ಸದ್ಯದಲ್ಲೇ ಬುಲೆಟ್ ರಾಜ ಎನ್‌ಫೀಲ್ಡ್ ಭಾರತಕ್ಕೆ ಎಂಟ್ರಿ

Written By:

ದೇಶದ ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್‌ನ ಬಹುನಿರೀಕ್ಷಿತ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ. ಈ ಹಿಂದೆ ಕೊಟ್ಟಿರುವ ವರದಿಯನ್ನು ಮತ್ತೆ ದೃಢಪಡಿಸಿರುವ ಚೆನ್ನೈ ಮೂಲದ ಎನ್‌ಫೀಲ್ಡ್, ಸೆಪ್ಟೆಂಬರ್ ತಿಂಗಳಲ್ಲಿ ಬ್ರಿಟನ್‌ಗೆ ಎಂಟ್ರಿ ಕೊಡಲಿರುವ ಕೆಫೆ ರೇಸರ್ ಅಕ್ಟೋಬರ್‌ನಲ್ಲಿ ಭಾರತ ಪ್ರವೇಶ ಪಡೆಯಲಿದೆ ಎಂದಿದೆ.

ಜಾಗತಿಕ ಗ್ರಾಹಕರ ಬೇಡಿಕೆ ಅನುಸಾರವಾಗಿ ರಾಯಲ್ ಎನ್‌ಫೀಲ್ಡ್, ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಪರಿಚಯಪಡಿಸುತ್ತಿದೆ. ಇದರಂತೆ ಭಾರತಕ್ಕಿಂತ ಮೊದಲು ಬ್ರಿಟನ್‌ನಲ್ಲಿ ಅನಾವರಣಗೊಳ್ಳುತ್ತಿದೆ. ದೇಶದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳಿಗೆ ಭಾರಿ ಬೇಡಿಕೆಯಿದೆ. ಸದ್ಯದಲ್ಲೇ ಆಗಮನವಾಗಲಿರುವ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಕೂಡಾ ದೇಶದ ರಸ್ತೆಗಳಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ.

ಎಂಜಿನ್

ಎಂಜಿನ್

ಮುಂಬರುವ ಆರ್‌ಇ ಕಾಂಟಿನೆಂಟಲ್ ಜಿಟಿ 535ಸಿಸಿ, ಫೋರ್ ಸ್ಟ್ರೋಕ್, ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರಲಿದೆ. ಇದನ್ನು ಬ್ರಿಟನ್‌ಗೆ ಹ್ಯಾರಿಸ್ ಎಂಜಿನಿಯರಿಂಗ್ ಜತೆಗೂಡಿ ಅಭಿವೃದ್ಧಿಪಡಿಸಲಾಗಿದೆ.

ಸಿಂಗಲ್ ಸೀಟರ್

ಸಿಂಗಲ್ ಸೀಟರ್

ಹೆಸರಲ್ಲೇ ಸೂಚಿಸಿರುವಂತೆಯೇ ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ ಸಿಂಗಲ್ ಸೀಟರ್ ಸಿಟ್ಟಿಂಗ್ ವ್ಯವಸ್ಥೆ ಪಡೆದುಕೊಂಡಿದೆ.

ಹಗುರ ಭಾರ

ಹಗುರ ಭಾರ

ಇದು ರಾಯಲ್ ಎನ್‌ಫೀಲ್ಡ್‌ನಿಂದ ಉತ್ಪಾದನೆಯಾಗುತ್ತಿರುವ ಕಡಿಮೆ ಭಾರದ ಬುಲೆಟ್ ಆಗಿರಲಿದೆ.

ದರ ಮಾಹಿತಿ

ದರ ಮಾಹಿತಿ

ಅದೇ ಹೊತ್ತಿಗೆ ರಾಯಲ್ ಎನ್‌ಫೀಲ್ಡ್ ಮಾಡೆಲ್‌ಗಳ ಪೈಕಿ ಅತಿ ದುಬಾರಿ ಎನಿಸಿಕೊಳ್ಳಲಿರುವ ಕಾಂಟಿನೆಂಟಲ್ ಜಿಟಿ ದರ 2ರಿಂದ 2.5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಎನ್‌ಫೀಲ್ಡ್ ಯುಗ

ಎನ್‌ಫೀಲ್ಡ್ ಯುಗ

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕೆಫೆ ರೇಸರ್ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.

English summary
Royal Enfield has reconfirmed what it had already said earlier. India's marquee two wheeler manufacturer will launch its new flagship product, the Continental GT Cafe Racer in September in the U.K. India launch will follow in October.
Story first published: Tuesday, August 13, 2013, 8:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark