸೈಕಲ್‌ಗಳ ಮಾರಾಟ ಕಡಿಮೆಯೆಂದೇ ಹೇಳಬಹುದು.

ಏಕೆಂದರೆ ಇವುಗಳ ಬೆಲೆ, ನಿರ್ವಹಣೆ ವೆಚ್ಚ ಅಧಿಕವಾಗಿರುವುದರಿಂದ ಬಹುತೇಕ ಶ್ರೀಮಂತರೇ ಈ ವಾಹನಗಳನ್ನು ಖರೀದಿಸುತ್ತಾರೆ. ಭಾರತದಲ್ಲಿ ಮಾರ್ಚ್ 2022 ರಲ್ಲಿ ಮಾರಾಟವಾದ 500cc ಪ್ಲಸ್ ಬೈಕ್‌ಗಳನ್ನು ನೋಡುವುದಾದರೆ, ಕಳೆದ ಮಾರ್ಚ್‌ನಲ್ಲಿ 500 ಸಿಸಿಗಿಂತ ಹೆಚ್ಚಿನ ಸಿಸಿ ಹೊಂದಿರುವ ಒಟ್ಟು 1,619 ಮೋಟಾರ್‌ಸೈಕಲ್‌ಗಳು ಮಾರಾಟವಾಗಿವೆ. ಈ ಅಂಕಿ ಅಂಶವು ಮಾರ್ಚ್ 2021 ರಲ್ಲಿ ಮಾರಾಟವಾದ 612 ಯುನಿಟ್‌ಗಳಿಗೆ ಹೋಲಿಸಿಕೊಂಡರೆ ಶೇ 164.54% ಹೆಚ್ಚಾಗಿದೆ.

ರಾಯಲ್ ಎನ್‌ಫೀಲ್ಡ್‌ನ 650cc ಟ್ವಿನ್ ಬೈಕ್‌ಗಳು 500cc ಗಿಂತ ಹೆಚ್ಚಿನ ಎಂಜಿನ್‌ಗಳೊಂದಿಗೆ ಹೆಚ್ಚು ಮಾರಾಟವಾಗಿರುವ ಬೈಕ್‌ಗಳಾಗಿವೆ. ಏಕೆಂದರೆ ಇವು ಪರಿಣಾಮಕಾರಿಯೂ ಹೌದು ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಹೆಚ್ಚು ಮಾರಾಟವಾಗಿವೆ. ಹಾಗಾಗಿ ರಾಯಲ್ ಎನ್‌ಫೀಲ್ಡ್‌ನ 650 ಟ್ವಿನ್ ಬೈಕ್‌ಗಳು ಸುಮಾರು 1,226 ಯುನಿಟ್‌ಗಳು ಮಾರಾಟವಾಗುವ ಮೂಲಕ ಶೇ75.73% ಹೆಚ್ಚಳವನ್ನು ಕಂಡಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕೇವಲ 378 ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು ಮಾರಾಟವಾಗಿವೆ. ಈ ವರ್ಗಕ್ಕೆ ಹೋಲಿಸಿದರೆ, ಈ 650 ಸಿಸಿ ಬೈಕ್‌ಗಳ ಮಾರಾಟವು 224.34% ಹೆಚ್ಚಾಗಿದೆ. ರಾಯಲ್ ಎನ್‌ಫೀಲ್ಡ್‌ನ 650 ಅವಳಿ ಬೈಕ್‌ಗಳು ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಎಂಬ ಎರಡು ಮಾದರಿಗಳನ್ನು ಒಳಗೊಂಡಿವೆ.

ಇದರ ನಂತರ ಈ ಪಟ್ಟಿಯಲ್ಲಿರುವ ಮತ್ತೊಂದು ಬೈಕ್ ಎಂದರೆ ನಿಂಜಾ 1000, ಕವಾಸಕಿ ಕಂಪನಿಯು ತಿಂಗಳಿಗೆ 100 ಯೂನಿಟ್‌ಗಳಿಗಿಂತ ಕಡಿಮೆ ಮಾರಾಟವ ಮೂಲಕ 2ನೇ ಸ್ಥಾನದಲ್ಲಿದೆ. ನಿಂಜಾ 1000 ಕವಾಸಕಿಯ 1000ಸಿಸಿ ಬೈಕ್ ಆಗಿದೆ. ಕಳೆದ ತಿಂಗಳಲ್ಲಿ 57 ನಿಂಜಾ 1000 ಬೈಕ್‌ಗಳು ಮಾರಾಟವಾಗಿವೆ. ಆದರೆ ಮಾರ್ಚ್ 2021 ರಲ್ಲಿ ಕೇವಲ 15 ನಿಂಜಾ 1000 ಬೈಕ್‌ಗಳು ಮಾರಾಟವಾಗಿವೆ.

ನಿಂಜಾ ZX-10R, 47 ಯುನಿಟ್‌ಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಇದು ಕವಾಸಕಿ 1000 ಸಿಸಿ ಬೈಕ್ ಆಗಿದೆ. ಈ 1000cc ಬೈಕ್ ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತದಲ್ಲಿ ಮಾರಾಟವಾಗಿರಲಿಲ್ಲ. ಇನ್ನು 4ನೇ ಸ್ಥಾನದಲ್ಲಿ ಕವಾಸಕಿಯ ನಿಂಜಾ 650 ಇದೆ. ಮಾರ್ಚ್ 2021 ರಲ್ಲಿ 37 ಯುನಿಟ್‌ಗಳನ್ನು ಮಾರಾಟ ಮಾಡಿದ್ದ ನಿಂಜಾ 650 ಬೈಕ್, ಈ ವರ್ಷದ ಮಾರ್ಚ್‌ನಲ್ಲಿ ಕೇವಲ 33 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಈ ವಿಭಾಗದಲ್ಲಿ ಈ ಕವಾಸಕಿ 650cc ಬೈಕ್‌ನ ಮಾರಾಟವು 10.81% ಕುಸಿದಿದೆ. ನಿಂಜಾ 650ಗೆ ನೇರ ಪ್ರತಿಸ್ಪರ್ಧಿಯಾಗಿರುವ ಹೋಂಡಾ CBR650F ಈ ವರ್ಷದ ಮಾರ್ಚ್‌ನಲ್ಲಿ 27 ಘಟಕಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಹೋಂಡಾ ಕೇವಲ 10 CBR650F ಬೈಕ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಗದಲ್ಲಿ ಈ ಹೋಂಡಾ ಸ್ಪೋರ್ಟ್ಸ್ ಬೈಕ್‌ನ ಮಾರಾಟವು ಶೇ170ರಷ್ಟು ಹೆಚ್ಚಳ ಕಂಡಿದೆ.

ಇವುಗಳ ನಂತರ ಟ್ರಯಂಫ್ ಟೈಗರ್ 660 6ನೇ ಸ್ಥಾನದಲ್ಲಿದೆ. ಮಾರ್ಚ್ 2021 ರವರೆಗೆ ಮಾರಾಟವಾಗದ ಟ್ರಯಂಫ್ ಬೈಕ್ ಕಳೆದ ತಿಂಗಳು 23 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಇತ್ತೀಚೆಗೆ ಬಿಡುಗಡೆಯಾದ ಹೋಂಡಾ ಆಫ್ರಿಕಾ ಅವಳಿ ಬೈಕ್‌ಗಳ ನವೀಕರಿಸಲಾದ ಮಾದರಿಯು 2022ರ ಮಾರ್ಚ್‌ನಲ್ಲಿ 17 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ಮಾರ್ಚ್ 2021 ರಲ್ಲಿ 9 ಆಫ್ರಿಕಾ ಟ್ವಿನ್ ಬೈಕ್‌ಗಳ ಮಾರಾಟವಾಗಿವೆ.

ಕಳೆದ ತಿಂಗಳು ಟ್ರಯಂಫ್ ಟ್ರೈಡೆಂಟ್ ಬೈಕ್ 16 ಯುನಿಟ್‌ಗಳ ಮಾರಾಟವಾಗಿತ್ತು. ಇದು ಮಾರ್ಚ್ 2021ರಲ್ಲಿ ಮಾರಾಟವಾದ 6 ಘಟಕಗಳಿಗಿಂತ ಹೆಚ್ಚಾಗಿದೆ. ಟ್ರಯಂಫ್ ಟೈಗರ್ 900 ಅಡ್ವೆಂಚರ್ ಬೈಕ್ ಕಳೆದ ತಿಂಗಳು ಕೇವಲ 16 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಮಾರ್ಚ್ 2021 ರಲ್ಲಿ ಇದರ ಮಾರಾಟ ಸಂಖ್ಯೆ 27 ಆಗಿತ್ತು.

ಇದನ್ನು ಗಮನಿಸಿದರೆ ಈ ಟ್ರಯಂಫ್ ಅಡ್ವೆಂಚರ್ ಬೈಕ್‌ನ ಮಾರಾಟವು 40.74% ರಷ್ಟು ಕುಸಿದಿದೆ. 10ನೇ ಸ್ಥಾನದಲ್ಲಿ ಹಾರ್ಲೆ-ಡೇವಿಡ್ಸನ್‌ನ ಪ್ರಸಿದ್ಧ ಫ್ಯಾಟ್ ಪಾಪ್ ಮೋಟಾರ್‌ಸೈಕಲ್ ಇದೆ. ಈ Harley-Davidson ಬೈಕ್ ಕಳೆದ ತಿಂಗಳಲ್ಲಿ 15 ಯುನಿಟ್‌ಗಳನ್ನು ಮಾರಾಟ ಮಾಡಿದೆ. 11 ನೇ ಸ್ಥಾನದಲ್ಲಿ ಟ್ರಯಂಫ್‌ನ ಹೆಚ್ಚಿನ ಕಾರ್ಯಕ್ಷಮತೆಯ ರಾಕೆಟ್ 3 ಮೋಟಾರ್‌ಸೈಕಲ್ ಇದೆ.

ಹಾರ್ಲೆ-ಡೇವಿಡ್ಸನ್ ಫ್ಯಾಟ್ ಪಾಪ್ ಮತ್ತು ಟ್ರಯಂಫ್ ಟೈಗರ್ ತಲಾ 3 ಯೂನಿಟ್‌ಗಳನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಮಾರಾಟವಾಗಿವೆ. ಕವಾಸಕಿ ಬೈಕ್‌ಗಳಾದ ವರ್ಸಸ್ 650, Z650 RS ಮತ್ತು Z900 ಕ್ರಮವಾಗಿ 12, 13 ಮತ್ತು 14ನೇ ಸ್ಥಾನದಲ್ಲಿವೆ. Z900 ಬೈಕ್ ಹೊರತುಪಡಿಸಿ ಉಳಿದೆರಡು ತಲಾ 12 ಯೂನಿಟ್‌ಗಳನ್ನು ಮಾರಾಟ ಮಾಡಿದ್ದರೆ, Z900 10 ಯೂನಿಟ್‌ಗಳನ್ನು ಮಾರಾಟ ಮಾಡಿದೆ.