ಪಲ್ಸರ್, ಅಪಾಚೆಗೆ ಸೆಡ್ಡು ನೀಡಲಿರುವ ಹೋಂಡಾ ಟ್ರಿಗರ್!

ದೇಶದ ದ್ವಿಚಕ್ರ ಪ್ರಯಾಣಿಕ ಸೆಗ್ಮೆಂಟ್‌ನಲ್ಲಿ ತನ್ನದೇ ಆದ ಸ್ಥಾನಮಾನ ಉಳಿಸಿಕೊಂಡು ಬಂದಿರುವ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ಸ್ ಇಂಡಿಯಾ, ಅತಿ ನೂತನ ಸಿಬಿ ಟ್ರಿಗರ್ ಬೈಕ್ ಲಾಂಚ್ ಮಾಡಿದೆ.

ಎಪ್ರಿಲ್‌ನಲ್ಲಿ ಈ ನೂತನ ಹೋಂಡಾ ಸಿಬಿ ಟ್ರಿಗರ್ ಬುಕ್ಕಿಂಗ್ ಆರಂಭಗೊಳ್ಳಲಿದ್ದು, ಮೇ ತಿಂಗಳಿನಿಂದ ಗ್ರಾಹಕರಿಗೆ ವಿತರಣೆ ಕಾರ್ಯ ಆರಂಭವಾಗಲಿದೆ. ಇನ್ನು ತಾಂತ್ರಿಕತೆ ಬಗ್ಗೆ ಗಮನ ಹಾಯಿಸಿದಾಗ ಈ ಹಿಂದಿನ ಸಿಬಿಆರ್150ಆರ್ ಸ್ಟ್ರೀಟ್‌ಫೈಟರ್ ಎಂಜಿನ್ ಉಳಿಸಿಕೊಳ್ಳಲಾಗಿದೆ.

ಅಂದರೆ ನೂತನ ಬೈಕ್ 150ಸಿಸಿ, ಡಿಒಎಚ್‌ಸಿ, 4 ವಾಲ್ವೆ, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 8500 ಆರ್‌ಪಿಎಂನಲ್ಲಿ 13.8 ಬಿಚ್‌ಪಿ ಪೀಕ್ ಪವರ್ ಹಾಗೂ 12.5 ಎನ್‌ಎಂನಲ್ಲಿ 6500 ಆರ್‌ಪಿಎಂ ಪೀಕ್ ಟರ್ಕ್ಯೂ ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಮೈಲೇಜ್ ಎಷ್ಟು..?
ಇನ್ನು ಕಂಪನಿ ಅಭಿಪ್ರಾಯದಂತೆ ನೂತನ ಬೈಕ್ ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಪ್ರಯಾಣಿಕನ ದೃಷ್ಟಿಕೋನದಲ್ಲಿ ಉತ್ತಮ ಇಂಧನ ಕ್ಷಮತೆಯಾಗಿದೆ.

ಇನ್ನು ಸಿಬಿ ಯೂನಿಕಾರ್ನ್, ಡಾಜ್ಲರ್ ಹಾಗೂ ಸಿಬಿಆರ್150ಆರ್ ಆವೃತ್ತಿಗಳ ಬಳಿಕ ಜಪಾನ್ ವಾಹನ ತಯಾರಕ ಸಂಸ್ಥೆಯಿಂದ ದೇಶದಲ್ಲಿ ಪರಿಚಯವಾಗುತ್ತಿರುವ ನಾಲ್ಕನೇ 150ಸಿಸಿ ಬೈಕ್ ಆಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ದೇಶದಲ್ಲಿ ಕೊಂಬಿ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಐಚ್ಛಿಕ ಆಯ್ಕೆ ಕೂಡಾ ನೀಡಲಾಗಿದೆ.

Honda CB Trigger 150cc

ಹೋಂಡಾ ಸಿಬಿ ಟ್ರಿಗರ್ ಬೈಕ್‌ನಲ್ಲಿ ಆಪ್ಷನಲ್ ಸಿಬಿಎಸ್ ಸಿಸ್ಟಂ ಇರಲಿದೆ. ಅಂದರೆ ಕೊಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿದ ದೇಶದ ಮೊದಲ 150ಸಿಸಿ ಬೈಕ್ ಎನಿಸಿಕೊಳ್ಳಲಿದೆ.

Honda CB Trigger 150cc

ಹೋಂಡಾ ಟ್ರಿಗರ್, 240ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ 220ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರಲಿದೆ.

Honda CB Trigger 150cc

ಡಿಜಿಟಲ್ ಸಲಕರಣೆ, ಎಲ್‌ಇಡಿ ಟೈಲ್ ಲ್ಯಾಂಪ್ ಹಾಗೂ ಅಲಾಯ್ ವೀಲ್‌ಗಳಂತಹ ಇತರ ವೈಶಿಷ್ಟ್ಯಗಳನ್ನು ಕೂಡಾ ಹೊಂದಿರಲಿದೆ.

Honda CB Trigger 150cc

ಒಟ್ಟು ಮೂರು ವರ್ಣಗಳಲ್ಲಿ ಬೈಕ್ ಲಭ್ಯವಿರಲಿದೆ. ಅವುಗಳೆಂದರೆ,

Pearl Siena Red,

Meteor Green Metallic,

Black

Honda CB Trigger 150cc

ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ 150 ಡಿಟಿಎಸ್ಐ, ಟಿವಿಎಸ್ ಅಪಾಚೆ ಆರ್‌ಟಿಆರ್ ಹಾಗೂ ಯಮಹಾ ಎಫ್‌ಝಡ್ ಸಿರೀಸ್ ಬೈಕ್‌ಗಳಿಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ.

Honda CB Trigger 150cc

ಕರ್ಬ್ ವೇಟ್ 237 ಗ್ರಾಂ. ಬೈಕ್‌ನ ಫ್ರಂಟ್ ಸಸ್ಪೆಷನ್ ಟೆಲಿಸ್ಕಾಪಿಕ್ ಫೋರ್ಕ್ಸ್ ಆಂಡ್ ರಿಯರ್‌ನಲ್ಲಿ ಮೊನೊಶಾಕ್ ಹೊಂದಿರಲಿದೆ.

ಒಟ್ಟು ಮೂರು ವೆರಿಯಂಟ್

ಒಟ್ಟು ಮೂರು ವೆರಿಯಂಟ್

ಸಿಬಿ ಟ್ರಿಗರ್ ಸ್ಟಾಡಂರ್ಡ್ ವಿತ್ ಫ್ರಂಟ್ ಡಿಸ್ಕ್ ಬ್ರೇಕ್

ಸಿಬಿ ಟ್ರಿಗರ್ ಡಿಲಕ್ಸ್ ವಿತ್ ಫ್ರಂಟ್ ಆಂಡ್ ರಿಯರ್ ಡಿಸ್ಕ್ ಬ್ರೇಕ್

ಸಿಬಿ ಟ್ರಿಕರ್ ಸಿಬಿಎಸ್ ವಿತ್ ಫ್ರಂಟ್ ಆಂಡ್ ರಿಯರ್ ಡಿಸ್ಕ್ ಬ್ರೇಕ್ ಪ್ಲಸ್ ಕೊಂಬಿ ಬ್ರೇಕಿಂಗ್ ಸಿಸ್ಟಂ

Honda CB Trigger 150cc

ಹಾಗಿದ್ದರೂ ದರದ ಮಾಹಿತಿಯನ್ನು ಕಂಪನಿಯು ಇನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ತಿಳಿಸಲಾಗುವುದು. ಇದಕ್ಕಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

150ಸಿಸಿ ಹೋಂಡಾ ಟ್ರಿಗರ್

150ಸಿಸಿ ಹೋಂಡಾ ಟ್ರಿಗರ್

Most Read Articles

Kannada
English summary
Honda Motorcycles and Scooters India launched its new 150cc bike, "CB Trigger". It is the first bike in the country to offer Combi Brake Systeam (CBS) as an option. Honda will reveal the bike's during its launch in April
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X