ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಮಿಂಚಲಿದೆ 2021 Honda Amaze..

ಭಾರತದಲ್ಲಿ ಹಲವು ಕಂಪನಿಗಳು ಕಾಂಪ್ಯಾಕ್ಟ್ ಸೆಡಾನ್ ಸೆಗ್ ಮೆಂಟಿನಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿವೆ. ಅವುಗಳಲ್ಲಿ Honda ಕಂಪನಿಯ Amaze ಸೆಡಾನ್ ಕಾರು ಸಹ ಸೇರಿದೆ.

ಹೊಸ Honda Amaze ಕಾರು ರಿವ್ಯೂ

Honda ಕಂಪನಿಯು 2013 ರಲ್ಲಿ ಮೊದಲ ಬಾರಿಗೆ ತನ್ನ Amaze ಕಾರ್ ಅನ್ನು ಬಿಡುಗಡೆಗೊಳಿಸಿತು. ಬಿಡುಗಡೆಯಾದ ನಂತರ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Dzire, Ford Aspire ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು. ಹಲವಾರು ಫೀಚರ್ ಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.

ಹೊಸ Honda Amaze ಕಾರು ರಿವ್ಯೂ

Honda ಕಂಪನಿಯು 2018 ರ ಆಟೋ ಎಕ್ಸ್‌ಪೋದಲ್ಲಿ ತನ್ನ ಎರಡನೇ ತಲೆಮಾರಿನ Amaze ಕಾರ್ ಅನ್ನು ಅನಾವರಣಗೊಳಿಸಿತ್ತು. ಈ ಕಾರ್ ಅನ್ನು ಕಂಪನಿಯು ಆಗಸ್ಟ್ 18 ರಂದು ಬಿಡುಗಡೆಗೊಳಿಸಿತು. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳು ಮೊದಲಿನಂತೆ ಇದ್ದರೂ ಫೀಚರ್ ಗಳ ಸಂಖ್ಯೆ ಹೆಚ್ಚಾಗಿದೆ. ನಾವು ಇತ್ತೀಚಿಗೆ ಈ ಕಾರ್ ಅನ್ನು ಚಾಲನೆ ಮಾಡಿದೆವು. ಈ ಕಾರಿನ ರಿವ್ಯೂ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಹೊಸ Honda Amaze ಕಾರು ರಿವ್ಯೂ

ವಿನ್ಯಾಸ ಹಾಗೂ ಶೈಲಿ

Honda ಕಂಪನಿಯು ಈ ಸೆಡಾನ್‌ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳನ್ನು ಕಾರಿನ ಮುಂಭಾಗದಲ್ಲಿ ಕಾಣಬಹುದು.ಹೊಸ ಕಾರಿನ ಮುಂಭಾಗದಲ್ಲಿ ರಿಡಿಸೈನ್ ಮಾಡಲಾದ ಎಲ್ಇಡಿ ಹೆಡ್ ಲ್ಯಾಂಪ್ ಗಳು ಪ್ರೊಜೆಕ್ಟರ್ ಅನ್ನು ಒಳಗೊಂಡಿವೆ.

ಹೊಸ Honda Amaze ಕಾರು ರಿವ್ಯೂ

ಅವುಗಳು ಎಲ್ಇಡಿ ಡಿಆರ್‌ಎಲ್ ಗಳನ್ನು ಸಹ ಹೊಂದಿವೆ. ಆಕರ್ಷಕವಾಗಿರುವ ಸಿ ಶೇಪಿನ ಡಿಆರ್‌ಎಲ್‌ಗಳು Amaze‌ ಕಾರಿನ ಮುಂಭಾಗದ ಶೈಲಿಯನ್ನು ಎತ್ತಿ ತೋರಿಸುತ್ತವೆ. ಈ ಕಾರಿನ ಮುಂಭಾಗದಲ್ಲಿ ಮೂರು ಸ್ಲ್ಯಾಟ್ ಗ್ರಿಲ್ ಅನ್ನು ನೀಡಲಾಗಿದೆ.

ಹೊಸ Honda Amaze ಕಾರು ರಿವ್ಯೂ

ಎರಡು ಲೋವರ್ ಸ್ಲ್ಯಾಟ್‌ಗಳು ಕ್ರೋಮ್ ಅಂಶವನ್ನು ಹೊಂದಿವೆ. ಫ್ರಂಟ್ ಬಂಪರ್ ಕೆಳಭಾಗದಲ್ಲಿ ಎರಡು ಎಲ್ಇಡಿ ಫಾಗ್ ಲೈಟ್ ಗಳನ್ನು ನೀಡಲಾಗಿದೆ. Honda Amaze ಕಾಂಪ್ಯಾಕ್ಟ್ ಸೆಡಾನ್ ಕಾರು ಸ್ಟೈಲಿಶ್ ಆದ ಡ್ಯುಯಲ್ ಟೋನ್, ಹತ್ತು ಸ್ಪೋಕ್, 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಹೊಸ Honda Amaze ಕಾರು ರಿವ್ಯೂ

ಇದರ ಜೊತೆಗೆ ಈ ಕಾರಿನಲ್ಲಿ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಹೊಂದಿರುವ ಒಆರ್‌ವಿಎಂಗಳನ್ನು ನೀಡಲಾಗಿದೆ. ಈ ಮಿರರ್'ಗಳು ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು ಫೋಲ್ಡ್ ಮಾಡಬಹುದು. ಕ್ರೋಮ್ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್‌ಗಳು ಈ ಕಾರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ.

ಹೊಸ Honda Amaze ಕಾರು ರಿವ್ಯೂ

ಇನ್ನು ಈ ಕಾರಿನ ಹಿಂಭಾಗದಲ್ಲಿ ಸಿ ಶೇಪಿನಲ್ಲಿರುವ ಎಲ್ಇಡಿ ಟೇಲ್ ಲ್ಯಾಂಪ್‌, ಸಣ್ಣ ಬೂಟ್ ಲಿಪ್ ನೀಡಲಾಗಿದೆ. ರೇರ್ ಬಂಪರ್‌ನ ಕೆಳಭಾಗದಲ್ಲಿರುವ ಕ್ರೋಮ್ ಸ್ಟ್ರಿಪ್ ಈ ಕಾರಿನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ.

ಹೊಸ Honda Amaze ಕಾರು ರಿವ್ಯೂ

ಕಾಕ್‌ಪಿಟ್ ಹಾಗೂ ಇಂಟಿರಿಯರ್

ಹೊಸ Honda Amaze‌ ಕಾರಿನಲ್ಲಿರುವ ಡ್ಯುಯಲ್ ಟೋನ್ ಇಂಟಿರಿಯರ್ ಥೀಮ್‌ ನಮ್ಮನ್ನು ಒಳಗೆ ಸ್ವಾಗತಿಸುತ್ತದೆ. ಬೀಜ್ ಹಾಗೂ ಕಪ್ಪು ಬಣ್ಣಗಳನ್ನು ಫೇಸ್‌ಲಿಫ್ಟ್Honda Amaze‌ ಕಾರಿನಲ್ಲಿ ಕಾಣಬಹುದು.

ಹೊಸ Honda Amaze ಕಾರು ರಿವ್ಯೂ

ಈ ಕಾರಿನ ಸೀಟುಗಳು, ಡೋರ್ ಹಾಗೂ ಡ್ಯಾಶ್ ಬೋರ್ಡ್ ಕೆಳಗಿನ ಭಾಗಗಳು ಬೀಜ್‌ ಬಣ್ಣವನ್ನು ಹೊಂದಿವೆ. ಇವುಗಳ ಮೇಲಿನ ಭಾಗ ಹಾಗೂ ಸೆಂಟರ್ ಕನ್ಸೋಲ್ ಕಪ್ಪು ಬಣ್ಣವನ್ನು ಹೊಂದಿವೆ.

ಹೊಸ Honda Amaze ಕಾರು ರಿವ್ಯೂ

ಸ್ಯಾಟಿನ್ ಸಿಲ್ವರ್‌ ಬಣ್ಣದಲ್ಲಿರುವ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್ ವ್ಹೀಲ್ ಹಾಗೂ ಡೋರುಗಳ ಮೇಲೆ ಕೆಲವು ಬ್ರಶ್ ಮಾಡಿದ ಅಂಶಗಳನ್ನು ನೀಡಲಾಗಿದೆ.ಡ್ಯಾಶ್‌ಬೋರ್ಡ್‌ನಲ್ಲಿರುವ ಎಸಿ ವೆಂಟ್ ಅನ್ನು ಎತ್ತರಿಸಲಾಗಿದ್ದು, ವಿಶಿಷ್ಟ ಆಕಾರವನ್ನು ಹೊಂದಿದೆ. ಅದರ ಕೆಳಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಹೊಸ Honda Amaze ಕಾರು ರಿವ್ಯೂ

ಈ ಸಿಸ್ಟಂ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ವೆಬ್‌ಲಿಂಕ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಕ್ಲೈಮೇಟ್ ಕಂಟ್ರೋಲ್ ಬಟನ್ ಗಳನ್ನು ಇನ್ಫೋಟೇನ್‌ಮೆಂಟ್ ಸಿಸ್ಟಂ ಕೆಳಗೆ ಇರಿಸಲಾಗಿದೆ.

ಹೊಸ Honda Amaze ಕಾರು ರಿವ್ಯೂ

ಸ್ಟೀಯರಿಂಗ್ ವ್ಹೀಲ್ ಅತ್ಯುತ್ತಮವಾಗಿದ್ದು, ಇನ್ಫೋಟೈನ್‌ಮೆಂಟ್‌ಗಾಗಿ ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ ಗಳನ್ನು ಹೊಂದಿದೆ. ಈ ಸ್ಟೀಯರಿಂಗ್ ವ್ಹೀಲ್ ಅನ್ನು ಗಟ್ಟಿಯಾದ ಪ್ಲಾಸ್ಟಿಕ್‌ನಿಂದ ವ್ರಾಪ್ ಮಾಡಲಾಗಿದೆ.

ಹೊಸ Honda Amaze ಕಾರು ರಿವ್ಯೂ

ಇನ್ಸ್'ಟ್ರೂಮೆಂಟೇಷನ್ ಗಾಗಿ ಡಿಜಿಟಲ್ ಅನಲಾಗ್ ಕನ್ಸೋಲ್ ನೀಡಲಾಗಿದೆ. ಈ ಕಾರಿನಲ್ಲಿರುವ ಎಂಐಡಿ ಡಿಸ್ ಪ್ಲೇ ಫ್ಯೂಯಲ್ ಲೆವೆಲ್, ಡಿಸ್ಟೆನ್ಸ್ ಟು ಎಂಪ್ಟಿ, ಟ್ರಿಪ್ ಮೀಟರ್, ಓಡೋಮೀಟರ್ ಸೇರಿದಂತೆ ಹಲವು ಮಾಹಿತಿಗಳನ್ನು ತೋರಿಸುತ್ತದೆ.

ಹೊಸ Honda Amaze ಕಾರು ರಿವ್ಯೂ

Honda ಕಂಪನಿಯು ಈ ಕಾರಿನಲ್ಲಿ ಫೋಲ್ಡ್ ಮಾಡಬಹುದಾದ ಆರ್ಮ್‌ರೆಸ್ಟ್ ಅನ್ನು ನೀಡಿದೆ. ಈ ಆರ್ಮ್‌ರೆಸ್ಟ್ ಇನ್ ಬಿಲ್ಟ್ ಕಪ್ ಹೋಲ್ಡರ್‌ಗಳನ್ನು ಹೊಂದಿದೆ. ಹಿಂಬದಿ ಪ್ರಯಾಣಿಕರಿಗಾಗಿ 12 ವೋಲ್ಟ್ ಪವರ್ ಔಟ್ಲೆಟ್ ಅನ್ನು ಸಹ ನೀಡಲಾಗಿದೆ.

ಹೊಸ Honda Amaze ಕಾರು ರಿವ್ಯೂ

ಕಂಫರ್ಟ್, ಪ್ರಾಕ್ಟಿಕಲ್ ಹಾಗೂ ಬೂಟ್ ಸ್ಪೇಸ್

Amaze ಕಾರಿನ ಸೀಟುಗಳನ್ನು ಫ್ಯಾಬ್ರಿಕ್‌ನಿಂದ ಅಲಂಕರಿಸಲಾಗಿದೆ. ಡ್ರೈವರ್ ಸೀಟಿನಲ್ಲಿ ಹೈಟ್ ಅಡ್ಜಸ್ಟ್ ಮೆಂಟ್ ನೀಡಲಾಗಿದೆ. ಈ ಸೀಟುಗಳು ಸ್ಪೋರ್ಟಿಯಾಗಿ ಅಥವಾ ಆರಾಮದಾಯಕವಾಗಿ ಇರದೇ ಎರಡರ ಮಿಶ್ರಣವಾಗಿವೆ. ಈ ಕಾರಿನ ಹಿಂಭಾಗದಲ್ಲಿ ಪ್ರಯಾಣಿಕರಿಗಾಗಿ ಸಾಕಷ್ಟು ಲೆಗ್ ರೂಂ ನೀಡಲಾಗಿದೆ.

ಹೊಸ Honda Amaze ಕಾರು ರಿವ್ಯೂ

ಹೆಡ್ ರೂಮ್ ಸಹ ಯೋಗ್ಯವಾಗಿದ್ದು, ನಾಲ್ಕು ಜನರು ಪ್ರಯಾಣಕ್ಕೆ ಆರಾಮದಾಯಕವಾಗಿದೆ. ಆದರೆ ಹಿಂಭಾಗದ ಸೀಟಿನಲ್ಲಿ ಮಧ್ಯದಲ್ಲಿ ಕೂರುವ ಪ್ರಯಾಣಿಕರಿಗೆ ದೀರ್ಘ ಪ್ರಯಾಣದಲ್ಲಿ ಸ್ವಲ್ಪ ಅನಾನುಕೂಲವಾಗಬಹುದು. ಫೇಸ್‌ಲಿಫ್ಟೆಡ್ Honda Amaze ಕಾರು 420 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಹೊಸ Honda Amaze ಕಾರು ರಿವ್ಯೂ

ಗಾತ್ರ:

ಗಾತ್ರ Honda Amaze Facelift
ಉದ್ದ 3,995ಎಂಎಂ
ಅಗಲ 1,695ಎಂಎಂ
ಎತ್ತರ 1,498ಎಂಎಂ
ವ್ಹೀಲ್‌ಬೇಸ್ 2,470ಎಂಎಂ
ಬೂಟ್ ಸ್ಪೇಸ್ 420 ಲೀಟರ್
ಗ್ರೌಂಡ್ ಕ್ಲಿಯರೆನ್ಸ್ 165ಎಂಎಂ
ಹೊಸ Honda Amaze ಕಾರು ರಿವ್ಯೂ

ಎಂಜಿನ್ ಕಾರ್ಯಕ್ಷಮತೆ ಹಾಗೂ ಚಾಲನಾ ಅನಿಸಿಕೆ

2021 Honda Amaze ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಎರಡೂ ಎಂಜಿನ್ ಗಳು 5 ಸ್ಪೀಡ್ ಮ್ಯಾನುಯಲ್ ಅಥವಾ 7 ಸ್ಪೀಡ್ ಸಿವಿಟಿ ಟ್ರಾನ್ಸ್‌ಮಿಷನ್‌ ಅನ್ನು ಹೊಂದಿವೆ.

ಹೊಸ Honda Amaze ಕಾರು ರಿವ್ಯೂ

ಪೆಟ್ರೋಲ್ ಮಾದರಿಯು 88 ಬಿ‌ಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಡೀಸೆಲ್ ಮಾದರಿಯು 98.6 ಬಿ‌ಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿವಿಟಿ ಹೊಂದಿರುವ ಮಾದರಿಯು 78.9 ಬಿ‌ಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ Honda Amaze ಕಾರು ರಿವ್ಯೂ

ನಾವು 1.2 ಲೀಟರ್ ಐ ವಿಟೆಕ್ ಎಂಜಿನ್ ಹೊಂದಿರುವ ಕಾರ್ ಅನ್ನು ಚಾಲನೆ ಮಾಡಿದೆವು. ಈ ಮಾದರಿಯಲ್ಲಿ ಪವರ್ ಡೆಲಿವರಿ ಲಿನಿಯರ್ ಆಗಿದ್ದು, ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ.

ಹೊಸ Honda Amaze ಕಾರು ರಿವ್ಯೂ

ಕಾರು ಯಾವುದೇ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿಲ್ಲವಾದರೂ ಗೇರ್‌ಬಾಕ್ಸ್‌ನಲ್ಲಿ ಡಿ ಹಾಗೂ ಎಸ್ ಮೋಡ್‌ಗಳನ್ನು ನೀಡಲಾಗಿದೆ. ಡಿ ಮೋಡ್‌ನಲ್ಲಿ, ಗೇರ್‌ಗಳು ವೇಗವಾಗಿ ಶಿಫ್ಟ್ ಆಗುತ್ತವೆ.

ಹೊಸ Honda Amaze ಕಾರು ರಿವ್ಯೂ

ಈ ಕಾರು ಇಕೋ ಲೈಟ್ ನಲ್ಲಿ ಸುಮಾರು 85 ಕಿ.ಮೀಗಳವರೆಗಿನ ವೇಗದಲ್ಲಿ ಚಲಿಸುತ್ತದೆ. ಇದರಿಂದ ಗರಿಷ್ಠ ಇಂಧನ ದಕ್ಷತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಎಸ್ ಮೋಡ್‌ನಲ್ಲಿ ಕಾರು ದೀರ್ಘಾವಧಿಯವರೆಗೆ ಗೇರ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಥ್ರೊಟಲ್ ರೆಸ್ಪಾನ್ಸ್ ಗಮನಾರ್ಹವಾದ ಅಂತರದಿಂದ ತೀಕ್ಷ್ಣವಾಗುತ್ತದೆ.

ಹೊಸ Honda Amaze ಕಾರು ರಿವ್ಯೂ

ಹಳೆಯ ಮಾದರಿಯಂತೆ ಹೊಸ ಮಾದರಿಯಲ್ಲೂ ಸಹ ಪ್ಯಾಡಲ್ ಶಿಫ್ಟರ್ ನೀಡಲಾಗಿದೆ. ಈ ಕಾರಿನಲ್ಲಿರುವ ಸಸ್ಪೆಂಷನ್ ಸೆಟಪ್ ಸಾಫ್ಟ್ ಆಗಿದ್ದು, ರೋಡ್ ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿ ಸರಾಗವಾಗಿ ಚಲಿಸುತ್ತದೆ.

ಹೊಸ Honda Amaze ಕಾರು ರಿವ್ಯೂ

ಈ ಕಾರಿನ ಇನ್ಸುಲೇಶನ್ ಲೆವೆಲ್ ಉತ್ತಮವಾಗಿದೆ. ಆದರೆ ಆಕ್ಸಲರೇಷನ್ ಅನ್ನು ಬಲವಾಗಿ ಒತ್ತುವುದರಿಂದ ಇಂಜಿನ್‌ನಿಂದ ನಿರಂತರ ಶಬ್ದ ಉಂಟಾಗುತ್ತದೆ. ಸ್ಟೀಯರಿಂಗ್ ವ್ಹೀಲ್ ಹಗುರವಾಗಿದ್ದು ಇನ್ ಪುಟ್ ಗಳಿಗೆ ಹೆಚ್ಚು ರೆಸ್ಪಾನ್ಸ್ ಹೊಂದಿದೆ.

ಹೊಸ Honda Amaze ಕಾರು ರಿವ್ಯೂ

ಸಸ್ಪೆಂಷನ್ ಸೆಟಪ್‌ ಸಾಫ್ಟ್ ಆಗಿರುವುದರಿಂದ ಸ್ಟೀಯರಿಂಗ್ ವ್ಹೀಲ್ ಅನ್ನು ಬಲವಾಗಿ ಫ್ಲಿಕ್ ಮಾಡಿದರೆ, ಕಾರು ವೇಗವಾಗಿ ಲೇನ್‌ಗಳನ್ನು ಬದಲಿಸುತ್ತದೆ. ನಾವು ಈ ಕಾರನ್ನು ಒಂದೆರಡು ಗಂಟೆಗಳ ಕಾಲ ಮಾತ್ರ ಚಾಲನೆ ಮಾಡಿದ ಕಾರಣ ಇಂಧನ ದಕ್ಷತೆಯ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ.

ಹೊಸ Honda Amaze ಕಾರು ರಿವ್ಯೂ

ಆದರೆ ಮ್ಯಾನುಯಲ್ ಹಾಗೂ ಸಿವಿಟಿ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲಿಗೆ ಸುಮಾರು 18 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮತ್ತೊಂದೆಡೆ ಮ್ಯಾನುಯಲ್ ಡೀಸೆಲ್ ಮಾದರಿಯು ಪ್ರತಿ ಲೀಟರ್ ಡೀಸೆಲ್ ಗೆ 24 ಕಿ.ಮೀ ಹಾಗೂ ಸಿವಿಟಿ ಮಾದರಿಯು ಪ್ರತಿ ಲೀಟರ್ ಡೀಸೆಲ್ ಗೆ 21 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

ಹೊಸ Honda Amaze ಕಾರು ರಿವ್ಯೂ

ಸುರಕ್ಷತೆ ಹಾಗೂ ಪ್ರಮುಖ ಫೀಚರ್'ಗಳು

Honda Amaze ಕಾರಿನಲ್ಲಿ ಸುರಕ್ಷತೆಗಾಗಿ

- ಡ್ಯುಯಲ್ ಏರ್‌ಬ್ಯಾಗ್‌

- ಆಟೋಮ್ಯಾಟಿಕ್ ಹೆಡ್‌ಲೈಟ್ ಕಂಟ್ರೋಲ್

- ರೇರ್ ಪಾರ್ಕಿಂಗ್ ಕ್ಯಾಮೆರಾ

- ಇಬಿಡಿ ಹೊಂದಿರುವ ಎಬಿಎಸ್

- ಮಕ್ಕಳ ಸೀಟುಗಳಿಗಾಗಿ ಐಸೋಫಿಕ್ಸ್ ಮೌಂಟ್

- ಇಂಜಿನ್ ಇಂಬೊಬಿಲೈಜರ್ ಗಳನ್ನು ನೀಡಲಾಗಿದೆ.

ಹೊಸ Honda Amaze ಕಾರು ರಿವ್ಯೂ

Honda Amaze ಕಾರು

- ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್

- 7.0 ಇಂಚಿನ ಟಚ್‌ಸ್ಕ್ರೀನ್

- ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್

- ವಾಯ್ಸ್ ಕಮ್ಯಾಂಡ್

- ಕ್ರೂಸ್ ಕಂಟ್ರೋಲ್

- ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

- ಪವರ್ಡ್ ಒಆರ್‌ವಿ‌ಎಂಗಳನ್ನು ಹೊಂದಿದೆ.

ಹೊಸ Honda Amaze ಕಾರು ರಿವ್ಯೂ

ಮಾದರಿಗಳು

Honda Amaze ಕಾರ್ ಅನ್ನು ಇ, ಎಸ್ ಹಾಗೂ ವಿಎಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ Honda Amaze ಕಾರು ರಿವ್ಯೂ

ಇ ಮಾದರಿಯನ್ನು ಮ್ಯಾನುಯಲ್ ಗೇರ್ ಬಾಕ್ಸ್ ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಇನ್ನು ಎಸ್ ಹಾಗೂ ವಿಎಕ್ಸ್ ಮಾದರಿಗಳನ್ನು ಮ್ಯಾನುಯಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ Honda Amaze ಕಾರು ರಿವ್ಯೂ

Honda Amaze ಕಾರ್ ಅನ್ನು ಮೆಟಿಯೊರಾಡ್ ಗ್ರೇ ಮೆಟಾಲಿಕ್, ರೆಡಿಯಂಟ್ ರೆಡ್, ಪ್ಲಾಟಿನಂ ವೈಟ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೋಲ್ಡನ್ ಬ್ರೌನ್ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ Honda Amaze ಕಾರು ರಿವ್ಯೂ

ನಾವು ಗೋಲ್ಡನ್ ಬ್ರೌನ್ ಮೆಟಾಲಿಕ್ ಬಣ್ಣದಲ್ಲಿದ್ದ ಕಾರ್ ಅನ್ನು ಚಾಲನೆ ಮಾಡಿದೆವು. ಈ ಕಾರು ವಿಎಕ್ಸ್ ಮಾದರಿಯಾಗಿದ್ದು ಹಲವಾರು ಫೀಚರ್ ಗಳನ್ನು ಹೊಂದಿತ್ತು. ಮತ್ತೊಂದೆಡೆ ಇ ಮಾದರಿಯು ಬೇಸಿಕ್ ಮಾದರಿಯಾಗಿದೆ.

ಹೊಸ Honda Amaze ಕಾರು ರಿವ್ಯೂ

Honda Amaze ಇ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 6.32 ಲಕ್ಷಗಳಿಂದ ಆರಂಭವಾದರೆ, ವಿ‌ಎಕ್ಸ್ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 11.15 ಲಕ್ಷಗಳಾಗಿದೆ.

ಹೊಸ Honda Amaze ಕಾರು ರಿವ್ಯೂ

ಮಾದರಿಗಳು ಹಾಗೂ ಬೆಲೆ

ಮಾದರಿಗಳು ಪೆಟ್ರೋಲ್ ಡೀಸೆಲ್
E MT ₹.6.32 ಲಕ್ಷ ₹.8.66 ಲಕ್ಷ
S MT ₹.7.16 ಲಕ್ಷ ₹.9.26 ಲಕ್ಷ
S CVT ₹.8.06 ಲಕ್ಷ -
VX MT ₹.8.22 ಲಕ್ಷ ₹.10.25 ಲಕ್ಷ
VX CVT ₹.9.05 ಲಕ್ಷ ₹.11.15 ಲಕ್ಷ
ಹೊಸ Honda Amaze ಕಾರು ರಿವ್ಯೂ

ಪ್ರತಿಸ್ಪರ್ಧಿಗಳು

ವಿಶೇಷತೆಗಳು Honda Amaze Maruti Dzire Tata Tigor Ford Aspire
ಎಂಜಿನ್ 1.2-litre Petrol / 1.5-litre Turbo-Diesel 1.2-litre Petrol 1.2-litre Petrol 1.2-litre Petrol / 1.5-litre Turbo-Diesel
ಪವರ್ 88bhp / 98bhp 88.5bhp 84.5bhp 95bhp / 99bhp
ಟಾರ್ಕ್ 110Nm / 200Nm 113Nm 113Nm 119Nm / 215Nm
ಟ್ರಾನ್ಸ್ ಮಿಷನ್ 5-speed Manual / CVT 5-speed Manual / 5-speed AMT 5-speed Manual / 5-speed AMT 5-speed Manual
ಬೆಲೆಗಳು Rs 6.32 lakh to Rs 11.15 lakh Rs 5.98 lakh to Rs 9.02 lakh Rs 5.64 lakh to Rs 7.81 lakh Rs 7.28 lakh to Rs 8.73
Most Read Articles

Kannada
English summary
2021 honda amaze review design style interior exterior engine performance other details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X