ಮೊಟೊ ಗುಜಿ ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ

Written By:

ನಾವು ಮೋಟರ್ ಸೈಕಲ್ ಮತ್ತು ಸೂಪರ್ ಬೈಕುಗಳ ಕಾರ್ಯಕ್ಷಮತೆಯ ಕುರಿತು ಮಾತನಾಡುವಾಗ, ಇಟಾಲಿಯ ದೇಶದ ತಯಾರಕರು ಯಾವಾಗಲೂ ಪಟ್ಟಿಯ ಮೇಲ್ಭಾಗದಲ್ಲಿರುತ್ತಾರೆ ಎನ್ನವುದು ಗಮನಾರ್ಹ ಸಂಗತಿಯಾಗಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಎಂವಿ ಅಗಸ್ಟಾ ಮತ್ತು ಡುಕಾಟಿಯಂತಹ ಅತ್ಯುತ್ತಮವಾದ ಮೋಟರ್ ಸೈಕಲ್‌ಗಳನ್ನು ತಯಾರು ಮಾಡಿದ ಶ್ರೇಯಸ್ಸನ್ನು ಪಡೆದುಕೊಂಡಿರುವ ಇಟಾಲಿಯ ವಾಹನ ಉತ್ಪಾದಕ ಸಂಸ್ಥೆಗಳ ಸಾಲಿನಲ್ಲಿ ಈ ದೇಶದ ಮತ್ತೊಂದು ಮೋಟಾರ್ ಸೈಕಲ್ ತಯಾರಕ ಸಂಸ್ಥೆ ಮೊಟೊ ಗುಜಿ ಕೂಡ ನಿಲ್ಲುತ್ತದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಮೊಟೊ ಗುಜಿ ಶತಮಾನ ಹೆಚ್ಚು ವರ್ಷಗಳಿಂದ ಕ್ರೂಸರ್‌ಗಳನ್ನು ಉತ್ಪಾದನೆ ಮಾಡುತ್ತಿದ್ದು, ಈ ಸಂಸ್ಥೆಯ ಮೋಟಾರ್ ಸೈಕಲ್‌ಗಳು ಹೆಚ್ಚಿನ ಬೇಡಿಕೆ ಹೊಂದಿವೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಈ ಸಂಸ್ಥೆ ತಯಾರಿಸಿದ ಇಟಿಲಿಯನ್ ಮಾರ್ಕ್ಯೂ ನಿರಂತರ ಉತ್ಪಾದನೆಗೊಂಡು, ಅತ್ಯಂತ ಹಳೆಯ ಯುರೋಪಿಯನ್ ಬೈಕ್ ಎಂಬ ಖ್ಯಾತಿ ಪಡೆದುಕೊಂಡಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಈಗಾಗಲೇ ತನ್ನ ವಿ7 ಮಾದರಿ ಹೆಚ್ಚು ಜನಪ್ರಿಯತೆಗಳಿಸಿದ್ದು, ಕ್ರೂಸರ್ ಪರಂಪರೆಯನ್ನು ಮತ್ತಷ್ಟು ಹೆಚ್ಚಿಸಲು ವಿ9 ಬಾಬರ್ ಮಾದರಿಯನ್ನು ಹೊರತಂದಿದ್ದು, ಈ ಮೋಟಾರ್ ಸೈಕಲ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಭಾರತದಲ್ಲಿ ಅನೇಕರಿಗೆ ಈ ಬ್ರಾಂಡ್ ಬಗ್ಗೆ ಹೆಚ್ಚು ತಿಳಿದಿಲ್ಲ ಎನ್ನಬಹುದು. ವಿ9 ಬಾಬರ್ ಮೋಟಾರ್ ಸೈಕಲ್ ಇಟಾಲಿಯನ್ ಬೈಕುಗಳಂತೆಯೇ ಇದ್ದು, ಆಕರ್ಷಕ ಹೊರಮೈ ಪಡೆದುಕೊಂಡಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಈ ಮೋಟಾರ್ ಸೈಕಲ್ ಸಾಧ್ಯವಾದಷ್ಟು ಹಗುರ ಮಾಡುವ ಉದ್ದೇಶದಿಂದ ಅನಗತ್ಯ ಬಿಡಿಭಾಗಗಳನ್ನು ತೆಗೆದುಹಾಕಿದ್ದು, ಬಾಬರ್ ಸಂಪ್ರದಾಯಕ್ಕೆ ಸರಿ ಎನ್ನಿಸುವಂತೆ ನಿರ್ಮಿಸಲಾಗಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಬೈಕ್ ಮುಂಭಾಗದಲ್ಲಿ ಕೊಂಚ ಮಟ್ಟಿಗೆ ಕಳೆಗುಂದಿದಂತೆ ಕಾಣಲಿದ್ದು, ಸ್ವಲ್ಪಮಟ್ಟಿಗೆ ಪ್ರಭಾವ ಬೀರುವಲ್ಲಿ ವಿಫಲಗೊಳ್ಳುತ್ತದೆ ಎನ್ನಬಹುದು. ಆದಾಗ್ಯೂ, ವಿ9 ಎಲ್ಇಡಿ ಟೈಲ್-ದೀಪಗಳು ಮತ್ತು ಸೂಚಕಗಳನ್ನು ಪಡೆಯುತ್ತದೆ, ಇದು ಈ ಬೈಕಿನ ಆಧುನಿಕ ಸ್ವರೂಪ ಎದ್ದುಕಾಣುವಂತೆ ಮಾಡುತ್ತದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಇಂಧನ ತುಂಬುವ ಕ್ಯಾಪ್ ಅಲ್ಯೂಮಿನಿಯಂ ಇಂದ ಮಾಡಲ್ಪಟ್ಟಿದ್ದು, ನಿಜವಾಗಿಯೂ ಆಕರ್ಷಕವಾಗಿ ಕಾಣುತ್ತದೆ. ಆದರೆ, ಈ ಇಂಧನ ಕ್ಯಾಪ್‌ಗೆ ಬೀಗ ಇಲ್ಲ ಎಂಬುದು ನಿಮ್ಮನ್ನು ನಿರಾಶೆ ಮಾಡುತ್ತದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ವಿ9 ಬಾಬರ್ ಕ್ರೂಸರ್ ಬೈಕಿನ ಆಫ್-ಸೆಟ್ ಭಾಗ-ಡಿಜಿಟಲ್ ಉಪಕರಣ ಹೊಂದಿದೆ ಮತ್ತು ಸಣ್ಣ ಪರದೆಯಲ್ಲಿ-ಟ್ರಿಪ್ ಮೀಟರ್, ಓಡೋಮೀಟರ್, ಮೀಸಲು ಇಂಧನ ಸೂಚಕ, ಸರಾಸರಿ ವೇಗ, ನೈಜ-ಸಮಯದ ಇಂಧನ ದಕ್ಷತೆ, ತಾಪಮಾನ, ಗೇರ್ ಸೂಚಕ, ಎಳೆತ ನಿಯಂತ್ರಣ ಸೆಟ್ಟಿಂಗ್‌ಗಳು ಮತ್ತು ಗಡಿಯಾರವನ್ನು ಇರಿಸಲಾಗಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ವಿ9 ಸ್ವಿಚ್‌ಗೇರ್ ಗುಣಮಟ್ಟವು ಇತರ ಕ್ರೂಸರ್‌ಗಳಲ್ಲಿ ಕಂಡುಬರುವಂತೆ ಆಕರ್ಷಕವಾಗಿಲ್ಲ. ಆದಾಗ್ಯೂ, ಬೈಕ್ ಯುಎಸ್‌ಬಿ ಪೋರ್ಟ್ ಹೊಂದಿದ್ದು, ಅದು ಸ್ಟೀರಿಂಗ್ ಹೆಡ್ ಕೆಳಗಡೆ ಬಲಭಾಗದಲ್ಲಿ ಇರಿಸಲ್ಪಟ್ಟಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಈ ಮೋಟಾರ್ ಸೈಕಲ್ 850 ಸಿಸಿ ಏರ್ ಕೋಲ್ಡ್ ವಿ-ಟ್ವಿನ್ ಎಂಜಿನ್ ಹೊಂದಿದೆ ಮತ್ತು 63 ಎನ್ಎಂ ತಿರುಗುಬಲದಲ್ಲಿ 54.24 ಬಿಎಚ್‌ಪಿ ಶಕ್ತಿ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಮೊಟೊ ಗುಜಿ ಮೀಡಿಯಾ ಪ್ಲ್ಯಾಟ್‌ಫಾರಂ(MGMP) ಹೊಂದಿದ್ದು, ಇದು ಸ್ಮಾರ್ಟ‌ಫೋನ್‌ನೊಂದಿಗೆ ಇಂಟರ್ಫೇಸ್ ಹೊಂದಿದೆ ಮತ್ತು ಫೋನ್ ಸ್ಪೀಡೊಮೀಟರ್ ತಾಂತ್ರಿಕ ಮಾಹಿತಿಯನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಯುರೊ-4 ಎಮಿಷನ್ ಮಾನದಂಡಗಳನ್ನು ಪೂರೈಸಿರುವ ಈ ಎಂಜಿನ್, ಉತ್ತಮ ಮಟ್ಟದ ಕಾರ್ಯಕ್ಷಮತೆಯನ್ನು ಹೊಂದಿದೆ. ಶಾಫ್ಟ್ ಡ್ರೈವ್ ಸಿಸ್ಟಮ್ ಮೂಲಕ 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ಈ ಮೊಟೊ ಗುಜಿ ವಿ9 ಬಾಬರ್ ಬೈಕ್ ಹೆದ್ದಾರಿಯಲ್ಲಿ 23 ಕಿ.ಮೀ ಮತ್ತು ನಗರದಲ್ಲಿ 18 ಕಿ.ಮೀ ಮೈಲೇಜ್ ನೀಡಲಿದ್ದು, ಗಂಟೆಗೆ ಸುಮಾರು 180 ಕಿ.ಮೀ/ ​​ಗರಿಷ್ಠ ವೇಗದಲ್ಲಿ ಚಲಿಸಬಹುದಾದಾಗಿದೆ.

ವಿ9 ಮೋಟಾರ್‌ಸೈಕಲ್ ಮೊದಲ ಚಾಲನಾ ಅನುಭವ ಬೈಕ್ ವಿಮರ್ಶೆ

ದುಬಾರಿ ಎನ್ನಿಸುವ ರೂ.13.9 ಲಕ್ಷ ಎಕ್ಸ್ ಷೋ ರೂಂ(ಪುಣೆ) ಬೆಲೆ ಹೊಂದಿರುವ ಮೊಟೊ ಗುಜಿ ವಿ9 ಬಾಬರ್ ಬೆಲೆಯ ವ್ಯಾಪ್ತಿಯಲ್ಲಿ ಭಾರತೀಯ ಮಾರುಕಟ್ಟೆಯ ಲೀಟರ್-ಕ್ಲಾಸ್ ಬೈಕು ಖರೀದಿಸಬಹುದು.

English summary
Read in Kannada about Moto Guzzi V9 bobber motorcycle, DriveSpark took the V9 Bobber for a spin to find out what it's all about!
Story first published: Tuesday, July 4, 2017, 17:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark