Auto Expo 2023: ಸೆಲ್ಫ್ - ಬ್ಯಾಲೆನ್ಸಿಂಗ್ Liger X, X+ ಎಲೆಕ್ಟ್ರಿಕ್ ಸ್ಕೂಟರ್‌ ಪ್ರದರ್ಶನ - ಎಂತಹ ತಂತ್ರಜ್ಞಾನ..!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಅದರಂತೆ ಹಲವು ವಾಹನ ತಯಾರಕ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಇವಿಗಳನ್ನು ಲಾಂಚ್ ಮಾಡುತ್ತಿವೆ. ಗ್ರಾಹಕರು ಸಹ ಅತ್ಯುನ್ನತ ಮೈಲೇಜ್ ಹಾಗೂ ಉತ್ತಮ ವೈಶಿಷ್ಟ್ಯ ಹೊಂದಿರುವ ಎಲೆಕ್ಟ್ರಿಕ್ ಕಾರು, ಬೈಕ್ ಮತ್ತು ಸ್ಕೂಟರ್‌ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.

ಮುಂಬೈ ಮೂಲದ ಸ್ಟಾರ್ಟ್-ಅಪ್ 'ಲಿಗರ್ ಮೊಬಿಲಿಟಿ' ಆಟೋ ಎಕ್ಸ್‌ಪೋದಲ್ಲಿ ಎರಡು ಹೊಸ ಸೆಲ್ಫ್ - ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಲಿಗರ್ ಎಕ್ಸ್ ಮತ್ತು ಲಿಗರ್ ಎಕ್ಸ್ ಪ್ಲಸ್ ಅನ್ನು ಪ್ರದರ್ಶಿಸಿದೆ. ಈ ಎರಡು ಸ್ಕೂಟರ್‌, ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಲಿಗರ್ ಎಕ್ಸ್ ಬದಲಾಯಿಸಬಹುದಾದ ಬ್ಯಾಟರಿಯನ್ನು ಪಡೆದಿದೆ. ಈ ವರ್ಷದ ಮಧ್ಯ ಭಾಗದಲ್ಲಿ ಬುಕಿಂಗ್‌ಗಳು ಆರಂಭಗವಾಗಲಿದ್ದು, ವರ್ಷಾಂತ್ಯದಲ್ಲಿ ವಿತರಣೆಗಳು ಶುರುವಾಗಲಿದೆ ಎಂದು ಹೇಳಲಾಗಿದೆ.

Auto Expo 2023: Liger X, X+ ಎಲೆಕ್ಟ್ರಿಕ್ ಸ್ಕೂಟರ್‌ ಪ್ರದರ್ಶನ

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಲಿಗರ್ ಎಕ್ಸ್ ಮತ್ತು ಲಿಗರ್ ಎಕ್ಸ್ ಪ್ಲಸ್‌ನಲ್ಲಿ ಕಂಪನಿಯು ಆಟೋ ಬ್ಯಾಲೆನ್ಸಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿದೆ (ಉದಾಹರಣೆ: ಸ್ಕೂಟರ್‌ ನಿಂತಿರುವಾಗ ಹಾಗೂ ಕಡಿಮೆ ವೇಗದಲ್ಲಿ ಇರುವಾಗ ಸವಾರರು ತಮ್ಮ ಕಾಲುಗಳಿಂದ ಬ್ಯಾಲೆನ್ಸ್ ಮಾಡಲು ನೆಲದ ಮೇಲೆ ಕಾಲಿಡುವ ಅಗತ್ಯವಿಲ್ಲ). ಸ್ಕೂಟರ್ ಪೂರ್ವನಿರ್ಧರಿತ ಸ್ವೀಡ್ ದಾಟಿದಾಗ ಈ ಆಟೋಬ್ಯಾಲೆನ್ಸಿಂಗ್ ವೈಶಿಷ್ಟ್ಯವನ್ನು ಮ್ಯಾನುಯಲ್ ಆಗಿ ಸ್ವಿಚ್ ಆಫ್ ಮಾಡಬಹುದು. ಇದು ಆಕರ್ಷಕವಾಗಿರುವ ವೈಶಿಷ್ಟ್ಯವಾಗಿದ್ದು, ಗ್ರಾಹಕರು ಇಷ್ಟಪಟ್ಟು ಈ ಸ್ಕೂಟರ್‌ ಖರೀದಿಸಬಹುದು.

ಇಷ್ಟೇ ಅಲ್ಲದೆ, ಲಿಗರ್ ಎಕ್ಸ್ ಮತ್ತು ಲಿಗರ್ ಎಕ್ಸ್ ಪ್ಲಸ್‌ಗಳು ಲರ್ನರ್ ಮೋಡ್ ಅನ್ನು ಹೊಂದಿವೆ. ಇದು ಆಟೋ ಬ್ಯಾಲೆನ್ಸಿಂಗ್ ವೈಶಿಷ್ಟ್ಯದೊಂದಿಗೆ ಸ್ಕೂಟರ್‌ನ ಟಾಪ್ ಸ್ವೀಡ್ ಅನ್ನು ಮಿತಿಗೊಳಿಸಲು ಸವಾರರಿಗೆ ಅನುಮತಿಸುತ್ತದೆ. ಅಲ್ಲದೆ, ಈ ಸ್ಕೂಟರ್‌ಗಳು OTA (ಓವರ್ ದಿ ಏರ್) ಸಾಫ್ಟ್‌ವೇರ್ ನವೀಕರಣಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಬಹುದು. ಜೊತೆಗೆ ಲಿಗರ್ ಎಕ್ಸ್ ಬದಲಾಯಿಸಬಹುದಾದ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

Auto Expo 2023: Liger X, X+ ಎಲೆಕ್ಟ್ರಿಕ್ ಸ್ಕೂಟರ್‌ ಪ್ರದರ್ಶನ

ಸದ್ಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿರುವ ಈ ಲಿಗರ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌, 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದರ ಟಾಪ್ ಸ್ಪೀಡ್ 65kph ಇದ್ದು, ಇದು ಒಂದೇ ಚಾರ್ಜ್‌ನಲ್ಲಿ 60 km ಅನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಲಿಗರ್ ಎಕ್ಸ್ ಪ್ಲಸ್‌ 4.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾದ ಬದಲಾಯಿಸಲು ಆಗದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಈ ಸ್ಕೂಟರ್‌ ಒಂದೇ ಚಾರ್ಜ್‌ನಲ್ಲಿ 100 km ರೇಂಜ್ ನೀಡಲಿದೆ (ಕಂಪನಿಯ ಅಂಕಿ ಅಂಶದ ಪ್ರಕಾರ).

ಲಿಗರ್ ಎಕ್ಸ್ ಪ್ಲಸ್‌ ಅದರ TFT ಡ್ಯಾಶ್‌ ಬೋರ್ಡ್ ನೋಟಿಫಿಕೇಶನ್ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌ ವೈಶಿಷ್ಟ್ಯಗಳನ್ನು ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದು. ಲೈವ್ ಲೊಕೇಶನ್ ಟ್ರ್ಯಾಕಿಂಗ್, ಬ್ಯಾಟರಿ ಟೆಂಪರೇಚರ್ ಇಂಡಿಕೇಟರ್, ಟೋವಿಂಗ್ ಮತ್ತು ಆಕ್ಸಿಡೆಂಟ್ ಅಲರ್ಟ್ ವೈಶಿಷ್ಟ್ಯಗಳನ್ನು ಎರಡು ಸ್ಕೂಟರ್‌ ಒಳಗೊಂಡಿವೆ. ಇವರೆಡು ಒಂದೇ ರೀತಿಯ ಐದು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಗ್ರೇ, ಪೋಲಾರ್ ವೈಟ್, ಬ್ಲೂ, ಟೈಟಾನಿಯಂ ಮತ್ತು ರೆಡ್.

Auto Expo 2023: Liger X, X+ ಎಲೆಕ್ಟ್ರಿಕ್ ಸ್ಕೂಟರ್‌ ಪ್ರದರ್ಶನ

ಲಿಗರ್ ಮೊಬಿಲಿಟಿ ಈ ಸ್ಕೂಟರ್ ಗಳನ್ನು ಈ ವರ್ಷದ ಮಧ್ಯಭಾಗದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಲಿಗರ್ ಎಕ್ಸ್ ಬೆಲೆ ಸುಮಾರು 1.70 ಲಕ್ಷ ರೂಪಾಯಿ ಇರಬಹುದು. ಲಿಗರ್ ಎಕ್ಸ್ ಪ್ಲಸ್‌ ಸುಮಾರು 1.90 ಲಕ್ಷ ರೂಪಾಯಿಗೆ ಖರೀದಿಗೆ ಸಿಗುವ ಸಾಧ್ಯತೆ ಇದೆ. ಇನ್ನು, ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ಇದ್ದು, ಅವುಗಳ ಬೆಲೆಯು ಗ್ರಾಹಕರಿಗೆ ಕೈಗೆಟುವ ರೀತಿಯಿದೆ. ಈ ಹೊಸ ಲಿಗರ್ ಎಕ್ಸ್ ಹಾಗೂ ಲಿಗರ್ ಎಕ್ಸ್ ಪ್ಲಸ್‌ ಸೆಲ್ಫ್ - ಬ್ಯಾಲೆನ್ಸಿಂಗ್ ಫೀಚರ್ಸ್ ಹೊಂದಿದ್ದು, ಇವುಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Auto expo 2023 self balancing liger x x plus electric scooters showcased details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X