ಬಂತು.. ಬಂತು.. ಐಕಾನಿಕ್ ವೆಸ್ಪಾ ಬಂತು!!

Posted By:

ದೇಶದ ರಸ್ತೆಯಲ್ಲಿ ತ್ರಿಚಕ್ರ ವಾಹನ ದೊರೆಯಾಗಿ ಮೆರೆಯುತ್ತಿರುವ ಪಿಯಾಜಿಯೊ ಕಂಪನಿಯು ಹದಿಮೂರು ವರ್ಷಗಳ ತರುವಾಯ "ಐಕಾನಿಕ್ ವೆಸ್ಪಾ" ಸ್ಕೂಟರನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ.

To Follow DriveSpark On Facebook, Click The Like Button

ವೆಸ್ಪಾ ಸ್ಕೂಟರ್ ನಿರೀಕ್ಷೆಯಲ್ಲಿದ್ದವರಿಗೆ ಇದು ಸವಿ ಸುದ್ದಿ. ಇನ್ನು ಈ ಸ್ಕೂಟರಿಗೆ ಹೆಚ್ಚು ದಿನ ಕಾಯಬೇಕಿಲ್ಲ. 125 ಸಿಸಿಯ ವೆಸ್ಪಾ ಸ್ಕೂಟರ್ ಪ್ರಸಕ್ತ ವರ್ಷದ ಮಾರ್ಚ್ ತಿಂಗಳಿನಿಂದ ದೇಶದ ವಾಹನ ಮಾರುಕಟ್ಟೆಯಲ್ಲಿ ದೊರಕಲಿದೆ. ಪ್ರೀಮಿಯಂ ವೆಸ್ಪಾ ಸ್ಕೂಟರ್ ದರ ಸುಮಾರು 60 ಸಾವಿರ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಪಿಯಾಜಿಯೊ ಕಂಪನಿಯು ದೇಶದ ವಾಹನ ಮಾರುಕಟ್ಟೆಯಲ್ಲಿ ಮೊತ್ತಮೊದಲ ಬಾರಿಗೆ ಪಾಲುದಾರ ಕಂಪನಿಯೊಂದರ ಹಂಗಿಲ್ಲದೇ ನೂತನ ವೆಸ್ಪಾವನ್ನು ಮಾರಾಟ ಮಾಡಲಿದೆ. ನಾಲ್ಕು ದಶಕಗಳ ಹಿಂದೆ ವೆಸ್ಪಾ ಸ್ಕೂಟರ್ ಉತ್ಪಾದನೆಗೆ ಪಿಯಾಜಿಯೊ ಕಂಪನಿಯು ಬಜಾಜ್ ಆಟೋ ಲಿಮಿಟೆಡ್ ಜೊತೆ ಪಾಲುದಾರಿಕೆ ಮಾಡಿಕೊಂಡಿತ್ತು.

ಬಜಾಜ್ ಜೊತೆಗಿನ ಪಿಯಾಜಿಯೊ ಮೈತ್ರಿ 1971ಕ್ಕೆ ಅಂತ್ಯವಾಗಿತ್ತು. ದೇಶದಲ್ಲಿ ಸ್ಕೂಟರ್ ಮಾರಾಟ ಮಾಡಲು ಪಿಯಾಜಿಯೊ ಕಂಪನಿಯು 1983ರಲ್ಲಿ ಎಲ್ಎಂಎಲ್ ಲಿಮಿಟೆಡ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಎಲ್ಎಂಎಲ್ ಲಿಮಿಟೆಡ್ ಪಿಯಾಜಿಯೊ ಪಾಲು ಖರೀದಿಸಿದ ನಂತರ ಈ ಜಂಟಿ ಉದ್ಯಮ ಕೊನೆಗೊಂಡಿತ್ತು.

ಇನ್ನು ಕೆಲವೇ ತಿಂಗಳಲ್ಲಿ ಕಂಪನಿಯು ವಿವಿಧ ಶ್ರೇಣಿಯ ವೆಸ್ಪಾ ಸ್ಕೂಟರುಗಳನ್ನು ಪರಿಚಯಿಸಲಿದೆ. ಅಂದರೆ ಕಂಪನಿಯು ದುಬಾರಿ, ಎಕ್ಸ್ ಕ್ಲೂಸಿವ್, ಜೀವನ ಶೈಲಿ ಅವಶ್ಯಕತೆಗೆ ತಕ್ಕಂತಹ ಸ್ಕೂಟರುಗಳನ್ನು ಹೊಂದಿದೆ. ನೂತನ ಪಿಯಾಜಿಯೊ ವೆಸ್ಪಾ ಸ್ಕೂಟರಿನಲ್ಲಿ ಅತ್ಯಾಧುನಿಕ ಫೀಚರುಗಳೂ ಇರಲಿವೆ.

ದೆಹಲಿ ವಾಹನ ಪ್ರದರ್ಶನದಿಂದ ನೇರಪ್ರಸಾರ

English summary
Piaggio unveiled Vespa Scooter in Delhi Auto Expo. Company re-entered Indian Scooter market after 13 years. New 125cc Vespa scooter available in India on March 2012.
Story first published: Saturday, January 7, 2012, 11:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark