ಆಟೋ ಎಕ್ಸ್‌ಪೋದಲ್ಲಿ EVTRICನಿಂದ 4 ಇವಿ ಪ್ರದರ್ಶನ: 120 ಕಿಲೋಮೀಟರ್‌ ರೇಂಜ್ ನೀಡುತ್ತೆ..!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ದೇಶ-ವಿದೇಶದ ಹಲವು ವಾಹನ ತಯಾರಕ ಕಂಪನಿಗಳು ಇವಿ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಗ್ರಾಹಕರಿಂದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವುಗಳನ್ನು ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ.

ಸ್ಟಾರ್ಟ್-ಅಪ್ ಇವಿ ತಯಾರಕ ಕಂಪನಿ EVTRIC, ಆಟೋ ಎಕ್ಸ್‌ಪೋದಲ್ಲಿ 1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮತ್ತು 3 ಎಲೆಕ್ಟ್ರಿಕ್ ಸ್ಕೂಟರ್‌ ಸೇರಿದಂತೆ 4 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿದೆ. ಈ ಮೂಲಕ ಇವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. 'EVTRIC ರೈಸ್' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಎಕ್ಸ್‌ಪೋದಲ್ಲಿ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರ ಹೊರತಾಗಿ, 'EVTRIC ಕನೆಕ್ಟ್' ಸ್ಕೂಟರ್‌ ತನ್ನ ವಿಶಿಷ್ಟ ಸ್ಟೈಲಿಂಗ್‌ನಿಂದ ನೋಡುಗರ ಆಕರ್ಷಣೆಯಾಗಿತ್ತು.

ಆಟೋ ಎಕ್ಸ್‌ಪೋದಲ್ಲಿ EVTRICನಿಂದ 4 ಇವಿ ಪ್ರದರ್ಶನ: 120 ಕಿಲೋಮೀಟರ್‌ ರೇಂಜ್ ನೀಡುತ್ತೆ..!

EVTRIC ರೈಸ್:
ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ EVTRIC ರೈಸ್‌ ಎರಡು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೇ, ಕ್ರಿಸ್ಟಲ್ ರೆಡ್ ಮತ್ತು ಶೈನ್ ಬ್ಲ್ಯಾಕ್. ಈ ಬೈಕ್, 2.8kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 3,000W BLDC ಹಬ್ ಮೋಟರ್‌ನಿಂದ ಚಾಲಿತವಾಗಲಿದೆ ಎಂದು ಹೇಳಬಹುದು. ಇದು ಗರಿಷ್ಠ 75km/hr ಟಾಪ್ ಸ್ವೀಡ್ ಹೊಂದಿದ್ದು, ಒಂದೇ ಚಾರ್ಜಿಗೆ 120 ಕಿಲೋಮೀಟರ್‌ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ.

EVTRIC ರೈಡ್:
ಇದೊಂದು ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ ಎಂದು ಹೇಳಬಹುದು. ಪರ್ಷಿಯನ್ ರೆಡ್, ಶೈನ್ ಬ್ಲ್ಯಾಕ್, ಮರ್ಕ್ಯುರಿ ವೈಟ್ ಮತ್ತು ನೊಬೆಲ್ ಗ್ರೇ ಸೇರಿದಂತೆ 4 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ ಕಾರ್ಯವೈಖರಿ ಬಗ್ಗೆ ಹೇಳುವುದಾದರೆ, 1,800W BLDC ಹಬ್ ಮೋಟಾರ್ ಮತ್ತು 2kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಿದರೇ ಈ EVTRIC ರೈಡ್ 90 ಕಿಲೋಮೀಟರ್‌ ರೇಂಜ್ ನೀಡುತ್ತದೆ. ಜೊತೆಗೆ 55km/h ಟಾಪ್ ಸ್ವೀಡ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋದಲ್ಲಿ EVTRICನಿಂದ 4 ಇವಿ ಪ್ರದರ್ಶನ: 120 ಕಿಲೋಮೀಟರ್‌ ರೇಂಜ್ ನೀಡುತ್ತೆ..!

EVTRIC ಮೈಟಿ:
ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಈ EVTRIC ಮೈಟಿ ಆಗಿದೆ ಎಂದು ಹೇಳಬಹುದು. ಇದು 3 ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಪರ್ಷಿಯನ್ ರೆಡ್, ಮರ್ಕ್ಯುರಿ ವೈಟ್ ಮತ್ತು ನೊಬೆಲ್ ಗ್ರೇ. ಕಡಿಮೆ ವೇಗದ ಈ ಎಲೆಕ್ಟ್ರಿಕ್ ಸ್ಕೂಟರ್, 250W BLDC ಹಬ್ ಮೋಟಾರ್ ಮತ್ತು 1.2kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆದಿದೆ. ಇದು 25km/h ಟಾಪ್ ಸ್ವೀಡ್ ಹೊಂದಿದ್ದು, ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌ 60 ಕಿಲೋಮೀಟರ್ ತನಕ ರೇಂಜ್ ನೀಡಲಿದೆ.

ಆಟೋ ಎಕ್ಸ್‌ಪೋದಲ್ಲಿ EVTRICನಿಂದ 4 ಇವಿ ಪ್ರದರ್ಶನ: 120 ಕಿಲೋಮೀಟರ್‌ ರೇಂಜ್ ನೀಡುತ್ತೆ..!

EVTRIC ಕನೆಕ್ಟ್:
ವಾಣಿಜ್ಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೆಡಿ ಮಾಡಲಾಗಿದೆ. ಇದು ವಿವಿಧ ರೀತಿಯ ಲಗೇಜ್ ಸಾಗಿಸಲು ಫ್ರಂಟ್ ಮತ್ತು ರೇರ್ ಡೆಕ್‌ನೊಂದಿಗೆ ಬರುತ್ತದೆ. ಈ EVTRIC ಕನೆಕ್ಟ್ 1,200W BLDC ಹಬ್ ಮೋಟಾರ್ ಮತ್ತು 2kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಿದ ಈ ಸ್ಕೂಟರ್, 106 ಕಿಲೋಮೀಟರ್‌ವರೆಗೆ ರೇಂಜ್ ನೀಡುತ್ತದೆ. ಗಂಟೆಗೆ 55 ಕಿಮೀ ಟಾಪ್ ಸ್ವೀಡ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋದಲ್ಲಿ EVTRICನಿಂದ 4 ಇವಿ ಪ್ರದರ್ಶನ: 120 ಕಿಲೋಮೀಟರ್‌ ರೇಂಜ್ ನೀಡುತ್ತೆ..!

ಆಟೋ ಎಕ್ಸ್‌ಪೋದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸುವ ಮೂಲಕ EVTRIC ಕಂಪನಿ, ಹಲವು ಖರೀದಿದಾದಾರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ EVTRIC ಬ್ರ್ಯಾಂಡ್ ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ಇವಿ ತಯಾರಕ ಕಂಪನಿಯಾಗಿ ಗುರುತಿಸಿಕೊಳ್ಳಲು ದೊಡ್ಡ ಹೆಜ್ಜೆ ಇಟ್ಟಿದ್ದು, ದೇಶದ ಗ್ರಾಹಕರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಬಹುದು. ಈ ಇವಿ ದ್ವಿಚಕ್ರ ವಾಹನಗಳ ಲುಕ್, ರೇಂಜ್ ಹಾಗೂ ಕಲರ್ ನೋಡುಗರನ್ನು ಸೆಳೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಬಹುದು.

ಇಷ್ಟೇಅಲ್ಲದೆ, ಆಟೋ ಎಕ್ಸ್‌ಪೋದಲ್ಲಿ LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಅನಾವರಣ ಮಾಡಿದೆ. ಇದು ಮಾರುಕಟ್ಟೆಗೆ ಬಂದ ಮೇಲೆ ಬಜಾಜ್ ಚೇತಕ್, ಟಿವಿಎಸ್ iQube, ಓಲಾ S1, Vida V1, ಸಿಂಪಲ್ one, ಮತ್ತು ಎಥರ್ 450X ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ. ಈ LML ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, 3.4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 100km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 1 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

Most Read Articles

Kannada
English summary
4 ev showcased by evtric auto expo details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X