Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್‌ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆ
- News
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
- Sports
ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಸ್ಟ್ ಡ್ರೈವ್ ರಿವ್ಯೂ: ಸಿ5 ಏರ್‌ಕ್ರಾಸ್ ಎಸ್‌ಯುವಿಯೊಂದಿಗೆ ಭಾರತದಲ್ಲಿ ಹೊಸ ಅಧ್ಯಾಯ ಶುರುಮಾಡಿದ ಸಿಟ್ರನ್
ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿಯಾದ ಸಿಟ್ರನ್ 1919ರಿಂದ ಕಾರ್ಯಾಚರಣೆ ನಡೆಸುತ್ತಿದೆ. ತನ್ನ 100 ವರ್ಷಗಳ ಇತಿಹಾಸದಲ್ಲಿ ಪ್ರಪಂಚದಾದ್ಯಂತದ ವಿವಿಧ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದೀಗ ಭಾರತದಲ್ಲೂ ಹೊಸ ಅಧ್ಯಾಯ ಆರಂಭಿಸುತ್ತಿದ್ದು, ಮುಂಚೂಣಿ ಕಾರು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಸಿಟ್ರನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಕಾರ್ ಆಗಿ ಸಿ5 ಏರ್‌ಕ್ರಾಸ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿಯು 2020ರಲ್ಲಿಯೇ ಈ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಯೋಜಿಸಿತ್ತಾದರೂ ಕರೋನಾ ವೈರಸ್ ಕಾರಣದಿಂದಾಗಿ ತನ್ನ ಯೋಜನೆಯನ್ನು ಮುಂದೂಡಿತ್ತು.

ಸಿ5 ಏರ್‌ಕ್ರಾಸ್ ಎಸ್‌ಯುವಿಯು ಹಲವಾರು ಫೀಚರ್ ಹಾಗೂ ಸಾಧನಗಳನ್ನು ಹೊಂದಿದೆ. ಭಾರತದ ಪರಿಸ್ಥಿತಿಗಳಿಗೆ ಈ ಕಾರು ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿಯುವ ಸಲುವಾಗಿ ನಾವು ಇತ್ತೀಚಿಗೆ ಈ ಕಾರ್ ಅನ್ನು ಚಾಲನೆ ಮಾಡಿದೆವು. ಸಿಟ್ರನ್ ಸಿ5 ಏರ್‌ಕ್ರಾಸ್ ಕಾರಿನ ಫಸ್ಟ್ ಡ್ರೈವ್ ರಿವ್ಯೂ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಿನ್ಯಾಸ ಹಾಗೂ ಶೈಲಿ
ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‌ಯುವಿಯು ವಿಶಿಷ್ಟವಾದ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಎಸ್‌ಯುವಿಯು ಮೊದಲ ನೋಟದಲ್ಲಿಯೇ ಜನರನ್ನು ತನ್ನತ್ತ ಸೆಳೆಯುತ್ತದೆ. ಈ ಎಸ್‌ಯುವಿಯ ಮುಂಭಾಗದಲ್ಲಿ ಮಸ್ಕ್ಯುಲರ್ ಬಾನೆಟ್, ಸ್ಪ್ಲಿಟ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ವಿಷನ್ ಪ್ರೊಜೆಕ್ಟರ್ ಯುನಿಟ್'ಗಳನ್ನು ಹೊಂದಿದೆ.

ಎಲ್ಇಡಿ ಡಿಆರ್‌ಎಲ್'ಗಳನ್ನು ಜೋಡಿ ಕ್ರೋಮ್ ಸ್ಟ್ರಿಪ್'ಗಳೊಂದಿಗೆ ಸಂಯೋಜಿಸಲಾಗಿದ್ದು, ಮಧ್ಯದಲ್ಲಿ ಸಿಟ್ರನ್ ಲೋಗೋವನ್ನು ಹೊಂದಿದೆ. ಕಪ್ಪು ಬಣ್ಣದಲ್ಲಿರುವ ಪ್ರೊಜೆಕ್ಟರ್ ಯುನಿಟ್ ನಯವಾದ ಗ್ರಿಲ್ ಅನ್ನು ಹಾಗೂ ಮೂರು ಹಾರಿಜಾಂಟಲ್ ಸ್ಲ್ಯಾಟ್‌ಗಳನ್ನು ಹೊಂದಿದೆ.

ಮುಂಭಾಗದ ಬಂಪರ್‌ಗಳ ಕೆಳಗೆ ಕಂಪನಿಯ ಏರ್‌ಬಂಪ್ ಪ್ರೊಟೆಕ್ಟಿವ್ ಪ್ಯಾನೆಲ್'ಗಳನ್ನು ನೀಡಲಾಗಿದೆ. ಏರ್‌ಬಂಪ್‌ಗಳ ಪಕ್ಕದಲ್ಲಿರುವ ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಕಾರ್ನರಿಂಗ್ ಲ್ಯಾಂಪ್‌ಗಳಂತೆ ದ್ವಿಗುಣಗೊಳ್ಳುತ್ತವೆ.

ಎಸ್‌ಯುವಿಯ ಎಲ್ಲಾ ಬದಿಗಳಲ್ಲಿ ಒರಟು ನೋಟದ ಚಲಿಸುವ ಕಪ್ಪು-ಕ್ಲಾಡಿಂಗ್ ನೀಡಲಾಗಿದೆ. ಸಿಟ್ರನ್ ಸಿ5 ಏರ್‌ಕ್ರಾಸ್‌ನ ಸೈಡ್ ಪ್ರೊಫೈಲ್'ನಲ್ಲಿರುವ ಕರ್ವ್ ಆದ ಪ್ಯಾನೆಲ್'ಗಳು ಈ ಎಸ್‌ಯುವಿಗೆ ಆಕರ್ಷಕ ಲುಕ್ ನೀಡುತ್ತವೆ.

ಈ ಎಸ್‌ಯುವಿಯಲ್ಲಿ ಸ್ಟ್ಯಾಂಡರ್ಡ್ ಆದ 18-ಇಂಚಿನ ಡ್ಯುಯಲ್-ಟೋನ್ ಡೈಮಂಡ್-ಕಟ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. ಈ ಎಸ್‌ಯುವಿಯಸೈಡ್ ಪ್ರೊಫೈಲ್ ಸಿ-ಶೇಪಿನ ಕ್ರೋಮ್ ಅಂಶವನ್ನು ಹೊಂದಿದೆ.

ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯಲ್ಲಿರುವ ಕಪ್ಪು ಬಣ್ಣದ ಒಆರ್‌ವಿಎಂಗಳು ಇಂಟಿಗ್ರೇಟೆಡ್ ಎಲ್‌ಇಡಿ ಟರ್ನ್ ಇಂಡಿಕೇಟರ್'ಗಳನ್ನು ಹೊಂದಿವೆ. ಈ ಎಸ್‌ಯುವಿಯ ಹಿಂಭಾಗದಲ್ಲಿರುವ 3 ಡಿ ಎಲ್ಇಡಿ ಟೈಲ್‌ಲೈಟ್‌ಗಳನ್ನು ಸ್ಟ್ಯಾಂಡ್- ಔಟ್ ಫೀಚರ್ ಆಗಿ ನೀಡಲಾಗಿದೆ.

ಈ ಎಸ್‌ಯುವಿಯು ಎಲ್‌ಇಡಿ ಸ್ಟಾಪ್ ಲ್ಯಾಂಪ್ ಹೊಂದಿರುವ ರೂಫ್-ಮೌಂಟೆಡ್ ಸ್ಪಾಯ್ಲರ್ ಅನ್ನು ಹೊಂದಿದೆ. ಬೂಟ್ ಲಿಡ್ ಟೇಲ್ ಲ್ಯಾಂಪ್‌ಗಳ ನಡುವೆ ಸಿಟ್ರನ್ ಲೋಗೋವನ್ನು ಹೊಂದಿದ್ದರೆ, ಸಿ 5 ಏರ್‌ಕ್ರಾಸ್ ಬ್ಯಾಡ್ಜಿಂಗ್ ಅನ್ನು ಕೆಳಗೆ ಇರಿಸಲಾಗಿದೆ.

ಕಾಕ್‌ಪಿಟ್ ಹಾಗೂ ಇಂಟಿರಿಯರ್
ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯ ಇಂಟಿರಿಯರ್'ನಲ್ಲಿ ಪ್ರೀಮಿಯಂ ಡ್ಯಾಶ್‌ಬೋರ್ಡ್ ನೀಡಲಾಗಿದೆ. ಇಂಟಿರಿಯರ್'ನಲ್ಲಿ ನೀಡಲಾಗಿರುವ ಮೆಟ್ರೋಪಾಲಿಟನ್ ಗ್ರೇ ಬಣ್ಣವು ಪ್ರೀಮಿಯಂ ಲುಕ್ ನೀಡುತ್ತದೆ.

ಆಡಿಯೊ, ಕಾಲ್ ಅಲರ್ಟ್‌ಗಳು ಹಾಗೂ ಇತರ ಸ್ವಿಚ್‌ಗಳ ಬಗ್ಗೆ ಮಾಹಿತಿ ಪಡೆಯಲು ದೊಡ್ಡ ಸ್ಟೀಯರಿಂಗ್ ವ್ಹೀಲ್ ನೀಡಲಾಗಿದೆ. 12.3-ಇಂಚಿನ ಟಿಎಫ್‌ಟಿ ಸ್ಕ್ರೀನ್'ನಿಂದ ಮಾಡಲ್ಪಟ್ಟಿರುವ ಇದನ್ನು ಡ್ರೈವಿಂಗ್ ಮೋಡ್'ಗಳ ಅನ್ವಯ ಕಸ್ಟಮೈಸ್ ಮಾಡಬಹುದು.

ಸಿಲ್ವರ್ ಅಸೆಂಟ್'ನಲ್ಲಿರುವ ಸ್ಟೀಯರಿಂಗ್ ವ್ಹೀಲ್ ಹಾಗೂ ಪೆಡಲ್‌ಗಳು ಎಸ್‌ಯುವಿಯ ಪ್ರೀಮಿಯಂ ಅಂಶವನ್ನು ಹೆಚ್ಚಿಸುತ್ತವೆ. ಅಗತ್ಯವಿದ್ದಾಗ ಸುಲಭವಾಗಿ ಪ್ರವೇಶಿಸಲು ನೆರವು ನೀಡಲು ಪ್ಯಾಡಲ್-ಶಿಫ್ಟರ್‌ಗಳನ್ನು ನೀಡಲಾಗಿದೆ.

ಸಿ 5 ಏರ್‌ಕ್ರಾಸ್ ಎಸ್‌ಯುವಿಯಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸ್ಕ್ರೀನ್'ನ ಎರಡೂ ಬದಿಗಳಲ್ಲಿ ಹಾಗೂ ಡ್ಯಾಶ್‌ಬೋರ್ಡ್‌ನ ಎರಡೂ ತುದಿಗಳಲ್ಲಿವರ್ಟಿಕಲ್ ಆಗಿರುವ ಡ್ಯುಯಲ್ ಸ್ಕ್ವೇರ್ ಶೇಪಿನ ಎಸಿ ವೆಂಟ್'ಗಳನ್ನು ನೀಡಲಾಗಿದೆ.

ಈ ಕಾರಿನ ಇಂಟಿರಿಯರ್'ನಲ್ಲಿ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹೊಂದಿರುವ ಇನ್ಫೋಟೇನ್'ಮೆಂಟ್ ಸಿಸ್ಟಂ, ಫಿಸಿಕಲ್ ಬಟನ್ ಮೂಲಕ ಕಂಟ್ರೋಲ್ ಮಾಡಲಾಗುವ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಮೊಬೈಲ್ ಫೋನ್‌ಗಳಿಗಾಗಿ ಸಾಕಷ್ಟು ಸ್ಥಳ, ವೈರ್‌ಲೆಸ್ ಚಾರ್ಜಿಂಗ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ 12 ವಿ ಸಾಕೆಟ್'ಗಳನ್ನು ನೀಡಲಾಗಿದೆ.

ಮುಂಭಾಗದ ಸೀಟುಗಳ ನಡುವೆ, ಸಿಟ್ರನ್ ಸಿ 5 ಏರ್‌ಕ್ರಾಸ್ ವಿಭಿನ್ನವಾದ ಪಿ, ಎನ್, ಆರ್ ಹಾಗೂ ಡಿ ಮೋಡ್‌ಗಳ ಮೂಲಕ ಟಾಗಲ್ ಮಾಡುವ ಗೇರ್ ಲಿವರ್ ಅನ್ನು ಹೊಂದಿದೆ. ಪ್ಯಾಡಲ್ ಶಿಫ್ಟರ್‌ಗಳನ್ನು ಬಳಸಿಕೊಂಡು ಮ್ಯಾನುವಲ್ ಗೇರ್ ಶಿಫ್ಟ್‌ಗಳಿಗಾಗಿ ಎಂ ಮೋಡ್ ನೀಡಲಾಗಿದೆ.

ಸೆಂಟ್ರಲ್ ಕನ್ಸೋಲ್ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಸ್ವಿಚ್ ಜೊತೆಗೆ ಇಕೋ, ಸ್ಪೋರ್ಟ್ ಡ್ರೈವಿಂಗ್ ಮೋಡ್ ಬಟನ್ ಹಾಗೂ ಎಂಜಿನ್ ಸ್ಟಾರ್ಟ್ / ಸ್ಟಾಪ್ ಬಟನ್'ಗಳನ್ನು ಹೊಂದಿದೆ.

ಸ್ಟ್ಯಾಂಡರ್ಡ್, ಸ್ನೋ, ಸ್ಯಾಂಡ್, ಆಲ್-ಟೆರೈನ್ ಹಾಗೂ ಟ್ರಾಕ್ಷನ್ ಕಂಟ್ರೋಲ್ ಆಫ್ ಅನ್ನು ಹೊಂದಿರುವ ಗ್ರಿಪ್ ಕಂಟ್ರೋಲ್ ನಡುವೆ ಟಾಗಲ್ ಮಾಡಲು ರೋಟರಿ ನಾಬ್ ನೀಡಲಾಗಿದೆ.

ಕಂಫರ್ಟ್ ಹಾಗೂ ಬೂಟ್ ಸ್ಪೇಸ್
ಸಿ 5 ಏರ್‌ಕ್ರಾಸ್‌ನಲ್ಲಿ ಲೆದರ್ ಹಾಗೂ ಫ್ಯಾಬ್ರಿಕ್'ನಿಂದ ಮಾಡಲಾದ ಸೀಟುಗಳನ್ನು ನೀಡಲಾಗಿದೆ. ಈ ಎಸ್‌ಯುವಿಯಲ್ಲಿರುವ ಡ್ರೈವರ್ ಸೀಟ್ ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದರೆ ಮುಂಭಾಗದ ಪ್ರಯಾಣಿಕರ ಸೀಟ್ 6-ವೇ ಮ್ಯಾನುವಲ್ ಅಡ್ಜಸ್ಟಬಲ್ ಆಗಿದೆ. ಚಾಲಕ ಹಾಗೂ ಪ್ರಯಾಣಿಕರ ಎರಡೂ ಸೀಟುಗಳು ಸೊಂಟದ ಬೆಂಬಲವನ್ನು ಹೊಂದಿವೆ.

ಮುಂಭಾಗದ ಸೀಟುಗಳು ಸಾಫ್ಟ್ ಆಗಿದ್ದು, ಮುಂಭಾಗದ ಪ್ರಯಾಣಿಕರಿಗೆ ಹೆಚ್ಚಿನ ಹೆಡ್‌ರೂಂ ಹಾಗೂ ಲೆಗ್ ರೂಂ ನೀಡಲಾಗಿದೆ. ಪ್ರಯಾಣಿಕರಿಗೆ ಥೈ ಸಪೋರ್ಟ್ಹಾಗೂ ಸೈಡ್ ಸಪೋರ್ಟ್ ನೀಡುವ ರೀತಿಯಲ್ಲಿ ಸೀಟುಗಳನ್ನು ಜೋಡಿಸಲಾಗಿದೆ.

ಹಿಂಭಾಗದಲ್ಲಿ ಸಿಟ್ರನ್ ಸಿ 5 ಏರ್‌ಕ್ರಾಸ್ ಮೂರು ಪೂರ್ಣ-ಗಾತ್ರದ ಸೀಟುಗಳನ್ನು ಹೊಂದಿದೆ. ಎಲ್ಲಾ ಮೂರು ಸೀಟುಗಳನ್ನು ಸ್ಲೈಡ್ ಹಾಗೂ ರೆಕ್ಲೈನ್'ನೊಂದಿಗೆಸರಿಹೊಂದಿಸಬಹುದು.

ಹೆಚ್ಚಿನ ಲಗೇಜ್ ಸ್ಪೇಸ್ ಬೇಕಾದಲ್ಲಿ ಮೂರು ಸೀಟುಗಳನ್ನು ವಿವಿಧ ರೀತಿಯಲ್ಲಿ ಸಂಪೂರ್ಣವಾಗಿ ಫೋಲ್ಡ್ ಮಾಡಬಹುದು. ಹಿಂಭಾಗದ ಸೀಟುಗಳು ಮುಂಭಾಗ ಸೀಟುಗಳಂತಹ ಸೌಕರ್ಯವನ್ನು ಹೊಂದಿವೆ.

ಹಿಂಭಾಗದಲ್ಲಿ ಮೂರು ಜನರು ಆರಾಮದಾಯಕವಾಗಿ ಕುಳಿತುಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಈ ಎಸ್‌ಯುವಿಯಲ್ಲಿ ದೊಡ್ಡ ಪನೋರಾಮಿಕ್ಸನ್‌ರೂಫ್ ಹಾಗೂ ದೊಡ್ಡ ವಿಂಡೋಗಳನ್ನು ನೀಡಲಾಗಿದೆ.

ಸಿಟ್ರನ್ ಸಿ 5 ಏರ್‌ಕ್ರಾಸ್‌ನ ಕ್ಯಾಬಿನ್ ಕಬ್ಬಿ ಸ್ಪೇಸ್, ಸ್ಟೋರೇಜ್ ಏರಿಯಾ ಹಾಗೂ ಡೋರ್ ಬಿನ್'ಗಳನ್ನು ಹೊಂದಿದೆ. ಗ್ಲೋವ್ ಬಾಕ್ಸ್ ಹೆಚ್ಚಿನ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ. ಈ ಎಸ್‌ಯುವಿಯು 580 ಲೀಟರ್ ಸ್ಪೇಸ್ ಹೊಂದಿದ್ದು, ಹಿಂಭಾಗದಲ್ಲಿರುವ ಎಲ್ಲಾ ಮೂರು ಸೀಟುಗಳನ್ನು ಫೋಲ್ಡ್ ಮಾಡಿದ ನಂತರ1630 ಲೀಟರ್'ನಷ್ಟು ಬೂಟ್ ಸ್ಪೇಸ್ ಪಡೆಯಬಹುದು.

ಗಾತ್ರ
ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯ ಗಾತ್ರವು ಇಂತಿದೆ
ಗಾತ್ರ | ಸಿಟ್ರನ್ ಸಿ 5 ಏರ್‌ಕ್ರಾಸ್ |
ಉದ್ದ | 4500 ಎಂಎಂ |
ಅಗಲ | 2099 ಎಂಎಂ |
ಎತ್ತರ | 1710 ಎಂಎಂ |
ವ್ಹೀಲ್ ಬೇಸ್ | 2730ಎಂಎಂ |
ಕನಿಷ್ಠ ಟರ್ನಿಂಗ್ ರೇಡಿಯಸ್ | 5.35 ಎಂ |
ಬೂಟ್ ಸ್ಪೇಸ್ | 580 ಲೀಟರ್ |

ಎಂಜಿನ್ ಪರ್ಫಾಮೆನ್ಸ್ ಹಾಗೂ ಚಾಲನಾ ಅನಿಸಿಕೆಗಳು
ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ಒಂದೇ ಎಂಜಿನ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯಲ್ಲಿರುವ 2.0-ಲೀಟರಿನ (1997 ಸಿಸಿ) ಡೀಸೆಲ್ ಎಂಜಿನ್ 3750 ಆರ್‌ಪಿಎಂನಲ್ಲಿ 175 ಬಿಹೆಚ್‌ಪಿ ಪವರ್ ಹಾಗೂ 2000 ಆರ್‌ಪಿಎಂನಲ್ಲಿ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್'ನೊಂದಿಗೆ ಸ್ಟಾಂಡರ್ಡ್ ಆದ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಗೇರ್‌ಬಾಕ್ಸ್ ಫೋರ್ ವ್ಹೀಲ್ ಡ್ರೈವ್ ಆಯ್ಕೆಯಿಲ್ಲದೇ ಇದ್ದರೂ ಎಲ್ಲಾ ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ.

ಈ ಎಸ್‌ಯುವಿ ಆಫ್ ರೋಡ್'ನಲ್ಲಿ ಡ್ರೈವ್ ಮಾಡುವುದು ತುಸು ಕಷ್ಟದ ಕೆಲಸ. ಸಿ 5 ಏರ್‌ಕ್ರಾಸ್‌ನಲ್ಲಿರುವ ಎಂಜಿನ್ ನಯವಾಗಿದ್ದು, ಕಡಿಮೆ ಆರ್‌ಪಿಎಂಗಳಲ್ಲಿಯೂ ಎಸ್‌ಯುವಿಯನ್ನು ಚೆನ್ನಾಗಿ ಎಳೆಯುತ್ತದೆ.

ಆರಂಭದಲ್ಲಿ ತುಸು ತಿಣುಕಾಡಿದರೂ ಮಧ್ಯಮ ಶ್ರೇಣಿಯಲ್ಲಿ ಸರಾಗವಾಗಿ ಚಲಿಸುತ್ತದೆ. ಎಸ್‌ಯುವಿಯ ಈ ಕಡಿಮೆ ಹಾಗೂ ಮಧ್ಯಮ ಶ್ರೇಣಿಯ ಶಕ್ತಿಯು ತ್ವರಿತವಾಗಿ ಮೂರು-ಅಂಕಿಯ ವೇಗಕ್ಕೆ ವೇಗವಾಗಿ ಚಲಿಸಲು ನೆರವಾಗುತ್ತದೆ.

ಇದರಿಂದ ಟ್ಯಾಪ್‌ನಲ್ಲಿರುವ ಎಲ್ಲಾ ಪವರ್ ಅನ್ನು ಹಿಂದಿಕ್ಕುವುದು ಸುಲಭವಾಗುತ್ತದೆ. ಡೀಸೆಲ್ ಎಂಜಿನ್ ವೇಗವಾಗಿದ್ದರೂ, ಎಂಟು-ಸ್ಪೀಡಿನ ಟ್ರಾನ್ಸ್ ಮಿಷನ್ ಕಿಕ್‌ಡೌನ್‌ಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ಒಮ್ಮೆ ಕಾರು ಹೋದ ನಂತರ ಗೇರ್‌ಬಾಕ್ಸ್ ಹೆಚ್ಚು ಸ್ಪಂದಿಸಿ ತ್ವರಿತ ಗೇರ್ ಶಿಫ್ಟ್‌ಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಸ್ವಲ್ಪ ಸ್ಪೋರ್ಟಿ ಎಂದು ಭಾವಿಸುವವರಿಗೆ ಈ ಎಸ್‌ಯುವಿಯು ಪ್ಯಾಡಲ್-ಶಿಫ್ಟರ್‌ಗಳೊಂದಿಗೆ ಲಭ್ಯವಿದ್ದು, ಲಭ್ಯವಿರುವ ಶಕ್ತಿಯನ್ನು ಉತ್ತಮವಾಗಿ ನಿಯಂತ್ರಿಸಲು ನೆರವಾಗುತ್ತದೆ.

ಪ್ಯಾಡಲ್-ಶಿಫ್ಟರ್ ನಯವಾದ, ಸ್ಪಂದಿಸುವ ಹಾಗೂ ತ್ವರಿತವಾದ ಗೇರ್ ಶಿಫ್ಟ್ ಗಳನ್ನು ನೀಡುತ್ತದೆ. ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ಇಕೋ ಹಾಗೂ ಸ್ಪೋರ್ಟ್ ಎಂಬ ಎರಡು ಡ್ರೈವಿಂಗ್ ಮೋಡ್'ಗಳೊಂದಿಗೆ ನೀಡಲಾಗುತ್ತದೆ.

ಇಕೋ ಮೋಡ್ ಆರಾಮದಾಯಕ ಡ್ರೈವ್ ನೀಡುವುದರ ಜೊತೆಗೆ ಇಂಧನ ದಕ್ಷತೆಯ ಮೇಲೆ ಕೇಂದ್ರೀಕರಿಸುತ್ತದೆ. ಸ್ಪೋರ್ಟ್ ಮೋಡ್ ಸ್ವಲ್ಪ ನಿರಾಸೆ ಮೂಡಿಸುತ್ತದೆ. ಈ ಮೋಡ್'ನಲ್ಲಿ ಸ್ಪೀಕರ್‌ಗಳಿಂದ ನಕಲಿ ಎಂಜಿನ್ ಶಬ್ದ ಕೇಳಿ ಬರುತ್ತದೆ.

ಈ ಎಸ್‌ಯುವಿಯಲ್ಲಿರುವ ಹಗುರವಾದ ಸ್ಟೀಯರಿಂಗ್ ನಗರ ಪರಿಸ್ಥಿತಿಗಳ ಮೂಲಕ ಸುಲಭವಾಗಿ ಸಂಚರಿಸುವಾಗ ನೆರವಿಗೆ ಬರುತ್ತದೆ. ಅದರಲ್ಲೂ ಹೆದ್ದಾರಿಗಳಲ್ಲಿ ಹಾಗೂ ತಿರುಚಿದ ರಸ್ತೆಗಳಲ್ಲಿ ನೆರವಿಗೆ ಬರುತ್ತದೆ.

ಹಗುರವಾದ ಸ್ಟೀಯರಿಂಗ್ ಕಾರನ್ನು ಗಟ್ಟಿಯಾಗಿ ಚಾಲನೆ ಮಾಡುವ ವಿಶ್ವಾಸಕ್ಕೆ ಅಡ್ಡಿಯಾಗುತ್ತದೆ. ಸಿ 5 ಏರ್‌ಕ್ರಾಸ್‌ನಲ್ಲಿ ಗಮನಾರ್ಹ ಪ್ರಮಾಣದ ಬಾಡಿ ರೋಲ್ ನೀಡಲಾಗಿದೆ. ಸಿ 5 ಏರ್‌ಕ್ರಾಸ್‌ನಲ್ಲಿರುವ ಎನ್‌ವಿಹೆಚ್ ಲೆವೆಲ್ ಆಕರ್ಷಕವಾಗಿದ್ದು, ಹೊರಗಿನಿಂದ ಯಾವುದೇ ಶಬ್ದ ಬರುವುದಿಲ್ಲ.

ಎಂಜಿನ್ ಡೀಸೆಲ್'ಗಾಗಿ ಹೆಚ್ಚು ಶಾಂತವಾಗಿದ್ದು, ಹೆಚ್ಚಿನ ವೇಗದಲ್ಲಿದ್ದಾಗಲೂ ಹೆಚ್ಚು ಒತ್ತಡವನ್ನು ಅನುಭವಿಸುವುದಿಲ್ಲ. ನಾವು ಈ ಎಸ್‌ಯುವಿಯನ್ನು ಕೆಲ ಸಮಯ ಮಾತ್ರ ಚಾಲನೆ ಮಾಡಿದ ಕಾರಣ ಮೈಲೇಜ್ ಬಗ್ಗೆ ನಿಖರವಾದ ಅಂಕಿಅಂಶಗಳನ್ನು ಪರೀಕ್ಷಿಸಲು ಸಾಧ್ಯವಾಗಲಿಲ್ಲ.

ಆದರೆ ಸಿ 5 ಏರ್‌ಕ್ರಾಸ್ ಎಸ್‌ಯುವಿಯು ಪ್ರತಿ ಲೀಟರ್ ಡೀಸೆಲ್'ಗೆ ಸುಮಾರು 18.6 ಕಿ.ಮೀ ಮೈಲೇಜ್ ನೀಡಲಿದೆ ಎಂದು ಸಿಟ್ರನ್ ಕಂಪನಿ ಹೇಳಿಕೊಂಡಿದೆ.ಸಿ 5 ಏರ್‌ಕ್ರಾಸ್‌ನಲ್ಲಿ ಸಾಫ್ಟ್ ಆದ ಸಸ್ಪೆಂಷನ್ ಅಳವಡಿಸಲಾಗಿದೆ.

ಸಿಟ್ರನ್ ಕಂಪನಿಯು ಸಸ್ಪೆಂಷನ್'ಗಾಗಿ ಪ್ರೋಗ್ರೆಸ್ಸಿವ್ ಹೈಡ್ರಾಲಿಕ್ ಕುಶನ್ ಎಂಬ ಟೆಕ್ನಾಲಜಿಯನ್ನು ಸೇರಿಸಿದ್ದು, ಈ ಟೆಕ್ನಾಲಜಿಯು ಹಳ್ಳ ಗುಂಡಿಗಳಲ್ಲಿ ಸರಾಗವಾಗಿ ಸಾಗುತ್ತದೆ. ಸಿ 5 ಏರ್‌ಕ್ರಾಸ್ ಎಸ್‌ಯುವಿಯ ಎಲ್ಲಾ ನಾಲ್ಕು ಮೂಲೆಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಮಾದರಿಗಳು, ಬಣ್ಣಗಳು ಹಾಗೂ ಬೆಲೆ
ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ಫೀಲ್ ಹಾಗೂ ಶೈನ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎರಡೂ ಮಾದರಿಗಳು ಹಲವಾರು ಫೀಚರ್, ಟೆಕ್ನಾಲಜಿ ಹಾಗೂ ಬಣ್ಣಗಳಿಂದ ಕೂಡಿವೆ.

ಸಿ 5 ಏರ್‌ಕ್ರಾಸ್ ಎಸ್‌ಯುವಿಯನ್ನು ನಾಲ್ಕು ಸಿಂಗಲ್-ಟೋನ್ ಹಾಗೂ ಮೂರು ಬೈ-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸಿಂಗಲ್-ಟೋನ್ ಪೇಂಟ್ ಬಣ್ಣಗಳಲ್ಲಿ ಪರ್ಲ್ ವೈಟ್, ಕ್ಯುಮುಲಸ್ ಗ್ರೇ, ಟಿಜುಕಾ ಬ್ಲೂ ಹಾಗೂ ಪೆರ್ಲಾ ನೆರಾ ಬ್ಲ್ಯಾಕ್ ಸೇರಿದ್ದರೆ ಪೆರ್ಲಾ ನೆರಾ ಬ್ಲ್ಯಾಕ್ ಹೊರತುಪಡಿಸಿ ಮೇಲಿನ ಎಲ್ಲಾ ಬಣ್ಣಗಳು ಕಪ್ಪು ಬಣ್ಣದಲ್ಲಿರುವ ಕಾಂಟ್ರಾಸ್ಟ್ ರೂಫ್'ನೊಂದಿಗೆ ಬರುತ್ತವೆ.

ಸಿಟ್ರನ್ ಸಿ 5 ಏರ್‌ಕ್ರಾಸ್‌ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.27 ಲಕ್ಷದಿಂದ ರೂ. 30 ಲಕ್ಷಗಳಾಗುವ ಸಾಧ್ಯತೆಗಳಿವೆ.

ಸುರಕ್ಷತೆ ಹಾಗೂ ಪ್ರಮುಖ ಲಕ್ಷಣಗಳು
ಸಿ 5 ಏರ್‌ಕ್ರಾಸ್ ಎಸ್‌ಯುವಿಯು ಹಲವಾರು ಫೀಚರ್'ಗಳನ್ನು ಹೊಂದಿದೆ. ಅವುಗಳಲ್ಲಿ
ಹೆಡ್‌ಲ್ಯಾಂಪ್, ಡಿಆರ್‌ಎಲ್, ಟೇಲ್‌ಲೈಟ್, ಟರ್ನ್ ಸಿಗ್ನಲ್ ಸೇರಿದಂತೆ ಸುತ್ತಲೂ ಎಲ್ಇಡಿ ಲೈಟಿಂಗ್
18-ಇಂಚಿನ ಸ್ವಿರ್ಲ್ ಡ್ಯುಯಲ್-ಟೋನ್ ಡೈಮಂಡ್-ಕಟ್ ಅಲಾಯ್ ವ್ಹೀಲ್
ಹ್ಯಾಂಡ್ಸ್-ಫ್ರೀ ಎಲೆಕ್ಟ್ರಿಕ್ ಟೇಲ್‌ಗೇಟ್
ಪ್ರೀಮಿಯಂ ಮೆಟ್ರೋಪಾಲಿಟನ್ ಗ್ರೇ ಲೆದರ್ ಅಪ್ ಹೊಲೆಸ್ಟರಿ
8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ
12.3-ಇಂಚಿನ ಕಸ್ಟಮೈಸ್ ಮಾಡಬಹುದಾದ ಟಿಎಫ್‌ಟಿ ಇನ್ಸ್'ಟ್ರೂಮೆಂಟ್ ಕ್ಲಸ್ಟರ್
ಎಲ್ಇಡಿ ಮೂಡ್ ಲೈಟಿಂಗ್
ಪಡಲ್ ಲ್ಯಾಂಪ್
ಮ್ಯಾಜಿಕ್ ವಾಶ್
ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್
ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್
ಕೀ ಲೆಸ್ ಎಂಟ್ರಿ
ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್
ಪನೋರಾಮಿಕ್ ಸನ್‌ರೂಫ್'ಗಳು ಸೇರಿವೆ.

ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯು
6 ಏರ್‌ಬ್ಯಾಗ್
ಬ್ಲೈಂಡ್ ಸ್ಪಾಟ್ ಇನ್'ಫಾರ್ಮೇಶನ್ ಸಿಸ್ಟಂ
ಹಿಲ್-ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
ಇಬಿಡಿ ಹೊಂದಿರುವ ಎಬಿಎಸ್
ಕಾಫಿ ಬ್ರೇಕ್ ಅಲರ್ಟ್
ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್
ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ
ಪೆರಿಮೀಟರ್ / ವಾಲ್ಯೂಮೆಟ್ರಿಕ್ ಅಲಾರಂ
ಸೇರಿದಂತೆ ಹಲವಾರು ಸುರಕ್ಷತಾ ಫೀಚರ್'ಗಳನ್ನು ಹೊಂದಿದೆ.

ವಾರಂಟಿ
ಸಿಟ್ರನ್ ತನ್ನ ಎಲ್ಲ ಗ್ರಾಹಕರಿಗೆ 3 ವರ್ಷ ಅಥವಾ 1 ಲಕ್ಷ ಕಿ.ಮೀಗಳ (ಯಾವುದು ಮೊದಲೋ ಅದು) ವಾರಂಟಿ ನೀಡುತ್ತದೆ. ಈ ಆಫರ್‌ನಲ್ಲಿ ಎಕ್ಸ್'ಟೆಂಡೆಡ್ ವಾರಂಟಿ ಹಾಗೂ ಮೆಂಟೆನೆನ್ಸ್ ಪ್ಯಾಕೇಜ್‌ಗಳು ಸೇರಿವೆ. ಕಂಪನಿಯು 24x7 ರೋಡ್ ಸೈಡ್ ಅಸಿಸ್ಟೆನ್ಸ್ ನೀಡಲಿದ್ದು, ಅತ್ಯಾಧುನಿಕ ಉಪಕರಣ ಹಾಗೂ ಸರ್ವೀಸ್ ನೀಡುವ ವ್ಯಾಪಕ ಮಾರಾಟ ಜಾಲವನ್ನು ಹೊಂದಿದೆ.

ಸ್ಪರ್ಧಿಗಳು ಹಾಗೂ ವಾಸ್ತವಾಂಶ!
ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಟಕ್ಸನ್ ಹಾಗೂ 2021 ಜೀಪ್ ಕಂಪಾಸ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ವಿಶೇಷತೆಗಳು | ಸಿಟ್ರನ್ ಸಿ 5 ಏರ್‌ಕ್ರಾಸ್ | ಹ್ಯುಂಡೈ ಟಕ್ಸನ್ | 2021 ಜೀಪ್ ಕಂಪಾಸ್ |
ಎಂಜಿನ್ | 2.0- ಲೀಟರ್ ಡೀಸೆಲ್ | 2.0-ಲೀಟರ್ ಡೀಸೆಲ್ | 2.0-ಲೀಟರ್ ಡೀಸೆಲ್ |
ಪವರ್ | 176 ಬಿಹೆಚ್‌ಪಿ | 183 ಬಿಹೆಚ್‌ಪಿ | 168 ಬಿಹೆಚ್‌ಪಿ |
ಟಾರ್ಕ್ | 400ಎನ್ಎಂ | 400ಎನ್ಎಂ | 350ಎನ್ಎಂ |
ಟ್ರಾನ್ಸ್ ಮಿಷನ್ | 8-ಸ್ಪೀಡ್ ಆಟೋಮ್ಯಾಟಿಕ್ | 8-ಸ್ಪೀಡ್ ಆಟೋಮ್ಯಾಟಿಕ್ | 9-ಸ್ಪೀಡ್ ಆಟೋಮ್ಯಾಟಿಕ್ |
ಆರಂಭಿಕ ಬೆಲೆ* | ಇನ್ನೂ ಘೋಷಿಸಿಲ್ಲ | ₹22.55 ಲಕ್ಷ ದೆಹಲಿಯ ಎಕ್ಸ್ ಶೋರೂಂ ದರ | ₹16.99 ಲಕ್ಷ ದೆಹಲಿಯ ಎಕ್ಸ್ ಶೋರೂಂ ದರ |

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸಿಟ್ರನ್ ಸಿ 5 ಏರ್‌ಕ್ರಾಸ್ ಎಸ್‌ಯುವಿಯು ಅದ್ಭುತವಾದ ವಿನ್ಯಾಸ, ಉತ್ತಮ ಪರ್ಫಾಮೆನ್ಸ್ ಹಾಗೂ ಆರಾಮದಾಯಕ ಚಾಲನಾ ಅನುಭವವನ್ನು ನೀಡುತ್ತದೆ. ಈ ಎಸ್‌ಯುವಿಯು ಸ್ಪೋರ್ಟಿ ಎಸ್‌ಯುವಿಯಲ್ಲ. ಈ ಎಸ್‌ಯುವಿಯನ್ನು ಹೆದ್ದಾರಿಯಲ್ಲಿ ಮಧ್ಯಮ ವೇಗದಲ್ಲಿ ಚಾಲನೆ ಮಾಡಿದಾಗ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ.