ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಜಾವಾ ಯೆಜ್ಡಿ ಅಡ್ವೆಂಚರ್, ಸ್ಕ್ರ್ಯಾಂಬ್ಲರ್‌ ಮಾರುಕಟ್ಟೆಗೆ

ಸಾಹಸ ಪ್ರಿಯರಿಗೆ ನಿಮ್ಮ ಹಾಟ್ ಫೆವರೇಟ್ ಬೈಕ್ ಯಾವುದು ಎಂದು ಕೇಳಿದರೆ, ತಕ್ಷಣ ಬರುವ ಉತ್ತರ.. ಅದು ಜಾವಾ ಬೈಕ್‌ಗಳೆಂದು. ಅಷ್ಟರ ಮಟ್ಟಿಗೆ ಯುವ ರೈಡರ್ ಗಳನ್ನು ಆಕರ್ಷಿಸಿದೆ. ಈ ಬೈಕ್‌ಗಳ ಕಾರ್ಯಕ್ಷಮತೆ, ಅತ್ಯಾಧುನಿಕ ವೈಶಿಷ್ಟ್ಯಗಳು ಹಾಗೂ ಆಕರ್ಷಕ ಲುಕ್ ಪ್ರತಿಯೊಬ್ಬರನ್ನು ಸೆಳೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಜಾವಾ (Jawa) ಮೋಟಾರ್‌ಸೈಕಲ್‌, ಯೆಜ್ಡಿ ಅಡ್ವೆಂಚರ್ (Yezdi Adventure) ಹಾಗೂ ಸ್ಕ್ರ್ಯಾಂಬ್ಲರ್‌ (Scrambler) ಬೈಕ್‌ಗಳನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಪರಿಚಯಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಯೆಜ್ಡಿ ಅಡ್ವೆಂಚರ್, ವೈಟ್‌ಔಟ್ ಕಲರ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ರೂ.2.15 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ದೊರೆಯಲಿದೆ. ಯೆಜ್ಡಿ ಸ್ಕ್ರ್ಯಾಂಬ್ಲರ್ ಬೋಲ್ಡ್ ಬ್ಲ್ಯಾಕ್ ಬಣ್ಣ ಪಡೆದಿದ್ದು, ರೂ.2.10 ಲಕ್ಷಕ್ಕೆ ಗ್ರಾಹಕರಿಗೆ ಸಿಗಲಿದೆ.

ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಜಾವಾ ಯೆಜ್ಡಿ ಅಡ್ವೆಂಚರ್, ಸ್ಕ್ರ್ಯಾಂಬ್ಲರ್‌ ಮಾರುಕಟ್ಟೆಗೆ

ಜಾವಾ ಕಂಪನಿಯು ಕಳೆದ ತಿಂಗಳು ಕೂಡ ತನ್ನ ಬೈಕ್‌ಗಳನ್ನು ಹೊಸ ಬಣ್ಣ ಆಯ್ಕೆಯೊಂದಿಗೆ ಬಿಡುಗಡೆ ಮಾಡಿತ್ತು. ಇದೀಗ, ಈ ವರ್ಷದಲ್ಲಿ ಎರಡನೇ ಬಾರಿಗೆ ನೂತನ ಬಣ್ಣಗಳ ಆಯ್ಕೆಯೊಂದಿಗೆ ಗ್ರಾಹಕರಿಗೆ ಪರಿಚಯಿಸಿದೆ. ಹೊಸ ಬಣ್ಣಗಳಿಂದ ಕೂಡಿದ ಬೈಕ್‌ಗಳು ಅತ್ಯಾಕರ್ಷಕವಾಗಿದ್ದು, ಯುವ ಖರೀದಿದಾರರು ಇಷ್ಟಪಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಯೆಜ್ಡಿ ಅಡ್ವೆಂಚರ್‌ ಬೈಕ್ ಹೊಂದಿರುವ ವೈಟ್‌ಔಟ್ ಬಣ್ಣವನ್ನು ಹಿಮಪರ್ವತಗಳ ಭೂಪ್ರದೇಶ ಹಾಗೂ ಸ್ಕ್ರ್ಯಾಂಬ್ಲರ್‌ ಬೈಕ್ ಪಡೆದಿರುವ ಬೋಲ್ಡ್ ಬ್ಲ್ಯಾಕ್ ಕಲರ್ ಅನ್ನು ರಹಸ್ಯ ಸ್ಥಳದಿಂದ (stealth) ಪ್ರೇರಣೆಯಾಗಿ ತೆಗೆದುಕೊಳ್ಳಲಾಗಿದೆ.

ಈ ಜಾವಾ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇವುಗಳು 334 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ - ಕೋಲ್ಡ್ ಎಂಜಿನ್ ಪಡೆದಿದ್ದು, 6-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿವೆ. ಯೆಜ್ಡಿ ಅಡ್ವೆಂಚರ್ 29.8 bhp ಗರಿಷ್ಠ ಪವರ್ ಹಾಗೂ 29.84 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸ್ಕ್ರ್ಯಾಂಬ್ಲರ್ ಬೈಕ್, 28.7 bhp ಪವರ್ 28.2 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಜಾವಾ ಯೆಜ್ಡಿ ಅಡ್ವೆಂಚರ್, ಸ್ಕ್ರ್ಯಾಂಬ್ಲರ್‌ ಮಾರುಕಟ್ಟೆಗೆ

ಜಾವಾ ಯೆಜ್ಡಿ ಅಡ್ವೆಂಚರ್ ಹಾಗೂ ಸ್ಕ್ರ್ಯಾಂಬ್ಲರ್ ಬೈಕ್‌ಗಳ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಎರಡು ಬೈಕ್‌ಗಳು ಸ್ಲಿಪ್ಪರ್ ಕ್ಲಚ್, ಯುಎಸ್‌ಬಿ ಚಾರ್ಜಿಂಗ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ. ಮೂರು ರೈಡ್ ಮೋಡ್ ಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ರೋಡ್, ರೈನ್ ಹಾಗೂ ಆಫ್-ರೋಡ್. ಉಳಿದಂತೆ ಯೆಜ್ಡಿ ಅಡ್ವೆಂಚರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನೊಂದಿಗೆ ಬ್ಲೂಟೂತ್ ಸಂಪರ್ಕದಂತಹ ಹೆಚ್ಚುವರಿ ವೈಶಿಷ್ಟ್ಯವನ್ನು ಪಡೆದಿದೆ ಎಂದು ಹೇಳಬಹುದು.

ನೂತನ ಬೈಕ್‌ಗಳಿಗೆ ಹೊಸ ಬಣ್ಣದ ಆಯ್ಕೆ ಕುರಿತು ಮಾತನಾಡಿರುವ ಜಾವಾ (Jawa) ಮೋಟಾರ್‌ಸೈಕಲ್‌ನ ಸಿಇಒ ಆಶಿಶ್ ಸಿಂಗ್ ಜೋಶಿ, 'ಸಾಹಸ ಪ್ರಿಯರು ಹಾಗೂ ಆಫ್ - ರೋಡ್ ಚಾಲನೆ ಬಯಸುವವರಿಗೆ ನಾವು ಪರಿಚಯಿಸಿರುವ ಹೊಸ ಬಣ್ಣಗಳು ಖಂಡಿತ ಇಷ್ಟವಾಗಲಿದೆ. ಹೆದ್ದಾರಿಯಲ್ಲಿ ಸವಾರರು ಈ ಹೊಸ ಬಣ್ಣದ ಆಯ್ಕೆಯೊಂದಿರುವ ಮೋಟಾರ್‌ಸೈಕಲ್‌ ಓಡಿಸುವಾಗ ನೋಡುಗರನ್ನು ಆಕರ್ಷಿಸುತ್ತದೆ. ಇದರಿಂದಾಗಿ ಹೆಚ್ಚಿನ ಜನರು, ಈ ಬೈಕ್ ಗಳನ್ನು ಖರೀದಿಸುತ್ತಾರೆ ಎಂದು ನಂಬಿದ್ದೇವೆ' ಎಂದು ಅವರು ಹೇಳಿದ್ದಾರೆ.

ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಜಾವಾ ಯೆಜ್ಡಿ ಅಡ್ವೆಂಚರ್, ಸ್ಕ್ರ್ಯಾಂಬ್ಲರ್‌ ಮಾರುಕಟ್ಟೆಗೆ

ಜಾವಾದ ಯೆಜ್ಡಿ ಅಡ್ವೆಂಚರ್ ಹಾಗೂ ಸ್ಕ್ರ್ಯಾಂಬ್ಲರ್‌ ಬೈಕ್ ಗಳಿಗೆ ಮಾರುಕಟ್ಟೆಯಲ್ಲಿ ಹೋಂಡಾ CB350RS ಹಾಗೂ ಬೆನೆಲ್ಲಿ ಇಂಪೀರಿಯಲ್ 400 ಭಾರೀ ಪೈಪೋಟಿ ನೀಡಲಿವೆ. ಹೋಂಡಾ CB350RS ರೂ.2,61,647 ಬೆಲೆಯನ್ನು ಹೊಂದಿದ್ದು, ಎರಡು ರೂಪಾಂತರ ಹಾಗೂ ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ. ಇದು 348.36 ಸಿಸಿ BS6 ಎಂಜಿನ್ ಹೊಂದಿದ್ದು, 20.78 bhp ಪವರ್ ಹಾಗೂ 30 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 15 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.

ಮತ್ತೊಂದು ಪ್ರತಿಸ್ಪರ್ದಿಯಾಗಿರುವ ಬೆನೆಲ್ಲಿ ಇಂಪೀರಿಯಲ್ 400 ಬಗ್ಗೆ ಹೇಳುವುದಾದರೆ, ಇದು ರೂ.2.25 ದಿಂದ 2.30 ಲಕ್ಷ ಆನ್ ರೋಡ್ ಬೆಲೆಯನ್ನು ಹೊಂದಿದ್ದು, 374 ಸಿಸಿ ಏರ್ ಕೂಲ್ಡ್ ಮತ್ತು ಫ್ಯುಯೆಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 21 PS ಪವರ್ ಹಾಗೂ 29 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಫ್ರಂಟ್ 300ಎಂಎಂ ಡಿಸ್ಕ್, ಮತ್ತು ರೇರ್ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ.

Most Read Articles

Kannada
English summary
Jawa yezdi adventure scrambler attractive colors india market details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X