ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ತನ್ನ ಫೇಸ್‌ಲಿಫ್ಟೆಡ್ ಎಕ್ಸ್ 1 ಎಸ್‌ಯುವಿಯನ್ನು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.35.90 ಲಕ್ಷಗಳಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಬಿಎಂಡಬ್ಲ್ಯು ಎಕ್ಸ್1 ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಟ್ರಿ ಲೆವೆಲ್ ಐಷಾರಾಮಿ ಎಸ್‍ಯುವಿಗಳಲ್ಲಿ ಇದು ಕೂಡ ಒಂದಾಗಿದೆ. ಈ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿಯನ್ನು ನಾವು ನಗರದ ಸುತ್ತಲೂ ಹೆದ್ದಾರಿಯಲ್ಲೂ ಓಡಿಸಿದ್ದೇವೆ. ಈ ಎಸ್‍ಯುವಿ ನಮ್ಮನ್ನು ಅನೇಕ ವಿಷಯಗಳಲ್ಲಿ ಆಕರ್ಷಿಸಿತು. ಇದರ ಜೊತೆಗೆ ಕಾರಿನ ಇತರ ಪ್ರಮುಖ ವಿಷಯಗಳು ಮತ್ತು ಡ್ರೈವಿಂಗ್ ಅನುಭವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ವಿನ್ಯಾಸ

ನಾವು ಡ್ರೈವ್ ಮಾಡಿದ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಕಾರು ಆರೆಂಜ್ ಬಣ್ಣದಲ್ಲಿ. ಈ ಬಿಎಂಡಬ್ಲ್ಯು ಎಕ್ಸ್1 ಆಕರ್ಷಕ ಲುಕ್ ಅನ್ನು ಹೊಂದಿದೆ. ಇದರಲ್ಲಿ ಬಿಎಂಡಬ್ಲ್ಯು ಸಿಗ್ನೇಚರ್ ಎಲ್ಇಡಿ ಹೆಡ್ ಲೈಟ್ ಗಳನ್ನು ಹೊಂದಿದೆ. ಇನ್ನು ಎಲ್ಇಡಿ ಡಿಆರ್ಎಲ್ ಗಳನ್ನು ಕೂಡ ನೀಡಿದ್ದಾರೆ. ಈ ಎಲ್ಇಡಿಗಳು ಉತ್ತಮ ಗೋಚರತೆಯಿಂದ ಕೂಡಿದೆ. ರಾತ್ರಿ ಸಮಯದಲ್ಲಿ ರಸ್ತೆಗಳು ಸ್ಪಷ್ಟವಾಗಿ ಕಾಣುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಈ ಕಾರಿನಲ್ಲಿ ಫಾಗ್ ಲ್ಯಾಂಪ್ ಗಳನ್ನು ಬಂಪರ್‌ನ ಕಳಭಾಗದಲ್ಲಿ ಇರಿಸಲಾಗಿದೆ. ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಮತ್ತು ಇದರ ಬದಿಗಳಲ್ಲಿಯೂ ವೆಂಟ್ಸ್ ಗಳನ್ನು ಪಡೆಯುತ್ತದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಇತರ ಬಿಎಂಡಬ್ಲ್ಯು ಮಾದರಿಗಳಿಗಿಂತ ಭಿನ್ನವಾಗಿ, ಎಕ್ಸ್1 20ಡಿ ಮುಂಭಾಗದ ಗ್ರಿಲ್‌ನಲ್ಲಿ ವೆಂಟ್ಸ್ ಗಳನ್ನು ಹೊಂದಿಲ್ಲ. ಈ ಎಸ್‍ಯುವಿಯು ದೊಡ್ಡ ಸಿಂಗಲ್-ಪೀಸ್ ಗ್ರಿಲ್ ಜೊತೆಗೆ ಮುಂಭಾಗದಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಅನ್ನು ಪಡೆಯುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಇನ್ನು ಈ ಎಕ್ಸ್1 ಎಸ್‍ಯುವಿಯ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇದರಲ್ಲಿ 17 ಇಂಚಿನ ಸಿಂಗಲ್-ಟೋನ್ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಒಟ್ಟಾರೆಯಾಗಿ ಎಸ್‍ಯುವಿಯ ಗಾತ್ರದೊಂದಿಗೆ ಚೆನ್ನಾಗಿ ಸಂಯೋಜಿಸುತ್ತದೆ. ಈ ಎಸ್‍ಯುವಿಯಲ್ಲಿ ಬಾಡಿಲೈನ್ ಬದಲಿಗೆ ಸಣ್ಣ ಲೈನ್ ಗಳು ಮತ್ತು ಕ್ರೀಸ್‌ಗಳನ್ನು ಹೊಂದಿದೆ, ಇವುಗಳನ್ನು ಹೆಡ್‌ಲೈಟ್‌ನಿಂದ ಟೈಲ್‌ಲೈಟ್ ವರೆಗೆ ನೀಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಎಕ್ಸ್1 ಬಾಡಿ ಬಣ್ಣದ ಒಆರ್ವಿಎಂಗಳನ್ನು ಇಂಟಿಗ್ರೇಟೆಡ್ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಗಳನ್ನು ಪಡೆಯುತ್ತದೆ, ಇನ್ನು ಇದರ ಕೆಳಭಾಗವನ್ನು ಮ್ಯಾಟ್ ಕಪ್ಪು ಬಣ್ಣದಲ್ಲಿದೆ. ಕ್ರೋಮ್ ಬದಲಿಗೆ ವಿಂಡೋಗಳ ಸುತ್ತಲೂ ಕಪ್ಪು ಬಣ್ಣದ ಪಿಲ್ಲರ್ ಗಳನ್ನು ಹೊಂದಿವೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಬಿಎಂಡಬ್ಲ್ಯು ಎಕ್ಸ್1 ಕಾರಿನ ಒಳಭಾಗದಲ್ಲಿ ಒಂದೆರಡು ವಿಷಯಗಳು ನಿಮ್ಮ ಗಮನವನ್ನು ಸೆಳೆಯುತ್ತವೆ. ಮೊದಲನೆಯದಾಗಿ ನಯವಾದ ಕಾಣುವ ಟೈಲ್ ಲ್ಯಾಂಪ್ ಯುನಿಟ್ ಮತ್ತು ಎರಡನೆಯದಾಗಿ ದೊಡ್ಡ ಡ್ಯುಯಲ್-ಟಿಪ್ ಎಕ್ಸಾಸ್ಟ್ ಆಗಿದೆ. ಇದು ಕಾರಿಗೆ ಇನ್ನಷ್ಟು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಎಕ್ಸ 1 ಬ್ಯಾಡ್ಜ್ ಮತ್ತು ‘ಎಸ್-ಡ್ರೈವ್ 20ಡಿ' ಬ್ಯಾಡ್ಜಿಂಗ್ ಕ್ರೋಮ್‌ನಿಂದ ಕೂಡಿದೆ. ಇನ್ನು ಈ ಎಸ್‍ಯುವಿಯಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಪಾರ್ಕಿಂಗ್ ಸೆನ್ಸರ್‌ಗಳಿದ್ದು ಬಿಗಿಯಾದ ಸ್ಥಳಗಳಲ್ಲಿ ವಾಹನ ನಿಲುಗಡೆ ಸುಲಭವಾಗುತ್ತದೆ. ಒಟ್ಟಾರೆಯಾಗಿ, ಹೊರಭಾಗದಲ್ಲಿ ಫೇಸ್ ಲಿಫ್ಟೆಡ್ ಎಕ್ಸ್1 ನಿಜವಾಗಿಯೂ ಅದ್ಭುತವಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಇಂಟಿರಿಯರ್ ಮತ್ತು ಫೀಚರ್ಸ್‌ಗಳು

ಬಿಎಂಡಬ್ಲ್ಯು ಎಕ್ಸ್1 ಎಸ್‍ಯುವಿಯು ಒಳಭಾಗವು ಐಷಾರಾಮಿ ಲುಕ್ ನಿಂದ ಕೂಡಿದೆ. ಈ ಎಸ್‍ಯುವಿಯಲ್ಲಿ ದೊಡ್ಡ ಪನೋರಮಿಕ್ ಸನ್‌ರೂಫ್ ಕ್ಯಾಬಿನ್ ನಿಜವಾಗಿರುವುದಕ್ಕಿಂತ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಬಿಎಂಡಬ್ಲ್ಯು ಎಕ್ಸ್1 ಸಾಕಷ್ಟು ಫೀಚರ್ಸ್‌ಗಳು, ಉಪಕರಣಗಳು ಮತ್ತು ತಂತ್ರಜ್ಞಾನಗಳಿಂದ ಕೂಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಈ ಎಸ್‍ಯುವಿಯ ಡ್ಯಾಶ್‌ಬೋರ್ಡ್‌ನಲ್ಲಿ 8.8-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಉತ್ತಮ ಟಚ್ ರೆಸ್ಪಾನ್ಸ್ ಅನ್ನು ಹೊಂದಿದೆ. ಇದು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ. ಆದರೆ ಇದರಲ್ಲಿ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ನೀಡಲಾಗಿಲ್ಲ. ಆದರೆ ಭವಿಷ್ಯದಲ್ಲಿ ಬಿಎಂಡಬ್ಲ್ಯು ಈ ಫೀಚರ್ ಅನ್ನು ಆಪ್ಡೇಟ್ ಮಾಡಬಹುದು.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಬಿಎಂಡಬ್ಲ್ಯು ಎಕ್ಸ್1 ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಮ್ಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.ಇದು ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ, ಆದರೆ ಚಾಲಕನ ಅಗತ್ಯಗಳಿಗೆ ಅನುಗುಣವಾಗಿ ಕಾನ್ಫಿಗರ್ ಮಾಡಲು ಅಥವಾ ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಈ ಎಸ್‍ಯುವಿಯ ಅಂಬೈಟ್ ಲೈಟ್ ನೊಂದಿಗೆ ಇದರ ಡ್ಯಾಶ್‌ಬೋರ್ಡ್‌ ಅನ್ನು ಅಂದವಾಗಿ ಸಂಯೋಜಿಸಲಾಗಿದೆ. ಇದರ ಡ್ಯಾಶ್‌ಬೋರ್ಡ್‌ನಲ್ಲಿ ಬಳಸುವ ಮರದ ಟ್ರಿಮ್ ಮತ್ತು ಅಸ್ಸೆಂಟ್ ಗಳು ಇದಕ್ಕೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಡ್ಯಾಶ್‌ಬೋರ್ಡ್ ಮತ್ತು ಡೋರುಗಳ ಪ್ಯಾನೆಲ್ ಗಳಲ್ಲಿ ಸ್ಪಾಟ್ ಟಚ್ ವಸ್ತುಗಳನ್ನು ನೀಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಡ್ಯುಯಲ್-ಝೋನ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಇದರ ಮಾಹಿತಿಗಳನು ಎಲ್‌ಸಿಡಿಯಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರತಿಯೊಂದು ಡೋರಿನಲ್ಲಿ ಬಾಟಲ್ ಹೋಲ್ಡರ್ ಇದೆ ಮತ್ತು ಸ್ಟ್ರೋರೇಜ್ ಸ್ಪೇಸ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ಅನ್ನು ಲೆದರ್ ನಿಂದ ಸುತ್ತಲಾಗಿದೆ. ಅಲ್ಲದೇ ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಇರಿಸಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಇನ್ನು ಡ್ರೈವರ್ ಸೀಟ್ ಎರಡು ಸೆಟ್ಟಿಂಗ್‌ಗಳೊಂದಿಗೆ ಮೆಮೊರಿ ಕಾರ್ಯವನ್ನು ಪಡೆಯುತ್ತದೆ. ಮುಂಭಾಗದ ಸೀಟ್ ಆರಾಮದಾಯಕವಾಗಿದ್ದರೂ ಸ್ವಲ್ಪ ಹೆಚ್ಚು ಮೆತ್ತನೆಯಿರಬಹುತ್ತಿತ್ತು. ಈ ಸೀಟ್ ಸೈಡ್ ಬೋಲ್ಸ್ಟರ್‌ಗಳನ್ನು ಪಡೆಯುತ್ತದೆ, ಆದರೆ ಲಾಂಗ್ ಡ್ರೈವ್ ಹೋಗುವಾಗ ಆಯಾಸಗೊಳ್ಳಬಹುದು.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಹಿಂಭಾಗದಲ್ಲಿ ಸೀಟಿನಲ್ಲಿ ಯೋಗ್ಯವಾದ ಲೆಗ್ ರೂಂ ಮತ್ತು ಹೆಡ್ ರೂಂ ಪಡೆಯುತ್ತದೆ. ಹಿಂದಿನ ಸೀಟ್ ಎರಡು ಜನರಿಗೆ ಸೂಕ್ತವಾಗಿದೆ. ಲಾಂಗ್ ಡ್ರೈವ್ ಹೋಗುವಾಗ ಮೂರು ಜನ ಕುಳಿತುಕೊಂಡರೆ, ಅಷ್ಟು ಕಂಫರ್ಟ್ ಅನ್ನು ನೀಡುವುದಿಲ್ಲ. ಹಿಂಭಾಗದಲ್ಲಿ ಎರಡು ಎಸಿ ವೆಂಟ್ ಮತ್ತು ರಡು ಟೈಪ್-ಸಿ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪಾಯಿಂಟ್ ಗಳಿವೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಎಂಜಿನ್

ಬಿಎಂಡಬ್ಲ್ಯು ಎಕ್ಸ್1 ಎಸ್‍ಯುವಿಯಲ್ಲಿ ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಎಕ್ಸ್1 ಫ್ರಂಟ್-ವೀಲ್-ಡ್ರೈವ್ ಕಾರ್ ಆಗಿರುವುದರಿಂದ, ಟಲ್ ಅನ್ನು ನೆಲಕ್ಕೆ ಇಳಿಸಿದಾಗ ಸಾಕಷ್ಟು ಟಾರ್ಕ್ ಸ್ಟಿಯರ್ ಇರುತ್ತದೆ. ವಿಶೇಷವಾಗಿ ಮೊದಲ ಮೂರು ಗೇರ್‌ಗಳಲ್ಲಿ, ಫ್ರಂಟ್-ವ್ಹೀಲ್-ಡ್ರೈವ್ ಸೆಟಪ್‌ನಿಂದ ಪ್ರಚೋದಿಸಲ್ಪಟ್ಟ ಟಾರ್ಕ್ ಸ್ಟಿಯರ್‌ನಿಂದಾಗಿ ಕಾರು ಎಲ್ಲೆಡೆ ಚಲಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ನೀವು ಸ್ಟೀರಿಂಗ್ ವ್ಹೀಲ್ ಅನ್ನು ಸಾಕಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಈ ಎಸ್‍ಯುವಿಯು ಹಿಂದಿನ ಮಾದರಿಗಿಂತ ಕಡಿಮೆ ತೂಕವನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಬಿಎಂಡಬ್ಲ್ಯು ಎಕ್ಸ್1 ಎಸ್‍ಯುವಿಯಲ್ಲಿ ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿವೆ. ಇಕೋ ಪ್ರೊ ಮೋಡ್ ನಲ್ಲಿ ಮೋಡ್‌ನಲ್ಲಿ ಸ್ಟೀಯರಿಂಗ್ ಹಗುರವಾಗಿರುತ್ತದೆ ಮತ್ತು ಥ್ರೊಟಲ್ ರೆಸ್ಪಾನ್ಸ್ ಮಂದವಾಗಿರುತ್ತದೆ, ಆದರೆ ಇದು ಇಂಧನವನ್ನು ಉಳಿಸುತ್ತದೆ. ಕಂಫರ್ಟ್ ಮೋಡ್‌ನಲ್ಲಿ, ಸ್ಟೀರಿಂಗ್ ಮತ್ತು ಥ್ರೊಟಲ್ ರೆಸ್ಪನ್ಸ್ ಸ್ವಲ್ಪ ಸುಧಾರಿಸುತ್ತದೆ. ಸ್ಪೋರ್ಟ್ ಮೋಡ್‌ನಲ್ಲಿ, ಥ್ರೊಟಲ್ ರೆಸ್ಪಾನ್ಸ್ ತೀಕ್ಷ್ಣವಾಗುತ್ತದೆ ಮತ್ತು ಸ್ಟೀಯರಿಂಗ್ ಗಟ್ಟಿಯಾಗುತ್ತದೆ

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಫೇಸ್‌ಲಿಫ್ಟೆಡ್ ಎಕ್ಸ್1 ನಲ್ಲಿನ ಸಸ್ಪೆಂಕ್ಷನ್ ಸೆಟಪ್ ಸ್ವಲ್ಪ ಮೃದುವಾದ ಬದಿಯಲ್ಲಿದೆ ಮತ್ತು ಇದಕ್ಕೆ ಕಾರಣ ಕಂಪನಿಯು ಆರಾಮದಾಯಕ ಸವಾರಿಯನ್ನು ನೀಡಲು ಬಯಸಿದೆ. ಸಸ್ಪೆಂಕ್ಷನ್ ಸೆಟಪ್ ಉತ್ತಮವಾಗಿದೆ. ಎಲ್ಲಾ ಉಬ್ಬುಗಳು ಮತ್ತು ಗುಂಡಿಗಳನ್ನು ಸುಲಭವಾಗಿ ಚಲಿಸುತ್ತದೆ. ಎನ್‌ವಿಹೆಚ್ ಮತ್ತು ಇನ್ಸ್ ಲೇಷನ್ ಮಟ್ಟವು ಅತ್ಯುತ್ತಮವಾಗಿದೆ

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಇನ್ನು ಬಿಎಂಡಬ್ಲ್ಯು ಎಕ್ಸ್1 ಎಸ್‍ಯುವಿಯಲ್ಲಿ ಸ್ವಲ್ಪ ಪ್ರಮಾಣದ ಬಾಡಿ ರೋಲ್ ಅನ್ನು ಹೊಂದಿದೆ. ಆದರೆ ಸ್ಟೀಯರಿಂಗ್ ರೆಸ್ಪಾನ್ಸ್ ಅದ್ಭುತವಾಗಿದೆ ಮತ್ತು ಕಾರು ಸಣ್ಣದೊಂದು ಸ್ಟೀಯರಿಂಗ್ ಇನ್‌ಪುಟ್‌ನಲ್ಲಿ ಲೇನ್‌ಗಳನ್ನು ಬದಲಾಯಿಸುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಮೈಲೇಜ್

ಬಿಎಂಡಬ್ಲ್ಯು ಎಕ್ಸ್1 ಎಸ್‍ಯುವಿಯು ನಗರ ಪ್ರದೇಶಗಳಲ್ಲಿ ಪ್ರತಿ ಲೀಟರ್‌ಗೆ 12 ರಿಂದ 14 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ಐಷಾರಾಮಿ ಕಾರು ಇಷ್ಟು ಮೈಲೇಜ್ ನೀಡುವುದು ಬೆರಗುಗೊಳಿಸುತ್ತದೆ. ಇನ್ನು ಹೆದ್ದಾರಿಯಲ್ಲಿ ಮೈಲೇಜ್ ಟೆಸ್ಟ್ ಮಾಡಲು ಸಾಧ್ಯವಾಗಲಿಲ್ಲ ಆದರೆ ಹೆದ್ದಾರಿಯಲ್ಲಿ ಪ್ರತಿ ಲೀಟರ್‌ಗೆ 19 ಕಿ.ಮೀ ನಿಂದ 20 ಕಿ.ಮೀ ನಡುವೆ ಮೈಲೇಜ್ ಲಭ್ಯವಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ

ಡ್ರೈವ್‌ಸ್ಪಾಕ್ ಅಭಿಪ್ರಾಯ

ಬಿಎಂಡಬ್ಲ್ಯು ಫೇಸ್‌ಲಿಫ್ಟೆಡ್ ಎಕ್ಸ್1 ದೇಶಿಯ ಮಾರುಕಟ್ಟೆಯಲ್ಲಿ ಜರ್ಮನ್ ಬ್ರ್ಯಾಂಡ್ ನೀಡುವ ಎಂಟ್ರಿ ಲೆವೆಲ್ ಎಸ್‌ಯುವಿಯಾಗಿದೆ. ಈ ಎಸ್‍ಯುವಿಯು ಉತ್ತಮ ಕಂಫರ್ಟ್ ಮತ್ತು ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿವೆ. ಈ ಬಿಎಂಡಬ್ಲ್ಯು ಎಕ್ಸ್1 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಮತ್ತು ಆಡಿ ಕ್ಯೂ3 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
BMW X1 S-Drive 20d Road Test Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X