ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಎರಡು ಲಕ್ಷ ರುಪಾಯಿ ಬೆಲೆ ಪರಿಧಿಯಲ್ಲಿ ಅತ್ಯುತ್ತಮ ಬೈಕ್ ಹುಡುಕಾಟದಲ್ಲಿದ್ದೀರಾ? ಈ ಸಂಬಂಧ ವಿಸೃತವಾದ ಲೇಖನವನ್ನು ಮುಂದಿಡಲಾಗುತ್ತಿದೆ.

By Nagaraja

ಭಾರತೀಯ ದ್ವಿಚಕ್ರ ವಾಹನ ವಿಭಾಗವು ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ಎಂಟ್ರಿ ಲೆವೆಲ್ ಪ್ರಯಾಣಿಕ ವಿಭಾಗದಿಂದ ನಿಧಾನವಾಗಿ ನಿರ್ವಹಣಾ ಬೈಕ್ ವಿಭಾಗದತ್ತ ವಾಲುತ್ತಿದೆ. ಇದರಂತೆ ದೇಶದಲ್ಲಿ 150 ಸಿಸಿಗಿಂತಲೂ ಮೇಲ್ಪಟ್ಟ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ದೇಶದ ಮುಂಚೂಣಿಯ ಸಂಸ್ಥೆಗಳು ಕಳೆದ ಕೆಲವು ವರ್ಷಗಳಿಂದ ನಿರ್ವಹಣಾ ಬೈಕ್ ಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡುವುದರತ್ತ ಗಮನ ಹರಿಸಿದೆ. ಅಷ್ಟಕ್ಕೂ ನೀವು ಕೂಡಾ ಎರಡು ಲಕ್ಷ ರುಪಾಯಿಗಳ ಬೆಲೆ ಪರಿಧಿಯೊಳಗೆ ನೂತನ ಬೈಕ್ ಹುಡುಕಾಟದಲ್ಲಿದ್ದೀರಾ? ಇಂದಿನ ಈ ಲೇಖನದಲ್ಲಿ ಪಾಕೆಟ್ ಸ್ನೇಹಿ ನಿರ್ವಹಣಾ ಬೈಕ್ ಗಳ ಬಗ್ಗೆ ವಿವರಣೆ ಕೊಡಲಿದ್ದೇವೆ. ನಿಮ್ಮ ಮಾಹಿತಿಗಾಗಿ, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

01. ಕೆಟಿಎಂ ಡ್ಯೂಕ್ 390

01. ಕೆಟಿಎಂ ಡ್ಯೂಕ್ 390

ಬಜಾಜ್ ಆಟೋ ಸಹಯೋಗದಲ್ಲಿ ದೇಶಕ್ಕೆ ಎಂಟ್ರಿ ಕೊಟ್ಟಿರುವ ಕೆಟಿಎಂ ಬೈಕ್ ಗಳು ಸಣ್ಣ ಅವಧಿಯಲ್ಲೇ ಅತಿ ಹೆಚ್ಚು ಜನಪ್ರಿಯತೆಯನ್ನು ಸಾಧಿಸಿದೆ. ಪ್ರಮುಖವಾಗಿಯೂ ಯುವ ಗ್ರಾಹಕರಲ್ಲಿ ಹೆಚ್ಚಿನ ಬೇಡಿಕೆಗೆ ಗ್ರಾಸವಾಗಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

373.22 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕೆಟಿಎಂ ಡ್ಯೂಕ್ 390, 35 ಎನ್ ಎಂ ತಿರುಗುಬಲದಲ್ಲಿ 43 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದಿದೆ. ಅಲ್ಲದೆ ಗಂಟೆಗೆ 160 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಇನ್ನು ಅತಿ ಮುಖ್ಯ ಘಟಕವಾದ ಬೆಲೆ ವಿಚಾರಕ್ಕೆ ಬಂದಾಗ ಕೆಟಿಎಂ ಡ್ಯೂಕ್ 390 ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.96 ಲಕ್ಷ ರುಪಾಯಿಗಳಷ್ಟು ಬೆಲೆ ಬರುತ್ತದೆ. ಇದು ಎಬಿಎಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದಿದೆ.

02. ಡಿಎಸ್ ಕೆ ಬೆನೆಲ್ಲಿ ಟಿಎನ್ ಟಿ 25

02. ಡಿಎಸ್ ಕೆ ಬೆನೆಲ್ಲಿ ಟಿಎನ್ ಟಿ 25

ಮಗದೊಂದು ಸ್ಟೈಲಿಷ್ ಬೆನೆಲ್ಲಿ ಬೈಕ್ ಗಳು ಭಾರತದಲ್ಲಿ ಡಿಎಸ್ ಕೆ ಸಹಯೋಗದಲ್ಲಿ ಮಾರಾಟದಲ್ಲಿದೆ. ಇಟಲಿಯ ಈ ಕ್ರೀಡಾ ಬೈಕ್ ತಯಾರಕ ಸಂಸ್ಥೆಯು ದೇಶದಲ್ಲಿ ಟಿಎನ್ ಟಿ 25 ಸೇರಿದಂತೆ ಹಲವು ಶ್ರೇಣಿಯ ಬೈಕ್ ಗಳನ್ನು ಒದಗಿಸುತ್ತಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಇಟಲಿಯ ಅತಿ ಪುರಾತದ ದ್ವಿಚಕ್ರ ವಾಹನ ಸಂಸ್ಥೆಗಳಲ್ಲಿ ಒಂದಾಗಿರುವ ಬೆನೆಲ್ಲಿ ಟಿಎನ್ ಟಿ 25 ಬೈಕ್ ನಲ್ಲಿರುವ 249 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಎಂಜಿನ್ 21.61 ಎನ್ ಎಂ ತಿರುಗುಬಲದಲ್ಲಿ 28.16 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ತನ್ನದೇ ಆದ ಆಕ್ರಮಣಕಾರಿ ಶೈಲಿಯಿಂದ ಜನಮನ ಸೆಳೆದಿರುವ ಬೆನೆಲ್ಲಿ ಟಿಎನ್ ಟಿ 25 ದೆಹಲಿ ಎಕ್ಸ್ ಶೋ ರೂಂ ಬೆಲೆಯು 1.80 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ದೂರ ಪ್ರಯಾಣಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ 17 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಬೆನೆಲ್ಲಿ ಕ್ರೀಡಾ ಬೈಕ್ ಗಂಟೆಗೆ ಗರಿಷ್ಠ 145 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

03. ಕೆಟಿಎಂ ಆರ್ ಸಿ 200

03. ಕೆಟಿಎಂ ಆರ್ ಸಿ 200

ಕೆಟಿಎಂ ಡ್ಯೂಕ್ ಸಂಪೂರ್ಣ ಫೇರ್ಡ್ ವರ್ಷನ್ ಆಗಿರುವ ಆರ್ ಸಿ 200 ತನ್ನದೇ ಆದ ಆಕ್ರಮಣಕಾರಿ ವಿನ್ಯಾಸದಿಂದ ಗಮನ ಸೆಳೆದಿದ್ದು, ಕ್ರೀಡಾ ಬೈಕ್ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶ ಕಂಡಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ನಿರ್ವಹಣೆಯ ವಿಚಾರದಲ್ಲಿ ಕಿಂಚಿತ್ತು ರಾಜಿಗೆ ತಯಾರಾಗದ ಕೆಟಿಎಂ ಡ್ಯೂಕ್ ಆರ್ ಸಿ 200, ಆರು ಸ್ಪೀಡ್ ಗೇರ್ ಬಾಕ್ಸ್ ಪಡೆದಿದ್ದು, 19.2 ಎನ್ ಎಂ ತಿರುಗುಬದಲ್ಲಿ 24.65 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಅಂದ ಹಾಗೆ ಕೆಟಿಎಂ ಡ್ಯೂಕ್ 390 ದೆಹಲಿ ಎಕ್ಸ್ ಶೋ ರೂಂ ಬೆಲೆಯು 1.69 ಲಕ್ಷ ರು.ಗಳಾಗಿವೆ. ಇದು ಗಂಟೆಗೆ ಗರಿಷ್ಠ 140 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಮರ್ಥವೆನಿಸಿಕೊಂಡಿದೆ.

04. ಹೋಂಡಾ ಸಿಬಿಆರ್250ಆರ್

04. ಹೋಂಡಾ ಸಿಬಿಆರ್250ಆರ್

ಸ್ಪೋರ್ಟ್ ಟೂರರ್ ಬೈಕ್ ಎಂದೇ ಖ್ಯಾತಿ ಪಡೆದಿರುವ ಸಿಬಿಆರ್250ಆರ್ ಬೈಕ್ ನಲ್ಲಿ ಹೋಂಡಾದ ಅತ್ಯುನ್ನತ್ತ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಾದಂತೆ ಹೋಂಡಾ ಸಿಆರ್250ಆರ್ ಸ್ವಲ್ಪ ಮಂಕಾದರೂ ಇದರಲ್ಲಿರುವ 249 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ 22.9 ಎನ್ ಎಂ ತಿರುಗುಬಲದಲ್ಲಿ 26.15 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ದೇಶದ ಅತ್ಯುತ್ತಮ ನಿರ್ವಹಣಾ ಬೈಕ್ ಗಳಲ್ಲಿ ಒಂದಾಗಿರುವ ಹೋಂಡಾ ಸಿಬಿಆರ್250ಆರ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.60 ಲಕ್ಷ ರು.ಗಳಿಂದ 1.90 ಲಕ್ಷ ರು.ಗಳ ವರೆಗೆ ಬೆಲೆ ಬಾಳುತ್ತದೆ. ಹಾಗೆಯೇ ಗಂಟೆಗೆ ಗರಿಷ್ಠ 135 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

05. ಯಮಹಾ ವೈಝಡ್‌ಎಫ್15 ಮತ್ತು ವೈಝಡ್‌ಎಫ್15ಎಸ್

05. ಯಮಹಾ ವೈಝಡ್‌ಎಫ್15 ಮತ್ತು ವೈಝಡ್‌ಎಫ್15ಎಸ್

ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳ ವಿಭಾಗದಲ್ಲಿ ಹೆಚ್ಚಿನ ಜನಪ್ರಿಯತೆ ಸಾಧಿಸಿರುವ ಯಮಹಾ ದೇಶದಲ್ಲಿ ತನ್ನದೇ ಆದ ಮಾರಾಟ ವಲಯ ಸೃಷ್ಟಿ ಮಾಡಿದೆ. ಆರ್15 ಮುಖಾಂತರ ದೇಶಕ್ಕೆ ಮೊದಲ ಫೇರ್ಡ್ ಬೈಕನ್ನು ಯಮಹಾ ಪರಿಚಯಿಸಿತ್ತು.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಯಮಹಾ ಆರ್15 ಮತ್ತು ಆರ್15ಎಸ್ ಮಾದರಿಗಳು ಸಮಾನ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ. ಈ ಪೈಕಿ ಆರ್15 2.0 ವರ್ಷನ್ ಮಾದರಿಯು ಗರಿಷ್ಠ ನಿರ್ವಹಣೆ ಕಾಪಾಡಿಕೊಂಡಿದೆ. ಇನ್ನೊಂದೆಡೆ ಸಿಂಗಲ್ ಸೀಟು ಮಾದರಿಯಾಗಿರುವ ಆರ್15ಎಸ್ ನಗರ ಚಾಲನೆಯತ್ತ ಗಮನ ಹರಿಸಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಯಮಹಾ ಆರ್15 ಬೈಕ್ ಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.15 ಲಕ್ಷ ರು.ಗಳಿಂದ 1.18 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ. ಇದರಲ್ಲಿರುವ 149 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ 15 ಎನ್ ಎಂ ತಿರುಗುಬದಲ್ಲಿ 16.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

06. ರಾಯಲ್ ಎನ್ ಫೀಲ್ಡ್ ಹಿಮಾಲಯನ್

06. ರಾಯಲ್ ಎನ್ ಫೀಲ್ಡ್ ಹಿಮಾಲಯನ್

ದೇಶದಲ್ಲಿ ಅಡ್ವೆಂಚರ್ ಬೈಕ್ ಕೊರತೆಯನ್ನು ನೀಗಿಸಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕನ್ನು ಭಾರತದ ಚೊಚ್ಚಲ ಡಕಾರ್ ರಾಲಿ ರೈಡರ್ ಖ್ಯಾತಿಯ ಆಫ್ ರೋಡ್ ಚಾಲಕ ಸಿಎಸ್ ಸಂತೋಷ್ ಅವರ ಬಹುಮೂಲ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡು ನಿರ್ಮಿಸಲಾಗಿತ್ತು.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಎಂಟ್ರಿ ಲೆವೆಲ್ ಸಾಹಸಿ ಬೈಕಾಗಿರುವ ರಾಯಲ್ ಎನ್ ಫೀಲ್ಡ್ ಹಿಮಾನಲಯನ್, 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಮತ್ತು ಮುಂಭಾಗ ಹಾಗೂ ಹಿಂಭಾಗದಲ್ಲಿ ಉದ್ದವಾದ ಸಸ್ಪೆನ್ಷನ್ ವ್ಯವಸ್ಥೆಯನ್ನು ಪಡೆದಿದೆ. ಅಲ್ಲದೆ ಗಂಟೆಗೆ 130 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಭಾರತದಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.56 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ. ಇದರಲ್ಲಿರುವ 411 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್ 32 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿ ಉತ್ಪಾದಿಸಲಿದೆ.

07. ಮಹೀಂದ್ರ ಮೊಜೊ

07. ಮಹೀಂದ್ರ ಮೊಜೊ

ವಿಶ್ವದರ್ಜೆಯ ತಂತ್ರಜ್ಞಾನಗಳೊಂದಿಗೆ ಎಂಟ್ರಿ ಕೊಟ್ಟಿರುವ ಮಹೀಂದ್ರ ಮೊಜೊ ಸಹ ದೂರ ಪ್ರಯಾಣಕ್ಕೆ ಸೂಕ್ತವಾದ ಬೈಕಾಗಿದೆ. ಸಂಪೂರ್ಣವಾಗಿಯೂ ಮಹೀಂದ್ರ ಗರಡಿಯಲ್ಲಿ ಅಭಿವೃದ್ಧಿಗೊಂಡಿರುವ ಮಹೀಂದ್ರ ಮೊಜೊ ತನ್ನದೇ ಆದ ವಿಶಿಷ್ಟ ವಿನ್ಯಾಸದಿಂದ ಗಮನಸೆಳೆದಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಇದರಲ್ಲಿರುವ 295 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ 30 ಎನ್ ಎಂ ತಿರುಗುಬಲದಲ್ಲಿ 27 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ವಿಶ್ವದರ್ಜೆಯ ಪೈರಲ್ಲಿ ಚಕ್ರಗಳು, ಡಿಜಿಟಲ್ ಅನಲಾಗ್ ಮೀಟರ್ಸ್, ಟ್ವಿನ್ ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್ ಸೇರಿದಂತೆ ದೂರ ಪ್ರಯಾಣಕ್ಕೆ ಗರಿಷ್ಠ ಆಕ್ಸೆಸರಿಗಳನ್ನು ಒದಗಿಸುವ ಮಹೀಂದ್ರ ಮೊಜೆ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.89 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಗಂಟೆಗೆ 155 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

08. ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500

08. ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500

ಭಾರತದಲ್ಲಿ ಸರ್ವಕಾಲಿಕ ಶ್ರೇಷ್ಠ ಬುಲೆಟ್ ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 500 ಅದ್ಭುತ ಕ್ರೂಸರ್ ಶೈಲಿಯನ್ನು ಕಾಪಾಡಿಕೊಂಡಿದೆ. ಇದೇ ಕಾರಣದಿಂದಲೇ ಈಗಲೂ ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಇದರಲ್ಲಿರುವ 499 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್ 41.3 ಎನ್ ಎಂ ತಿರುಗುಬಲದಲ್ಲಿ 27.2 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಎರಡು ಲಕ್ಷ ರು. ಬಜೆಟ್ ನೊಳಗೆ ಬೈಕ್ ಹುಡುಕಾಟದಲ್ಲಿದ್ದೀರಾ? ಇಗೊ ನೋಡಿ ಪಾಕೆಟ್ ಸ್ನೇಹಿ ಬೈಕ್ ಗಳು!

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಟರ್ ಹಾಗೂ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿರುವ ಈ ಕ್ರೂಸಿಂಗ್ ಶೈಲಿಯ ಬುಲೆಟ್ ಭಾರತದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.80 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಲ್ಲದೆ ಗಂಟೆಗೆ ಗರಿಷ್ಠ 120 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಭಾರತದಲ್ಲಿ ಕ್ರೀಡಾ ಬಳಕೆಯ ದ್ವಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾದ್ದಂತೆಯೇ ಎರಡು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಅತ್ಯುತ್ತಮ ಬೈಕ್ ಗಳ ಪ್ರವೇಶವಾಗಿದೆ. ಇದು ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯನ್ನು ಒದಗಿಸುತ್ತಿದ್ದು, ತಮ್ಮ ಬೇಡಿಕೆಗಳಿಗೆ ಅನುಸಾರವಾಗಿ ಶ್ರೇಷ್ಠ ಬೈಕ್ ಆಯ್ಕೆ ಮಾಡಬಹುದಾಗಿದೆ.

Most Read Articles

Kannada
Read more on ಬೈಕ್ bike
English summary
Best Bikes Under 2 Lakh — Heady Mix Of Value And Performance
Story first published: Thursday, November 17, 2016, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X