ದೇಶೀಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಬ್ರಿಟಿಷ್ ಪ್ರೀಮಿಯಂ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್, ಭಾರತದಲ್ಲಿ ತನ್ನ ಕ್ರೋಮ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ. ಸೀಮಿತ ಆವೃತ್ತಿಯ ಕ್ರೋಮ್ ಎಡಿಷನ್‌ಗಳು ಟ್ರಯಂಫ್ ರೆಟ್ರೊ ಲೈನ್‌ಅಪ್‌ನಿಂದ 8 ಬೈಕ್‌ಗಳನ್ನು ಒಳಗೊಂಡಿವೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಈ ಹೊಸ ಮಾದರಿಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರಿಗಾಗಿ ಕಂಪನಿಯು ಬುಕ್ಕಿಂಗ್ ಅನ್ನು ಸಹ ಪ್ರಾರಂಭಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಅಥವಾ 2023 ರ ಆರಂಭದಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ. ಬುಕಿಂಗ್‌ಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಹತ್ತಿರದ ಶೋರೂಂಗೆ ಭೇಟಿ ನೀಡಬಹುದು.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಕ್ಲಾಸಿಕ್ ಕಸ್ಟಮ್‌ನಿಂದ ಸ್ಫೂರ್ತಿ

ಮೋಟರ್‌ಸೈಕಲ್‌ಗಳ ಕ್ರೋಮ್ ಆವೃತ್ತಿಗಳು ಟ್ರಯಂಫ್‌ನ ಪ್ರಮುಖ ಭಾಗವಾಗಿರುವ ಕ್ಲಾಸಿಕ್ ಕಸ್ಟಮ್‌ನಿಂದ ಸ್ಫೂರ್ತಿ ಪಡೆದಿವೆ. ಈ ವಿಶೇಷ ಕ್ರೋಮ್ ಕಲೆಕ್ಷನ್ ಬೈಕುಗಳು 1937 ರ ಸ್ಪೀಡ್ ಟ್ವಿನ್ ನಿಂದ 1960 ರ ಟ್ರೈಟಾನ್ ವರೆಗಿನ ಮಾದರಿಗಳಲ್ಲಿ ಬಳಸಲಾದ ಕ್ರೋಮ್ ಟ್ಯಾಂಕ್ ಅನ್ನು ಒಳಗೊಂಡಿರುವುದು ವಿಶೇಷ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಟ್ರಯಂಫ್ ಒಂದು ವರ್ಷಕ್ಕೆ ಮಾತ್ರ ಕ್ರೋಮ್ ಕಲೆಕ್ಷನ್ ಮಾಡೆಲ್‌ಗಳನ್ನು ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಭಾರತದಲ್ಲೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಟ್ರಯಂಫ್ ಹೊಸದಾಗಿ ಪರಿಚಯಿಸಿರುವ ಕ್ರೋಮ್ ಆವೃತ್ತಿಗಳ ವಿನ್ಯಾಸದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ರಾಕೆಟ್ 3 ಆರ್ ಮತ್ತು 3 ಜಿಟಿ

ರಾಕೆಟ್ 3 R ಮಾದರಿಯು ಜೆಟ್-ಬ್ಲಾಕ್ ಆಕ್ಸೆಂಟ್‌ಗಳೊಂದಿಗೆ (ಉಚ್ಚಾರಣೆಗಳು) ಕ್ರೋಮ್ ಪೆಟ್ರೋಲ್ ಟ್ಯಾಂಕ್ ಅನ್ನು ಪಡೆಕೊಂಡಿದೆ, ಹಾಗೆಯೇ GT ಆವೃತ್ತಿಯು ವಿಶಿಷ್ಟವಾದ ಡಯಾಬ್ಲೋ ರೆಡ್ ಆಕ್ಸೆಂಟ್‌ಗಳನ್ನು ಪಡೆದು ಸ್ಟೈಲಿಷ್ ಆಗಿ ಹೊರಬಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಟ್ರಯಂಫ್ ಜೆಟ್-ಬ್ಲ್ಯಾಕ್ ಫ್ಲೈ ಸ್ಕ್ರೀನ್, ಹೆಡ್‌ಲೈಟ್ ಬೌಲ್‌ಗಳು, ಫ್ರಂಟ್ ಮಡ್‌ಗಾರ್ಡ್, ರೇಡಿಯೇಟರ್ ಕೌಲ್‌ಗಳು, ಸೈಡ್ ಪ್ಯಾನೆಲ್‌ ಮತ್ತು ಆಕ್ಸೆಂಟ್‌ಗಳನ್ನು ಹೊಂದಿಸಲು ಹಿಂಭಾಗದ ಬಾಡಿವರ್ಕ್ ಅನ್ನು ಒಳಗೊಂಡಿದೆ. ಭಾರತದಲ್ಲಿ ರಾಕೆಟ್ 3ಆರ್ ಮಾದರಿಯ ಬೆಲೆ 20.8 ಲಕ್ಷ ರೂ. ಇದ್ದರೇ ರಾಕೆಟ್ 3 ಜಿಟಿ ಬೆಲೆ 21.4 ಲಕ್ಷ ರೂ. ಇದೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಬೊನೆವಿಲ್ಲೆಯಲ್ಲಿ 3 ಕ್ರೋಮ್ ಎಡಿಷನ್‌ಗಳು (T120, ಸ್ಪೀಡ್‌ಮಾಸ್ಟರ್, ಬಾಬರ್)

ಟ್ರಯಂಫ್ ಬೊನೆವಿಲ್ಲೆ T120 ಕ್ರೋಮ್ ಕಲೆಕ್ಷನ್ ಆವೃತ್ತಿಗೆ ಮೆರಿಡೆನ್ ಬ್ಲೂ ಆಕ್ಸೆಂಟ್‌ನೊಂದಿಗೆ ಕ್ರೋಮ್ ಟ್ಯಾಂಕ್ ಅನ್ನು ನೀಡಲಾಗಿದೆ. ಬಾಬರ್ ಜೆಟ್ ಬ್ಲ್ಯಾಕ್ ಫಿನಿಶ್ ಓವರ್‌ಲೇ ಮತ್ತು ಟ್ರಯಂಫ್ ಟ್ರಯಾಂಗಲ್ ಟ್ಯಾಂಕ್ ಬ್ಯಾಡ್ಜಿಂಗ್ ಅನ್ನು ಪಡೆದರೇ, ಸ್ಪೀಡ್‌ಮಾಸ್ಟರ್ ಕ್ರೋಮ್ ಟ್ಯಾಂಕ್‌ನಲ್ಲಿ ಡಯಾಬ್ಲೊ ರೆಡ್ ಸರೌಂಡ್ ಅನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಎರಡೂ ಮೋಟಾರ್‌ಸೈಕಲ್‌ಗಳು ಜೆಟ್-ಬ್ಲಾಕ್ ಮಡ್‌ಗಾರ್ಡ್‌ಗಳು ಮತ್ತು ಸೈಡ್ ಪ್ಯಾನೆಲ್‌ಗಳೊಂದಿಗೆ ಬರುತ್ತವೆ. T120 ಮತ್ತು ಸ್ಪೀಡ್‌ಮಾಸ್ಟರ್ ಜೆಟ್ ಬ್ಲ್ಯಾಕ್ ಹೆಡ್‌ಲ್ಯಾಂಪ್ ಬೌಲ್ ಅನ್ನು ಸಹ ಪಡೆದಿವೆ. ಭಾರತದಲ್ಲಿ Bonneville T120 ಬೆಲೆ 11.89 ಲಕ್ಷ ರೂ. ಮತ್ತು ಬಾಬರ್ ಹಾಗೂ ಸ್ಪೀಡ್ ಮಾಸ್ಟರ್ ಬೆಲೆ 12.85 ಲಕ್ಷ ರೂ.ಳಾಗಿವೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಬೊನ್ನೆವಿಲ್ಲೆ T100

T100 ಪ್ರೀಮಿಯಂ ಬೈಕು ಸುಂದರವಾದ ಕ್ರೋಮ್ ಆವೃತ್ತಿಯ ಲೋಹದ ಪಟ್ಟಿಯೊಂದಿಗೆ ಕೋಬಾಲ್ಟ್ ನೀಲಿ ಟ್ಯಾಂಕ್ ಅನ್ನು ಪಡೆದಿದೆ. ಮಡ್‌ಗಾರ್ಡ್‌ಗಳು ಮತ್ತು ಸೈಡ್ ಪ್ಯಾನೆಲ್‌ಗಳನ್ನು ಜೆಟ್ ಬ್ಲ್ಯಾಕ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಬೋನೆವಿಲ್ಲೆ T100 ಎಕ್ಸ್ ಶೋ ರೂಂ ಬೆಲೆ 10.04 ಲಕ್ಷ ರೂ. ಇದೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಸ್ಪೀಡ್ ಟ್ವಿನ್ 900 ಮತ್ತು ಸ್ಕ್ರ್ಯಾಂಬ್ಲರ್ 900

ಸ್ಪೀಡ್ ಟ್ವಿನ್ ಎಡಿಷನ್ ವಿನ್ಯಾಸವು ರೆಡ್ ಹಾಪರ್ ಸ್ಕೀಮ್, ಕ್ರೋಮ್ ಎಡಿಷನ್ ಮೆಟಲ್ ನೀ ಪ್ಯಾಡ್ ಇನ್‌ಫಿಲ್ಸ್, ಜೆಟ್ ಬ್ಲ್ಯಾಕ್ ಟ್ಯಾಂಕ್ ಸ್ಟ್ರಿಪ್ ಮತ್ತು ಟ್ರಯಂಫ್ ಟ್ರಯಾಂಗಲ್ ಟ್ಯಾಂಕ್ ಬ್ಯಾಡ್ಜಿಂಗ್ ಅನ್ನು ಮೆಟಾಲಿಕ್ ಡಿಟೇಲಿಂಗ್‌ನೊಂದಿಗೆ ನೀಡಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಸ್ಕ್ರ್ಯಾಂಬ್ಲರ್ ವಿನ್ಯಾಸವು ಕ್ಲಾಸಿಕ್ ಜೆಟ್ ಬ್ಲ್ಯಾಕ್ ಟ್ಯಾಂಕ್ ಸ್ಟ್ರೈಪ್, ಬೋಲ್ಡ್ ಕ್ರೋಮ್ ಎಡಿಷನ್ ಮೆಟಲ್ ನೀ ಪ್ಯಾಡ್ ಇನ್‌ಫಿಲ್‌ಗಳು ಮತ್ತು ಕ್ರೋಮ್ ವಿವರಗಳೊಂದಿಗೆ ಟ್ರಯಂಫ್ ಟ್ರಯಾಂಗಲ್ ಟ್ಯಾಂಕ್ ಬ್ಯಾಡ್ಜಿಂಗ್‌ನೊಂದಿಗೆ ಬ್ರೂಕ್‌ಲ್ಯಾಂಡ್ಸ್ ಗ್ರೀನ್ ಸ್ಕೀಮ್ ಅನ್ನು ಪಡೆದಿದೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಎರಡೂ ಮೋಟಾರ್‌ಸೈಕಲ್‌ಗಳ ಸೈಡ್ ಪ್ಯಾನೆಲ್‌ಗಳು ಮತ್ತು ಮಡ್‌ಗಾರ್ಡ್‌ಗಳನ್ನು ಜೆಟ್ ಬ್ಲಾಕ್ ಬಣ್ಣದಲ್ಲಿ ನೀಡಲಾಗಿದೆ. ಸ್ಪೀಡ್ ಟ್ವಿನ್ 900 ಬೆಲೆಯು ರೂ 8.84 ಲಕ್ಷ ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ 900 ಕ್ರೋಮ್ ಕಲೆಕ್ಷನ್ ದೇಶದ ಎಕ್ಸ್ ಶೋ ರೂಂ ಬೆಲೆ ರೂ 9.94 ಲಕ್ಷವಿದೆ.

ದೇಶಿಯ ಮಾರುಕಟ್ಟೆಯಲ್ಲಿ 8 ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟ್ರಯಂಫ್ ಬೈಕ್‌ಗಳ ಬಗ್ಗೆ ಭಾರತದಲ್ಲಿನ ಮೋಟಾರ್‌ ಸೈಕಲ್ ಉತ್ಸಾಹಿಗಳಿಗೆ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲ. ತನ್ನ ಪವರ್, ಪರ್ಫಾಮೆನ್ಸ್, ಪ್ರೀಮಿಯಂನೆಸ್, ಬೃಹತ್ ಎಂಜಿನ್ ಹಾಗೂ ಸ್ಟೈಲಿಷ್ ಡಿಸೈನ್‌ನೊಂದಿಗೆ ಜನಪ್ರಿಯತೆಯನ್ನು ಪಡೆದಿದೆ. ಇದೀಗ ಕ್ರೋಮ್ ಎಡಿಷನ್‌ಗಳು ಭಾರತದಲ್ಲಿ ಮತ್ತಷ್ಟು ಸದ್ದು ಮಾಡಲಿವೆ.

Most Read Articles

Kannada
English summary
Triumph india has launched 8 chrome variants in the domestic market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X