1.5 ಲಕ್ಷ ಬಜೆಟ್‌ಗೆ ಶಕ್ತಿಶಾಲಿ 200 ಸಿಸಿ ಬೈಕ್ಸ್

By Nagaraja

ಭಾರತೀಯ ವಾಹನ ಮಾರುಕಟ್ಟೆ ನಿಧಾನವಾಗಿ ಬದಲಾಗುತ್ತಿದೆ. ಬಜೆಟ್ ಬೈಕ್ ಖರೀದಿಗಾರರೀಗ ನಿಧಾನವಾಗಿ ಗರಿಷ್ಠ ನಿರ್ವಹಣೆಯ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳತ್ತ ವಾಲುತ್ತಿದ್ದಾರೆ. ಇಂದಿನ ಯುವ ಜನಾಂಗವು ಇಂತಹ ಬೈಕ್ ಶ್ರೇಣಿಗಳನ್ನು ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ.

ದೇಶದಲ್ಲಿ ಎಂಟ್ರಿ ಲೆವೆಲ್ ಕ್ರೀಡಾ ಅಥವಾ ನಿರ್ವಹಣಾ ಬೈಕ್ ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದರೊಂದಿಗೆ ಸಹಜವಾಗಿಯೇ ಅನೇಕ ಹೊಸ ಮಾದರಿಗಳು ದೇಶ ಪ್ರವೇಶ ಪಡೆದಿದೆ. ಇಂದಿನ ಈ ಲೇಖನದಲ್ಲಿ 1.5 ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಲಭ್ಯವಾಗುವ ಆಕರ್ಷಕ 200 ಸಿಸಿ ನಿರ್ವಹಣಾ ಬೈಕ್ ಗಳನ್ನು ಪಟ್ಟಿ ಮಾಡಿಕೊಡಲಿದ್ದೇವೆ.

ಪಲ್ಸರ್ 200 ಎನ್‌ಎಸ್

ಪಲ್ಸರ್ 200 ಎನ್‌ಎಸ್

ಬೆಲೆ: 92,724 ರು. (ಎಕ್ಸ್ ಶೋ ರೂಂ ಬೆಂಗಳೂರು)

ಎಂಜಿನ್ ತಾಂತ್ರಿಕತೆ

  • 199.5 ಸಿಸಿ, 4 ಸ್ಟ್ರೋಕ್- 4ವಿ - ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್
  • ಅಶ್ವಶಕ್ತಿ: 23.52
  • ಗೇರ್ ಬಾಕ್ಸ್: 6 ಸ್ಪೀಡ್
  • ಪಲ್ಸರ್ 200 ಎನ್‌ಎಸ್

    ಪಲ್ಸರ್ 200 ಎನ್‌ಎಸ್

    • ಚಕ್ರಾಂತರ: 1363 ಎಂಎಂ
    • ಗ್ರೌಂಡ್ ಕ್ಲಿಯರನ್ಸ್: 169 ಎಂಎಂ
    • ಕರ್ಬ್ ಭಾರ: 151 ಕೆ.ಜಿ
    • ಇಂಧನ ಟ್ಯಾಂಕ್: 12 ಲೀಟರ್
    • ಗರಿಷ್ಠ ವೇಗ: 135 kmph
    • ಬಜಾಜ್ ಪಲ್ಸರ್ ಆರ್‌ಎಸ್200

      ಬಜಾಜ್ ಪಲ್ಸರ್ ಆರ್‌ಎಸ್200

      ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)

      • ಸ್ಟ್ಯಾಂಡರ್ಡ್: 121676 ರು.
      • ಎಬಿಎಸ್: 133891 ರು.
      • ಎಂಜಿನ್ ತಾಂತ್ರಿಕತೆ

        • 199.5 ಸಿಸಿ, 4 ಸ್ಟ್ರೋಕ್, ಎಸ್‌ಒಎಚ್‌ಸಿ 4 ವಾಲ್ವ್, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್
        • ಅಶ್ವಶಕ್ತಿ: 24.5
        • ಗೇರ್ ಬಾಕ್ಸ್: 6 ಸ್ಪೀಡ್
        • ಬಜಾಜ್ ಪಲ್ಸರ್ ಆರ್‌ಎಸ್200

          ಬಜಾಜ್ ಪಲ್ಸರ್ ಆರ್‌ಎಸ್200

          • ಚಕ್ರಾಂತರ: 1355 ಎಂಎಂ
          • ಗ್ರೌಂಡ್ ಕ್ಲಿಯರನ್ಸ್: 157 ಎಂಎಂ
          • ಕರ್ಬ್ ಭಾರ: 165 ಕೆ.ಜಿ
          • ಇಂಧನ ಟ್ಯಾಂಕ್: 13 ಲೀಟರ್
          • ಗರಿಷ್ಠ ವೇಗ: 140.8 kmph
          • ಬಜಾಜ್ ಪಲ್ಸರ್ ಎಎಸ್ 200

            ಬಜಾಜ್ ಪಲ್ಸರ್ ಎಎಸ್ 200

            ಬೆಲೆ ಮಾಹಿತಿ: 93,457 ರು. (ಎಕ್ಸ್ ಶೋ ರೂಂ ಬೆಂಗಳೂರು)

            ಎಂಜಿನ್ ತಾಂತ್ರಿಕತೆ

            • 199.5 ಸಿಸಿ, ಟ್ವಿನ್ ಸ್ಪಾರ್ಕ್, 4 ವಾಲ್ವ್ ಡಿಟಿಎಸ್-ಐ ಎಂಜಿನ್
            • ಅಶ್ವಶಕ್ತಿ: 23.5
            • ಗೇರ್ ಬಾಕ್ಸ್: 6 ಸ್ಪೀಡ್
            • ಬಜಾಜ್ ಪಲ್ಸರ್ ಎಎಸ್ 200

              ಬಜಾಜ್ ಪಲ್ಸರ್ ಎಎಸ್ 200

              • ಚಕ್ರಾಂತರ: 1363 ಎಂಎಂ
              • ಗ್ರೌಂಡ್ ಕ್ಲಿಯರನ್ಸ್: 167 ಎಂಎಂ
              • ಕರ್ಬ್ ಭಾರ: 153 ಕೆ.ಜಿ
              • ಇಂಧನ ಟ್ಯಾಂಕ್: 12 ಲೀಟರ್
              • ಬಜಾಜ್ ಪಲ್ಸರ್ 220 ಎಫ್

                ಬಜಾಜ್ ಪಲ್ಸರ್ 220 ಎಫ್

                ಬೆಲೆ ಮಾಹಿತಿ: 88,800 ರು. (ಎಕ್ಸ್ ಶೋ ರೂಂ ಬೆಂಗಳೂರು)

                ಎಂಜಿನ್ ತಾಂತ್ರಿಕತೆ

                • 220 ಸಿಸಿ, 4 ಸ್ಟ್ರೋಕ್, ಡಿಟಿಎಸ್-ಐ, ಒಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್
                • ಅಶ್ವಶಕ್ತಿ: 21.05
                • ಗೇರ್ ಬಾಕ್ಸ್: 5 ಸ್ಪೀಡ್
                • ಬಜಾಜ್ ಪಲ್ಸರ್ 220 ಎಫ್

                  ಬಜಾಜ್ ಪಲ್ಸರ್ 220 ಎಫ್

                  • ಚಕ್ರಾಂತರ: 1350 ಎಂಎಂ
                  • ಗ್ರೌಂಡ್ ಕ್ಲಿಯರನ್ಸ್: 165 ಎಂಎಂ
                  • ಕರ್ಬ್ ಭಾರ: 150 ಕೆ.ಜಿ
                  • ಇಂಧನ ಟ್ಯಾಂಕ್: 15 ಲೀಟರ್
                  • ಹೀರೊ ಕರಿಜ್ಮಾ ಝಡ್‌ಎಂಆರ್

                    ಹೀರೊ ಕರಿಜ್ಮಾ ಝಡ್‌ಎಂಆರ್

                    ಬೆಲೆ ಮಾಹಿತಿ: 107,100 ರು. (ಎಕ್ಸ್ ಶೋ ರೂಂ ಬೆಂಗಳೂರು)

                    ಎಂಜಿನ್ ತಾಂತ್ರಿಕತೆ

                    • 223 ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ, ಫ್ಯೂಯಲ್ ಇಂಜೆಕ್ಷನ್, ಒಯಿಲ್ ಕೂಲರ್
                    • ಅಶ್ವಶಕ್ತಿ: 20
                    • ಗೇರ್ ಬಾಕ್ಸ್: 5 ಸ್ಪೀಡ್
                    • ಹೀರೊ ಕರಿಜ್ಮಾ ಝಡ್‌ಎಂಆರ್

                      ಹೀರೊ ಕರಿಜ್ಮಾ ಝಡ್‌ಎಂಆರ್

                      • ಕರ್ಬ್ ಭಾರ: 157 ಕೆ.ಜಿ
                      • ಇಂಧನ ಟ್ಯಾಂಕ್: 15.3 ಲೀಟರ್
                      • ಗರಿಷ್ಠ ವೇಗ: 129 kmpl
                      • ಕೆಟಿಎಂ ಡ್ಯೂಕ್ 200

                        ಕೆಟಿಎಂ ಡ್ಯೂಕ್ 200

                        ಬೆಲೆ ಮಾಹಿತಿ: 1,36,147 ರು. (ಎಕ್ಸ್ ಶೋ ರೂಂ ಬೆಂಗಳೂರು)

                        ಎಂಜಿನ್ ತಾಂತ್ರಿಕತೆ

                        • 199.5 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್
                        • ಅಶ್ವಶಕ್ತಿ: 25
                        • ಗೇರ್ ಬಾಕ್ಸ್: 6 ಸ್ಪೀಡ್
                        • ಕೆಟಿಎಂ ಡ್ಯೂಕ್ 200

                          ಕೆಟಿಎಂ ಡ್ಯೂಕ್ 200

                          ಚಕ್ರಾಂತರ: 1367 ಎಂಎಂ

                          ಗ್ರೌಂಡ್ ಕ್ಲಿಯರನ್ಸ್: 165 ಎಂಎಂ

                          ಕರ್ಬ್ ಭಾರ: 128 ಕೆ.ಜಿ

                          ಇಂಧನ ಟ್ಯಾಂಕ್: 11 ಲೀಟರ್

                          ಕೆಟಿಎಂ ಆರ್‌ಸಿ200

                          ಕೆಟಿಎಂ ಆರ್‌ಸಿ200

                          ಬೆಲೆ ಮಾಹಿತಿ: 1,64,241 ರು. (ಎಕ್ಸ್ ಶೋ ರೂಂ ಬೆಂಗಳೂರು)

                          ಎಂಜಿನ್ ತಾಂತ್ರಿಕತೆ

                          • 199.5 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್
                          • ಅಶ್ವಶಕ್ತಿ: 25
                          • ಗೇರ್ ಬಾಕ್ಸ್: 6 ಸ್ಪೀಡ್
                          • ಕೆಟಿಎಂ ಆರ್‌ಸಿ200

                            ಕೆಟಿಎಂ ಆರ್‌ಸಿ200

                            • ಚಕ್ರಾಂತರ: 1340 ಎಂಎಂ
                            • ಗ್ರೌಂಡ್ ಕ್ಲಿಯರನ್ಸ್: 178.5 ಎಂಎಂ
                            • ಕರ್ಬ್ ಭಾರ: 137.5 ಕೆ.ಜಿ
                            • ಇಂಧನ ಟ್ಯಾಂಕ್: 10 ಲೀಟರ್
                            • ನಮ್ಮ ಅಭಿಮತ

                              ನಮ್ಮ ಅಭಿಮತ

                              ಈ ಎಲ್ಲ ಬೈಕ್ ಗಳು ತಮ್ಮದೇ ಆದ ರೀತಿಯಲ್ಲಿ ಒಂದಕ್ಕೊಂದು ಪೈಪೋಟಿಯನ್ನು ಒಡ್ಡುತ್ತಿದೆ. ಹಾಗಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ ಯುವ ಮನಸ್ಕರಲ್ಲಿ ಅತಿ ಹೆಚ್ಚಿನ ಜನಪ್ರಿಯತೆಗೆ ಪಾತ್ರವಾಗಿದೆ. ಹಾಗೆಯೇ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಎಂಬ ಕೀರ್ತಿಗೆ ಪಾತ್ರವಾಗಿರುವ ಪಲ್ಸರ್ ಹೊಸ ವಿನ್ಯಾಸ ಮೈಗೂಡಿಸುವುದರೊಂದಿಗೆ ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದೆ.


Most Read Articles

Kannada
English summary
200cc Bikes Below 1.5 Lakh Rupees
Story first published: Thursday, October 1, 2015, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X