ಟಿವಿಎಸ್ ವಿಕ್ಟರ್ ಅಬ್ಬರ; ಸಮಗ್ರ ಚಾಲನಾ ವಿಮರ್ಶೆ ಓದಿ...

By Nagaraja

ಅಂದು ಹೀರೊ ಹೋಂಡಾ ಬೈಕ್ ಗಳು ಅಬ್ಬರಿಸುವ ಸಯಮ. 2000ನೇ ದಶಕದಲ್ಲಿ ಮೈಲೇಜ್ ಬೈಕ್ ಗಳೆಂದರೆ ದೇಶದೆಲ್ಲೆಡೆ ಎಲ್ಲರ ಬಾಯಿ ಮಾತಲ್ಲೂ ಹೀರೊ ಹೋಂಡಾ ಎಂಬ ಹೆಸರೇ ಕೇಳಿ ಬರುತ್ತಿದ್ದವು. ಹಾಗಿರಬೇಕೆಂದರೆ 2002ನೇ ಇಸವಿಯಲ್ಲಿ ಮಾರುಕಟ್ಟೆಗೆ ಹೊಸತನದೊಂದಿಗೆ ಟಿವಿಎಸ್ ವಿಕ್ಟರ್ ಭರ್ಜರಿ ಎಂಟ್ರಿ ಕೊಟ್ಟಿತ್ತು. ಕೆಲವೇ ವರ್ಷಗಳಲ್ಲಿ ಟಿವಿಎಸ್ ವಿಕ್ಟರ್ ಕಡಿಮೆ ಬೆಲೆಯಲ್ಲಿ ದೊರಕುವ ಅತ್ಯುತ್ತಮ ಬೈಕ್ ಎಂಬ ಶ್ರೇಯಸ್ಸನ್ನು ಗಿಟ್ಟಿಸಿಕೊಂಡಿತ್ತು.

ಆದರೆ ಬರ ಬರುತ್ತಾ ಪ್ರತಿಸ್ಪರ್ಧಿಗಳ ಸಂಖ್ಯೆ ಜಾಸ್ತಿಯಾದಂತೆ ಟಿವಿಎಸ್ ಅಬ್ಬರ ಮಂಕಾಯಿತು. ಇದರೊಂದಿಗೆ ವಿಕ್ಟರ್ ಮಾರಾಟವನ್ನು ಹಿಂಪಡೆಯಬೇಕಾಯಿತು. ಆದರೆ ಇಲ್ಲಿಗೆ ಭರವಸೆ ಕೈಬಿಡದ ಟಿವಿಎಸ್ ತಾಜಾತನದೊಂದಿಗೆ ಮತ್ತಷ್ಟು ಆಧುನಿಕ ವೈಶಿಷ್ಟ್ಯಗಳೊಂದಿಗೆ 2016 ಟಿವಿಎಸ್ ವಿಕ್ಟರ್ ಬಿಡುಗಡೆಗೊಳಿಸಿದ್ದು, ಯುವ ಜನಾಂಗವನ್ನು ಹೆಚ್ಚು ಆಕರ್ಷಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಪ್ರಸ್ತುತ ಅತಿ ನೂತನ ಟಿವಿಎಸ್ ವಿಕ್ಟರ್ ಟೆಸ್ಟ್ ಡ್ರೈವ್ ಮಾಡುವ ಅವಕಾಶವು ನಮ್ಮ ಡ್ರೈವ್ ಸ್ಪಾರ್ಕ್ ತಂಡಕ್ಕೆ ದೊರಕಿದ್ದು, ಮೈಲೇಜ್, ಎಂಜಿನ್, ನಿರ್ವಹಣೆ, ಡ್ರೈವಿಂಗ್, ಅನುಕೂಲ, ಅನಾನುಕೂಲತೆಗಳಿಗೆ ಸಂಬಂಧಿಸಿದಂತೆ ಸಮಗ್ರ ಚಾಲನಾ ವಿಮರ್ಶೆಯನ್ನು ಓದುಗರ ಮುಂದಿಡಲಿದ್ದೇವೆ.

ವಿನ್ಯಾಸ

ವಿನ್ಯಾಸ

ಮೊದಲ ನೋಟದಲ್ಲೇ ಟಿವಿಎಸ್ ವಿಕ್ಟರ್ ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿದ್ದು, ಎಲ್ಲರ ಮನ ಸೆಳೆಯುತ್ತಿದೆ. ಒಂದು ಪ್ರಯಾಣಿಕ ಬೈಕ್ ಗೆ ಬೇಕಾದ ಎಲ್ಲ ಘಟಕಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಟಿವಿಎಸ್ ವಿಕ್ಟರ್ ನಲ್ಲಿ ಜೋಡಣೆ ಮಾಡಲಾಗಿದೆ.

ವಿನ್ಯಾಸ

ವಿನ್ಯಾಸ

ನಿಖರವಾದ ರೇಖೆ ಮತ್ತು ಬಾಗಿದಂತಹ ವಿನ್ಯಾಸ ನೂತನ ಟಿವಿಎಸ್ ವಿಕ್ಟರ್ ಗೆ ಹೆಚ್ಚು ಕ್ರೀಡಾತ್ಮಕ ನೋಟ ನೀಡುತ್ತಿದೆ.

ಅಪಾಚಿ ಸ್ಪೂರ್ತಿ

ಅಪಾಚಿ ಸ್ಪೂರ್ತಿ

ಮುಂಭಾಗದಲ್ಲಿ ಟವಿಎಸ್‌ನ ಅತಿ ಜನಪ್ರಿಯ ಹಾಗೂ ಯಶಸ್ವಿ ಬೈಕ್ ಅಪಾಚಿಯಿಂದ ಸ್ಪೂರ್ತಿ ಪಡೆದ ಹೆಡ್ ಲೈಟ್ ಗಳನ್ನು ಟಿವಿಎಸ್ ವಿಕ್ಟರ್ ನಲ್ಲೂ ಲಗ್ಗತ್ತಿಸಲಾಗಿದೆ.

ವಿನ್ಯಾಸ

ವಿನ್ಯಾಸ

ಬದಿಯಿಂದಲೂ ನಿಖರವಾಗ ಗ್ರಾಫಿಕ್ಸ್ ಗಳು ನಿಮ್ಮ ಗಮನ ಸೆಳೆಯಲಿದೆ. ಚಕ್ರಗಳಲ್ಲಿ ಮ್ಯಾಟ್ ಫಿನಿಶಿಂಗ್ ಮತ್ತು ಎಕ್ಸಾಸ್ಟ್ ಕೊಳವೆಗಳು ಸ್ಮಾರ್ಟ್ ಎನಿಸಿಕೊಂಡಿದೆ.

ವಿನ್ಯಾಸ

ವಿನ್ಯಾಸ

ಹಿಂಬದಿಯಿಂದಲೂ ಪರಿಣಾಮಕಾರಿ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಬ್ರೇಕ್ ಲೈಟ್ ಗಳು ಅಂದತೆಯ ಜೊತೆಗೆ ಸುರಕ್ಷತೆಯನ್ನು ಕಾಯ್ದುಕೊಂಡಿದೆ.

ಹೋಲಿಕೆ

ಹೋಲಿಕೆ

ಇಲ್ಲಿ ಹಳೆಯ ಟಿವಿಎಸ್ ವಿಕ್ಟರ್ ಬೈಕ್ ಗೆ ಹೋಲಿಸಿದಾಗ ನೂತನ ವಿಕ್ಟರ್ ಗಮನಾರ್ಹ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ. ಚಿತ್ರದಲ್ಲಿ ನೀವೇ ನೋಡುತ್ತಿರುವಂತೆಯೇ ಆಧುನಿಕತೆಗೆ ತಕ್ಕ ನಿಖರ ನೋಟವನ್ನು ಕಾಯ್ದುಕೊಂಡಿದೆ.

ಹೋಲಿಕೆ

ಹೋಲಿಕೆ

ಹಿಂಬದಿಯಿಂದಲೂ ವಿನ್ಯಾಸ ಬದಲಾವಣೆಗಳನ್ನು ನೀವು ಮನಗಾನಬಹುದಾಗಿದೆ. ಟಿವಿಎಸ್ ಲಾಂಛನವನ್ನು ಟೈಲ್ ಲೈಟ್ ಮತ್ತು ನಂಬರ್ ಪ್ಲೇಟ್ ಮಧ್ಯಭಾಗದಲ್ಲಿ ಕೊಡಲಾಗಿದೆ. ಈ ಮೂಲಕ ಬ್ರಾಂಡಿಂಗ್‌ಗೆ ಹೆಚ್ಚಿನ ಆದತ್ಯೆ ಕೊಟ್ಟಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಟಿವಿಎಸ್ ನ ಮಗದೊಂದು ಜನಪ್ರಿಯ ಬೈಕ್ ಸ್ಟಾರ್ ಸಿಟಿ ಪ್ಲಸ್‌ಗೆ ಸಮಾನವಾದ ಎಂಜಿನ್ ಆಯ್ಕೆಗಳನ್ನು ನೂತನ ವಿಕ್ಟರ್ ಪಡೆದಿದೆ. ಇದರ 109 ಸಿಸಿ ಎಂಜಿನ್ 9.4 ಎನ್ ಎಂ ತಿರುಗುಬಲದಲ್ಲಿ 9.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಗೇರ್ ಬಾಕ್ಸ್

ಗೇರ್ ಬಾಕ್ಸ್

ಎಲ್ಲ ಪ್ರಯಾಣಿಕ ಬೈಕ್ ನಲ್ಲಿರುವಂತಹ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ (N-1-2-3-4) ಆಯ್ಕೆಯನ್ನು ಕೊಡಲಾಗಿದೆ.

ಚಾಲನಾ ಪರೀಕ್ಷೆ

ಚಾಲನಾ ಪರೀಕ್ಷೆ

ನಮ್ಮ ತಂಡದ ಪ್ರತಿನಿಧಿಗಳು ನಗರ ಮತ್ತು ಹೆದ್ದಾರಿಯಲ್ಲಿ ಸರಿ ಸುಮಾರು 300ಕ್ಕಿಂತಲೂ ಹೆಚ್ಚು ಕೀ.ಮೀ.ಗಳಷ್ಟು ವಿಕ್ಟರ್ ಸಂಚಾರ ಪ್ರಯೋಗವನ್ನು ನಡೆಸಿತ್ತು. ನಮಗೆ ಕಂಡುಬಂದ ವಿಚಾರವೆಂದರೆ ಎಂಜಿನ್ ನಯವಾಗಿದ್ದು, ಹೆಚ್ಚು ತಿರುಗಬಲವನ್ನು ನೀಡುತ್ತಿದೆ. 4500ಆರ್‌ಪಿಎಂ ಮತ್ತು 5500ಆರ್‌ಪಿಎಂ ನಡುವೆ ಎಂಜಿನ್ ಹೆಚ್ಚು ಹಿತರಕವೆನಿಸುತ್ತದೆ.

ಮೈಲೇಜ್

ಮೈಲೇಜ್

ಇಂಧನ ಕ್ಷಮತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್ ಗೆ 76 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ನಮ್ಮ ಚಾಲನಾ ಪರೀಕ್ಷೆಯಲ್ಲಿ ನಗರ ಹಾಗೂ ಹೆದ್ದಾರಿಗಳು ಒಟ್ಟು ಸೇರಿ ಪ್ರತಿ ಲೀಟರ್ ಗೆ 50 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ದೈನಂದಿನ ಪ್ರಯಾಣ

ದೈನಂದಿನ ಪ್ರಯಾಣ

ನೀವು ಕಡಿಮೆ ಬೆಲೆಯಲ್ಲಿ ದೈನಂದಿನ ಬೈಕ್ ಆಶ್ರಯಿಸುವುದಾದ್ದಲ್ಲಿ ನಿಮಗೆ ಟಿವಿಎಸ್ ವಿಕ್ಟರ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಹೆದ್ದಾರಿ, ದೂರ ಪ್ರಯಾಣಕ್ಕೆ ಯೋಗ್ಯವಲ್ಲ

ಹೆದ್ದಾರಿ, ದೂರ ಪ್ರಯಾಣಕ್ಕೆ ಯೋಗ್ಯವಲ್ಲ

ಈ ಮೊದಲೇ ತಿಳಿಸಿರುವಂತೆಯೇ ಹೆದ್ದಾರಿ ಅಥವಾ ದೂರ ಪ್ರಯಾಣಕ್ಕೆ ಇದು ಹೆಚ್ಚು ಯೋಗ್ಯವೆನಿಸುವುದಿಲ್ಲ. ಗಂಟೆಗೆ 60 ಕೀ.ಮೀ. ಗಿಂತಲೂ ಹೆಚ್ಚು ವೇಗದಲ್ಲಿ ಸಂಚರಿಸುವಾಗ ಎಂಜಿನ್‌ಗೆ ಹೆಚ್ಚು ಒತ್ತಡ ಬೀಳಲಿದೆ. ನಿಜಕ್ಕೂ ಹೇಳುವುದಾದ್ದಲ್ಲಿ ಐದನೇ ಗೇರ್ ಆಯ್ಕೆಯಿದ್ದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವಾಗ ನೆರವಾಗುತ್ತಿತ್ತು.

ವೇಗಮಾಪಕ

ವೇಗಮಾಪಕ

ವೇಗಮಾಪಕದಲ್ಲಿ (tachometer) 'ಎಕಾನಮಿ' ಮತ್ತು 'ಪವರ್' ಗಳೆಂಬ ಎರಡು ವಿಧಗಳನ್ನು ಕೊಡಲಾಗಿದ್ದು, ಇತರ ಬೈಕ್ ಗಳಿಗಿಂತ ಭಿನ್ನವೆನಿಸುತ್ತದೆ. ಇದು ವೇಗಕ್ಕೆ ಅನುಸಾರವಾಗಿ ಹಸಿರು ಹಾಗೂ ಕೆಂಪು ಬೆಳಕುಗಳು ಉರಿಯಲಿದೆ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

ಗಂಟೆಗೆ ಸರಾಸರಿ 65 ಕೀ.ಮೀ. ಒಳಗಡೆ ಟಿವಿಎಸ್ ವಿಕ್ಟರ್ ನಿಜಕ್ಕೂ ಶ್ರೇಯಸ್ಸನ್ನು ಕಾಪಾಡಿಕೊಂಡಿದೆ. ಇದು ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಮತ್ತು 'ಸಿರೀಸ್ ಸ್ಪ್ರಿಂಗ್' ರಿಯರ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆದಿದೆ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

ಪ್ರತಿಯೊಬ್ಬ ಸವಾರ ಬಯಸುವ ಹಾಗೆಯೇ ಆರಾಮದಾಯಕ ಚಾಲನೆಯನ್ನು ಟಿವಿಎಸ್ ವಿಕ್ಟರ್ ಖಾತ್ರಿಪಡಿಸುತ್ತದೆ. ಆದರೆ ಇದೊಂದು ರೇಸ್ ಬೈಕ್ ಅಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ.

ಗೋಚರತೆ

ಗೋಚರತೆ

ಟಿವಿಎಸ್ ವಿಕ್ಟರ್ ನಲ್ಲಿ ಒದಗಿಸಲಾಗಿರುವ ರಿಯರ್ ವ್ಯೂ ಮಿರರ್ ಗೋಚರತೆಯನ್ನು ಹೆಚ್ಚಿಸಿದ್ದಲ್ಲಿ ಮತ್ತಷ್ಟು ಉಪಯುಕ್ತವೆನಿಸುತ್ತಿತ್ತು. ಆದರೂ ಕನ್ನಡಿಯ ವಿನ್ಯಾಸ ಪರಿಣಾಮಕಾರಿಯೆನಿಸಿದೆ.

ಚಕ್ರಗಳು

ಚಕ್ರಗಳು

ನೂತನ 2016 ಟಿವಿಎಸ್ ವಿಕ್ಟರ್ ಪ್ರಯಾಣಿಕ ಬೈಕ್ ನಲ್ಲಿ 2.75/17 ಇಂಚುಗಳ ಫ್ರಂಟ್ ಮತ್ತು 3.00/17 ಇಂಚುಗಳ ರಿಯರ್ ಟ್ಯೂಬ್ ಲೆಸ್ ಚಕ್ರಗಳನ್ನು ಬಳಕೆ ಮಾಡಲಾಗಿದೆ.

ಬ್ರೇಕಿಂಗ್

ಬ್ರೇಕಿಂಗ್

ಮುಂಭಾಗದಲ್ಲಿ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬೇಕ್ ಆಯ್ಕೆಯಿರುತ್ತದೆ. ಸುಗಮ ಚಾಲನೆಗೆ ವಿಕ್ಟರ್ ಬ್ರೇಕಿಂಗ್ ವ್ಯವಸ್ಥೆಯು ನೆರವಾಗಲಿದೆ.

ಆತ್ಮವಿಶ್ವಾಸ

ಆತ್ಮವಿಶ್ವಾಸ

ಹೆದ್ದಾರಿಗಿಂತಲೂ ನಗರದಲ್ಲಿ ಅತ್ಯುತ್ತಮವಾಗಿ ಚಲಿಸುವ 2016 ಟಿವಿಎಸ್ ವಿಕ್ಟರ್ ಹೆಚ್ಚು ಆತ್ಮವಿಶ್ವಾಸವನ್ನು ಪ್ರದಾನ ಮಾಡುತ್ತದೆ. ತನ್ಮೂಲಕ ಶ್ರೇಷ್ಠ ಪ್ರಯಾಣಿಕ ಬೈಕ್ ಎಂಬುದನ್ನು ಮಗದೊಮ್ಮೆ ನಿರೂಪಿಸಿದೆ.

 ನಿರ್ಮಾಣ ಗುಣಮಟ್ಟತೆ

ನಿರ್ಮಾಣ ಗುಣಮಟ್ಟತೆ

ಟಿವಿಎಸ್ ವಿಕ್ಟರ್ ನಿರ್ಮಾಣ ಗುಣಮಟ್ಟವನ್ನು ನಾವು ವಿಶೇಷವಾಗಿ ಹೇಳಲೇಬೇಕಾಗುತ್ತದೆ. ಸ್ವಿಚ್ ಗಳ ಸ್ಥಾನವು ನಿಖರವಾಗಿದ್ದು, ಚಾಲಕನ ಸವಾರಿಯನ್ನು ಸುಗಮಗೊಳಿಸುತ್ತದೆ.

ಕಾಲು ನಿಯಂತ್ರಣ

ಕಾಲು ನಿಯಂತ್ರಣ

ಎತ್ತರದ ಸವಾರರಿಗೂ ಸುಲಭವಾಗಿ ನಿರ್ವಹಿಸಬಹುದಾದ ರೀತಿಯಲ್ಲಿ ಫೂಟ್ ಕಂಟ್ರೋಲ್ ಲಗತ್ತಿಸಲಾಗಿದೆ. ಇದು ಗೇರ್ ಶಿಫ್ಟರ್ ಮತ್ತು ಬ್ರೇಕ್ ಗಳನ್ನು ಸುಲಭವಾಗಿ ಬಳಕೆ ಮಾಡಲು ಸಹಕಾರಿಯಾಗಿದೆ.

ಇಂಧನ ತುಂಬಿಸುವ ಕ್ಯಾಪ್

ಇಂಧನ ತುಂಬಿಸುವ ಕ್ಯಾಪ್

ಇಂಧನ ತುಂಬಿಸುವ ಕ್ಯಾಂಪ್ ಸ್ವಲ್ಪ ವಿಭಿನ್ನತೆಗೆ ಕಾರಣವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ನಿರ್ವಹಿಸುವಾಗ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ. ಯಾಕೆಂದರೆ ಇದರಿಂದ ಬೈಕ್ ಬಣ್ಣಗಳಿಗೆ ಗೀಟು ಬೀಳುವ ಸಾಧ್ಯತೆಯಿರುತ್ತದೆ.

ಆರಾಮದಾಯಕ

ಆರಾಮದಾಯಕ

ಸವಾರ ಮತ್ತು ಸಹ ಸವಾರನಿಗೆ ಸುಲಭವಾಗಿ ಸಂಚಾರ ಮಾಡುವ ರೀತಿಯಲ್ಲಿ ಉದ್ದವಾದ ಸೀಟುಗಳ ಆಯ್ಕೆಯನ್ನು ಇದರಲ್ಲಿ ಕೊಡಲಾಗಿದೆ. ಬದಿಯಲ್ಲಿ ಕೊಡಲಾಗಿರುವ ಸ್ವಿಚ್ಚಿಂಗ್ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಹಜಾರ್ಡ್ ಸ್ವಿಚ್

ಹಜಾರ್ಡ್ ಸ್ವಿಚ್

ಪಾರ್ಕಿಂಗ್ ಮತ್ತು ರಾತ್ರಿ ಸವಾರಿಯ ವೇಳೆಯಲ್ಲಿ ಹೆಚ್ಚು ನೆರವಿಗೆ ಬರಬಲ್ಲ ಹಜಾರ್ಡ್ ಸ್ವಿಚ್ ಆಯ್ಕೆಗಳನ್ನು ಕೊಟ್ಟಿರುವುದಕ್ಕೆ ಟಿವಿಎಸ್ ಸಂಸ್ಥೆಯನ್ನು ಮೆಚ್ಚಲೇ ಬೇಕು. ಸಾಮಾನ್ಯವಾಗಿ ಇಂತಹ ಆಯ್ಕೆಗಳು ಹೈ ಎಂಡ್ ಬೈಕ್ ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಜೊತೆಗೆ ನಗರ ಸವಾರಿಗೆ ನೆರವಾಗಬಲ್ಲ ಎಲೆಕ್ಟ್ರಿಕ್ ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಆಯ್ಕೆಯೂ ಇದೆ.

ಹೆಡ್ ಲೈಟ್

ಹೆಡ್ ಲೈಟ್

ವಿಕ್ಟರ್ ನಲ್ಲಿ ಕೊಡಲಾಗಿರುವ ಹೆಡ್ ಲೈಟ್ ಸಹ ವಿಶೇಷವಾಗಿ ಒತ್ತಿ ಹೇಳಬೇಕಾಗುತ್ತದೆ. ಸಂಸ್ಥೆಯು ಉಲ್ಲೇಖಿಸಿರುವಂತೆಯೇ ಇದರ ಶುಭ್ರವಾದ ಬೆಳಕಿನ ವ್ಯವಸ್ಥೆಯು ರಾತ್ರಿ ಪಯಣದಲ್ಲಿ ನೆರವಾಗುತ್ತದೆ.

ಗ್ರಾಬ್ ರೈಲ್

ಗ್ರಾಬ್ ರೈಲ್

ಸೀಟು ಮತ್ತು ಗ್ರಾಬ್ ರೈಲ್ ನಡುವೆ ಹೆಚ್ಚಿನ ಅಂತರವನ್ನು ಕಾಪಾಡಿಕೊಂಡಿರುವುದು ಹಿಂಬದಿ ಸವಾರನಿಗೂ ಸುರಕ್ಷಿತ ಪಯಣವನ್ನು ಖಾತ್ರಿಪಡಿಸಲಿದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇನ್ಸ್ಟ್ರುಮೆಂಟ್ ಕ್ಲಸ್ಟರ್

ವಿವಿಧ ಬೆಳಕಿನ ಸೇವೆಯಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರನ್ನು ಸುಲಭವಾಗಿ ಮನಗಾನಬಹುದಾಗಿದೆ. ಇಲ್ಲಿ ಅಪಾಚಿಗೆ ಸಮಾನವಾಗಿ ಡಿಜಿಟಲ್ ಟ್ಯಾಕೋ ಮೀಟರ್ ಜೊತೆಗೆ ಡಿಜಿಟಲ್ ಫ್ಯೂಯಲ್ ಗೇಜ್ ಹಾಗೂ ವಿವಿಧ ಟ್ರಿಪ್ ಮಾಹಿತಿಗಳ ಡಿಜಿಟಲ್ ಡಿಸ್ ಪ್ಲೇ ಇದರಲ್ಲಿದೆ.

ಇಂಡಿಕೇಟರ್ ಸೂಚಕ

ಇಂಡಿಕೇಟರ್ ಸೂಚಕ

ಇಂಡಿಕೇಟರ್ ಮತ್ತು ನ್ಯೂಟ್ರಲ್ ಗಳಂತಹ ಸೂಚಿಸುವ ನಾಲ್ಕು ವಾರ್ನಿಂಗ್ ಲೈಟ್ಸ್ ಗಳನ್ನು ಮೇಲ್ಗಡೆಯಲ್ಲಿ ವೃತ್ತಾಕಾರದಲ್ಲಿ ಸಾಲು ಸಾಲಾಗಿ ಕೊಡಲಾಗಿದೆ. ಇನ್ನು ಕೆಳಗಡೆಯಲ್ಲಿ ಇಕೊ ಮತ್ತು ಪವರ್ ಬೆಳಕಿನ ಸ್ವಿಚ್ ಗಳಿರಲಿದೆ.

ಬೆಲೆ ಮಾಹಿತಿ (ಬೆಂಗಳೂರು)

ಬೆಲೆ ಮಾಹಿತಿ (ಬೆಂಗಳೂರು)

ಡಿಸ್ಕ್: 53600 ರು.

ಡ್ರಮ್: 51600 ರು.

ಆರು ಆಕರ್ಷಕ ಬಣ್ಣಗಳು

ಆರು ಆಕರ್ಷಕ ಬಣ್ಣಗಳು

  • ಬ್ಲಿಸ್ ಫುಲ್ ಬ್ಲೂ,
  • ಜನರಸ್ ಗ್ರೇ,
  • ಬೀಟಿಫಿಕ್ ಬ್ಲ್ಯಾಕ್ ಸಿಲ್ವರ್,
  • ಸೆರೆನ್ ಸಿಲ್ವರ್,
  • ರೆಸ್ಟ್ ಫುಲ್ ರೆಡ್ ಮತ್ತು
  • ಬಾಲನ್ಸ್ಡ್ ಬ್ಲ್ಯಾಕ್ ರೆಡ್.
  • ಪ್ರತಿಸ್ಪರ್ಧಿಗಳು

    ಪ್ರತಿಸ್ಪರ್ಧಿಗಳು

    ನೂತನ ಟಿವಿಎಸ್ ವಿಕ್ಟರ್ ಪ್ರಮುಖವಾಗಿಯೂ ಮೈಲೇಜ್ ರಾಜಾ ಹೀರೊ ಸ್ಪ್ಲೆಂಡರ್, ಹೋಂಡಾ ಲಿವೊ, ಡ್ರೀಮ್ ಸಿರೀಸ್, ಬಜಾಜ್ ಪ್ಲಾಟಿನಾ, ಸುಜುಕಿ ಹಯಾಟೆ ಮತ್ತು ಮಹೀಂದ್ರ ಸೆಂಚುರೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

    ಸಂಪೂರ್ಣ ವಿವರಣೆ

    ಸಂಪೂರ್ಣ ವಿವರಣೆ

    • ಎಂಜಿನ್ ಸಾಮರ್ಥ್ಯ: 109.7 ಸಿಸಿ
    • ಪವರ್: 9.5bhp @ 7500rpm
    • ತಿರುಗುಬಲ: 9.4Nm @ 6000rpm
    • ಗೇರ್ ಬಾಕ್ಸ್: 4 ಸ್ಪೀಡ್
    • ಮೈಲೇಜ್: ಪ್ರತಿ ಲೀಟರ್ ಗೆ 76 ಕೀ.ಮೀ. (ARAI)
    • ಇಂಧನ ಟ್ಯಾಂಕ್ ಸಾಮರ್ಥ್ಯ: 8 ಲೀಟರ್
    • ರಿಸರ್ವ್: 2
    • ಭಾರ: 112 ಕೆ.ಜಿ (ಡ್ರಮ್ ಬ್ರೇಕ್ ), 113 ಕೆ.ಜಿ (ಡಿಸ್ಕ್ ಬ್ರೇಕ್)
    • ಬ್ರೇಕ್

      ಬ್ರೇಕ್

      ಮುಂಭಾಗ: 130 ಎಂಎಂ (ಡ್ರಮ್), 240 ಎಂಎಂ (ಡಿಸ್ಕ್)

      ಹಿಂಭಾಗ: 110 ಎಂಎಂ ಡ್ರಮ್

      ಸಸ್ಪೆನ್ಷನ್

      ಸಸ್ಪೆನ್ಷನ್

      ಮುಂಭಾಗ: ಟೆಲಿಸ್ಕಾಪಿಕ್ ಒಯಿಲ್ ಡ್ಯಾಂಪ್ಡ್ ಫ್ರಂಟ್ ಸಸ್ಪೆನ್ಷನ್

      ಹಿಂಭಾಗ: 5 ವಿಧಗಳಲ್ಲಿ ಹೊಂದಾಣಿಸಬಹುದಾದ ಹೆಡ್ರಾಲಿಕ್ ಸಸ್ಪೆನ್ಷನ್

      ಆಯಾಮ (ಎಂಎಂ)

      ಆಯಾಮ (ಎಂಎಂ)

      • ಉದ್ದ: 1980
      • ಅಗಲ: 750
      • ಎತ್ತರ: 1090
      • ಚಕ್ರಾಂತರ: 1260
      • ಗ್ರೌಂಡ್ ಕ್ಲಿಯರನ್ಸ್: 175
      • ಮುನ್ನಡೆ

        ಮುನ್ನಡೆ

        • ಅತ್ಯುತ್ತಮ ನಿರ್ಮಾಣ ಗುಣಮಟ್ಟತೆ,
        • ಆರಾಮದಾಯಕ ಸವಾರಿ,
        • ನಯವಾದ ಎಂಜಿನ್,
        • ನಿಖರವಾದ ಬ್ರೇಕ್,
        • ಮೈಲೇಜ್,
        • ಪವರ್-ಇಕೊ ಮೋಡ್,
        • ಹಜಾರ್ಡ್ ಬೆಳಕು,
        • ಶುಭ್ರವಾದ ಹೆಡ್ ಲೈಟ್,
        • ಪರಿಣಾಮಕಾರಿ ಇನ್ಸ್ಟ್ರುಮೆಂಟ್ ಕ್ಲಸ್ಟರ್,
        • ಆಕರ್ಷಕ ಬಣ್ಣಗಳು,
        • ಹಿನ್ನಡೆ

          ಹಿನ್ನಡೆ

          • ಹೆದ್ದಾರಿ ಚಾಲನೆ ಸೂಕ್ತವಲ್ಲ,
          • ಮೃದುವಲ್ಲದ ಗೇರ್ ಬಾಕ್ಸ್,
          • ರಿಯರ್ ವ್ಯೂ ಮಿರರ್,
          • ಹೆಚ್ಚಿನ ವೇಗದ ಚಾಲನೆಗೆ ಸೂಕ್ತವಲ್ಲ.
          • ಅಂತಿಮ ತೀರ್ಪು

            ಅಂತಿಮ ತೀರ್ಪು

            ನಮ್ಮ ತಜ್ಞರು ನಡೆಸಿರುವ ಚಾಲನಾ ಪರೀಕ್ಷೆಯಲ್ಲಿ ಟಿವಿಎಸ್ ವಿಕ್ಟರ್ ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿದೆ. ಓರ್ವ ದೈನಂದಿನ ಪ್ರಯಾಣಿಕನಿಗೆ ಸೂಕ್ತವಾದ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು, ಟಿವಿಎಸ್ ಪರಿಶ್ರಮವನ್ನು ಶ್ಲಾಘಿಸಬೇಕಾಗುತ್ತದೆ.

            ಅಂತಿಮ ತೀರ್ಪು

            ಅಂತಿಮ ತೀರ್ಪು

            ವಿನ್ಯಾಸದ ಅಥವಾ ವೈಶಿಷ್ಟ್ಯಗಳ ವಿಚಾರವಾಗಲಿ ಯಾವುದೇ ರಾಜಿಗೆ ತಯಾರಾಗದ ಟಿವಿಎಸ್ ಅತ್ಯುತ್ತಮ ಎಂಜಿನ್, ಸಸ್ಪೆನ್ಷನ್ ಒಳಗೊಂಡಿರುವ ಬೈಕನ್ನು ನಿರ್ಮಿಸಿದೆ. ಇನ್ನು ಡಿಸ್ಕ್ ಬ್ರೇಕ್, ಪವರ್-ಇಕೊ ಮೋಡ್, ಹಜಾರ್ಡ್ ಲೈಟ್ ಗಳಂತಹ ಆಯ್ಕೆಗಳು ನಿಮ್ಮ ಬೈಕ್ ಗೆ ಪ್ರೀಮಿಯಂ ಲುಕ್ ನೀಡಲಿದೆ.

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಟಿವಿಎಸ್ ವಿಕ್ಟರ್ ಚಕ್ರಗಳು

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಸೀಟಿನಡಿಯಲ್ಲಿ...

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಹಿಂಭಾಗದ ಸಸ್ಪೆನ್ಷನ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಫ್ಯೂಯಲ್ ಟ್ಯಾಪ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಎಂಜಿನ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಹೊಸ ವಿಕ್ಟರ್ vs ಹಳೆಯ ವಿಕ್ಟರ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಹಜಾರ್ಡ್ ಸ್ವಿಚ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಎಕ್ಸಾಸ್ಟ್ ಕೊಳವೆ

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ವೇಗಮಾಪಕ

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಎಡಬದಿಯ ಹ್ಯಾಂಡಲ್ ಬಾರ್ - ಸ್ವಿಚ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಇಂಧನ ಕ್ಯಾಪ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಹಳೆಯ ವಿಕ್ಟರ್ vs ಹೊಸ ವಿಕ್ಟರ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಹೈ ಬೀಮ್ - ಲೊ ಬೀಮ್

            ಚಿತ್ರಗಳಲ್ಲಿ...

            ಚಿತ್ರಗಳಲ್ಲಿ...

            ಟಿವಿಎಸ್ ವಿಕ್ಟರ್ ಕೀಲಿ

Most Read Articles

Kannada
English summary
Now, in 2016, TVS decided to bring back the Victor brand to life, and what they have come up with is quite spectacular, or is it? Let's take a detailed look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X