ದಟ್ಸನ್ ರೆಡಿ ಗೊ ಸಂಪೂರ್ಣ ಚಾಲನಾ ವಿಮರ್ಶೆ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ಭಾರತಕ್ಕೆ ಅತಿ ನೂತನ 'ರೆಡಿ ಗೊ' ಕಾರನ್ನು ಪರಿಚಯಿಸಿದೆ. ಫ್ರಾನ್ಸ್ ಮೂಲದ ರೆನೊ ಸಂಸ್ಥೆಯ ಜೊತೆಗೆ ಪಾಲುದಾರಿಕೆ ಹೊಂದಿರುವ ನಿಸ್ಸಾನ್, ಈ ಚೊಕ್ಕದಾದ ಕಾರನ್ನು ಅಭಿವೃದ್ಧಿಪಡಿಸಿದೆ. 1999ನೇ ಇಸವಿಯಿಂದಲೇ ಜೊತೆಗಾರಿಕೆ ಹೊಂದಿರುವ ಈ ಎರಡು ಸಂಸ್ಥೆಗಳು ಕಾಮನ್ ಮೊಡ್ಯುಲ್ ತಳಹದಿಯಲ್ಲಿ ರೆನೊ ಕ್ವಿಡ್ ಕಾರನ್ನು ಅಭಿವೃದ್ಧಿಪಡಿಸಿತ್ತು.

ಇದೀಗ ನಿಸ್ಸಾನ್ ಸರದಿ. ಕ್ವಿಡ್ ಯಶಸ್ಸಿನ ನಂತರ ದಟ್ಸನ್ ಅತಿ ನೂತನ ರೆಡಿ ಗೊ ಕಾರನ್ನು ವಾಹನ ಪ್ರೇಮಿಗಳ ಮುಂದಿಡುತ್ತಿದೆ. ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ದಟ್ಸನ್ ರೆಡಿ ಗೊ, ತನ್ನ ಪ್ರತಿಸ್ಪರ್ಧಿ ಆಲ್ಟೊ ಇತ್ಯಾದಿ ಕಾರುಗಳ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎಂಬುದನ್ನು ಇಲ್ಲಿ ನೋಡಲಿದ್ದೇವೆ.

ದಟ್ಸನ್ ರೆಡಿ ಗೊ


ತಳಹದಿ

ರೆನೊ ಕ್ವಿಡ್ ನಿರ್ಮಾಣವಾಗಿರುವ ಅದೇ ಕಾಮನ್ ಮೊಡ್ಯುಲ್ ಫ್ಲ್ಯಾಟ್ ಫಾರ್ಮ್ ನಲ್ಲಿ (ಸಿಎಂಎಫ್-ಎ) ನೂತನ ರೆಡಿ ಗೊ ಕಾರನ್ನು ನಿರ್ಮಿಸಲಾಗಿದೆ. ಇವೆರಡು ಗ್ರಾಹಕರ ಕೈಗೆಟುಕುವ ಕಡಿಮೆ ಬೆಲೆಯ ಕಾರುಗಳಾಗಿವೆ. ಇದನ್ನು ಚೆನ್ನೈನಲ್ಲಿ ಸ್ಥಿತಗೊಂಡಿರುವ ಓರಂಗಡಂ ಘಟಕದಲ್ಲಿ ನಿರ್ಮಿಸಲಾಗುವುದು.

ಅರ್ಬನ್ ಕ್ರಾಸ್
ನೂತನ ದಟ್ಸನ್ ರೆಡಿ ಗೊ ತನ್ನನ್ನು ತಾನೇ ಅರ್ಬನ್ ಕ್ರಾಸ್ ಎಂದು ಬಿಂಬಿಸಿದ್ದು, ನಗರ ಪ್ರದೇಶದ ಯುವ ವಾಹನ ಖರೀದಿಗಾರರನ್ನು ಹೆಚ್ಚು ಗುರಿಯಾಗಿಸಿಕೊಂಡಿದೆ.

ದಟ್ಸನ್ ರೆಡಿ ಗೊ

ಡಿ ಕಟ್ ಗ್ರಿಲ್

ಮುಂಭಾಗದಲ್ಲಿ ದೊಡ್ಡದಾದ 'ಡಿ ಕಟ್' ಗ್ರಿಲ್ ಪ್ರಮುಖ ಆಕರ್ಷಣೆಯಾಗಲಿದೆ. ಇದು ಇತರ ಸಣ್ಣ ಕಾರುಗಿಂತಲೂ ಹೊರತಾಗಿ ಎತ್ತರದ ರಸ್ತೆ ಸಾನಿಧ್ಯವನ್ನು ಪಡೆದಿದೆ. ಬದಿಯಲ್ಲಿ ಸ್ವಭಾವ ರೇಖೆಗಳು ಹಾದು ಹೋಗುತ್ತಿದ್ದು, ಕಪ್ಪು ವರ್ಣದ ಪಿಲ್ಲರ್ ಗಳು ಕ್ರೀಡಾತ್ಮಕ ಲುಕ್ ನೀಡಲಿದೆ. ಒಟ್ಟಿನಲ್ಲಿ ಹ್ಯಾಚ್ ಬ್ಯಾಕ್ ಕಾರು ಹೊರತಾಗಿಯೂ ಕ್ರಾಸೋವರ್ ಶೈಲಿಯನ್ನು ಕಾಪಾಡಿಕೊಂಡಿದೆ.

ದಟ್ಸನ್ ರೆಡಿ ಗೊ


ಒಳಮೈ

ಆದರೆ ದುರದೃಷ್ಟವಶಾತ್ ಕಾರಿನ ಒಳಮೈ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಅಲ್ಲದೆ ಸ್ಟೋರೆಜ್ ಜಾಗದ ಕೊರತೆಯೂ ಕಾಡುತ್ತಿದೆ. ಇಷ್ಟೆಲ್ಲ ಆದರೂ ಸಣ್ಣ ಕಾರಿಗೆ ಬೇಕಾದ ಎಲ್ಲ ಅಗತ್ಯ ವೈಶಿಷ್ಟ್ಯಗಳನ್ನು ಪಡೆದಿದೆ. ಚಾಲಕರು ತಮ್ಮ ಬಜೆಟ್ ಗೆ ಅನುಗುಣವಾಗಿ ಆಕ್ಸೆಸರಿಗಳನ್ನು ಫಿಟ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅಂದರೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಗಮನ ಹರಿಸಲಾಗಿದೆ.

ಟಾಲ್ ವಿನ್ಯಾಸದ ರೆಡಿ ಗೊ ಈ ಸೆಗ್ಮೆಂಟ್ ನಲ್ಲಿ ಅತ್ಯಧಇಕ 1541 ಎಂಎಂ ಹೆಡ್ ರೂಂ ಮತ್ತು 542 ಎಂಎಂ ಮೊಣಕಾಲು ಸ್ಥಳಾವಕಾಶವನ್ನು ಕಾಪಾಡಿಕೊಂಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ಆಯಾಮ ಹೋಲಿಕೆ (ಉದ್ದXಅಗಲXಎತ್ತರ)

  • ದಟ್ಸನ್ ರೆಡಿ ಗೊ - 3429 x 1560 x 1541
  • ಮಾರುತಿ ಆಲ್ಟೊ - 3395 x 1490 x 1475
  • ರೆನೊ ಕ್ವಿಡ್ - 3679 x 1579 x 1478
  • ಹ್ಯುಂಡೈ ಇಯಾನ್ - 3495 x 1550 x 1500

ಹೆಚ್ಚು ಪರಿಣಾಮಕಾರಿ ಎಸಿ ಮತ್ತು ತ್ರಿಕೋನಕೃತಿಯ ಏರ್ ವೆಂಟ್ಸ್ ಗಳು ಹಿಂದುಗಡೆ ಕುಳಿತುಕೊಂಡಿರುವ ಪ್ರಯಾಣಿಕರಿಗೂ ಅತ್ಯುತ್ತಮ ಗಾಳಿ ವ್ಯವಸ್ಥೆಯನ್ನು ಒದಗಿಸುತ್ತಿದೆ.

ದಟ್ಸನ್ ರೆಡಿ ಗೊ

ಎಂಜಿನ್ ತಾಂತ್ರಿಕತೆ:

ಸಾಮರ್ಥ್ಯ: 799 ಸಿಸಿ, 3 ಸಿಲಿಂಡರ್ ಪೆಟ್ರೋಲ್
ಪವರ್: 53 ಅಶ್ವಶಕ್ತಿ
ತಿರುಗುಬಲ: 72 ಎನ್‌ಎಂ
ಗೇರ್ ಬಾಕ್ಸ್: ಫೈವ್ ಸ್ಪೀಡ್, ಫ್ರಂಟ್ ವೀಲ್ ಡ್ರೈವ್
ಇಂಧನ ಟ್ಯಾಂಕ್: 28 ಲೀಟರ್
ಗರಿಷ್ಠ ವೇಗ: 140 ಕೀ.ಮೀ.
ವೇಗವರ್ಧನೆ (0-100): 15.9 ಸೆಕೆಂಡು
ಸುರಕ್ಷತೆ: ಚಾಲಕ ಏರ್ ಬ್ಯಾಗ್ (ಟಾಪ್ ಎಂಡ್)
ಮಾರಾಟಕ್ಕೆ ಯಾವಾಗ ಲಭ್ಯ?: ಜೂನ್
  • ಮೈಲೇಜ್: 25.17 ಕೀ.ಮೀ.
  • ಟೆಸ್ಟ್ ಡ್ರೈವ್ ವೇಳೆ ದಾಖಲಿಸಿದ ಮೈಲೇಜ್: 19 ಕೀ.ಮೀ.

ಕ್ವಿಡ್ ಗೆ ಹೋಲಿಸಿದಾಗ ಸಮಾನ ಎಂಜಿನ್ ಹೊಂದಿರುವ ಹೊರತಾಗಿಯೂ ದಟ್ಸನ್ ರೆಡಿ ಗೊ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದೆ. ಟಾರ್ಕ್-ಭಾರ ಅನುಪಾತವೂ ಪರಿಣಾಮಕಾರಿಯೆನಿಸಿಕೊಂಡಿದ್ದು, ಎಂಜಿನ್ 57 ಕೆ.ಜಿ ಮಾತ್ರ ಭಾರ ಹೊಂದಿದೆ.

ದಟ್ಸನ್ ರೆಡಿ ಗೊ


ಕಡಿಮೆ ಭಾರ ಆಗಿರುವುದರಿಂದ ಕಾರು 72 ಎನ್ ಎಂ ತಿರುಗುಬಲದಲ್ಲಿ ಸಲಿಸಾಗಿ ಮುಂದಕ್ಕೆ ಚಲಿಸುತ್ತದೆ. 500 ಆರ್‌ಪಿಎಂಗಿಂತಲೂ ಮೇಲೆ ಚಲಿಸಿದಾಗ ಹೆಚ್ಚು ಬಳಲಲಿದೆ. 800 ಸಿಸಿ ಕಾರಿನಿಂದ ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡಬರದು. ಹಾಗಾಗಿ ಹೆಚ್ಚು ವೇಗದಲ್ಲಿ ವೈಬ್ರೇಷನ್ ಬಂದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಇನ್ನು 13 ಇಂಚುಗಳ ಜೆಕೆ ಚಕ್ರಗಳು ಅತ್ಯುತ್ತಮ ಗ್ರಿಪ್ ಪ್ರದಾನ ಮಾಡುತ್ತದೆ.

185 ಎಂಎಂ ಗ್ರೌಂಡ್ ಕ್ಲಿಯರನ್ಸ್ ದಟ್ಸನ್ ರೆಡಿ ಗೊ ದೇಶದ ಯಾವುದೇ ಒರಟಾದ ರಸ್ತೆಯಲ್ಲೂ ಸಂಚರಿಸಲು ಸಿದ್ಧವಾಗಿರುವುದನ್ನು ಸಾಬೀತುಪಡಿಸುತ್ತದೆ. ಹೊರಗಿನಿಂದ ತೆರಳುವ ಇತರೆ ವಾಹನ ಶಬ್ದವನ್ನು ಕಾರಿನೊಳಗಿಂದ ಆಲಿಸಬಹುದಾಗಿದ್ದು, ಇದರಿಂದ ನಾಯ್ಸ್ ಮಟ್ಟ ಗರಿಷ್ಠ ಮಟ್ಟದಲ್ಲಿಲ್ಲ ಎಂಬುದು ತಿಳಿದು ಬರುತ್ತದೆ. ಅದೇ ರೀತಿ ಹಂಪ್ ಗಳಲ್ಲಿ ಸಸ್ಪೆನ್ಷನ್ ಉಬ್ಬುಗಳು ಅನುಭವವಕ್ಕೆ ಬರಲಿದೆ.

ಚಾಲನೆಯ ಬಗ್ಗೆ ಹೇಳುವುದಾದ್ದಲ್ಲಿ ನಗರ ಚಾಲನೆಗೆ ಹೆಚ್ಚು ಯೋಗ್ಯವೆನಿಸಲಿದೆ. ಟ್ರಾಫಿಕ್ ಗಳಲ್ಲಿ ಕಾರನ್ನು ನಿಯಂತ್ರಿಸುವುದು ಸರಳವಾಗಿರಲಿದೆ. ಆದರೆ ಹೆಚ್ಚಿನ ವೇಗದಲ್ಲಿ ಅಷ್ಟೊಂದು ಆರಾಮದಾಯಕವೆನಿಸುವುದಿಲ್ಲ. ಹಾಗಾಗಿ ದೂರದ ಪ್ರಯಾಣಕ್ಕೆ ತೆರಳುವುದಾದ್ದಲ್ಲಿ ಮಾತ್ರ ಎರಡು ಬಾರಿ ಯೋಚಿಸಬೇಕಾಗುತ್ತದೆ.

ಚಾಲಕ ಸೀಟು ಎತ್ತರದಲ್ಲಿರುವುದರಿಂದ ನಿಖರವಾದ ಗೋಚರತೆ ಪ್ರದಾನ ಮಾಡಲಿದೆ. ಬಹುತೇಕ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರುಗಳು ನಗರ ಚಾಲನೆಗೆ ಮಾತ್ರ ಸೂಕ್ತವಾಗಿರುವುದರಿಂದ ಗ್ರಾಹಕರು ಒಟ್ಟಾರೆ ನೋಟದತ್ತ ಮಾತ್ರ ಗಮನ ಹರಿಸುತ್ತಾರೆ.

ಬ್ರೇಕ್ ಸಹ ನಿಖರವೆನಿಸುತ್ತಿದೆ. ಆದರೆ ಉಳಿದ ಕಾರುಗಳಿಗಿಂತ ವಿಭಿನ್ನವಾಗ ಕ್ಲಚ್ ಪೆಡಲ್ ಸ್ವಲ್ಪ ಮೇಲ್ಗಡೆಯಾಗಿ ನೀಡಿರುವುದರಿಂದ ಆರು ಅಡಿ ಎತ್ತರದ ಚಾಲಕನ ಕಾಲಿಗೆ ಸ್ವಲ್ಪ ತ್ರಾಸದಾಯಕವಾಗಲಿದೆ.


ಮುನ್ನಡೆ

  • ಆಕರ್ಷಕ ವಿನ್ಯಾಸ
  • ಎತ್ತರದ ಚಾಲನಾ ಸ್ಥಾನ,
  • ತ್ವರಿತ ಮತ್ತು ಹಗುರ ಸ್ಟೀರಿಂಗ್,
  • ಗಂಟೆಗೆ 0-100 ಕೀ.ಮೀ. ವೇಗವರ್ಧನೆ,
  • ಟಾಲ್ ಬಾಯ್ ವಿನ್ಯಾಸ ಮತ್ತು ಹೆಡ್ ರೂಂ,
  • ಎಸಿ ಮತ್ತು ಗಾಳಿ ವ್ಯವಸ್ಥೆ, ದೊಡ್ಡದಾದ ವಿಂಡೋ
  • ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್,
  • ಅತ್ಯುತ್ತಮ ಟರ್ನಿಂಗ್ ರೇಡಿಯಸ್ (4.73 ಮೀಟರ್),
  • ಹೆಚ್ಚು ಸ್ಥಳಾವಕಾಶ

ಹಿನ್ನಡೆ

  • ಗ್ಲೋವ್ ಬಾಕ್ಸ್ ಗಾತ್ರ,
  • ಸ್ಲಿಮ್ ಡೋರ್ ಪಾಕೆಟ್,
  • ಬಾಟಲಿ ಹೋಲ್ಡರ್ ಕೊರತೆ,
  • ಕ್ಲಚ್ ಪೆಡಲ್,
  • ರಿಯರ್ ವ್ಯೂ ಮಿರರ್ ನಲ್ಲಿ ಆ್ಯಂಟಿ-ಗ್ಲೇರ್ ಕೊರತೆ,
  • ಡೋರ್ ಮತ್ತು ಪಿಲ್ಲರ್ ನಲ್ಲಿ ಮೆಟಲ್ ಗೋಚರಿಸುವುದು.
  • ಪವರ್ ವಿಂಡೋ ಸ್ವಿಚ್ ಗಳ ಸ್ಥಾನ,

ದಟ್ಸನ್ ರೆಡಿ ಗೊ
ಅಂತಿಮ ತೀರ್ಪು
ದೇಶದ ಒಟ್ಟಾರೆ ಕಾರು ಮಾರಾಟದ ಶೇಕಡಾ 25ರಷ್ಟು ಭಾಗವನ್ನು ಎ ಸೆಗ್ಮೆಂಟ್ ಆಕ್ರಮಿಸಿಕೊಂಡಿದೆ. ಈಗ ನೂತನ ರೆಡಿ ಗೊ ಪ್ರವೇಶದೊಂದಿಗೆ ಮತ್ತಷ್ಟು ಸ್ಪರ್ಧೆ ಕಂಡುಬರಲಿದೆ. ಇಲ್ಲಿ ಸ್ಟೈಲಿಷ್ ಹೊರಮೈ ವಿನ್ಯಾಸವು ದಟ್ಸನ್ ರೆಡಿ ಗೊ ಕಾರಿಗೆ ವರದಾನವಾಗಲಿದೆ.
ನಿಸ್ಸಂಶವಾಗಿಯೂ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಆಲ್ಟೊ ಮತ್ತು ರೆನೊ ಕ್ವಿಡ್ ಗೆ ಸಮಾನವಾಗಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲಿದೆ.

ಪ್ರಾಯೋಗಿಕವಾಗಿ ಹೇಳುವುದಾದ್ದಲ್ಲಿ ದಟ್ಸನ್ ರೆಡಿ ಗೊ ಭಾರತಕ್ಕೆ ಎಂಟ್ರಿ ಕೊಡಲು ತುಂಬಾನೇ ವಿಳಂಬವಾಗಿದೆ. ಆಗಲೇ ಮಾರುತಿ ಆಲ್ಟೊದಂತಹ ಮಾದರಿಗಳು ಮಾರುಕಟ್ಟೆ ಸದ್ದು ಮಾಡಲಾರಂಭಿಸಿದೆ. ಹಾಗಾಗಿ ದಟ್ಸನ್ ರೆಡಿ ಗೊ ಕಾರಿಗೆ ಮಾರುಕಟ್ಟೆಯಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.

Most Read Articles

Kannada
English summary
Datsun redi-GO Review — Is It Redi-To-Go?
Story first published: Wednesday, May 18, 2016, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X