ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

Written By:

70ರ ದಶಕದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವ ಮೂಲಕ ಐಷಾರಾಮಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಿದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಈ ತನಕವು ತನ್ನದೇ ಆದ ಬೇಡಿಕೆ ಹೊಂದಿರುವ ಏಕೈಕ ಕಾರು ಉತ್ಪಾದನಾ ಸಂಸ್ಥೆಯಾಗಿದ್ದು, ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರುಗಳನ್ನು ಪರಿಚಯಿಸಿ ಯಶಸ್ವಿಯಾಗಿರುವುದೇ ಬೆಂಝ್ ಕಾರುಗಳ ಗುಣಮಟ್ಟಕ್ಕೆ ಮತ್ತೊಂದು ಕೈಗನ್ನಡಿ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಜರ್ಮನ್ ಆಟೋ ಉತ್ಪಾದಕರಲ್ಲೇ ವಿಭಿನ್ನತೆ ಹೊಂದಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದುವರೆಗೆ ನೂರಾರು ಬಗೆಯ ಕಾರುಗಳನ್ನು ಪರಿಚಯಿಸಿ ವರ್ಲ್ಡ್ ಬೆಸ್ಟ್ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಇದೀಗ ಬಹುನೀರಿಕ್ಷಿತ ಎಸ್-ಕ್ಲಾಸ್ 2018 ಆವೃತ್ತಿಯನ್ನು ಪರಿಚಯಿಸಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಭಾರತದಲ್ಲೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನವನ್ನು ತನ್ನ ಎಸ್-ಕ್ಲಾಸ್‌ಗಳಲ್ಲಿ ಪರಿಚಯಿಸಲಾಗುತ್ತಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ವಿಶೇಷ ತಂತ್ರಜ್ಞಾನ ಪ್ರೇರಿತ ಅಡ್ವಾನ್ಸ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂನೊಂದಿಗೆ ಹೊಸ ಕ್ಲಾಸ್ ಮಾದರಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಈ ಹಿಂದಿನ ಎಸ್-ಕ್ಲಾಸ್ ಮಾದರಿಗಳಿಂತಲೂ ಗುರುತರ ಬದಲಾವಣೆಗಳನ್ನು ಹೊಂದಿರಲಿವೆ ಎನ್ನುಬಹುದು.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

2020ರ ವೇಳೆಗೆ ಭಾರತದಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳ ವಾಹನಗಳು ಕಡ್ಡಾಯವಾಗಲಿದ್ದು, ಇದಕ್ಕೆ ಪೂರಕವಾಗಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಮೊದಲ ಬಾರಿಗೆ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಮಾದರಿಗಳನ್ನು ಬಿಎಸ್ 6 ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುವ ಮೂಲಕ ಭಾರತೀಯ ವಾಹನ ಉದ್ಯಮದಲ್ಲಿ ಹೊಸ ಅಲೆ ಸೃಷ್ಠಿಸಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ನ್ಯೂ ಟರ್ಬೋ ಚಾರ್ಜ್ಡ್ ಎಂಜಿನ್‌ನೊಂದಿಗೆ ಹೊಸ ಎಸ್ ಕ್ಲಾಸ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಐಷಾರಾಮಿ ಸೆಡಾನ್ ಮಾದರಿಗಳಾದ ಎಸ್ 350 ಡಿ ಮತ್ತು ಎಸ್ 450 ಕಾರುಗಳನ್ನು ಸದ್ಯದ ಮಾರುಕಟ್ಟೆಗೆ ಅನುಗುಣವಾಗಿ ಸಿದ್ದಪಡಿಸಲಾಗಿದೆ. ಈ ಮೂಲಕ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯುವ ಮತ್ತೊಂದು ಪ್ರಯತ್ನ ಮಾಡಲಾಗಿದ್ದು, ಕಾರು ಉದ್ಯಮದಲ್ಲೇ ಮರ್ಸಿಡಿಸ್ ಬೆಂಝ್ ಸಂಸ್ಥೆಯು ದಿಟ್ಟಹೆಜ್ಜೆ ಇಟ್ಟಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಕಾರಿನ ಡಿಸೈನ್ ಮತ್ತು ಸ್ಟೈಲ್

ಮೊದಲ ನೋಟದಲ್ಲೇ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಬಲ್ಲ ಗುಣವಿಶೇಷಗಳನ್ನು ಹೊಂದಿರುವ ಎಸ್-ಕ್ಲಾಸ್ ಆವೃತ್ತಿಗಳು, ಫೇಸ್‌ಲಿಫ್ಟ್ ಎಬಾಸಿಂಗ್ ವಿನ್ಯಾಸದೊಂದಿಗೆ ಸಾಂಪ್ರದಾಯಿಕ ಗೋರ್ಡನ್ ವಾಜೆನರ್ ತಂತ್ರದೊಂದಿಗೆ ನಯವಾದ ರೇಖೆಗಳು ಮತ್ತು ವಕ್ರಾಕೃತಿಗಳನ್ನು ಹೊಂದಿರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಇನ್ನು ಸಾಂಪ್ರದಾಯಿಕ ತ್ರಿ ಸ್ಲ್ಯಾಟ್ ಗ್ರಿಲ್ ವಿನ್ಯಾಸಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಹೊಸ ಲುಕ್ ನೀಡಲು ಗ್ರೀಲ್‌ಗಳಲ್ಲಿ ರೇಡಿಯೇಟರ್ ಬಳಕೆ ಮಾಡಲಾಗಿದೆ. ಇನ್ನು ಮುಂಭಾಗದ ಬಂಪರ್‌ಗಳಲ್ಲೂ ಬದಲಾವಣೆ ತರಲಾಗಿದ್ದು, ಕೆಲವು ಕ್ರೋಮ್ ಟ್ರೀಟ್ಮೆಂಟ್ ಜೊತೆಗೆ ಇಂಟೆಕ್ಸ್ ಹೊಸತನ ಪಡೆದಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಜೊತೆಗೆ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ 2018ರ ಆವೃತ್ತಿಯಲ್ಲಿನ ಆಂತರಿಕ ವೈಶಿಷ್ಟ್ಯತೆಗಳನ್ನು ನವೀಕರಿಸಲಾಗಿದ್ದು, ನ್ಯೂ ಮಲ್ಟಿ ಬಿಮ್ ಎಲ್ಇಡಿ ಹೆಡ್‌ಲ್ಯಾಂಪ್, ಟ್ರಿಪ್ಲಲ್ ಡೇ ಟೈಮ್ ರನ್ನಿಂಗ್ ಲೈಟ್ ನೀಡಿರುವುದು ಕಾರುಗಳು ಅಂದವನ್ನು ಹೆಚ್ಚಿಸಿವೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಹೀಗಾಗಿ ಹೊಸ ಎಸ್-ಕ್ಲಾಸ್ ಮಾದರಿಗಳಲ್ಲಿ ಸ್ಪೋರ್ಟಿ ಮತ್ತು ಕ್ಲಾಸಿಕ್ ಲುಕ್ ಎರಡನ್ನು ಸಮನಾಗಿ ಕಾಯ್ದುಕೊಳ್ಳುಲಾಗಿದೆ. ಇದಕ್ಕೆ ಉದಾಹರಣೆ ಅಂದ್ರೆ, 3035ಎಂಎಂ ವೀಲ್ಹ್‌ಬೆಸ್ ಅಂತರವನ್ನು ಹೊಂದಿರುವ ಎಸ್-ಕ್ಲಾಸ್‌ಗಳು ಖಂಡಿತವಾಗಿಯೂ ಇತರೆ ಸೆಡಾನ್ ಕಾರುಗಳಿಂತೂ ಗಾತ್ರದಲ್ಲಿ ದೊಡ್ಡವಾಗಿವೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಕಾರಿನ ಒಳವಿನ್ಯಾಸ

ಐಷಾರಾಮಿ ಕಾರಿನಲ್ಲಿ ಐಷಾರಾಮಿ ಪ್ರಯಾಣಕ್ಕೆ ಪ್ರಯಾಣಕ್ಕೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಎಸ್-ಕ್ಲಾಸ್ ಕಾರುಗಳು ವೈರ್ ಲೆಸ್ ಚಾರ್ಜಿಂಗ್ ಪಾಡ್, ಕ್ಲೈಮೆಟ್ ಕಂಟ್ರೋಲರ್, ಹಿಂಬದಿಯ ಸವಾರರಿಗೂ ಆರ್ಮ್ ರೆಸ್ಟ್ ಸೌಲಭ್ಯ ಒದಗಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಹಳೆಯ ಮಾದರಿಗಿಂತ ಹೊಸ ಎಸ್-ಕ್ಲಾಸ್‌ಗಳಲ್ಲಿ ಮತ್ತಷ್ಟು ಸುಧಾರಿತ ಸೌಲಭ್ಯ ಪರಿಚಯಿಸಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ತ್ರಿ ಸ್ಪೋಕ್ ಸ್ಟಿರಿಂಗ್ ವೀಲ್ಹ್‌ಗಳು, ಮೆಟಲ್ ಕಂಟ್ರೋಲ್ ಪಾಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಂತೆ ನಿಯಂತ್ರಿಸಬಹುದಾದ ಇನ್ಫೋಟೈನ್ಮೆಂಟ್ ಸಿಸ್ಟಂ ಹೊಂದಿರಲಿವೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಒಟ್ಟಿನಲ್ಲಿ ಕಾರು ಪ್ರಯಾಣದ ಅವಧಿಯಲ್ಲಿ ಸವಾರರಿಗೆ ಯಾವುದೇ ರೀತಿಯ ಬೇಸರವೆನಿಸದಿರಲು 64 ಬಣ್ಣಗಳನ್ನು ಹೊಂದಿರುವ ಹೈ ಕ್ಲಾಸ್ ಇಂಟಿರಿಯರ್ ಬಣ್ಣಗಳು, ಪನೋರಾಮಿಕ್ ಸ್ಲಿಡಿಂಗ್ ಸನ್‌ರೂಫ್, ಮನರಂಜನೆಗಾಗಿ 13 ಹೈ ಪರ್ಫಾಮೆನ್ಸ್ ಬರ್ಮಾಸ್ಟೆರ್ ಸ್ಪೀಕರ್ಸ್‌ಗಳನ್ನು ಇರಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಕೊನೆಯದಾಗಿ ಎಸ್ ಕ್ಲಾಸ್ ಕಾರು ಸರಣಿಗಳು ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೊಸ ಕಾರುಗಳಲ್ಲಿ ಆಕ್ಟಿವ್ ಎಮರ್ಜೆನ್ಸಿ ಸ್ಟಾಪ್ ಆಯ್ಕೆ ಇದ್ದು, ಮಲ್ಟಿ ಏರ್‌ಬ್ಯಾಗ್, ಇಬಿಡಿ, ಟ್ರಾನ್‌ಕ್ಷನ್ ಕಂಟ್ರೋಲರ್ ಸೇರಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಎಂಜಿನ್ ಸಾಮರ್ಥ್ಯ

ಎಸ್ ಕ್ಲಾಸ್ 350 ಡಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಸಬಹುದಾಗಿದ್ದು, 3-ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಹೊಂದಿದೆ. ಈ ಮೂಲಕ 282-ಬಿಎಚ್‌ಪಿ ಮತ್ತು 600-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಜೊತೆಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದಿರುವ ಎಸ್ ಕ್ಲಾಸ್ ಆವೃತ್ತಿಗಳು ಕೇವಲ 6 ಸೇಕೆಂಡುಗಳಲ್ಲಿ 0 ಟು 100 ಕಿಮಿ ವೇಗ ಸಾಧಿಸುವುದರ ಮೂಲಕ ಗಂಟೆಗೆ 250ಕಿಮಿ ಟಾಪ್ ಸ್ಪೀಡ್ ತಲುಪಬಲ್ಲವು.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಹಾಗೆಯೇ ಎಸ್ 450 ಕಾರುಗಳು ಕೂಡಾ 3-ಲೀಟರ್ ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟ್ವಿನ್-ಟರ್ಬೋ ಇನ್ ಲೈನ್ ಸಿಕ್ಸ್ ಎಂಜಿನ್ ಮೂಲಕ 362-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಇವು ಕೂಡಾ ಕೇವಲ 5.1 ಸೇಕೆಂಡುಗಳಲ್ಲಿ 0 ಟು 100 ವೇಗ ಪಡೆದುಕೊಳ್ಳುವುದಲ್ಲದೇ ಗಂಟೆಗೆ 250 ಕಿಮಿ ಟಾಪ್ ಸ್ಪೀಡ್ ಹೊಂದಿಲ್ಲದೇ 9-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆಯಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಬೆಲೆಗಳು(ಎಕ್ಸ್‌ಶೋರಂ ಪ್ರಕಾರ)

ನವೀಕೃತ ಎಸ್ ಕ್ಲಾಸ್ ಸೆಡಾನ್ ಕಾರು ಆವೃತ್ತಿಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.1.33 ಕೋಟಿ ಮತ್ತು ಟಾಪ್ ಮಾದರಿಯು ರೂ. 1.37 ಕೋಟಿಗೆ ಖರೀದಿಗೆ ಲಭ್ಯವಿವೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಸುರಕ್ಷಾ ಸೌಲಭ್ಯಗಳು

ಸೆಡಾನ್ ಮಾದರಿಗಳಲ್ಲಿ ಅತಿಹೆಚ್ಚು ಸುಧಾರಿತ ಸೌಲಭ್ಯ ಪಡೆದಿರುವ ಎಸ್-ಕ್ಲಾಸ್‌ಗಳು ಆಕ್ಟಿವ್ ಬ್ರೇಕ್ ಸಿಸ್ಟಂ, ಅಡ್ವಾನ್ಸ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ, ಕ್ಯಾಮೆರಾ, ಸೆನ್ಸಾರ್, ಡ್ರೈವರ್ ಅಸಿಸ್ಟೆನ್ಸ್, ಪಾರ್ಸಿಯಲ್ ಅಟೋಮೆಷನ್, ಕಂಡಿಷನ್ ಅಟೋಮೆಷನ್, ಹೈ ಅಟೋಮೆಷನ್ ಎಂಬ ಕಾರು ಚಾಲನಾ ಮೂಡ್‌ಗಳನ್ನು ಪಡೆದಿದೆ.

ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಹೊಸ ಎಸ್ ಕ್ಲಾಸ್ ಕಾರುಗಳು ಪಕ್ಷಿನೋಟ ಹೀಗಿದೆ...

ಕಾರು ಮಾದರಿ ಎಸ್ 350ಡಿ ಎಸ್ 450
ಎಂಜಿನ್

3-ಲೀಟರ್ ಟ್ವಿನ್ ಟರ್ಬೋ ಚಾರ್ಜ್ಡ್ ಇನ್ ಲೈನ್ ಸಿಕ್ಸ್ ಡೀಸೆಲ್

3-ಲೀಟರ್ ಟ್ವಿನ್ ಟರ್ಬೋ ಚಾರ್ಜ್ಡ್ ಇನ್ ಲೈನ್ ಸಿಕ್ಸ್ ಪೆಟ್ರೋಲ್
ಪವರ್(ಬಿಎಚ್‌ಪಿ) 282 362
ಟಾರ್ಕ್(ಎನ್ಎಂ) 600 500
ಟ್ರಾನ್‌ಮಿಷನ್ 9ಜಿ-ಟ್ರಾನಿಕ್ 9-ಜಿ ಟ್ರಾನಿಕ್
ಚಾಲನಾ ಸಾಮರ್ಥ್ಯ(ಸೆಕೇಂಡುಗಳಲ್ಲಿ) 6 5.1
ಟಾಪ್ ಸ್ಪೀಡ್(ಪ್ರತಿ ಗಂಟೆಗೆ) 250 250
ಬೆಲೆ (ಎಕ್ಸ್‌ಶೋರಂ) ರೂ. 1.33 ಕೋಟಿ ರೂ. 1.37 ಕೋಟಿ
ಫಸ್ಟ್ ಡ್ರೈವ್ ರಿವ್ಯೂ- ಅತ್ಯುತ್ತಮ ತಂತ್ರಜ್ಞಾನಗಳ ಸಮ್ಮಿಶ್ರಣವೇ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಎಸ್-ಕ್ಲಾಸ್ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮೊದಲ ಬಾರಿಗೆ ಪರಿಚಯಿಸಲಾದ ಎಸ್-ಕ್ಲಾಸ್‌ನಿಂದ ಇದುವರೆಗೂ ಐಷಾರಾಮಿ ಸೆಡಾನ್ ಕಾರುಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿದ್ದು, ಇದೀಗ ಬಿಎಸ್ 6 ವೈಶಿಷ್ಟ್ಯತೆ ಹೊಂದಿರುವುದು ಮತ್ತೊಂದು ವಿಶೇಷ ಎನ್ನಬಹುದು. ಈ ಮೂಲಕ ಐಷಾರಾಮಿ ಕಾರು ಪ್ರಿಯರಿಗೆ ಹೊಸ ಚಾಲನಾ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬುಹುದು.

Read more on mercedes benz car review
English summary
2018 Mercedes-Benz S-Class Review.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark