ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

Written By:

ಕಳೆದ ಮಾರ್ಚ್‌ನಲ್ಲಿ ಬಿಡುಗಡೆಗೊಳ್ಳುವ ಮೂಲಕ ವಿಶೇಷ ಬೇಡಿಕೆ ಪಡೆದುಕೊಳ್ಳುತ್ತಿರುವ ಬ್ರಿಟಿಷ್ ಮೋಟಾರು ಸೈಕಲ್ ತಯಾರಕ ಟ್ರಯಂಪ್ ಸಂಸ್ಥೆಯ ಮಾರ್ಡನ್ ಕ್ಲಾಸಿಕ್ ಬೈಕ್ ಮಾದರಿಯಾದ ಬೊನೆವಿಲ್ಲೆ ಬಾಬ್ಬರ್ ಮೊದಲ ಚಾಲನಾ ವಿಮರ್ಶೆ ಇಲ್ಲಿದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಯುವ ಪಿಳಿಗೆಯ ಬೇಡಿಕೆಗೆ ತಕ್ಕಂತೆ ಹೊಸ ಲುಕ್‌ನೊಂದಿಗೆ ಬೊನೆವಿಲ್ಲೆ ಬಾಬ್ಬರ್ ಬಿಡುಗಡೆಗೊಳಿಸಿರುವ ಟ್ರಯಂಪ್, ಐಷಾರಾಮಿ ಬೈಕ್ ಚಾಲನೆಗೆ ಸಹಕಾರಿಯಾಗುವಂತೆ ಬೊನೆವಿಲ್ಲೆ ಬಾಬ್ಬರ್ ವಿನ್ಯಾಸಗಳನ್ನು ಕೈಗೊಂಡಿರುವುದು ಮೊದಲ ನೋಟದಲ್ಲೇ ಮೋಡಿ ಮಾಡುವಂತಿವೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಸಿಂಗಲ್ ಸೀಟ್ ಮತ್ತು ರೇಟ್ರೋ ಸ್ಟೈಲ್ ರೌಂಡ್ ಹೆಡ್‌ಲ್ಯಾಂಪ್ ಪಡೆದುಕೊಂಡಿರುವ ಟ್ರಯಂಪ್ ಬೊನೆವಿಲ್ಲೆ ಬಾಬ್ಬರ್, ಮಾರ್ಡನ್ ಸ್ಟೈಲ್‌ಗೆ ಅನುಗುಣವಾಗಿ ಎಲ್‌ಇಡಿ ಟೈಲ್‌ಲ್ಯಾಂಪ್ ಮತ್ತು ಇಂಡಿಕೇಟರ್‌ಗಳನ್ನು ಪಡೆದುಕೊಂಡಿದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಸ್ಟೇನ್‌ಲೆಸ್ ಸ್ಟೀಲ್ ಸ್ಟ್ರಾಪ್, ಕತ್ತರಿಸಿದ ಜೋಡಿ ಎಕ್ಸಾಸ್ಟ್ ಜೊತೆಗೆ ದೊಡ್ಡ ಅನಲಾಗ್ ಸ್ಪೀಡೋಮೀಟರ್ ಮತ್ತು ಸಣ್ಣ ಡಿಜಿಟಲ್ ಪರದೆಯೊಂದಿಗೆ ಹೊಂದಿರುವ ಬೊನೆವಿಲ್ಲೆ ಬಾಬ್ಬರ್, ಮುಂಭಾಗದಲ್ಲಿ ಸಣ್ಣ ಪೆಂಡರ್ ಹೊಂದಿದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಎಂಜಿನ್ ಸಾಮರ್ಥ್ಯ

1,200-ಸಿಸಿ ಹೈ ಟಾರ್ಕ್ ಪ್ಯಾರಾಲಾಲ್ ಟ್ವಿನ್ ಎಂಜಿನ್ ಹೊಂದಿರುವ ಬೊನೆವಿಲ್ಲೆ ಬಾಬ್ಬರ್, 76 ಬಿಎಚ್‌ಪಿ ಮತ್ತು 106 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆಡುಕೊಂಡಿದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಇದಲ್ಲದೇ ಮೊರೆಲ್ಲೊ ರೆಡ್ ಪೇಂಟ್‌ನೊಂದಿಗೆ ಅದ್ಭುತ ಹೊರ ನೋಟ ಹೊಂದಿರುವ ಬೊನೆವಿಲ್ಲೆ ಬಾಬ್ಬರ್, 8.5-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ರೈಡ್ ಬೈ ವೈರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಇನ್ನು ಸುರಕ್ಷಾ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಕ್ವಿಕ್ ಗೇರ್‌ ಸ್ವಿಫ್ಟಿಂಗ್ ಸಿಸ್ಟಂ ಹೊಂದಿದೆ. ಹೀಗಾಗಿ ಸೂಪರ್ ಬೈಕ್‌ಗಳಲ್ಲಿ ಇದೊಂದು ಅತ್ಯುತ್ತಮ ಬೈಕ್ ಮಾದರಿ ಎಂದು ಹೇಳಬಹುದು.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಟ್ರಯಂಫ್ ಐದನೇ ಸೂಪರ್ ಬೈಕ್ ಮಾದರಿ ಇದಾಗಿದ್ದು, ವಿವಿಧ ವೈಶಿಷ್ಟ್ಯತೆಗಳನ್ನು ಹೊಂದಿರುವ ಬೊನೆವಿಲ್ಲೆ ಬಾಬ್ಬರ್ ಬೈಕ್ 228 ಕೆಜಿ ತೂಕ ಹೊಂದಿರುವುದು ಅದರ ಬಲಿಷ್ಠಗೆ ಮತ್ತಷ್ಟು ಶಕ್ತಿ ತುಂಬಿದೆ. ಹೀಗಾಗಿಯೇ 4.7 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಮೈಲೇಜ್

ಸೂಪರ್ ಬೈಕ್‌ಗಳಲ್ಲೇ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಮಾದರಿ ಇದಾಗಿದ್ದು, ನಗರಪ್ರದೇಶಗಳಲ್ಲಿ ಪ್ರತಿ ಲೀಟರ್‌ಗೆ 21ಕಿಮಿ ಹಾಗೂ ಹೈವೇಗಳಲ್ಲಿ ಪ್ರತಿ ಲೀಟರ್‌ಗೆ 28 ಕಿಮಿ ಮೈಲೇಜ್ ನೀಡುತ್ತದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಬೆಲೆಗಳು

ಅತ್ಯುತ್ತಮ ಹೊರ ವಿನ್ಯಾಸಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಹೊತ್ತು ಬಂದಿರುವ ಬೊನೆವಿಲ್ಲೆ ಬಾಬ್ಬರ್ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ.9.09 ಲಕ್ಷಕ್ಕೆ ಲಭ್ಯವಿದೆ.

ಟ್ರಯಂಪ್ 2017ರ ಬೊನೆವಿಲ್ಲೆ ಬಾಬ್ಬರ್ ಬೈಕ್‌ನ ಮೊದಲ ಚಾಲನಾ ವಿಮರ್ಶೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗರಿಷ್ಠವಾಗಿ ಗಂಟೆಗೆ 180 ಕಿ.ಮಿ ವೇಗ ಪಡೆದುಕೊಳ್ಳುವ 2017ರ ಬೊನೆವಿಲ್ಲೆ ಬಾಬ್ಬರ್ ಒಂದು ಅದ್ಬುತ ಬೈಕ್ ಮಾದರಿಯಾಗಿದ್ದು, ಪ್ರಿಮಿಯಂ ಮೋಟಾರ್ ಸೈಕಲ್ ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆ ಎನ್ನಬಹುದು.

English summary
Read in Kannada about 2017 Triumph Bonneville Bobber Review.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark