ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125

ಆಸ್ಟ್ರೀಯಾ ಮೂಲದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಕೆಟಿಎಂ ಇಂಡಿಯಾ ಸದ್ಯ ವಿವಿಧ ಮಾದರಿಯ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಡ್ಯೂಕ್ 125 ಆರಂಭಿಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಕೆಟಿಎಂ ಸಂಸ್ಥೆಯು ಪ್ರಮುಖವಾಗಿ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಲ್ಲಿ 1200 ಸಿಸಿ ಸಾಮರ್ಥ್ಯದ 1290 ಸೂಪರ್ ಡ್ಯೂಕ್ ಬೈಕ್ ಆವೃತ್ತಿಯನ್ನು ಸಹ ಮಾರಾಟ ಮಾಡುತ್ತಿದೆ. ಹೀಗಿರುವಾಗ ಭಾರತೀಯ ಗ್ರಾಹಕರ ಬೇಡಿಕೆಯನ್ನು ಅರಿತಿರುವ ಕೆಟಿಎಂ ಸಂಸ್ಥೆಯು 125ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸಿರುವ ಕೆಟಿಎಂ ಸಂಸ್ಥೆಯು ಇದೀಗ ಮತ್ತೊಮ್ಮೆ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲು ಎಂಟ್ರಿ ಲೆವಲ್ 125 ಡ್ಯೂಕ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಿದ್ದು, ಟೆಸ್ಟ್ ರೈಡ್‌ನಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರುವುದು ಖಚಿತವಾಗಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಈ ಸಂಬಂಧ ಕೆಟಿಎಂ ಸಂಸ್ಥೆಯು ಕಳೆದ ವಾರವಷ್ಟೇ ಪುಣೆಯಲ್ಲಿರುವ ಬಜಾಜ್ ಚಾಕನ್ ಬೈಕ್ ಟ್ರ್ಯಾಕ್‌ನಲ್ಲಿ ಹೊಸ ಬೈಕ್ ಉತ್ಪನ್ನವನ್ನು ಟೆಸ್ಟಿಂಗ್ ಮಾಡಲು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಆಹ್ವಾನ ನೀಡಿದ್ದಲ್ಲದೇ ಡ್ಯೂಕ್ ಆವೃತ್ತಿಗಳಲ್ಲೇ 125ಸಿಸಿ ವಿಶೇಷ ಮಾದರಿ ಎನ್ನುವುದನ್ನು ಸಾಬೀತುಪಡಿಸಿತು.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಡ್ಯೂಕ್ 125 ಆವೃತ್ತಿಯು ಮಾರಾಟಗೊಳ್ಳುತ್ತಿದ್ದು, ಬೇಬಿ ಡ್ಯೂಕ್ ಎಂದೇ ಜನಪ್ರಿಯತೆಗೊಂಡಿದೆ. ಆದ್ರೆ ವಿದೇಶಿ ಮಾರುಕಟ್ಟೆಯಲ್ಲಿರುವ ಡ್ಯೂಕ್ 125 ಬೈಕಿಗೂ ಮತ್ತು ಭಾರತದಲ್ಲಿ ಮಾರಾಟವಾಗುತ್ತಿರುವ ಬೇಬಿ ಡ್ಯೂಕ್‌ಗೂ ತುಸು ವ್ಯತ್ಯಾಸವಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಡ್ಯೂಕ್ 125 ತಾಂತ್ರಿಕ 125ಸಿಸಿ ಆವೃತ್ತಿಯಾದ್ರು ಡ್ಯೂಕ್ 200 ಮಾದರಿಯಲ್ಲೇ ಬಹುತೇಕ ಹೊರ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಹೊಸ ಬೈಕಿನಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್-ಡೌನ್ ಫೋಕ್ಸ್ ಜೋಡಣೆಮಾಡಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಮೇಲೆ ಹೇಳಿದಂತೆ ಜಾಗತಿಕ ಮಾರುಕಟ್ಟೆಯಲ್ಲಿರುವ ಡ್ಯೂಕ್ 125ಗೂ ಭಾರತದಲ್ಲಿ ಹೊಸ ಬೈಕಿಗೂ ತುಸು ವ್ಯತ್ಯಾಸಗಳಿದ್ದು, ಡ್ಯೂಕ್ 200 ಮಾದರಿಯಲ್ಲಿ ಫೋರ್ಕ್ಸ್ ಸೌಲಭ್ಯವನ್ನು ಹೊಂದಿದ್ದರೂ ಸಹ ಎಲ್‌ಇಡಿ ಹೆಡ್‌ಲ್ಯಾಂಪ್ ಬದಲಾಗಿ ಹೊಲೊಜೆನ್ ಬಲ್ಬ್ ಬಳಕೆ ಮಾಡಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಡ್ಯೂಕ್ 200 ಮಾದರಿಯಲ್ಲೇ ಚಾರ್ಸಿ, ಸಸ್ಷೆನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಡ್ಯೂಕ್ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಕಳೆದ ತಿಂಗಳು ನವೆಂಬರ್ 26ರಂದು ಡ್ಯೂಕ್ 125 ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಕಳೆದ 1 ತಿಂಗಳ ಹಿಂದಷ್ಟೇ ಬೈಕ್ ವಿತರಣೆಯನ್ನು ಆರಂಭಿಸಲಾಗಿದೆ. ದುಬಾರಿ ಬೆಲೆಯ ನಡುವೆಯು 1 ಸಾವಿರಕ್ಕೂ ಹಚ್ಚು ಬೈಕ್‌ಗಳನ್ನು ಮಾರಾಟಗೊಂಡಿದ್ದು, ಮುಂಬರುವ ತಿಂಗಳು ಇದು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಎಂಜಿನ್ ಮತ್ತು ಟಾಪ್ ಸ್ಪೀಡ್

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಇದು ನಿಜಕ್ಕೂ 125ಸಿಸಿ ಸೆಗ್ಮೆಂಟ್‌ನಲ್ಲಿ ಅತಿಹೆಚ್ಚು ಎನ್ನಬಹುದಾಗಿದ್ದು, ಸಾಮಾನ್ಯವಾಗಿ 150ಸಿಸಿ ಮತ್ತು 160ಸಿಸಿ ಸಾಮರ್ಥ್ಯದ ಬೈಕ್ ಆವೃತ್ತಿಗಳು ಸಹ 125 ಡ್ಯೂಕ್ ಬೈಕಿನಷ್ಟು ಪರ್ಫಾಮೆನ್ಸ್ ನೀಡುವುದಿಲ್ಲ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯು, ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಬೈಕಿನ ಮೈಲೇಜ್

10.5-ಲೀಟರ್ ಫ್ಯೂಲ್ ಟ್ಯಾಂಕ್ ಜೋಡಣೆ ಹೊಂದಿರುವ ಡ್ಯೂಕ್ 125 ಬೈಕ್ ಪ್ರತಿ ಲೀಟರ್‌ಗೆ ಕೆಟಿಎಂ ಸಂಸ್ಥೆಯೇ ಹೇಳಿಕೊಂಡಂತೆ 40ರಿಂದ 42ಕಿ.ಮಿ ನೀಡಬಹುದು ಎಂದಿದ್ದು, ಇನ್ನು ಕೆಲವು ಹವ್ಯಾಸಿ ಕೆಟಿಎಂ ಬೈಕ್ ಸವಾರರ ಪ್ರಕಾರ ಹೊಸ ಬೈಕ್ ಅನ್ನು ಎಕಾನಮಿಕ್ ಮೊಡ್‌ನಲ್ಲಿ ಬೈಕ್ ಚಾಲನೆ ಮಾಡಿದ್ದಲ್ಲಿ ಪ್ರತಿ ಲೀಟರ್‌ಗೆ 55 ಕಿ.ಮಿ ನಿಂದ 60 ಕಿ.ಮಿ ಮೈಲೇಜ್ ಗಿಟ್ಟಿಸಿಕೊಳ್ಳಬಹುದು ಎಂದಿದ್ದಾರೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಆದ್ರೆ ಪರ್ಫಾಮೆನ್ಸ್ ಉದ್ದೇಶಕ್ಕಾಗಿಯೇ ಸಿದ್ದಗೊಂಡಿರುವ ಡ್ಯೂಕ್ 125 ಮೈಲೇಜ್ ಬಗೆಗೆ ಬಹುತೇಕ ಗ್ರಾಹಕರು ಯಾವುದೇ ವಿಚಾರ ಮಾಡುತ್ತಿಲ್ಲವಾದರೂ ಕಡಿಮೆ ಬೆಲೆಯಲ್ಲಿ ಉತ್ತಮ ಬೈಕ್ ಖರೀದಿ ಲಭ್ಯವಾಗಿರುವುದು ಒಂದು ಹಬ್ಬವೇ ಸರಿ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಬೈಕಿನ ವೈಶಿಷ್ಟ್ಯತೆ

ಡಿಜಿಟಲ್ ಇನ್ಟ್ರಮೆಂಟ್ ಕ್ಲಸ್ಟರ್‌ನೊಂದಿಗೆ 148 ಕೆಜಿ ತೂಕ ಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯಲ್ಲಿ 818ಎಂಎಂ ಎತ್ತರದ ಆಸನ ಸೌಲಭ್ಯ ಹೊಂದಿದ್ದು, ಹಿಂಬದಿಯ ಸವಾರರ ಆಸನ ಇದ್ದರೂ ಸಹ ಅಷ್ಟಾಗಿ ಸ್ಥಳಾವಕಾಶ ನೀಡಿಲ್ಲ. ಹೀಗಾಗಿ ಡ್ಯೂಕ್ 125 ಬೈಕ್ ಮಾದರಿಯ ಸಿಂಗಲ್ ರೈಡ್‌ಗೆ ಅತ್ಯುತ್ತಮ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಟೈರ್ ಮತ್ತು ಬ್ರೇಕಿಂಗ್ ಸೌಲಭ್ಯ

ಬೈಕಿನ ಮುಂಭಾಗದಲ್ಲಿ 110/70 ಆರ್17 ಮತ್ತು ಹಿಂಭಾಗದಲ್ಲಿ 150/60 ಆರ್17 ಎಂಆರ್‌ಎಫ್ ಗ್ರಿಪ್ ಟೈರ್‌ಗಳನ್ನು ಹೊಂದಿರುವ ಡ್ಯೂಕ್ 125 ಬೈಕಿನಲ್ಲಿ ಬ್ರೇಕಿಂಗ್ ಸೌಲಭ್ಯಗಳು ಮುಖ್ಯ ಆಕರ್ಷಣೆಯಾಗಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

43-ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹೋಂದಾಣಿಕೆ ಮಾಡಬಲ್ಲ ಮೊನೋಶಾರ್ಕ್ ಸೌಲಭ್ಯದೊಂದಿಗೆ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 230ಎಂಎಂ ಡಿಸ್ಕ್ ಬ್ರೇಕ್ ಪಡೆದಿದ್ದು, ಬಾಷ್ ನಿರ್ಮಾಣದ ಸಿಂಗಲ್ ಚಾನೆಲ್ ಎಬಿಎಸ್ ಯುನಿಟ್ ಇದರಲ್ಲಿದೆ.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಬೈಕಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡ್ಯೂಕ್ 125 ಮಾದರಿಯು 1.18 ಲಕ್ಷ ಬೆಲೆ ಪಡೆದಿದ್ದು, ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿದ್ದರು ಸಹ ಪರ್ಫಾಮೆನ್ಸ್ ವಿಚಾರದಲ್ಲಿ ಗಮನಸೆಳೆಯುವ ಬೈಕಿನ ಬೆಲೆಗಳು ಸ್ಪರ್ಧಾತ್ಮಕವಾಗಿವೆ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ- ಮೊದಲ ನೋಟದಲ್ಲೇ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆದ ಕೆಟಿಎಂ ಡ್ಯೂಕ್ 125v

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಹುತೇಕ ಬೈಕ್ ಖರೀದಿದಾರರಿಗೆ ಡ್ಯೂಕ್ 125 ಬೆಲೆಗಳು ದುಬಾರಿ ಎನ್ನಿಸಿದರೂ ಸಹ 125ಸಿಸಿ ಎಂಜಿನ್ ಹೊರತಾಗಿ ಹೊಸ ಬೈಕ್ ಸಂಪೂರ್ಣವಾಗಿ ಇತರೆ ಬೈಕ್‌ಗಳಿಂತ ವಿಭಿನ್ನ ಎನ್ನಿಸುತ್ತೆ. ಪರ್ಫಾಮೆನ್ಸ್ ಜೊತೆ ಜೊತೆಗೆ ಇಂಧನ ದಕ್ಷತೆಯಲ್ಲೂ ಹೆಚ್ಚಿನ ಗಮನಸೆಳೆಯುತ್ತಿದ್ದು, 150ಸಿಸಿ, 160 ಸಿಸಿ ಬೈಕ್‌ಗಳಲ್ಲಿ ಇರಬಹುದಾದ ಎಲ್ಲಾ ಪ್ರೀಮಿಯಂ ಸೌಲಭ್ಯಗಳು ಡ್ಯೂಕ್ 125ನಲ್ಲಿರುವುದು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲು ಪ್ರಮುಖ ಕಾರಣ ಎನ್ನಬಹುದು.

Most Read Articles

Kannada
English summary
KTM 125 Duke First Ride Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X