ಕವಾಸಕಿಯಿಂದ 5 ಅತ್ಯಾಕರ್ಷಕ ಬೈಕ್‌ಗಳು ಬಿಡುಗಡೆ
ಗರಿಷ್ಠ ನಿರ್ವಹಣೆಯ ಬೈಕ್‌ಗಳನ್ನು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿರುವ ಕವಾಸಕಿ, ದೇಶದ ಮಾರುಕಟ್ಟೆಗೆ ಐದು ಹೊಸ ಮಾದರಿಗಳನ್ನು ಪರಿಚಯಿಸಿದೆ. ಈ ಮೂಲಕ ಭಾರತ ಮೇಲಿರುವ ಬದ್ಧತೆಯನ್ನು ಜಪಾನ್‌ನ ಈ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ಮಗದೊಮ್ಮೆ ಪ್ರದರ್ಶಿಸಿದೆ.
ಬೆಂಗಳೂರು ಕಿವ್‌ರಾಜ್ ಗ್ರೂಪ್ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯವಾಗಿ ಮಾರಾಟವಾಗುತ್ತಿರುವ ಬೈಕ್‌ಗಳನ್ನು ಕವಾಸಕಿ ದೇಶಕ್ಕೆ ತಂದಿದೆ. 800ರಿಂದ 1400 ಸಿಸಿ ವರೆಗಿನ ಈ ಬೈಕ್‌ಗಳು ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ.
ಕವಾಸಕಿಯಿಂದ ಬಿಡುಗಡೆಯಾದ ಐದು ಮಾದರಿಗಳು ಇಂತಿದೆ:
- ನಿಂಜಾ ಝಡ್‌ಎಕ್ಸ್14ಆರ್,
- ನಿಂಜಾ ಝಡ್‌ಎಕ್ಸ್10ಆರ್,
- ನಿಂಜಾ 1000,
- ಝಡ್1000 ಮತ್ತು
- ಝಡ್800

ದೇಶದಲ್ಲಿ 'ಝಡ್' ಹಾಗೂ 'ನಿಂಜಾ' ಸಿರೀಸ್ ಬೈಕ್‌ಗಳಿದ್ದು, ಕಳೆದ 30 ವರ್ಷಗಳಿಂದ ಉತ್ಪಾದನೆಯಾಗುತ್ತಿದೆ. ಇವುಗಳಲ್ಲಿ ನಿಂಜಾ 300, ನಿಂಜಾ 650 ಪ್ರಮುಖವಾಗಿದೆ. ಸಹಜವಾಗಿಯೇ ಗ್ರಾಹಕರು ಕಡಿಮೆ ನಿರ್ವಹಣಾ ಬೈಕ್‌ಗಳಿಂದ ಗರಿಷ್ಠ ನಿರ್ವಹಣೆ ಬೈಕ್‌ಗಳತ್ತ ಸ್ಥಳಾಂತರವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಮಾದರಿಗಳು ಗಮನಾರ್ಹವೆನಿಸಲಿದೆ. 200 ಕೆ.ಜಿಗಿಂತಲೂ ಹೆಚ್ಚು ತೂಕವಿರುವ ಈ ಬೈಕ್‌ಗಳು ಪ್ರತಿ ಲೀಟರ್‌ಗೆ 16ರಿಂದ 20 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಕವಾಸಕಿ ನಿಂಜಾ ಝಡ್‌ಎಕ್ಸ್14ಆರ್
ಎಂಜಿನ್: ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಇನ್‌ಲೈನ್ 4 ಸಿಲಿಂಡರ್
ಸಾಮರ್ಥ್ಯ: 1,441 ಸಿಸಿ
ಗರಿಷ್ಠ ಟಾರ್ಕ್: 162.5 ಎನ್‌ಎಂ 7,500 ಆರ್‌ಪಿಎಂ
ಗರಿಷ್ಠ ಪವರ್: 210 ಬಿಎಚ್‌ಪಿ
ಬೆಲೆ: 17.15 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಕವಾಸಕಿ ನಿಂಜಾ ಝಡ್‌ಎಕ್ಸ್10ಆರ್
ಎಂಜಿನ್: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, ಇನ್‌ಲೈನ್ 4 ಸಿಲಿಂಡರ್
ಸಾಮರ್ಥ್ಯ: 998 ಸಿಸಿ
ಗರಿಷ್ಠ ಟಾರ್ಕ್: 112 ಎನ್‌ಎಂ 11,500 ಆರ್‌ಪಿಎಂ
ಗರಿಷ್ಠ ಪವರ್: 200 ಬಿಎಚ್‌ಪಿ
ಬೆಲೆ: 15.96 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಕವಾಸಕಿ ನಿಂಜಾ 1000
ಎಂಜಿನ್: ಲಿಕ್ವಿಡ್ ಕೂಲ್ದ್, 4 ಸ್ಟ್ರೋಕ್, ಇನ್‌ಲೈನ್ 4 ಸಿಲಿಂಡರ್
ಸಾಮರ್ಥ್ಯ: 1,043 ಸಿಸಿ
ಗರಿಷ್ಠ ಟಾರ್ಕ್: 100 ಎನ್‌ಎಂ 8,800 ಆರ್‌ಪಿಎಂ
ಗರಿಷ್ಠ ಪವರ್: 138 ಬಿಎಚ್‌ಪಿ
ಬೆಲೆ: 12.74 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಕವಾಸಕಿ ಝಡ್1000
ಎಂಜಿನ್: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್ ಇನ್‌ಲೈನ್ 4 ಸಿಲಿಂಡರ್
ಸಾಮರ್ಥ್ಯ: 1,043 ಸಿಸಿ
ಗರಿಷ್ಠ ಟಾರ್ಕ್: 111 ಎನ್‌ಎಂ 7,300 ಆರ್‌ಪಿಎಂ
ಗರಿಷ್ಠ ಪವರ್: 142 ಬಿಎಚ್‌ಪಿ
ಬೆಲೆ: 12.74 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಕವಾಸಕಿ ಝಡ್800
ಎಂಜಿನ್: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್ ಇನ್‌ಲೈನ್ 4 ಸಿಲಿಂಡರ್
ಸಾಮರ್ಥ್ಯ: 806 ಸಿಸಿ
ಗರಿಷ್ಠ ಟಾರ್ಕ್: 83 ಎನ್‌ಎಂ 8,000 ಆರ್‌ಪಿಎಂ
ಗರಿಷ್ಠ ಪವರ್: 113 ಬಿಎಚ್‌ಪಿ
ಬೆಲೆ: 8.30 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)


Click it and Unblock the Notifications








