ಮಹೀಂದ್ರ ನುವೊಸ್ಪೋರ್ಟ್ ಮೊದಲ ನೋಟ ವಿಮರ್ಶೆ

By Nagaraja

ಭಾರತದ ನಂ.1 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಇತ್ತೀಚೆಗಷ್ಟೇ ಅತಿ ನೂತನ ನುವೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಹಿಂದೆ ಮಾರಾಟದಲ್ಲಿ ಕ್ವಾಂಟೊ ಪರಿಷ್ಕೃತ ಆವೃತ್ತಿಯು ನುವೊಸ್ಪೋರ್ಟ್ ಎಂಬ ಹೊಸ ಹೆಸರಿನೊಂದಿಗೆ ಎಂಟ್ರಿ ಕೊಟ್ಟಿದೆ.

ಹಳೆಯ ಮಾದರಿಗೆ ಹೋಲಿಸಿದಾಗ ವಿನ್ಯಾಸದಿಂದ ಹಿಡಿದು ನಿರ್ವಹಣೆ, ವೈಶಿಷ್ಟ್ಯಗಳು ಹೀಗೆ ಎಲ್ಲ ವಿಭಾಗದಲ್ಲಿ ನುವೊಸ್ಪೋರ್ಟ್ ಗಮನಾರ್ಹ ಬದಲಾವಣೆಗಳನ್ನು ಪಡೆದಿದ್ದು, ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ. ಪ್ರಸ್ತುತ ನುವೊಸ್ಪೋರ್ಟ್ ಮೊದಲ ನೋಟದ ವಿಮರ್ಶೆಯನ್ನು ಓದುಗರ ಮುಂದಿಡಲಿದ್ದೇವೆ.

ಶೈಲಿ

ಶೈಲಿ

ಹಿಂದಿನ ಕ್ವಾಂಟೊ ಮಾದರಿಗೆ ಹೋಲಿಸಿದಾಗ ಸಂಪೂರ್ಣ ವಿಭಿನ್ನ ಲುಕ್ ಹೊಂದಿರುವ ಮಹೀಂದ್ರ ನುವೊಸ್ಪೋರ್ಟ್ ಕ್ರೀಡಾತ್ಮಕ ವಿನ್ಯಾಸ ಮತ್ತು ಆಕ್ರಮಣಕಾರಿ ಶೈಲಿನ ಸಾನಿಧ್ಯವನ್ನು ಪಡೆದಿದೆ.

ಮಹೀಂದ್ರ ನುವೊಸ್ಪೋರ್ಟ್ ಮೊದಲ ನೋಟ ವಿಮರ್ಶೆ

ಮುಂಭಾಗದಲ್ಲಿ ಟ್ರೆಂಡಿ ಡೇಟೈಮ್ ರನ್ನಿಂಗ್ ಲೈಟ್ಸ್, ದೃಢವಾದ ಗ್ರಿಲ್ ನೊಂದಿಗಿರುವ ಮಹೀಂದ್ರ ಲಾಂಛನವು ಆಕ್ರಮಣಕಾರಿ ಸಾನಿಧ್ಯವನ್ನು ನೀಡಲಿದೆ.

ಮಹೀಂದ್ರ ನುವೊಸ್ಪೋರ್ಟ್ ಮೊದಲ ನೋಟ ವಿಮರ್ಶೆ

ಇನ್ನುಳಿದಂತೆ ಶಕ್ತಿಶಾಲಿ ಬೊನೆಟ್ ಜೊತೆ ಕ್ರೀಡಾತ್ಮಕ ಬೊನೆಟ್ ಸ್ಕೂಪ್, ಕ್ರೀಡಾತ್ಮಕ 16 ಇಂಚುಗಳ ಅಲಾಯ್ ವೀಲ್, ಎದ್ದು ಕಾಣಿಸುವ ಫ್ರಂಟ್ ಫಾಗ್ ಲ್ಯಾಂಪ್, ಬದಿಗಳಲ್ಲಿ ಸ್ಟೈಲಿಷ್ ಬಾಡಿ ಕ್ಲಾಡಿಂಗ್ ಹಾಗೂ ವೀಲ್ ಆರ್ಚ್, ಇಂಡಿಕೇಟರ್ ಬದಿಗಳಲ್ಲಿ ಕ್ರೋಮ್ ಸ್ಪರ್ಶತೆ ಕಂಡುಬರಲಿದೆ.

ಮಹೀಂದ್ರ ನುವೊಸ್ಪೋರ್ಟ್ ಮೊದಲ ನೋಟ ವಿಮರ್ಶೆ

ಅಂತೆಯೇ ಹಿಂಬದಿ ಡೋರ್ ನಲ್ಲಿ ಹೆಚ್ಚುವರಿ ಚಕ್ರ, ಕ್ರೀಡಾತ್ಮಕ ರಿಯರ್ ಸ್ಪಾಯ್ಲರ್, ಟೈಲ್ ಲ್ಯಾಂಪ್ ಇವೆಲ್ಲವೂ ನೈಜ ನೀಲಿ ಎಸ್‌ಯುವಿಗೆ ಪ್ರತಿಬಿಂಬವಾಗಲಿದೆ.

ನಿರ್ವಹಣೆ - ಎಂ ಹಾಕ್100 ಎಂಜಿನ್

ನಿರ್ವಹಣೆ - ಎಂ ಹಾಕ್100 ಎಂಜಿನ್

ಇದರಲ್ಲಿರುವ 1.5 ಲೀಟರ್ ಎಂಹಾಕ್100 ಡೀಸೆಲ್ ಎಂಜಿನ್ 240 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿಯನ್ನು ನೀಡಲಿದ್ದು, ಕ್ರೀಡಾತ್ಮಕ ಚಾಲನೆಯನ್ನು ಖಾತ್ರಿಪಡಿಸಲಿದೆ.

ಮಹೀಂದ್ರ ನುವೊಸ್ಪೋರ್ಟ್ ಮೊದಲ ನೋಟ ವಿಮರ್ಶೆ

ಹಾಗೆಯೇ ಮಹೀಂದ್ರ ಸ್ಕಾರ್ಪಿಯೊ ತಳಹದಿಯಲ್ಲಿ ನಿರ್ಮಾಣವಾಗಿರುವ ನ್ಯೂ ಜನರೇಷನ್ ಚಾಸೀ ಕಾರಿಗೆ ಅತ್ಯುತ್ತಮ ಸ್ಥಿರತೆ ಪ್ರದಾನ ಮಾಡಲಿದೆ.

ಸಸ್ಪೆನ್ಷನ್

ಸಸ್ಪೆನ್ಷನ್

ಇದರಲ್ಲಿರುವ ಕಂಫರ್ಟ್ ಸಸ್ಪನ್ಷನ್ ವ್ಯವಸ್ಥೆಯು, ವಾಹನಕ್ಕೆ ಉನ್ನತ ಮಟ್ಟದ ಸ್ಥಿರತೆಯನ್ನು ನೀಡಲಿದೆ.

ಫ್ರಂಟ್ ಸಸ್ಪೆನ್ಷನ್: ಡಬಲ್ ವಿಶ್ ಬೋನ್ ಜೊತೆ ಕಾಯಿಲ್ ಸ್ಪ್ರಿಂಗ್

ರಿಯರ್ ಸಸ್ಪೆನ್ಷನ್: ಮಲ್ಟಿಲಿಂಕ್ ಸಸ್ಪೆನ್ಷನ್ ಜೊತೆ ಕಾಯಿಲ್ ಸ್ಪ್ರಿಂಗ್

ಮೈಲೇಜ್

ಮೈಲೇಜ್

ಸಂಸ್ಥೆಯ ಪ್ರಕಾರ ನೂತನ ಮಹೀಂದ್ರ ನುವೊಸ್ಪೋರ್ಟ್ ಪ್ರತಿ ಲೀಟರ್ ಗೆ 17.45 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ತಂತ್ರಜ್ಞಾನ - ಆಟೋ ಶಿಫ್ಟ್ (ಎಎಂಟಿ)

ತಂತ್ರಜ್ಞಾನ - ಆಟೋ ಶಿಫ್ಟ್ (ಎಎಂಟಿ)

ವಾಹನ ದಟ್ಟಣೆಯಲ್ಲೂ ನೆರವಾಗಬಲ್ಲಿ ಆಟೋ ಶಿಫ್ಟ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ವ್ಯವಸ್ಥೆಯನ್ನು ಇದರಲ್ಲಿ ಕೊಡಲಾಗಿದೆ.

ಇನ್ಪೋಟೈನ್ಮೆಂಟ್ ಸಿಸ್ಟಂ

ಇನ್ಪೋಟೈನ್ಮೆಂಟ್ ಸಿಸ್ಟಂ

6.2 ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆಯಲ್ಲಿ ಬ್ಲೂಟೂತ್, ಹ್ಯಾಂಡ್ಸ್ ಫ್ರಿ ಕಾಲಿಂಗ್, ಎಫ್, ಸಿಡಿ, ಡಿವಿಡಿ, ಯುಎಸ್ ಬಿ ಹಾಗೂ ಆಕ್ಸ್ ಗಳಂತಹ ಸೌಲಭ್ಯಗಳಿರಲಿದೆ.

ಇಕೊ/ಪವರ್ ಮೋಡ್

ಇಕೊ/ಪವರ್ ಮೋಡ್

ಗರಿಷ್ಠ ನಿರ್ವಹಣೆ ಹಾಗೂ ಕಡಿಮೆ ಇಂಧನ ಬಳಕೆಗಾಗಿ ಇಕೊ ಮತ್ತು ಪವರ್ ಮೋಡ್ ಚಾಲನಾ ಆಯ್ಕೆಗಳನ್ನು ಕೊಡಲಾಗಿದೆ.

ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ

ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ

ಮಹೀಂದ್ರದ ಮೈಕ್ರೋ ಹೈಬ್ರಿಡ್ ತಂತ್ರಜ್ಞಾನದ ನೆರವಿನಿಂದ ಟ್ರಾಫಿಕ್ ನಲ್ಲಿ ಗಾಡಿ ಸ್ಟಾಪ್ ಮಾಡುವುದರಿಂದ ಹೆಚ್ಚಿನ ಇಂಧನ ಉಳಿಸಲು ಹಾಗೂ ಎಮಿಷನ್ ಮಟ್ಟ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ತದಾ ಬಳಿಕ ಕ್ಲಚ್ ಅದುಮಿದಾಗ ಎಂಜಿನ್ ಸ್ಟ್ಯಾರ್ಟ್ ಆಗಲಿದೆ.

 ಚಾಲಕ ಮಾಹಿತಿ ವ್ಯವಸ್ಥೆ

ಚಾಲಕ ಮಾಹಿತಿ ವ್ಯವಸ್ಥೆ

ಡಿಸ್ಟಾನ್ಸ್ ಟು ಎಮ್ಟಿ, ಸರಾಸರಿ ಇಂಧನ ಬಳಕೆ, ಹೈ ಸ್ಪೀಡ್ ವಾರ್ನಿಂಗ್ ಇತ್ಯಾದಿ ಅಗತ್ಯ ಮಾಹಿತಿಗಳನ್ನು ಚಾಲಕ ಮಾಹಿತಿ ವ್ಯವಸ್ಥೆಯ ಮೂಲಕ ಗಿಟ್ಟಿಸಿಕೊಳ್ಳಬಹುದಾಗಿದೆ.

ಎಸಿ ಇಕೊ ಮೋಡ್

ಎಸಿ ಇಕೊ ಮೋಡ್

ಇಂಧನ ಉಳಿತಾಯಕ್ಕಾಗಿ ಇಕೊ ಮೋಡ್ ನಲ್ಲಿ ಎಸಿ ಬಳಕೆ ಮಾಡುವ ತಂತ್ರಗಾರಿಕೆಯನ್ನು ಕೊಡಲಾಗಿದೆ.

ಇಂಟೆಲಿಪಾರ್ಕ್ ರಿವರ್ಸ್ ಅಸಿಸ್ಟ್

ಇಂಟೆಲಿಪಾರ್ಕ್ ರಿವರ್ಸ್ ಅಸಿಸ್ಟ್

ಇಂಟೆಲಿಪಾರ್ಕ್ ರಿವರ್ಸ್ ಅಸಿಸ್ಟ್ ನೆರವಿನಿಂದ ಬಹಳ ಇಕ್ಕಟ್ಟಿನ ಪ್ರದೇಶದಲ್ಲೂ ತೊಂದರೆ ರಹಿತವಾಗಿ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ.

ಕ್ರೂಸ್ ಕಂಟ್ರೋಲ್

ಕ್ರೂಸ್ ಕಂಟ್ರೋಲ್

ಹೆದ್ದಾರಿಗಳಲ್ಲಿ ಚಾಲಕರಿಗೆ ಸಹಕಾರಿಯಾಗಬಲ್ಲ ವೇಗವನ್ನು ನಿಯಂತ್ರಿಸುವ ಕ್ರೂಸ್ ಕಂಟ್ರೋಲ್ ವ್ಯವಸ್ಥೆಯೂ ಇದರಲ್ಲಿರುತ್ತದೆ.

ಒಳಮೈ - ಡ್ಯುಯಲ್ ಟೋನ್ ಇಂಟಿರಿಯರ್

ಒಳಮೈ - ಡ್ಯುಯಲ್ ಟೋನ್ ಇಂಟಿರಿಯರ್

ಆಧುನಿಕತೆಗೆ ತಕ್ಕಂತೆ ಕಾರಿನೊಳಗೆ ಜೋಡಿ ಬಣ್ಣಕ್ಕೆ ಆದ್ಯತೆ ಕೊಡಲಾಗಿದ್ದು, ಪ್ರೀಮಿಯಂ ಬ್ಲ್ಯಾಕ್ ಮತ್ತು ಗ್ರೇ ಒಳಮೈಯನ್ನು ಕಾಣಬಹುದಾಗಿದೆ.

ಇನ್ಟ್ರುಮೆಂಟ್ ಕ್ಲಸ್ಟರ್

ಇನ್ಟ್ರುಮೆಂಟ್ ಕ್ಲಸ್ಟರ್

ಕ್ರೋಮ್ ಸ್ಪರ್ಶಿತ ವೃತ್ತಾಕಾರ ಹಾಗೂ ಕ್ರೀಡಾತ್ಮಕ ಇನ್ಟ್ರುಮೆಂಟ್ ಕ್ಲಸ್ಟರ್ ಪ್ರಮುಖ ಆಕರ್ಷಣೆಯಾಗಲಿದೆ.

ಲೆಥರ್ ಹೋದಿಕೆ

ಲೆಥರ್ ಹೋದಿಕೆ

ಸೀಟುಗಳಿಗೆ ಗರಿಷ್ಠ ಗುಣಮಟ್ಟದ ಲೆಥರ್ ಹೋದಿಕೆಯನ್ನು ಹಾಕಲಾಗಿದೆ.

ಅಲ್ಯೂಮಿನಿಯಂ ಪೆಡಲ್

ಅಲ್ಯೂಮಿನಿಯಂ ಪೆಡಲ್

ಕ್ರೀಡಾತ್ಮಕ ಶೈಲಿಯ ಅಲ್ಯೂಮಿನಿಯಂ ಪೆಡಲ್ ಗಳು ನುವೊಸ್ಪೋರ್ಟ್ ಮಾದರಿಯನ್ನು ವಿಭಿನ್ನವಾಗಿಸಲಿದೆ.

ಸ್ಕಫ್ ಪ್ಲೇಟ್

ಸ್ಕಫ್ ಪ್ಲೇಟ್

ಟ್ರೆಂಡಿ ಅಲ್ಯೂಮಿನಿಯಂ ಸ್ಕಫ್ ಪ್ಲೇಟ್, ಕ್ರೋಮ್ ಸ್ಪರ್ಶತೆ, ಡೋರ್ ಆರ್ಮ್ ರೆಸ್ಟ್ ಇತರ ಪ್ರಮುಖ ವೈಶಿಷ್ಟ್ಯಗಳಾಗಿರಲಿದೆ.

ಆರಾಮ ಮತ್ತು ಅನುಕೂಲತೆ - 5+2 ಸಿಟ್ಟಿಂಗ್ ವ್ಯವಸ್ಥೆ

ಆರಾಮ ಮತ್ತು ಅನುಕೂಲತೆ - 5+2 ಸಿಟ್ಟಿಂಗ್ ವ್ಯವಸ್ಥೆ

ನೂತನ ನುವೊಸ್ಪೋರ್ಟ್ ಕಾರಿನಲ್ಲಿ ಏಳು ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ. ಅಲ್ಲದೆ ಎರಡನೇ ಸಾಲಿನಲ್ಲಿ 60:40 ಅನುಪಾತದಲ್ಲಿ ಮಡಚಬಹುದಾದ ಸೀಟುಗಳ ವ್ಯವಸ್ಥೆಯು ಇರುತ್ತದೆ.

ಢಿಕ್ಕಿ ಜಾಗ

ಢಿಕ್ಕಿ ಜಾಗ

ಇನ್ನು ವಾರಂತ್ಯದ ಪಯಣಗಳಿಗೆ ಯೋಗ್ಯವೆನಿಸಿರುವ ಮಹೀಂದ್ರ ನುವೊಸ್ಪೋರ್ಟ್ ಕಾರಿನಲ್ಲಿ 412 ಲೀಟರ್ ಗಳ ಢಿಕ್ಕಿ ಜಾಗವನ್ನು ಕೊಡಲಾಗಿದೆ.

ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು

ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು

ಪರಿಪೂರ್ಣ ಚಾಲನಾ ಸ್ಥಾನಕ್ಕಾಗಿ ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು ವ್ಯವಸ್ಥೆಯನ್ನು ನೀಡಲಾಗಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್,

ಫ್ಲ್ಯಾಟ್ ಫ್ಲೋರ್, ಲಂಬರ್ ಸಪೋರ್ಟ್, ರಿಮೋಟ್ ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಆಂಡ್ ಫೋನ್ ಕಂಟ್ರೋಲ್, ಚಾಲಕ ಮತ್ತು ಸಹ ಚಾಲಕ ಹೊಂದಾಣಿಸಬಹುದಾದ ಆರ್ಮ್ ರೆಸ್ಟ್, ಉಚಿತ ಆಗಮನ ನಿರ್ಗಮನಕ್ಕಾಗಿ ಎಲ್ಲ ನಾಲ್ಕು ಡೋರ್ ಗಳಲ್ಲೂ ಬೆಳಕಿನ ಸೇವೆ ಇರಲಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

ಅದೇ ರೀತಿ ಲೀಡ್ ಮಿ ಟು ವೆಹಿಕಲ್ ಮತ್ತು ಫಾಲೋ ಮಿ ಹೋಮ್ ಹೆಡ್ ಲ್ಯಾಂಪ್, ಸನ್ ವೈಸರ್, ಸೈಡ್ ಆಂಡ್ ರಿಯರ್ ಫೂಟ್ ಸ್ಟೆಪ್, ಹೊಂದಾಣಿಸಬಹುದಾದ ಪವರ್ ಸ್ಟೀರಿಂಗ್, ರಿಯರ್ ವಾಶ್ ಆಂಡ್ ವೈಪ್, ಬಾಟಲಿ ಮತ್ತು ಕಪ್ ಹೋಲ್ಡರ್, ಸನ್ ಗ್ಲಾಸ್ ಹೋಲ್ಡರ್, ಉಪಯುಕ್ತ ಬಾಕ್ಸ್, ಮ್ಯಾಗಜಿನ್ ಪಾಕೆಟ್ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಸುರಕ್ಷತೆ

ಸುರಕ್ಷತೆ

ನೂತನ ನುವೊಸ್ಪೋರ್ಟ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಕಾರು ನಿಯಂತ್ರಣಕ್ಕಾಗಿ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್, ಫ್ರಂಟ್ ಫಾಗ್ ಲ್ಯಾಂಪ್, ಎತ್ತರ ಹೊಂದಾಣಿಸಬಹುದಾದ ಸೀಟು ಬೆಲ್ಟ್, ಸೈಡ್ ಇನ್ಟ್ರುಷನ್ ಬೀಮ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಎಂಜಿನ್ ಇಂಮೊಬಿಲೈಜರ್, ಮುದುಡಿಕೊಳ್ಳುವ ಸ್ಟೀರಿಂಗ್ ಕಾಲಂ, ಚೈಲ್ಡ್ ಲಾಕ್ ಇತ್ಯಾದಿ ವ್ಯವಸ್ಥೆಗಳಿರುತ್ತದೆ.

ಆರು ಆಕರ್ಷಕ ಬಣ್ಣಗಳು

ಆರು ಆಕರ್ಷಕ ಬಣ್ಣಗಳು

ಮೊಲ್ಟನ್ ರೆಡ್,

ರಸ್ಟ್ ಆರೆಂಜ್,

ಡೈಮಂಡ್ ವೈಟ್,

ರಿಗಲ್ ಬ್ಲೂ,

ಮಿಸ್ಟ್ ಸಿಲ್ವರ್,

ಫಿಯರಿ ಬ್ಲ್ಯಾಕ್

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ಎನ್4: 7.56 ಲಕ್ಷ ರು.

ಎನ್4 ಪ್ಲಸ್: 7.88 ಲಕ್ಷ ರು.

ಎನ್6: 8.60 ಲಕ್ಷ ರು.

ಎನ್6 (ಎಎಂಟಿ): 9.25 ಲಕ್ಷ ರು.

ಎನ್8: 9.39 ಲಕ್ಷ ರು.

ಎನ್8 (ಎಎಂಟಿ): 10.04 ಲಕ್ಷ ರು.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ವಿಟಾರಾ ಬ್ರಿಝಾ

ಫೋರ್ಡ್ ಇಕೊಸ್ಪೋರ್ಟ್

ಅಂತಿಮ ತೀರ್ಪು

ಅಂತಿಮ ತೀರ್ಪು

ಒಂದು ಪರಿಷ್ಕೃತ ಮಾದರಿಗಿಂತಲೂ ಭಿನ್ನವಾಗಿ ನುವೊಸ್ಪೋರ್ಟ್ ಹೆಚ್ಚಿನ ತಾಜಾತನವನ್ನು ಕಾಪಾಡಿಕೊಂಡಿದೆ. ತನ್ನ ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಏಳು ಸೀಟುಗಳ ಆಯ್ಕೆಯೂ ನುವೊಸ್ಪೋರ್ಟ್ ಗೆ ವರದಾನವಾಗಲಿದೆ. ಅಲ್ಲದೆ ಕಾಂಪಾಕ್ಟ್ ಎಸ್‌ಯುವಿನಲ್ಲಿ ಒಂದು ಎಂಪಿವಿ ಕಾರಿನಲ್ಲಿರುವ ಎಲ್ಲ ಸೌಕರ್ಯಗಳನ್ನು ಬಯಸುವುದಾದ್ದಲ್ಲಿ ಕ್ವಾಂಟೊ ಅತ್ಯುತ್ತಮ ಆಯ್ಕೆಯಾಗಿರಲಿದೆ.

Most Read Articles

Kannada
English summary
Mahindra Nuvosport: First Look Review
Story first published: Monday, April 11, 2016, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X