ಹೀರೋ ಹೈಬ್ರಿಡ್ ಸ್ಕೂಟರ್ "ಲೀಫ್" ಅನಾವರಣ

Posted By:

ಜಪಾನಿನ ಹೀರೋ ಹಂಗಿಲ್ಲದೇ ಸ್ವತಂತ್ರ ಕಂಪನಿಯಾಗಿ ಹೊರಹೊಮ್ಮಲು ಪ್ರಯತ್ನಿಸುವ ಹೀರೋ ಮೊಟೊಕಾರ್ಪ್ ಇದೀಗ ದೆಹಲಿ ವಾಹನ ಪ್ರದರ್ಶನದಲ್ಲಿ "ಲೀಫ್" ಎಂಬ ಹೈಬ್ರಿಡ್ ಸ್ಕೂಟರನ್ನು ಅನಾವರಣ ಮಾಡಿದೆ.

To Follow DriveSpark On Facebook, Click The Like Button
Hero Motocorp launches hybrid Concept scooter Leap

ಪೆಟ್ರೋಲ್ ಮತ್ತು ಬ್ಯಾಟರಿ ಚಾಲಿತ "ಲೀಫ್" ಹೈಬ್ರಿಡ್ ಸ್ಕೂಟರ್ ಕಾನ್ಸೆಪ್ಟನ್ನು ಹೀರೋ ಮೊಟೊಕಾರ್ಪ್ ಲಿಮಿಟೆಡ್ ದೆಹಲಿ ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಿದೆ.

ಪರಿಸರ ಸ್ನೇಹಿ ವಾಹನಗಳನ್ನು ಭವಿಷ್ಯದಲ್ಲಿ ಅಭಿವೃದ್ಧಿಪಡಿಸುವ ಕಂಪನಿಯ ಕಾರ್ಯತಂತ್ರದ ಮೊದಲ ಭಾಗವಾಗಿ "ಲೀಫ್' ಸ್ಕೂಟರನ್ನು ಕಂಪನಿ ಪರಿಚಯಿಸಿದೆ.

"ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಅನನ್ಯ ತಂತ್ರಜ್ಞಾನದ ಉತ್ಪನ್ನಗಳನ್ನು ಹೊರತರುವ ಕಂಪನಿಯ ಸಾಮರ್ಥ್ಯವನ್ನು ಲೀಫ್ ಬಿಂಬಿಸುತ್ತದೆ" ಎಂದು ಕಂಪನಿಯ ಎಂಡಿ ಪವನ್ ಮುಂಜಾಲ್ ಹೇಳಿದ್ದಾರೆ.

"ನೂತನ ಲೀಫ್ ಸ್ಕೂಟರ್ ಈಗ ಕಾನ್ಸೆಪ್ಟ್ ಹಂತದಲ್ಲಿದೆ. ಈ ಸ್ಕೂಟರನ್ನು ವಾಣಿಜ್ಯ ಮಾರಾಟ ಉದ್ದೇಶಕ್ಕೆ ಉತ್ಪಾದಿಸಲು ನಾವು ಬದ್ಧರಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.

ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ನೂತನ ಉತ್ಪನ್ನಗಳನ್ನು ಪರಿಚಯಿಸುವಲ್ಲಿ ನಿರತವಾಗಿವೆ. ದೇಶದ ವಾಹನ ಮಾರುಕಟ್ಟೆಯಲ್ಲಿ ನಿಜಾರ್ಥದಲ್ಲಿ ಹೀರೋ ಆಗಲು ಹೀರೋ ಮೊಟೊಕಾರ್ಪ್ ಪ್ರಯತ್ನಿಸುತ್ತಿದೆ ಎನ್ನುವುದಕ್ಕೆ ದೆಹಲಿ ವಾಹನ ಪ್ರದರ್ಶನದಲ್ಲಿ ಕಂಪನಿ ಪರಿಚಯಿಸಿರುವ ನೂತನ ಉತ್ಪನ್ನಗಳೇ ಸಾಕ್ಷಿ.

ವಾಹನ ಪ್ರದರ್ಶನದ 11ನೇ ಆವೃತ್ತಿಯು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿದೆ. ಈ ವಾಹನ ಪ್ರದರ್ಶನ ಜನವರಿ ಹನ್ನೊಂದರಂದು ಮುಕ್ತಾಯವಾಗಲಿದೆ.

English summary
Hero Motocorp Limited Launches a hybrid concept scooter "Leap" in Delhi Auto Expo 2012.
Story first published: Saturday, January 7, 2012, 11:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark