Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ತನ್ನ ಹೊಸ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬ್ರ್ಯಾಂಡ್‌ನ ಇತ್ತೀಚಿನ ನೇಕೆಡ್ ಸ್ಟ್ರೀಟ್‌ಫೈಟರ್-ಟ್ರಿಡೆಂಟ್ 660 ನ ಅದೇ ಫ್ರೇಮ್ ಅನ್ನು ಆಧರಿಸಿದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.95 ಲಕ್ಷವಾಗಿದೆ. ಇದು ಆಫ್-ರೋಡ್ ಅಧಾರಿತ ಟೂರಿಂಗ್ ಬೈಕ್ ಆಗಿದೆ. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವರ್ಸಿಸ್ 650 ಬೈಕಿಗೆ ನೇರವಾಗಿ ಪೈಪೋಟಿ ನೀಡುತ್ತದೆ. ಈ ಎರಡು ಮೋಟಾರ್‌ಸೈಕಲ್‌ಗಳ ವಿನ್ಯಾಸ, ಎಂಜಿನ್, ವೈಶಿಷ್ಟ್ಯಗಳು ಮತ್ತು ಇತರ ಅಂಶಗಳ ನಡುವೆ ವ್ಯತ್ಯಾಸಗಳು ಇಲ್ಲಿದೆ,

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ವಿನ್ಯಾಸ

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಸ್ಪೋರ್ಟಿಯಾಗಿ ಕಾಣುವ ಅರ್ಧ-ಫೇರಿಂಗ್, ನೇರವಾದ ರೈಡಿಂಗ್ ಪೋಷಿಸನ್, ಹೆಚ್ಚು ಸಸ್ಪೆಂಕ್ಷನ್ ಟ್ರ್ಯಾವೆಲ್, ಎತ್ತರದ ಸೀಟ್ ಮತ್ತು ಉತ್ತಮ ಟ್ರ್ಯಾವೆಲ್ ಸಾಮರ್ಥ್ಯಕ್ಕಾಗಿ ಲಗೇಜ್ ಫ್ರೇಮ ಅನ್ನು ಹೊಂದಿದೆ. ಈ ಹೊಸ ಸ್ಪೋರ್ಟ್ಸ್ ಟೂರಿಂಗ್ ಬೈಕ್ ವಿನ್ಯಾಸವು ಖಂಡಿತವಾಗಿಯೂ ಆಕರ್ಷಕವಾಗಿದೆ,

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಆದರೆ ಇದು ದೊಡ್ಡ ಟೈಗರ್ 900 ಬೈಕಿಗೆ ಹೋಲುವಂತಿಲ್ಲ, ಈ ಹೊಸ ಬೈಕಿನಲ್ಲಿ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎತ್ತರ-ಹೊಂದಿಸಬಹುದಾದ ವಿಂಡ್‌ಶೀಲ್ಡ್ ಅನ್ನು ಹೊಂದಿದೆ. ಹೊಸ ಟೈಗರ್ ಸ್ಪೋರ್ಟ್ 660 ಅಡ್ವೆಂಚರ್ ಬೈಕ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಟ್ರಯಂಫ್ ಟ್ರೈಡೆಂಟ್ 660 ಬೈಕಿನ 14-ಲೀಟರ್ ಇಂಧನ ಟ್ಯಾಂಕ್‌ಗೆ ಹೋಲಿಸಿದರೆ ಹೊಸ ಬೈಕಿನಲ್ಲಿ 17 ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ,

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಕವಾಸಕಿ ವರ್ಸಿಸ್ 650 ಹೋದಲ್ಲೆಲ್ಲಾ ನೋಡುಗರನ್ನು ಆಕರ್ಷಿಸಲು ಸಮರ್ಥವಾಗಿದ್ದರೂ, ಇದು ಟ್ರಯಂಫ್ ಟೈಗರ್ ಸ್ಪೋರ್ಟ್ 660 ನಂತೆ ಅಗ್ರೇಸಿವ್ ಆಗಿ ಕಾಣುವುದಿಲ್ಲ. ಆದರೆ ಕವಾಸಕಿ ವರ್ಸಿಸ್ 650 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ,

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಎಂಜಿನ್

ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನಲ್ಲಿ 660 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಟ್ರೈಡೆಂಟ್ 660 ನೊಂದಿಗೆ ಹಂಚಿಕೊಳ್ಳಲಾಗಿದೆ. ಈ ಎಂಜಿನ್ 79 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 649 ಸಿಸಿ, ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 65 ಬಿಹೆಚ್‌ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 61 ಎನ್‌ಎಂ ಪೀಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇಂದಿನ ಮಾದರಿಗೆ ಹೋಲಿಸಿದರೆ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕಡಿಮೆಯಾಗಿದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಫೀಚರ್ಸ್

ಹೊಸ ಟೈಗರ್ ಸ್ಪೋರ್ಟ್ 660 ಹೊಸ ಕಾಕ್‌ಪಿಟ್ ಅನ್ನು ಪಡೆಯುತ್ತದೆ, ಜೊತೆಗೆ ಹೊಸ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಗೆ ವಿಭಿನ್ನ ಏರೋಗಾಮಿಕ್ಸ್ ಮತ್ತು ಹೆಚ್ಚು ನೇರವಾದ ರೈಡಿಂಗ್ ಫೋಷಿಸನ್ ಅನ್ನು ಹೊಂದಿದೆ, ಇನ್ನು ರೋಡ್ ಮತ್ತು ರೈನ್ ಎಂಬ ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಈ ಬೈಕಿನಲ್ಲಿ ಬದಲಾಯಿಸಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿರಲಿದೆ. ಈ ಹೊಸ ಅಡ್ವೆಂಚರ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಲುಸೆರ್ನ್ ಬ್ಲೂ ಮತ್ತು ಸೆಫರಿನ್ ಬ್ಲ್ಯಾಕ್, ಕೊರೊಸಿ ರೆಡ್ ಮತ್ತು ಗ್ರ್ಯಾಫೈಟ್, ಮತ್ತು ಮೂರನೆಯದು, ಗ್ರ್ಯಾಫೈಟ್ ಮತ್ತು ಬ್ಲ್ಯಾಕ್ ಬಣ್ಣಗಳಾಗಿದೆ,

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ನಿಂಜಾ 650 ಮಾದರಿಯಲ್ಲಿರುವಂತಹ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಫೀಚರ್ ಗಳನ್ನು ಕೂಡ ನೀಡಲಾಗಿಲ್ಲ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಸಸ್ಪೆಂಕ್ಷನ್

ಹೊಸ ಟೈಗರ್ ಸ್ಪೋರ್ಟ್ 660 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಎರಡೂ ಕಡೆಗಳಲ್ಲಿ 150 ಎಂಎಂ ಟ್ರಾವೆಲ್ ನೊಂದಿಗೆ ಸಸ್ಪೆಂಕ್ಷನ್ ಟ್ರಾವೆಲ್ ಹೆಚ್ಚಿಸಲಾಗಿದೆ. ಇದರ ಮುಂಭಾಗದಲ್ಲಿ ಶೋವಾ 41 ಎಂಎಂ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ರಿಮೋಟ್ ಪ್ರಿಲೋಡ್ ಹೊಂದಾಣಿಕೆಯನ್ನು ಪಡೆಯುತ್ತದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಈ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಬೈಕಿನ ಮುಂಭಾಗದಲ್ಲಿ 41 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 145 ಎಂಎಂ ಆಫ್ಸೆಟ್ ಲೇಡೌನ್ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಬ್ರೇಕಿಂಗ್ ಸಿಸ್ಟಂ

ಪ್ರಮುಖವಾಗಿ ಟೈಗರ್ ಸ್ಪೋರ್ಟ್ 660 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ನಿಸ್ಸಿನ್ ಬ್ರೇಕ್‌ಗಳನ್ನು ಟ್ರೈಡೆಂಟ್ 660 ನೊಂದಿಗೆ ಹಂಚಿಕೊಳ್ಳಲಾಗಿದೆ, ಎರಡು-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್‌ಗಳು 310 ಎಂಎಂ ಟ್ವಿನ್ ಫ್ರಂಟ್ ಡಿಸ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್ 255 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ. ಈ ಅಡ್ವೆಂಚರ್ ಬೈಕ್ ಅತ್ಯುತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಇನ್ನು ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 250 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ನೀಡಿದೆ.

Triumph Tiger Sport 660 Vs Kawasaki Versys 650: ಈ ಬೈಕ್‌ಗಳ ನಡುವಿನ ವ್ಯತ್ಯಾಸಗಳಿವು

ಟ್ರಯಂಫ್ ಟೈಗರ್ ಸ್ಪೋರ್ಟ್ 660 ಸಾಕಷ್ಟು ಹೆಚ್ಚಿನ ಪವರ್ ಮತ್ತು ಟಾರ್ಕ್ ಉತ್ತಮವಾಗಿದೆ, ಆದರೆ ಬೆಲೆಯಲ್ಲಿ ಕವಾಸಕಿ ವರ್ಸಿಸ್ 650 ಬೈಕ್ ಗಿಂತ ಟ್ರಯಂಫ್ ಟೈಗರ್ ಸ್ಪೋರ್ಟ್ 660 ತುಸು ದುಬಾರಿಯಾಗಿದೆ. ಟ್ರಯಂಫ್ ಟೈಗರ್ ಸ್ಪೋರ್ಟ್ 660 ಒಟ್ಟಾರೆಯಾಗಿ ಉತ್ತಮ ಟೂರರ್ ಮೋಟಾರ್‌ಸೈಕಲ್ ಆಗಿದೆ.

Most Read Articles

Kannada
English summary
Triumph tiger sport 660 vs kawasaki versys 650 design features comparison details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X