ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್‍ಎಸ್ ಇವಿ ವಿಮರ್ಶೆ. ಎಂಜಿ ಝಡ್ಎಸ್ ಇವಿ ದೇಶದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ. ಎಂಜಿ ಮೋಟಾರ್ ಇಂಡಿಯಾದ ಎಲೆಕ್ಟ್ರಿಕ್ ಎಸ್‌ಯುವಿಯ ನಮ್ಮ ಮೊದಲ ಅಭಿಪ್ರಾಯ ಇಲ್ಲಿದೆ. ಫೀಚರ್ಸ್, ಸ್ಪೆಕ್ಸ್, ಪರ್ಫಾಮೆನ್ಸ್ ಹಾಗೂ ಉಳಿದ ಮಾಹಿತಿಗಳನ್ನು ನೀಡಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಮೋಟಾರ್ಸ್‌ನ ಎಲೆಕ್ಟ್ರಿಕ್ ಎಸ್‌ಯುವಿಯ ಬಗ್ಗೆ ನಮ್ಮ ಮೊದಲ ಅಭಿಪ್ರಾಯಗಳು ಇಲ್ಲಿವೆ. ಎಂಜಿ ಝಡ್‍ಎಸ್ ಇವಿ ಪರ್ಫಾಮೆನ್ಸ್, ರೇಂಜ್, ಫೀಚರ್ಸ್, ಸ್ಪೆಕ್ಸ್, ಇಂಟಿರಿಯರ್, ಎಕ್ಸ್ ಟಿರಿಯರ್ ಹಾಗೂ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಓದಿ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಮೋರಿಸ್ ಗ್ಯಾರೇಜಸ್ (ಎಂಜಿ) ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ನಿರ್ಧರಿಸಿ, ವಿಭಿನ್ನವಾದ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿತು. ಎಂಜಿ ಕಂಪನಿಯು ಭಾರತದಲ್ಲಿ ಮೊದಲ ವಾಹನವಾಗಿ ಪೆಟ್ರೋಲ್‍ ಹಾಗೂ ಡೀಸೆಲ್ ಎಂಜಿನ್‍‍ನ ಹೆಕ್ಟರ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎರಡನೇಯದಾಗಿ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಲಿದೆ. ಚೀನಾ ಮೂಲದ ಕಂಪನಿಯ ಒಡೆತನದ ಬ್ರಿಟಿನ್ ಕಂಪನಿಯು ಭಾರತದಲ್ಲಿ ಮುಂದಿನ ಉತ್ಪನ್ನವಾಗಿ ಝಡ್ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ. ಎಂಜಿ ಕಂಪನಿಯು ಈ ಕಾರ್ ಅನ್ನು ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಕಾರ್ ಎಂದು ಹೇಳಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್ಎಸ್ ಇವಿ 2020ರ ಜನವರಿಯಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ. ಇದನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಮೊದಲಿಗೆ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಅಹಮದಾಬಾದ್ ಸೇರಿದಂತೆ ಐದು ನಗರಗಳಲ್ಲಿ ಮಾರಾಟ ಮಾಡಲಾಗುವುದು.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ನಾವು ಇತ್ತೀಚಿಗೆ ಈ ಎಲೆಕ್ಟ್ರಿಕ್ ಕಾರ್ ಅನ್ನು ಡ್ರೈವ್ ಮಾಡಿದೆವು. ಈ ಕಾರು ಹಲವಾರು ಫೀಚರ್ಸ್, ಇಂಟೆಲಿಜೆಂಟ್ ಕನೆಕ್ಟಿವಿಟಿ ಹಾಗೂ ಹಲವು ಆಯ್ಕೆಗಳನ್ನು ಹೊಂದಿದೆ. ಈ ಕಾರ್ ಅನ್ನು ಹೇಗೆ ಡ್ರೈವ್ ಮಾಡುವುದು. ಈಗ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿಸಬಹುದೇ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ವಿನ್ಯಾಸ ಹಾಗೂ ಸ್ಟೈಲ್

ಕಾರು ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಚಾಲನೆ ಮಾಡುತ್ತದೆ ಎಂಬುದನ್ನು ತಿಳಿಯುವ ಮೊದಲು, ಎಂಜಿ ಝಡ್ಎಸ್ ಇವಿಯಲ್ಲಿರುವ ಕೆಲವು ಅಂಶಗಳನ್ನು ನೋಡೋಣ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಎಸ್‌ಯುವಿ ಸ್ವಚ್ಛವಾದ ಹಾಗೂ ಸರಳವಾದ ಸ್ಟೈಲಿಂಗ್‌ ಅನ್ನು ಹೊಂದಿದೆ. ಮೊದಲ ಸಲ ನೋಡಿದಾಗ, ಸಿ ಸೆಗ್‍‍ಮೆಂಟ್‍‍ನ ಪೆಟ್ರೋಲ್ - ಡೀಸೆಲ್ ಎಸ್‍‍ಯುವಿಯಂತೆ ಕಾಣುತ್ತದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಕಾರಿನ ಮುಂಭಾಗದಲ್ಲಿ ಕಂಪನಿಯ ಸಿಗ್ನೇಚರ್ ಒಮೆಗಾ ಶೇಪಿನ ಎಲ್‌ಇಡಿ ಡಿಆರ್‌ಎಲ್‌ಗಳಿದ್ದು, ಸುತ್ತಲೂ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿವೆ. ಇದರ ಜೊತೆಗೆ ಟರ್ನ್ ಇಂಡಿಕೇಟರ್‍‍ಗಳಿವೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಲಂಡನ್ ಐ ಸ್ಫೂರ್ತಿಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಎಂಜಿ ಕಂಪನಿ ಹೇಳಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎರಡೂ ತುದಿಯಲ್ಲಿರುವ ಹೆಡ್‌ಲ್ಯಾಂಪ್‌ಗಳ ಮಧ್ಯೆ ದೊಡ್ಡ ಗಾತ್ರದ ಕ್ರೋಮ್ ಸ್ಟಡ್ಡ್ ಕಾನ್ಕೇವ್ ಗ್ರಿಲ್ ಇದ್ದು, ಮಧ್ಯದಲ್ಲಿ ಕಂಪನಿಯ ಲೋಗೊವನ್ನು ಹೊಂದಿದೆ. ಲೊಗೊ ಜೊತೆಗೆ ಗ್ರಿಲ್‌ನ ಮಧ್ಯ ಭಾಗದ ಕೆಳಗೆ ಇಂಟಿಗ್ರೇಟೆಡ್ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಮುಂಭಾಗದಲ್ಲಿರುವ ಗ್ರಿಲ್ ಸುತ್ತ ತೆಳುವಾದ ಕ್ರೋಮ್ ಸ್ಟ್ರಿಪ್ ಅಳವಡಿಸಲಾಗಿದೆ. ಇದು ಹೆಡ್‌ಲ್ಯಾಂಪ್‌ಗಳೊಂದಿಗೆ ಸೇರಿ, ಎಸ್‍‍ಯುವಿಯ ಮುಂಭಾಗದಲ್ಲಿರುವ ಫಾಸ್ಕಿಯಾಗಳಿಗೆ ಪ್ರೀಮಿಯಂತನವನ್ನು ನೀಡುತ್ತದೆ. ಮುಂಭಾಗದ ಬಂಪರ್‌ನಲ್ಲಿ ಏರ್ ಇನ್‍‍ಟೇಕ್ ಸುತ್ತ ಸಿಲ್ವರ್ ಅಂಶಗಳಿವೆ. ಇದರ ಜೊತೆಗೆ ಸ್ಕಫ್ ಪ್ಲೇಟ್‌‍‍ಗಳಿವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಎಲೆಕ್ಟ್ರಿಕ್ ಕಾರಿನ ಸೈಡ್ ಬಗ್ಗೆ ಹೇಳುವುದಾದರೆ, ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರು ಕಡಿಮೆ ಸ್ಟೈಲಿನ ವಿನ್ಯಾಸವನ್ನು ಹೊಂದಿದೆ. ಸೈಡಿನಲ್ಲಿ ಬಲಿಷ್ಟವಾದ ಶೋಲ್ಡರ್ ಲೈನ್‍ಗಳಿದ್ದು, ಹೆಡ್‌ಲ್ಯಾಂಪ್‌ಗಳಿಂದ ಶುರುವಾಗಿ ಹಿಂಭಾಗದಲ್ಲಿರುವ ಟೇಲ್‍‍ಲೈಟ್‍‍ಗಳವರೆಗೂ ಚಾಚಿಕೊಂಡಿವೆ. ಹಿಂದಿನ ವ್ಹೀಲ್ ಆರ್ಕ್ ಬಳಿಯಿರುವ ಸಬ್ಟಲ್ ಕಿಂಕ್ ಎಸ್‍‍ಯುವಿಗೆ ಮಸ್ಕ್ಯುಲರ್ ಲುಕ್ ನೀಡುತ್ತದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ವ್ಹೀಲ್ ಆರ್ಕ್ ಬಗ್ಗೆ ಹೇಳುವುದಾದರೆ, ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರು 17 ಇಂಚಿನ ಮಿಷಿನ್ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ. ವ್ಹೀಲ್‍‍ಗಳ ವಿನ್ಯಾಸವು ವಿಶಿಷ್ಟವಾಗಿದ್ದು, ಡಚ್ ಕ್ಲಾಸಿಕ್ ವಿಂಡ್‌ಮಿಲ್‌ಗಳಿಂದ ಪ್ರೇರಿತವಾಗಿದೆ. ಇದು ಎಸ್‍‍ಯುವಿಗೆ ಪ್ರೀಮಿಯಂ ನೆಸ್‌ ನೀಡುತ್ತದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರಿನ ಹಿಂಭಾಗದ ವಿನ್ಯಾಸವು ಸಹ ಸ್ವಚ್ಛವಾದ ಹಾಗೂ ಕಡಿಮೆ ಪ್ರಮಾಣದ ಸ್ಟೈಲ್ ಅನ್ನು ಹೊಂದಿದೆ. ಎಲ್ಇಡಿ ಟೇಲ್‌ಲೈಟ್‌ಗಳನ್ನು ಬಿಗ್ ಡಿಪ್ಪರ್ ಎಂದು ಕರೆಯಲಾಗುತ್ತದೆ. ಈ ಲೈಟ್‍‍ಗಳನ್ನು ಉರ್ಸಾ ಮೇಜರ್ ಕನ್ಸ್ಟಾಲೇಷನ್‍‍ನ ಏಳು ಹೊಳೆಯುವ ನಕ್ಷತ್ರಗಳಿಂದ ಪ್ರೇರಿತವಾಗಿ ನಿರ್ಮಿಸಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಹೊಳೆಯುವ ಟೇಲ್‍‍ಲೈಟ್‌ಗಳ ಹೊರತಾಗಿ, ಹಿಂಭಾಗದಲ್ಲಿ ಚಿಕ್ಕ ಪ್ರಮಾಣದ ಬೂಟ್ ಮೌಂಟೆಡ್ ಸ್ಪಾಯ್ಲರ್, ಹಿಂಭಾಗದ ಬಂಪರ್‌ನ ಎರಡೂ ತುದಿಯಲ್ಲಿ ರಿಫ್ಲೆಕ್ಟರ್‌ಗಳು ಹಾಗೂ ಸಿಲ್ವರ್ ಸ್ಕಫ್ ಪ್ಲೇಟ್‍‍ಗಳಿವೆ. ಬೂಟ್ ಲಿಡ್ ಮಧ್ಯ ಭಾಗದಲ್ಲಿ ಎಂಜಿ ಲೋಗೊವನ್ನು ಹೊಂದಿದ್ದು, ಇದರ ಕೆಳಗೆ ಇಂಟರ್‍‍ನೆಟ್ ಇನ್‍‍ಸೈಡ್ ಹಾಗೂ ಝಡ್‍ಎಸ್ ಇವಿ ಎಂಬ ಬ್ಯಾಡ್ಜಿಂಗ್‍‍ಗಳಿವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಇಂಟಿರಿಯರ್ ಹಾಗೂ ಪ್ರಾಯೋಗಿಕತೆ

ಎಂಜಿ ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಕ್ಯಾಬಿನ್‌‍‍ನಲ್ಲಿ ಸ್ವಚ್ಛವಾದ ಹಾಗೂ ಸರಳವಾದ ವಿನ್ಯಾಸವನ್ನು ನೀಡಿದೆ. ಡ್ಯಾಶ್‌ಬೋರ್ಡ್ ಕಪ್ಪು ಬಣ್ಣವನ್ನು ಹೊಂದಿದ್ದು, ಸಿಲ್ವರ್ ಹೈಲೈಟ್‍‍ಗಳು ಸ್ವಲ್ಪ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಿವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಡ್ಯಾಶ್‌ಬೋರ್ಡ್ ಸರಳವಾಗಿದೆ. ಎಂಜಿ ಕಂಪನಿಯು ಈ ಎಲೆಕ್ಟ್ರಿಕ್ ಕಾರಿನಲ್ಲಿ ಸಾಫ್ಟ್-ಟಚ್ ಪ್ರೀಮಿಯಂ ವಸ್ತುಗಳನ್ನು ಅಳವಡಿಸಿದೆ. ಡ್ಯಾಶ್‌ಬೋರ್ಡ್ ಸಹ ಸ್ವಲ್ಪ ಕೆಳಗಿದ್ದು, ದೊಡ್ಡ ವಿಂಡೋಗಳ ಮೂಲಕ ಹೊರಗೆ ಸ್ಪಷ್ಟವಾಗಿ ನೋಡಬಹುದು.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಡ್ಯಾಶ್‌ಬೋರ್ಡ್ ಎರಡೂ ತುದಿಗಳಲ್ಲಿ ಸರ್ಕ್ಯುಲರ್ ಎಸಿ ವೆಂಟ್‍‍ಗಳನ್ನು ಹೊಂದಿದೆ. ಗ್ಲಾಸ್ ಬ್ಲಾಕ್ ಬಣ್ಣವನ್ನು ಹೊಂದಿರುವ ವೆಂಟ್‍‍ಗಳು ಮಧ್ಯದಲ್ಲಿ ರೆಕ್ಟಾಂಗ್ಯುಲರ್ ಆಗಿದ್ದು, ಸೆಂಟ್ರಲ್ ಕನ್ಸೋಲ್‌ನೊಂದಿಗೆ ಇಂಟಿಗ್ರೇಟ್ ಆಗಿವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಸ್ಟೀಯರಿಂಗ್ ವ್ಹೀಲ್‍‍ನ ಹಿಂದೆ ಮಧ್ಯಭಾಗದಲ್ಲಿ ಜೋಡಿಸಿರುವ ಎಂಐಡಿ ಹೊಂದಿರುವ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಒಂದು ತುದಿಯಲ್ಲಿ ಸ್ಪೀಡೊಮೀಟರ್ ಅನ್ನು ಹೊಂದಿದ್ದರೆ, ಮತ್ತೊಂದು ಬದಿಯಲ್ಲಿರುವ ಡಯಲ್ ಎಲೆಕ್ಟ್ರಿಕ್ ಪವರ್ ಬಳಕೆಯ ಪ್ರಮಾಣವನ್ನು ತೋರಿಸುತ್ತದೆ. ಇದನ್ನು ರೆವ್ ಕೌಂಟರ್ ಬದಲಿಗೆ ಅಳವಡಿಸಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಸೆಂಟ್ರಲ್ ಕನ್ಸೋಲ್ ಚಾಲಕನ ಕಡೆಗಿದ್ದು, ಚಾಲಕನಿಗೆ ಎಲ್ಲಾ ಫೀಚರ್ಸ್ ಹಾಗೂ ಕಂಟ್ರೋಲ್‍‍ಗಳಿಗೆ ಸುಲಭವಾಗಿ ಆಕ್ಸೆಸ್ ನೀಡುತ್ತದೆ. ಸ್ಟೀಯರಿಂಗ್ ವ್ಹೀಲ್ ಫ್ಲಾಟ್-ಬಾಟಮ್ ಹೊಂದಿರುವ ರ್‍ಯಾಪ್ ಲೆದರ್ ಆಗಿದ್ದು, ಒಳಗೆ ಸ್ಪೋರ್ಟಿನೆಸ್ ಆಗಿದೆ. ಮೂರು- ಸ್ಪೋಕ್‍‍ನ ಸ್ಟೀಯರಿಂಗ್ ವ್ಹೀಲ್ ಆಡಿಯೊ ಹಾಗೂ ಇನ್ನಿತರ ಫಂಕ್ಷನ್‍‍ಗಳಿಗೆ ಮೌಂಟ್ ಆದ ಕಂಟ್ರೋಲ್‍‍ನೊಂದಿಗೆ ಬರುತ್ತದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಸೆಂಟ್ರಲ್ ಕನ್ಸೋಲ್‌, ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಹೊಂದಿರುವ ಎಂಟು ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹೊಂದಿದೆ. ಇನ್ಫೋಟೇನ್‌ಮೆಂಟ್ ಸ್ಕ್ರೀನ್ ಎಂಜಿ ಕಂಪನಿಯ ಬಿಲ್ಟ್ ಇನ್ ಐ-ಸ್ಮಾರ್ಟ್ 2.0 ಹೊಂದಿದೆ. ಇದು ಹೆಕ್ಟರ್‌ನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್‍‍ಗಿಂತ ಹೆಚ್ಚು ಸುಧಾರಿತ ಆವೃತ್ತಿಯಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಮೇನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಕೆಳಗೆ ಬಟನ್ ಹಾಗೂ ರೋಟರಿ ಡಯಲ್‌ಗಳನ್ನು ಹೊಂದಿರುವ ಕ್ಲೈಮೆಟ್ ಕಂಟ್ರೋಲ್ ಸೆಟ್ಟಿಂಗ್‍‍ಗಳಿವೆ. ಡ್ರೈವ್ ಮೋಡ್‌ಗಳನ್ನು ಮತ್ತಷ್ಟು ನಿಯಂತ್ರಿಸಲು ರೋಟರಿ ಕ್ನಾಬ್‍ ನೀಡಲಾಗಿದೆ. ಇವೆಲ್ಲವೂ ಈ ಎಲೆಕ್ಟ್ರಿಕ್ ಕಾರಿಗೆ ಮತ್ತಷ್ಟು ಪ್ರೀಮಿಯಂ ನೆಸ್ ನೀಡುತ್ತವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಝಡ್‌ಎಸ್‌ ಎಲೆಕ್ಟ್ರಿಕ್ ಕಾರಿನಲ್ಲಿರುವ ಸೀಟುಗಳು ಕಪ್ಪು ಲೆಧರೇಟ್‌ ಅಪ್‍‍ಹೋಲೆಸ್ಟರ್‍‍ಯೊಂದಿಗೆ ಬರುತ್ತವೆ. ಈ ಸೀಟುಗಳು ಕಾರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ. ಇವುಗಳು ಆರಾಮದಾಯಕ ಚಾಲನೆಯನ್ನು ನೀಡುವ ಜೊತೆಗೆ, ಚಾಲಕ ಹಾಗೂ ಪ್ರಯಾಣಿಕರಿಗೆ ಹಿಂಭಾಗ, ಸೈಡ್ ಹಾಗೂ ತೊಡೆಗಳಿಗೆ ಬೆಂಬಲ ನೀಡುತ್ತವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಚಾಲಕನ ಸೀಟ್ ಅನ್ನು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದೆ. ಡ್ರೈವರ್ ಹಾಗೂ ಪ್ರಯಾಣಿಕರು ಸೆಂಟ್ರಲ್ ಆರ್ಮ್‌ಸ್ಟ್ರೆಸ್ಟ್ ಅನ್ನು ಪಡೆಯುತ್ತಾರೆ. ಇದರ ಕೆಳಗೆ ಸ್ಟೋರೇಜ್ ಕಂಪಾರ್ಟ್‍‍ಮೆಂಟ್ ನೀಡಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಎಲೆಕ್ಟ್ರಿಕ್ ಕಾರಿನ ಹಿಂಭಾಗದಲ್ಲಿರುವ ಸೀಟುಗಳ ಬಗ್ಗೆ ಹೇಳುವುದಾದರೆ, ಈ ಸೀಟುಗಳು ಆರಾಮದಾಯಕವಾದ ಸೀಟಿಂಗ್ ಪೊಸಿಷನ್ ನೀಡುತ್ತವೆ. ಈ ಎಲೆಕ್ಟ್ರಿಕ್ ಕಾರು ಫ್ಲಾಟ್ ಫ್ಲೋರ್ ಹೊಂದಿದೆ. ಇದರಿಂದಾಗಿ ಲೆಗ್ ರೂಂನಲ್ಲಿ ಮೂವರು ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಕಾರಿನ ಹಿಂಭಾಗದಲ್ಲಿ ಸಾಕಷ್ಟು ಪ್ರಮಾಣದ ಹೆಡ್ ರೂಂ ಹಾಗೂ ಲೆಗ್ ರೂಂಗಳಿವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ದೊಡ್ಡ ಗಾತ್ರದ ಪನೊರಾಮಿಕ್ ಸನ್‌ರೂಫ್ ಹಾಗೂ ದೊಡ್ಡ ವಿಂಡೊಗಳಿಂದಾಗಿ ಝಡ್ಎಸ್ ಎಲೆಕ್ಟ್ರಿಕ್ ಕಾರಿನ ಕ್ಯಾಬಿನ್ ಏರಿ ಹಾಗೂ ಒಪನ್ ಅನುಭವವನ್ನು ನೀಡುತ್ತದೆ. ಎತ್ತರವಿರುವ ಪ್ರಯಾಣಿಕರಿಗಾಗಿ ಸನ್‌ರೂಫ್ ಹಿಂಭಾಗದಲ್ಲಿ ಹೆಡ್‌ರೂಮ್ ಅನ್ನು ನೀಡಲಾಗಿದೆ. ಹಿಂಭಾಗದಲ್ಲಿರುವ ಸೀಟುಗಳಲ್ಲಿ ಸೆಂಟ್ರಲ್ ಆರ್ಮ್ ರೆಸ್ಟ್ ನೀಡಲಾಗಿಲ್ಲ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಝಡ್ಎಸ್ ಎಲೆಕ್ಟ್ರಿಕ್ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಆರಾಮದಾಯಕವಾದ ಸೀಟಿಂಗ್ ಪೊಸಿಷನ್‍‍ಗಳಿವೆ. ಇದರ ಜೊತೆಗೆ ಬೂಟ್ ಅನ್ನು ಸಹ ನೀಡಲಾಗಿದೆ. ಎಂಜಿ ಕಂಪನಿಯು ಈ ಎಲೆಕ್ಟ್ರಿಕ್ ಕಾರಿನಲ್ಲಿ ಡಿಸೆಂಟ್ ಎನ್ನಬಹುದಾದ 448-ಲೀಟರ್‍‍ನಷ್ಟು ಬೂಟ್ ಸ್ಪೇಸ್ ನೀಡಿದೆ. ಈ ಬೂಟ್ ಸ್ಪೇಸ್ ಅನ್ನು 60:40 ಅನುಪಾತದಲ್ಲಿ ಹಿಂಬದಿ ಸೀಟುಗಳೊಂದಿಗೆ ವಿಸ್ತರಿಸಬಹುದು.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಗಾತ್ರದ ಬಗ್ಗೆ

ಉದ್ದ (ಎಂಎಂ) 4314
ಅಗಲ (ಎಂಎಂ) 1809
ಎತ್ತರ (ಎಂಎಂ) 1644
ವ್ಹೀಲ್‍‍ಬೇಸ್ (ಎಂಎಂ) 2585
ಗ್ರೌಂಡ್ ಕ್ಲಿಯರೆನ್ಸ್ (ಎಂಎಂ) 161
ಬೂಟ್ ಸ್ಪೇಸ್ (ಲೀಟರ್‍‍ಗಳಲ್ಲಿ) 448
ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಮಾದರಿಗಳು, ಪ್ರಮುಖ ಫೀಚರ್‍‍ಗಳು ಹಾಗೂ ಸುರಕ್ಷತೆ

ಎಂಜಿ ಝಡ್‍ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಎಕ್ಸೈಟ್ ಹಾಗೂ ಎಕ್ಸ್‌ಕ್ಲೂಸಿವ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎರಡೂ ಮಾದರಿಗಳಲ್ಲಿ ಹಲವಾರು ಫೀಚರ್ ಹಾಗೂ ಸುರಕ್ಷ ಸಾಧನಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಎಂಜಿ ಝಡ್‍ಎಸ್ ಎಲೆಕ್ಟ್ರಿಕ್ ಕಾರಿನ ಕೆಲವು ಪ್ರಮುಖ ಫೀಚರ್‍‍ಗಳು ಇಂತಿವೆ:

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಬ್ರೀಥೆಬಲ್ ಗ್ಲೋ ಲೋಗೋ

ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ

ಐ-ಸ್ಮಾರ್ಟ್ 2.0, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 5 ಜಿ-ರೆಡಿ ಎಂ 2 ಎಂ ಎಂಬೆಡೆಡ್ ಸಿಮ್ ಹಾಗೂ ಇನ್ನಷ್ಟು

ಪುಶ್-ಬಟನ್ ಸ್ಟಾರ್ಟ್-ಸ್ಟಾಪ್

ಪಿ‍ಎಂ 2.5 ಏರ್ ಫಿಲ್ಟರ್

ಡ್ಯುಯಲ್-ಪೇನ್ ಪನೋರಾಮಿಕ್ ಸನ್‌ರೂಫ್

ರೇನ್-ಸೆನ್ಸಿಂಗ್ ಫ್ರಂಟ್ ವೈಪರ್

3-ಲೆವೆಲ್‍‍ನ ಕೆಇಆರ್‍ಎಸ್ (ಕೈನೆಟಿಕ್ ಎನರ್ಜಿ ರಿಕವರಿ ಸಿಸ್ಟಂ)

ಟಿಲ್ಟ್ ಸ್ಟೀಯರಿಂಗ್

3 ಡ್ರೈವಿಂಗ್ ಮೋಡ್‍‍ಗಳು: ಇಕೊ, ನಾರ್ಮಲ್ ಹಾಗೂ ಸ್ಪೋರ್ಟ್

ಫಾಲೋ-ಮಿ-ಹೋಮ್ ಫಂಕ್ಷನ್ ಹೊಂದಿರುವ ಆಟೋ ಹೆಡ್‌ಲ್ಯಾಂಪ್‌ಗಳು

ಎಲೆಕ್ಟ್ರಿಕ್ ಅಡ್ಜಸ್ಟಬಲ್ ಹಾಗೂ ಫೋಲ್ಡಬಲ್ ಒ‍ಆರ್‍‍ವಿ‍ಎಂಗಳು

6 ಸ್ಪೀಕರ್‌ಗಳು (ಎಕ್ಸ್ ಕ್ಲೂಸಿವ್ ಮಾದರಿಯಲ್ಲಿ ಮಾತ್ರ)

ಬ್ಲೂಟೂತ್ ಹಾಗೂ ಯುಎಸ್‍‍ಬಿ ಕನೆಕ್ಷನ್ ಪೋರ್ಟ್‍‍ಗಳು

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್‍ಎಸ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಸುರಕ್ಷತಾ ಫೀಚರ್‍‍ಗಳು:

ಆರು ಏರ್‌ಬ್ಯಾಗ್‌ಗಳು

ಇಬಿಡಿ ಹೊಂದಿರುವ ಎಬಿಎಸ್

ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಕಂಟ್ರೋಲ್

ಹಿಲ್ ಸ್ಟಾರ್ಟ್ ಅಸಿಸ್ಟ್

ಹಿಲ್ ಡಿಸೆಂಟ್ ಕಂಟ್ರೋಲ್

ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ

ಮುಂಭಾಗ ಹಾಗೂ ಹಿಂಭಾಗದಲ್ಲಿ ಸೀಟ್ ಬೆಲ್ಟ್ ರಿಮ್ಯಾಂಡರ್

ಡೈನಾಮಿಕ್ ಗೈಡ್‍‍ಲೈನ್ ಹೊಂದಿರುವ ಹಿಂದಿನ ಪಾರ್ಕಿಂಗ್ ಕ್ಯಾಮೆರಾ

ಎಲ್ಲಾ ನಾಲ್ಕು ತುದಿಗಳಲ್ಲಿ ಡಿಸ್ಕ್ ಬ್ರೇಕ್

ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್

ಇಂಪ್ಯಾಕ್ಟ್-ಸೆನ್ಸಿಂಗ್ ಡೋರ್ ಅನ್ ಲಾಕ್

ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್

ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಡ್ರೈವಿಂಗ್ ಅಭಿಪ್ರಾಯಗಳು, ಪರ್ಫಾಮೆನ್ಸ್ ಹಾಗೂ ರೇಂಜ್

ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರಿನ ಬಾನೆಟ್ ಅಡಿಯಲ್ಲಿ 3-ಹಂತದ ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಅನ್ನು ಅಳವಡಿಸಲಾಗಿದೆ. ಇದನ್ನು 44.5 ಕಿ.ವ್ಯಾ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾಗಿದ್ದು, ಈ ಎಲೆಕ್ಟ್ರಿಕ್ ಕಾರಿನ ಫ್ಲೋರ್ ಕೆಳಗಿರಿಸಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಎಲೆಕ್ಟ್ರಿಕ್ ಮೋಟರ್‌ 3500 ಆರ್‌ಪಿಎಂನಲ್ಲಿ 141 ಬಿಹೆಚ್‌ಪಿ ಪವರ್ ಹಾಗೂ 5000 ಆರ್‌ಪಿಎಂನಲ್ಲಿ 353 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೋಟರ್‍‍ನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್ ಅಳವಡಿಸಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಎಲೆಕ್ಟ್ರಿಕ್ ಕಾರು ಕೇವಲ 8.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಎಂಜಿ ಮೋಟಾರ್ ಹೇಳಿಕೊಂಡಿದೆ. ಎಆರ್‌ಎಐ ಪ್ರಮಾಣಪತ್ರದಂತೆ ಈ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 340 ಕಿ.ಮೀವರೆಗೂ ಚಲಿಸುತ್ತದೆ ಎಂದು ಹೇಳಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್‍‍ಎಸ್ ಇವಿ ಎಸ್‍‍ಯುವಿಯು ಎಂಜಿನ್‍‍ನೊಂದಿಗೆ ವೇಗವಾಗಿ ಟಾರ್ಕ್‍‍ನೊಂದಿಗೆ ಸ್ಪಂದಿಸುತ್ತದೆ. ಎಸ್‍ಯುವಿ ಮುಂದಕ್ಕೆ ಚಲಿಸಲು ಉತ್ತಮ ಪವರ್ ಅನ್ನು ನೀಡುತ್ತದೆ. ಎಂಜಿ ಝಡ್ಎಸ್ ಎಸ್‍‍ಯುವಿಯು ಕೋ, ನಾರ್ಮಲ್ ಮತ್ತು ಸ್ಪೋಟ್ಸ್ ಎಂಬ ಮೂರು ಮೋಡ್‍ಗಳನ್ನು ಹೊಂದಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಎಸ್‍‍ಯುವಿ ತನ್ನ ಬ್ಯಾಟರಿ ಪ್ಯಾಕ್‍‍ಗಳೊಂದಿಗೆ ಕ್ಯಾಬಿನ್ ಕೆಳಗಡೆ ಇರಸಲಾಗಿದೆ. ಈ ಎಸ್‍‍ಯುವಿ ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರದಿಂದಾಗಿ, ಬಾಡಿ ರೋಲ್ ತುಂಬಾ ಕಡಿಮೆಯಾಗಿದೆ. ಕಾರ್ ಅನ್ನು ಮೂಲೆಗಳಲ್ಲಿ ಸರಿಸುವಾಗ ಹೆಚ್ಚು ಸಹಕಾರಿಯಾಗರಲಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್‍ಎಸ್‍‍ನಲ್ಲಿರುವ ಸ್ಟೀಯರಿಂಗ್ ಹಗುರವಾಗಿದ್ದು, ಸಿಟಿಯಲ್ಲಿ ಡ್ರೈವಿಂಗ್ ಮಾಡುವಾಗ ಉತ್ತಮ ನಿಯಂತ್ರಣ ಸಿಗುತ್ತದೆ. ಹೈವೇಗಳಲ್ಲಿಯೂ ಕೂಡ ಉತ್ತಮ ನಿಯಂತ್ರಣವಿದೆ. ಎಂಜಿ ಝಡ್‍‍ಎಸ್‍ ಎಸ್‍‍ಯುವಿಯು ಡ್ರೈವ್ ಮಾಡುವಾಗ ಸ್ಟೀಯರಿಂಗ್ ಹೆಚ್ಚಿನ ನಿಯಂತ್ರಣ ಹೊಂದಿರುವುದರಿಂದ ಡ್ರೈವ್ ಹೆಚ್ಚಿನ ವಿಶ್ವಾಸರ್ಹತೆ ಮೂಡಿಸುತ್ತದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್‍ಎಸ್ ಎಸ್‍ಯುವಿಯಲ್ಲಿರುವ ಸಸ್ಪೆಂಷನ್ ಭಾರತೀಯ ಡ್ರೈವಿಂಗ್ ಪರಿಸ್ಥಿತಿಗಳಿಗೆ ಸೂಕ್ತವಾಗಿರಲಿದೆ. ಎಂಜಿ ಝಡ್‍ಎಸ್ ಎಸ್‍‍ಯುವಿಯ ಸಸ್ಪೆಂಷನ್ ರಸ್ತೆಗಳ ಗುಂಡಿಗಳಲ್ಲಿ ಅಥವಾ ಹಂಪ್‍‍ಗಳಲ್ಲಿ ಸಲೀಸಾಗಿ ಚಲಿಸುವಂತೆ ಸಹಕರಿಯಾಗುತ್ತದೆ. ಸಸ್ಪೆಂಷನ್ ಜೊತೆಯಲ್ಲಿ ಬ್ರೇಕಿಂಗ್ ಕೂಡ ಉತ್ತಮವಾಗಿದೆ. ವೇಗವಾಗಿ ಚಲಿಸಿದರೂ ಕಾರ್ ಅನ್ನು ಬ್ರೇಕ್ ಸಿಸ್ಟಂ ಮುಖಾಂತರ ನಿಯಂತ್ರಣಕ್ಕೆ ತರಬಹುದಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಈ ಎಲೆಕ್ಟ್ರಿಕ್ ಕಾರಿನಲ್ಲಿ ಮೂರು ಹಂತದ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿದೆ. ಇದು ಬ್ರೇಕಿಂಗ್ ಪ್ರತಿಕ್ರಿಯೆಗೆ ಅನುಸಾರವಾಗಿ ಬದಲಾಗುತ್ತದೆ. ರೀಜನರೇಟಿವ್ ಬ್ರೇಕಿಂಗ್‍ ಹೆಚ್ಚಿನ ಸೆಟ್ಟಿಂಗ್‍‍ಗಳನ್ನು ಒಳಗೊಂಡಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಂಜಿ ಝಡ್ಎಸ್ ಇವಿ ಎಸ್‍‍ಯುವಿಯಲ್ಲಿರುವ ಎನ್‍‍ವಿ‍ಹೆಚ್‍ ಹಂತಗಳು ಉತ್ತಮವಾಗಿದೆ. ಕ್ಯಾಬಿನ್ ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ. ಹೆಚ್ಚಿನ ವೇಗದಲ್ಲಿ ಚಳಿಸುವಾಗ ಎಂಜಿನ್ ಶಬ್ದವು ಹೆಚ್ಚು ಕೇಳುತ್ತದೆ. ಎಲೆಕ್ಟ್ರಿಕ್ ಎಂಜಿನ್‍ನ ಗುಸುಗುಸು ಶಬ್ದವು ವೇಗ ಹೆಚ್ಚಾದಂತೆ ಶಬ್ದವು ಹೆಚ್ಚು ಕೇಳಿಸುತ್ತದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಎಸ್‍‍ಯುವಿಯ ವಿವರಗಳು

ಎಲೆಕ್ಟ್ರಿಕ್ ಮೋಟರ್

3 ಹಂತದ ಪರ್ಮೆನೆಂಟ್ ಮ್ಯಾಗ್ನೇಟ್
ಬ್ಯಾಟರಿ 44.5 ಕಿ.ವ್ಯಾ ಲಿಥಿಯಂ-ಐಯಾನ್
ಪವರ್(ಬಿ‍‍ಹೆಚ್‍‍ಪಿ)

3500ಆರ್‍‍ಪಿ‍ಎಂನಲ್ಲಿ 141 ಬಿ‍‍ಹೆಚ್‍‍ಪಿ ಪವರ್
ಟಾರ್ಕ್(ಎನ್‍ಎಂ)

353 @ 5000ಆರ್‍‍ಪಿ‍ಎಂ‍‍ನಲ್ಲಿ 353 ಎನ್‍ಎಂ ಟಾರ್ಕ್
ಟ್ರಾನ್ಸ್ ಮಿಷನ್ ಆಟೋಮ್ಯಾಟಿಕ್
ವ್ಯಾಪ್ತಿ (ಕಿ.ಮೀ)

340
0-100 ಕಿ.ಮೀ/ಗಂಟೆಗೆ

8.3 ಸೆಕೆಂಡುಗಳು
ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಬೆಲೆ, ಬಣ್ಣಗಳ ಆಯ್ಕೆಗಳು ಮತ್ತು ಲಭ್ಯತೆ

ಎಂಜಿ ಝಡ್ಎಸ್ ಇವಿ ಎಸ್‍‍ಯುವಿಯ ಬೆಲೆಯನ್ನು ಇನ್ನೂ ಬಹಿರಂಗಗೊಂಡಿಲ್ಲ. ಈ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಸಮಯದಲ್ಲಿ ಬೆಲೆಯನ್ನು ಬಹಿರಂಗಪಡಿಸಲಾಗುತ್ತದೆ. ಎಂಜಿ ಮೋಟಾರ್ ಇಂಡಿಯಾದ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಆರಂಭದಲ್ಲಿ ಎಂಜಿ ಝಡ್ಎಸ್ ಇವಿ ಎಸ್‍ಯುವಿಯು ಬೆಂಗಳೂರು, ಹೈದರಾಬಾದ್, ಅಹಮದಾಬಾಸ್, ದೆಹಲಿ ಹಾಗೂ ಮುಂಬೈ ಸೇರಿದಂತೆ ಕೇವಲ ಐದು ನಗರಗಳಲ್ಲಿ ಲಭ್ಯವಿರುತ್ತದೆ. ಎಂಜಿ ಝಡ್‍ಎಸ್‍ ಇವಿಗೆ ಈಗಾಗಲೇ ಐದು ನಗರಗಳಲ್ಲಿ ಬುಕ್ಕಿಂಗ್ ಅನ್ನು ಆರಂಭಿಸಲಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಆನ್‍‍ಲೈನ್ ಮೂಲಕ ಅಥವಾ ಈ ನಗರಗಳಲ್ಲಿನ ಆಯ್ದ ಡೀಲರ್‍‍ಗಳ ಬಳಿ ತೆರಳಿ ರೂ.50 ಸಾವಿರಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಭಾರತದಲ್ಲಿ ಬಿಡುಗಡೆಯಾದ ಬಳಿಕ ಎಂಜಿ ಝಡ್‍ಎಸ್‍ ಇವಿಯನ್ನು ಫೆರ್ರಿಸ್ ವೈಟ್, ಕೋಪನ್ ಹ್ಯಾಗನ್ ಬ್ಲೂ ಮತ್ತು ಕರ್ರಂಟ್ ರೆಡ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ವಾರಂಟಿ ಮತ್ತು ಚಾರ್ಜಿಂಗ್ ಸೌಲಭ್ಯಗಳು

ಎಂಜಿ ಮೋಟಾರ್ ಇಂಡಿಯಾ ಹೊಸ ಝಡ್ಎಸ್ ಇವಿ ಎಸ್‍‍ಯುವಿಯನ್ನು ಬಿಡುಗಡೆಗೊಳಿಸುವುದರ ಜೊತೆಗೆ ಇಶಿಲ್ಡ್ ವಾರಂಟಿ ಪ್ಯಾಕೇಜ್‍ಗಳನ್ನು ಕೂಡ ಪರಿಚಯಿಸಲಿದೆ. ಎಲ್ಲಾ ಖಾಸಗಿ ಖರೀದಿದಾರರಿಗೆ ಹೊಸ ಎಂಜಿ ಇಶೀಲ್ಡ್ ಪ್ಯಾಕೇಜ್ ನೀಡಲಾಗುವುದು.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಈ ಪ್ಯಾಕೇಜ್‍‍ನಲ್ಲಿ 5 ವರ್ಷಗಳ ವಾರಂಟಿ ಅಥವಾ/ ಅನಿಯಮಿತ ಕಿ.ಮೀ ವಾರಂಟಿಯನ್ನು ನೀಡಲಾಗುತ್ತದೆ. ಇದರೊಂದಿಗೆ ಝಡ್‍ಎಸ್ ಇವಿ ಐದು ವರ್ಷಗಳ ಆರ್‍ಎಸ್ಎ, ಲೇಬರ್ ಫ್ರೀ ಸರ್ವಿಸ್ ಮತ್ತು ಚಾರ್ಜಿಂಗ್ ಮೌಲಸೌರ್ಯಗಳನ್ನು ಒದಗಿಸುತ್ತದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಖರೀದಿಗೆ ಲಭ್ಯವಿರುವ ಐದು ನಗರಗಳಲ್ಲಿರುವ ಆಯ್ದ ಡೀಲರ್‍‍ಗಳಲ್ಲಿ 24x7 ಗ್ರಾಹಕರಿಗೆ ಲಭ್ಯವಿರುವ ಸೂಪರ್-ಫಾಸ್ಟ್ 50 ಕಿ.ವ್ಯಾ ಚಾರ್ಜಿಂಗ್ ಕೇಂದ್ರಗಳನ್ನು ಕೂಡ ಪ್ರಾರಂಭಿಸಲಿದೆ. ಎಂಜಿ ಝಡ್‍ಎಸ್ ಇವಿ ಎಸ್‍‍ಯುವಿಯ ಜೊತೆಗೆ ಸ್ಟ್ಯಾಂಡರ್ಡ್ ಚಾರ್ಜರ್ ಅನ್ನುನೀಡಲಾಗುತ್ತದೆ. ಇದನ್ನು ಮನೆ ಅಥಾವ ಕಚೇರಿಗಳಲ್ಲಿ ಅಳವಡಿಸಬಹುದು. ಎಂಜಿ ಮೋಟಾರ್ ಇಂಡಿಯಾ ಸ್ಥಾಪಿಸಿದ ನಗರವಾರು ಚಾರ್ಜಿಂಗ್ ಸೌಲಭ್ಯಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ದೆಹಲಿ

ಎಂಜಿ ಗುರಗಾಂವ್ ಫ್ಲೇಗ್‍ಶೀಪ್ (32 ಮೈಲಿಸ್ಟೋನ್, ಪ್ರಯೋಗ ಕೇಂದ್ರ, ಸೆಕ್ಟರ್ 15, ಎನ್ಎಚ್ -8, ಗುರುಗ್ರಾಮ್)

ಎಂಜಿ.ಲಜಪತ್ ನಗರ (ಇಸಿ, ಎ -14, ರಿಂಗ್ ರೋಡ್, ಲಜಪತ್ ನಗರ-4, ನವದೆಹಲಿ)

ಎಂಜಿ ದೆಹಲಿ ಪಶ್ಚಿಮ ಶಿವಾಜಿ ಮಾರ್ಗ (ಪ್ಲಾಟ್ ಸಂಖ್ಯೆ 31, ಶಿವಾಜಿ ಮಾರ್ಗ) ಎಂಜಿ ನೋಯ್ಡಾ (ಡಿ -2, ಸೆಕ್ಟರ್ 8, ನೋಯ್ಡಾ)

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಬೆಂಗಳೂರು

ಎಂಜಿ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ (195/6/2, ವಾರ್ಡ್ ಸಂಖ್ಯೆ 192, ಭರತೇನ ಅಗ್ರಹಾರ, ಲವ ಕುಶ ನಗರ, ಹೊಸೂರು ರಸ್ತೆ, ಬೆಂಗಳೂರು)

ಎಂಜಿ ಬೆಂಗಳೂರು ಒಆರ್‍‍ಆರ್ (ಶ್ರೀ ಭುವನೇಶ್ವರಿ ವೊಕ್ಕಲಿಗರ ಸಂಘ, ಸಮೀಕ್ಷೆ ಸಂಖ್ಯೆ 102-1, ಬಿ ನಾರಾಯಣಪುರ, ಒಆರ್‍ಆರ್, ಬೆಂಗಳೂರು)

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಮುಂಬೈ

ಎಂಜಿ ಮುಂಬೈ ವೆಸ್ಟ್ (ಜೆವಿಎಲ್ಆರ್, ಜೋಗೇಶ್ವರಿ ಗುಹೆಗಳ ರಸ್ತೆ, ಗುಫಾ ಟೆಕ್ಡಿ, ಜೋಗೇಶ್ವರಿ ಪೂರ್ವ, ಮುಂಬೈ)

ಎಂಜಿ ಥಾಣೆ (ಮಳಿಗೆ ಸಂಖ್ಯೆ 16 ಎ, ದೋಸ್ತಿ ಇಂಪೀರಿಯಾ, ಘೋಡ್‌ಬಂದರ್ ರಸ್ತೆ, ಥಾಣೆ ವೆಸ್ಟ್, ಥಾಣೆ)

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಅಹಮದಾಬಾದ್

ಎಂಜಿ ಅಹಮದಾಬಾದ್ ಎಸ್‌ಜಿ ಹೈವೇ (ಪ್ಲಾಟ್ ನಂ 2, ನೆಲ ಮಹಡಿ, ಅಹಮದಾಬಾದ್ ಎಸ್‌ಜಿ ಹೈವೇ, ಮಕರಬಾ, ಅಹಮದಾಬಾದ್, ಗುಜರಾತ್)

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಹೈದರಾಬಾದ್

ಎಂಜಿ ಹೈದರಾಬಾದ್ ಬಂಜಾರ ಹಿಲ್ಸ್ (ರೋಡ್ ನಂ.2 ಶೋರೂಂ, ರೋಡ್ ನಂ.12, ಸಂಚಾರ ಪೊಲೀಸ್ ಠಾಣೆ ಎದುರು, ಬಂಜಾರ ಹಿಲ್ಸ್, ಹೈದರಾಬಾದ್, ತೆಲಂಗಾಣ)

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಸ್ಪರ್ಧೆ ಮತ್ತು ಸತ್ಯ ಪರಿಶೀಲನೆ

ಭಾರತದಲ್ಲಿ ಬಿಡುಗಡೆಯಾದ ನಂತರ ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ. ಸದ್ಯಕ್ಕೆ ಕೋನಾ ಎಲೆಕ್ಟ್ರಿಕ್ ಕಾರು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಝಡ್ಎಸ್ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಮುಂಬರುವ ದಿನಗಳಲ್ಲಿ ಟಾಟಾ ನೆಕ್ಸನ್ ಎಲೆಕ್ಟ್ರಿಕ್ ಕಾರ್ ಸಹ ಪೈಪೋಟಿ ನೀಡಬಹುದು.

ಮಾದರಿ/ವಿಶೇಷತೆಗಳು ಎಂಜಿ ಝಡ್‍ಎಸ್ ಇವಿ ಹ್ಯುಂಡೈ ಕೋನಾ ಇವಿ
ಎಲೆಕ್ಟ್ರಿಕ್ ಮೋಟರ್ 3-ಹಂತದ ಶಾಶ್ವತ ಪರ್ಮಿನೆಂಟ್ ಮ್ಯಾಗ್ನೆಟ್ ಪರ್ಮಿನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್
ಬ್ಯಾಟರಿ 44.5 ಕಿ.ವ್ಯಾ ಲಿ - ಅಯಾನ್ 39.2ಕಿ.ವ್ಯಾ ಲಿ - ಅಯಾನ್
ಪವರ್ (ಬಿ‍‍ಹೆಚ್‍‍ಪಿ) 141 134
ಟಾರ್ಕ್(ಎನ್‍ಎಂ) 353 395
ಬೆಲೆ - ರೂ.23.71 ಲಕ್ಷ
ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಎಂಜಿ ಝಡ್ಎಸ್ ಇವಿ ಎಸ್‍‍ಯುವಿ ಉತ್ತಮವಾದ ವಾಹನವಾಗಿದೆ. ಈ ಎಸ್‍ಯುವಿಯು ಉತ್ತಮ ಡೈವಿಂಗ್ ಅನುಭವನ್ನು ನೀಡುತ್ತದೆ. ಈ ಎಸ್‍ಯುವಿ ಉತ್ತಮ ವಿನ್ಯಾಸ, ಉತ್ತಮವಾಗಿ ಕಾರ್ಯನಿರ್ವಹಿಸುವ ಎಂಜಿನ್‍‍ನೊಂದಿಗೆ ಪ್ರೀಮಿಯಂ ಇಂಟಿರಿಯರ್ ಅನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಇದೊಂದು ಉತ್ತಮವಾದ ಎಲೆಕ್ಟ್ರಿಕ್ ಎಸ್‍‍ಯುವಿಯಾಗಿದೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ಇದು ಸಿಟಿಯಲ್ಲಿ ಡೈವ್ ಮಾಡಲು ಉತ್ತಮವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯ ಇನ್ನೂ ಬೆಳೆಯದ ಕಾರಣ ಎಂಜಿ ಝಡ್ಎಸ್ ಇವಿ ಎಸ್‍ಯುವಿ ಬಿಡುಗಡೆಯಾದ ಬಳಿಕ ಗ್ರಾಹಕರ ಪ್ರತಿಕ್ರಿಯೆ ಯಾವ ರೀತಿ ಇದೆ ಎಂಬುದನ್ನು ಕಾದು ನೋಡಬೇಕು. ಈ ಎಸ್‍‍ಯುವಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷೆಗಳಿವೆ.

ಎಂಜಿ ಝಡ್‍ಎಸ್ ಇವಿ ಫಸ್ಟ್ ಡ್ರೈವ್ ರಿವ್ಯೂ: ಭಾರತದ ಮೊದಲ ಎಲೆಕ್ಟ್ರಿಕ್ ಇಂಟರ್‍‍ನೆಟ್ ಎಸ್‍‍ಯುವಿ

ನಮಗೆ ಇಷ್ಟವಾದ ಅಂಶಗಳು

ಇಂಟಿರಿಯರ್ ಕ್ಯಾಬಿನ್ ಸ್ಪೇಸ್

ಉತ್ತಮ ಸ್ಟೀಯರಿಂಗ್ ರೆಸ್ಪಾನ್ಸ್

ಪನೋರಾಮಿಕ್ ಸನ್‍‍ರೂಫ್

Most Read Articles

Kannada
English summary
MG ZS EV review first drive impressions performance range features charging specs and more - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X