ಬಜಾಜ್‌ನಿಂದ ಡಬಲ್ ಧಮಾಕಾ; ಡಿಸ್ಕವರ್ 150ಎಫ್, 150ಎಸ್ ಲಾಂಚ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ತನ್ನ ಜನಪ್ರಿಯ ಡಿಸ್ಕವರ್ ರೇಂಜ್ ಬೈಕ್‌ಗಳಲ್ಲಿ ಮತ್ತೆರಡು ಅತ್ಯಾಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡಿವೆ.

ಅವುಗಳೇ, ಬಜಾಜ್ ಡಿಸ್ಕವರ್ 150ಎಫ್ (ಸೆಮಿ ಫೇರ್ಡ್) ಮತ್ತು ಡಿಸ್ಕವರ್ 150ಎಸ್ (ಸ್ಟಾಂಡರ್ಡ್ ಫೇರಿಂಗ್)

ಈ ಪೈಕಿ ಡಿಸ್ಕವರ್ 150ಎಫ್ ಈ ವಿಭಾಗದಲ್ಲಿ ಬಿಡುಗಡೆಗೊಂಡಿರುವ ದೇಶದ ಮೊದಲ ಸೆಮಿ ಫೇರ್ಡ್ ಬೈಕ್ ಎನಿಸಿಕೊಳ್ಳಲಿದೆ. ಡಿಸ್ಕವರ್ 150ಎಫ್ ಮತ್ತು ಡಿಸ್ಕವರ್ 150ಎಸ್ ಬೈಕ್‌ಗಳ ಪ್ರಮುಖ ವ್ಯತ್ಯಾಸ ಏನೆಂದರೆ ಮೊದಲನೆಯದ್ದು ಅರ್ಧ ಫೇರಿಂಗ್ ಆಗಿದ್ದರೆ ಎರಡನೇಯದ್ದು ಸ್ಟಾಂಡರ್ಡ್ ಫೇರಿಂಗ್ ವಿನ್ಯಾಸ ಗಿಟ್ಟಿಸಿಕೊಂಡಿದೆ.

ಬಜಾಜ್‌ನಿಂದ ಡಬಲ್ ಧಮಾಕಾ; ಡಿಸ್ಕವರ್ 150ಎಫ್, 150ಎಸ್ ಲಾಂಚ್

ಸಂಸ್ಥೆಯ ಪ್ರಕಾರ ಈಗ ಮಾರುಕಟ್ಟೆಯಲ್ಲಿರುವ 150ಸಿಸಿ ಬೈಕ್‌ಗಿಂತಲೂ ವಿಭಿನ್ನವಾಗಿರುವ ಹೊಸ ಮಾದರಿಗಳು ಎಲ್ಲ ಹಂತದಲ್ಲಿಯೂ ತನ್ನ ನಿಕಟ ಪ್ರತಿಸ್ಫರ್ಧಿಗಳನ್ನು ಮೀರಿ ನಿಲ್ಲಲಿದೆ.

ಬಜಾಜ್‌ನಿಂದ ಡಬಲ್ ಧಮಾಕಾ; ಡಿಸ್ಕವರ್ 150ಎಫ್, 150ಎಸ್ ಲಾಂಚ್

ಇದರಲ್ಲಿರುವ ಮುಂದುವರಿದ 4 ವಾಲ್ವ್ 145 ಸಿಸಿ ಡಿಟಿಎಸ್-ಐ ಎಂಜಿನ್ 14.5 ಪಿಎಸ್ ಪವರ್ ಉತ್ಪಾದಿಸಲಿದೆ. ಇನ್ನು ಭಾರತೀಯ ಪ್ರಯಾಣಿಕರು ಎದುರು ನೋಡುತ್ತಿರುವಂತೆಯೇ ಹೊಸ ಡಿಸ್ಕವರ್ ಬೈಕ್‌ಗಳು ಪ್ರತಿ ಲೀಟರ್‌ಗೆ 72 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

  • ಆರಾಮದಾಯಕತೆಗೆ ಮೊನೊ ಶಾಕ್ ಜತೆ ನಿಟ್ರಾಕ್ಸ್ ಸಸ್ಪೆಷನ್,
  • ತ್ವರಿತ ಬ್ರೇಕಿಂಗ್‌ಗಾಗಿ ಪೆಟಲ್ ಡಿಸ್ಕ್ ಬ್ರೇಕ್,
  • ಆಧುನಿಕ ಹಾಗೂ ಅತ್ಯಾಕರ್ಷಕ ಡಿಜಿಟಲ್ ಮೀಟರ್,
  • ಉತ್ತಮ ರೋಡ್ ಗ್ರಿಪ್ ಹಾಗೂ ಸುರಕ್ಷತೆಗಾಗಿ ವಿಸ್ತಾರವಾದ ಟ್ಯೂಬ್‌ಲೆಸ್ ಟೈರ್,
  • ಡಿಸಿ ಲೈಟಿಂಗ್: ಕಡಿಮೆ ವೇಗದಲ್ಲೂ ಸ್ಥಿರತೆಯುಕ್ತ ಪ್ರಕಾಶಮಾನವಾದ ಬೆಳಕು.
  • ದರ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

    ದರ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

    • ಡಿಸ್ಕವರ್ 150 ಎಫ್ - 58,739 ರು.
    • ಡಿಸ್ಕವರ್ 150 ಎಸ್ - 51,750 ರು. (ಡ್ರಮ್ ಬ್ರೇಕ್)
    • ಡಿಸ್ಕವರ್ 150 ಎಸ್ - 54,725 ರು. (ಡಿಸ್ಕ್ ಬ್ರೇಕ್)
    • ಬಣ್ಣಗಳು

      ಬಣ್ಣಗಳು

      ಒಟ್ಟು ನಾಲ್ಕು

      ಡಾರ್ಕ್ ಬ್ಲೂ, ವೈನ್ ರೆಡ್, ಇಬನಿ ಬ್ಲ್ಯಾಕ್ ಮತ್ತು ಡಾರ್ಕ್ ಬಾಟಲ್ ಗ್ರೀನ್.

      ತಾಂತ್ರಿಕ ಮಾಹಿತಿ

      ತಾಂತ್ರಿಕ ಮಾಹಿತಿ

      ಎಂಜಿನ್

      • ವಿಧ: ಸಿಂಗಲ್ ಸಿಲಿಂಡರ್, 4 ವಾಲ್ವ್, ಡಿಟಿಎಸ್-ಐ
      • ಸಾಮರ್ಥ್ಯ: 144.8 ಸಿಸಿ,
      • ಗರಿಷ್ಠ ಶಕ್ತಿ: 14.5 ಪಿಎಸ್ @ 8500 ಆರ್‌ಪಿಎಂ,
      • ಗರಿಷ್ಠ ಟಾರ್ಕ್: 12.75 ಎನ್‌ಎಂ,
      • ಸ್ಟಾರ್ಟಿಂಗ್: ಸೆಲ್ಫ್ ಆಂಡ್ ಕಿಕ್,
      • ಗರಿಷ್ಠ ವೇಗ: ಪ್ರತಿ ಗಂಟೆಗೆ 110 ಕೀ.ಮೀ.
      • ಟ್ರಾನ್ಸ್‌ಮಿಷನ್: 5 ಸ್ಪೀಡ್ ಕಾನ್‌ಸ್ಟಂಟ್ ಮೆಶ್
      • ಫ್ರೇಮ್: ಸಮಿ ಡಬಲ್ ಕ್ರಾಡಲ್
      • ಸಸ್ಪಷನ್, ಬ್ರೇಕ್, ಇಂಧನ ಟ್ಯಾಂಕ್

        ಸಸ್ಪಷನ್, ಬ್ರೇಕ್, ಇಂಧನ ಟ್ಯಾಂಕ್

        ಸಸ್ಪಷನ್

        • ಫ್ರಂಟ್: ಟೆಲಿಸ್ಕಾಪಿಕ್, 130 ಎಂಎಂ ಫಾರ್ಕ್ ಟ್ರಾವೆಲ್,
        • ರಿಯರ್: ಮೊನೊಶಾಕ್ ನಿಟ್ರಾಕ್ಸ್
        • ಬ್ರೇಕ್

          • ಫ್ರಂಟ್: 240 ಎಂಎಂ ಡಿಸ್ಕ್/ 130 ಎಂಎಂ ಡ್ರಮ್
          • ರಿಯರ್: 100/90-17, ಟ್ಯೂಬ್‌ಲೆಸ್
          • ಇಂಧನ ಟ್ಯಾಂಕ್: 10 ಲೀಟರ್

            ಡೈಮೆಂಷನ್ ಮತ್ತು ಭಾರ

            ಡೈಮೆಂಷನ್ ಮತ್ತು ಭಾರ

            • ಉದ್ದ: 2038 ಎಂಎಂ
            • ಅಗಲ: 714 ಎಂಎಂ
            • ಎತ್ತರ: 1070 ಎಂಎಂ
            • ವೀಲ್‌ಬೇಸ್: 1305 ಎಂಎಂ
            • ಸೀಟು ಎತ್ತರ: 795 ಎಂಎಂ
            • ಗ್ರೌಂಡ್ ಕ್ಲಿಯರನ್ಸ್: 165 ಎಂಎಂ
            • ಕರ್ಬ್ ಭಾರ (ಡ್ರಮ್/ಡಿಸ್ಕ್): ಡಿಸ್ಕವರ್ 150ಎಸ್ - 129/130, ಡಿಸ್ಕವರ್ 150ಎಫ್ - 132

Most Read Articles

Kannada
English summary
Indian two wheeler major Bajaj Auto has launched two new 150cc motorcycles under Discover brand. The new Bajaj Discover 150S and Discover 150F are powered by a 145cc 4-valve single-cylinder DTS-i with ExhausTEC engine that churns out 14.5 PS of power and 12.75Nm of torque.
Story first published: Monday, August 11, 2014, 16:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X