ನೂರಾರು ಕಂಪನಿಗಳಿಗೆ ದೆಹಲಿ ಪ್ರದರ್ಶನ ಭಾಗ್ಯವಿಲ್ಲ!

Posted By:

ವಿಶ್ವದ ವಾಹನ ಕಂಪನಿಗಳಿಗೆ ವೇದಿಕೆ ಒದಗಿಸುವ ದೆಹಲಿ ವಾಹನ ಪ್ರದರ್ಶನದಲ್ಲಿ ನೂರಾರು ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಭಾಗ್ಯ ದೊರಕಿಲ್ಲ. ದೆಹಲಿಯ ಪ್ರಗತಿ ಮೈದಾನದಲ್ಲಿನ ಸ್ಥಳಾವಕಾಶ ಕೊರತೆಯೇ ನೂರಾರು ಕಂಪನಿಗಳಿಗೆ ನಿರಾಶೆಯುಂಟುಮಾಡಿವೆ.

Over 100 exhibitors Denied permission

ಈ ಬಾರಿ ವಾಹನ ಪ್ರದರ್ಶನ ಸಂಘಟಕರು ಕೆಲವು ಕಠಿಣ ನಿಯಮ ಅಳವಡಿಸಿದ್ದರು. ದಿನಪ್ರತಿ ಪ್ರದರ್ಶನಕ್ಕೆ ಭೇಟಿ ನೀಡುವ ಜನಮಿತಿಯು ಇದರಲ್ಲಿ ಒಂದು. ಸ್ಥಳಾವಕಾಶಕ್ಕಿಂತ ಹೆಚ್ಚಿನ ಜನರು ವಾಹನ ಪ್ರದರ್ಶನಕ್ಕೆ ಬಂದು ನೂಕುನುಗ್ಗಲು ಉಂಟಾಗದಂತೆ ತಡೆಯಲು ಸಂಘಟಕರು ಈ ಕ್ರಮ ಕೈಗೊಂಡಿದ್ದಾರೆ.

"ತಡವಾಗಿ ಅರ್ಜಿ ಸಲ್ಲಿಸಿದ್ದು ಮತ್ತು ಈ ಹಿಂದಿನ ವಾಹನ ಪ್ರದರ್ಶನದ ಇತಿಹಾಸವೆಂಬ ಎರಡು ಮಾನದಂಡಗಳ ಮೂಲಕ ನೂರಾರು ವಾಹನ ಕಂಪನಿಗಳಿಗೆ ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶ ನಿರಾಕರಿಸಲಾಗಿದೆ" ಎಂದು ವಾಹನ ಪ್ರದರ್ಶನ ಆಯೋಜನಾ ಸಮಿತಿ ಚೇರ್ಮನ್ ರಾಜೀವ್ ಕೌಲ್ ಹೇಳಿದ್ದಾರೆ. ಈ ನೂರು ಕಂಪನಿಗಳಲ್ಲಿ ಸುಮಾರು 60ರಷ್ಟು ಪ್ರದರ್ಶಕರು ವಿದೇಶಿ ಕಂಪನಿಗಳಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದೆಹಲಿ ವಾಹನ ಪ್ರದರ್ಶನದ ಹನ್ನೆರಡನೇ ಆವೃತ್ತಿಯಲ್ಲಿ ಅಮೆರಿಕ, ಚೀನಾ, ಥೈಲಾಂಡ್ ಮತ್ತು ಟರ್ಕಿ ದೇಶಗಳು ಸೇರಿದಂತೆಒಟ್ಟಾರೆ 24 ದೇಶಗಳಿಂದ 1,500 ಪ್ರದರ್ಶಕರು ಭಾಗವಹಿಸಲಿದ್ದಾರೆ. ನೆದರ್ಲಾಂಡಿನ ಪಸ್ಸಾರ್, ಅಮೆರಿಕ ಬೈಕ್ ಟ್ರಿಯಂಪ್ ಮತ್ತು ಆಫ್ ರೋಡ್ ವಾಹನಗಳು ಕೂಡ ಪ್ರದರ್ಶನದಲ್ಲಿರಲಿವೆ.

English summary
Over 100 exhibitors from across the globe have been denied permission to participate at the 11th Delhi Auto Expo 2012.
Story first published: Wednesday, January 4, 2012, 11:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark